ಇಂದು ಅವಳಿಗಳ ದಿನ: ಉಳ್ಳಾಲ-ಕೈರಂಗಳದ ಈ ಶಾಲೆಯಲ್ಲಿದ್ದಾರೆ 17 ಜೋಡಿ ಅವಳಿ ವಿದ್ಯಾರ್ಥಿಗಳು!
Team Udayavani, Dec 18, 2023, 1:08 AM IST
ಉಳ್ಳಾಲ: ಒಂದು ಮನೆಯಲ್ಲಿ, ಒಂದೂರಿನಲ್ಲಿ ಒಂದೆರಡು ಅವಳಿ- ಜವಳಿ ಮಕ್ಕಳಿದ್ದರೆ ಕುತೂಹಲದಿಂದ ಗಮನಿಸುತ್ತೇವೆ. ಆದರೆ ಇಲ್ಲೊಂದು ಶಾಲೆಯಲ್ಲಿ 17
ಜೋಡಿ ಅವಳಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಡಿಸೆಂಬರ್ 18ರ ಅವಳಿಗಳ ದಿನಾಚರಣೆಗೆ ಈ 34 ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹೊಸ ಮೆರುಗು ನೀಡಲಿದ್ದಾರೆ.
ಉಳ್ಳಾಲ ತಾಲೂಕಿನ ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿರುವ ಶಾರದಾ ಗಣಪತಿ ವಿದ್ಯಾ ಕೇಂದ್ರದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 17 ಜೋಡಿ ಅವಳಿ ವಿದ್ಯಾರ್ಥಿಗಳಿದ್ದಾರೆ. ಎಲ್‌ಕೆಜಿಯಿಂದ ಪಿಯುಸಿ ವರೆಗೆ ಶಿಕ್ಷಣ ನೀಡುತ್ತಿರುವ ಈ ಶಾಲೆಯಲ್ಲಿ ಒಟ್ಟು 914 ವಿದ್ಯಾರ್ಥಿಗಳಿದ್ದಾರೆ. 2021ರ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗಿನ ತರಗತಿಗಳಲ್ಲಿ 11 ಅವಳಿ ಜೋಡಿ ವಿದ್ಯಾರ್ಥಿಗಳಿದ್ದರು.
2022ರಲ್ಲಿ ಅವರಲ್ಲಿ ಮೂರು ಜೋಡಿ ಶಿಕ್ಷಣ ಪೂರೈಸಿ ಉನ್ನತ ಶಿಕ್ಷಣಕ್ಕೆ ಬೇರೆ ಶಿಕ್ಷಣ ಸಂಸ್ಥೆಗಳಿಗೆ ತೆರಳಿದ್ದರಿಂದ ಇಲ್ಲಿ ಅವಳಿ ವಿದ್ಯಾರ್ಥಿಗಳ ಸಂಖ್ಯೆ 8ಕ್ಕೆ ಇಳಿದಿತ್ತು.
ಮತ್ತೆ 6+3 ಹೊಸ ಜೋಡಿ ಸೇರ್ಪಡೆ
ಕಳೆದ ಶೈಕ್ಷಣಿಕ ವರ್ಷದಲ್ಲಿ 3 ಮತ್ತು ಈ ಶೈಕ್ಷಣಿಕ ವರ್ಷದಲ್ಲಿ 6 ಜೋಡಿ ಹೊಸ ಅವಳಿಗಳು ಈ ಶಿಕ್ಷಣ ಸಂಸ್ಥೆಗೆ ದಾಖಲಾತಿ ಪಡೆಯುವ ಮೂಲಕ ಅವಳಿ ಜೋಡಿಗಳ ಸಂಖ್ಯೆ 17ಕ್ಕೆ ಏರಿತು. ಈ ಎಲ್ಲ ವಿದ್ಯಾರ್ಥಿಗಳು ಉಳ್ಳಾಲ ತಾಲೂಕು ವ್ಯಾಪ್ತಿಯ ಕೈರಂಗಳದ ಸುತ್ತಮುತ್ತಲಿನ ಗ್ರಾಮದ ಮತ್ತು ಕೇರಳ ಗಡಿಭಾಗದ ಮಂಜೇಶ್ವರ ವ್ಯಾಪ್ತಿಯವರಾಗಿದ್ದಾರೆ. ಎಲ್ಲರೂ ಶಾರದಾ ಗಣಪತಿ ವಿದ್ಯಾಕೇಂದ್ರದ ಸುತ್ತಮುತ್ತ 16 ಕಿ.ಮೀ. ವ್ಯಾಪ್ತಿಯೊಳಗಿನ ಮಕ್ಕಳು ಎನ್ನುವುದು ವಿಶೇಷವಾಗಿದೆ. ಒಂದೇ ವಿದ್ಯಾಸಂಸ್ಥೆಯಲ್ಲಿ ಇಷ್ಟು ಜೋಡಿ ಅವಳಿಗಳಿರುವುದು ವಿಶೇಷವಾದರೆ, ಇಷ್ಟು ಸಣ್ಣ ಭೌಗೋಳಿಕ ಪ್ರದೇಶದಲ್ಲಿ ಇಷ್ಟು ಸಂಖ್ಯೆಯ ಅವಳಿ ಮಕ್ಕಳಿರುವುದೂ ಕುತೂಹಲಕಾರಿ.
ಅವಳಿಗಳ ಕೇಂದ್ರ ಬಿಂದು ಈ ಶಾಲೆ
ಈ ಬಾರಿ 17 ಜೋಡಿ ಅವಳಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಮೂಲಕ ಈ ಶಿಕ್ಷಣ ಸಂಸ್ಥೆ ಅವಳಿ ವಿದ್ಯಾರ್ಥಿಗಳ ಕೇಂದ್ರವಾಗಿ ಗಮನ ಸೆಳೆದಿದೆ. ಈ ವಿದ್ಯಾರ್ಥಿಗಳಲ್ಲಿ 6 ಗಂಡು ಅವಳಿಗಳು, 6 ಹೆಣ್ಣು ಅವಳಿಗಳಿದ್ದರೆ, 5 ವಿದ್ಯಾರ್ಥಿಗಳು ಗಂಡು ಮತ್ತು ಹೆಣ್ಣು ಮಿಶ್ರ ಅವಳಿಗಳಾಗಿದ್ದಾರೆ. ಎಲ್‌ಕೆಜಿ, ಒಂದನೇ ತರಗತಿ, 8 ಮತ್ತು 10ನೇ ತರಗತಿಗಳಲ್ಲಿ ತಲಾ ಒಂದು ಜತೆ ಅವಳಿಗಳಿದ್ದರೆ, 2ನೇ ಮತ್ತು 7ನೇ ತರಗತಿಗಳಲ್ಲಿ ತಲಾ ಎರಡು ಅವಳಿ ಜೋಡಿಗಳಿದ್ದಾರೆ. ಯುಕೆಜಿ, 6ನೇ ಮತ್ತು 9ನೇ ತರಗತಿಗಳಲ್ಲಿ ತಲಾ ಮೂರು ಜೋಡಿ ಇದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ರಮಣಿ ಭಂಡಾರಿ ತಿಳಿಸಿದ್ದಾರೆ.
ಕೈರಂಗಳ ಪುಣ್ಯಕೋಟಿ ನಗರದಲ್ಲಿ 17 ವರ್ಷಗಳಿಂದ ಕಾರ್ಯನಿರ್ವ ಹಿಸುತ್ತಿರುವ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪಠ್ಯದೊಂದಿಗೆ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿದ್ದು, ಅವಳಿ ವಿದ್ಯಾರ್ಥಿಗಳಲ್ಲಿ ಒಂದು ಮಗುವಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ.
-ಟಿ.ಜಿ. ರಾಜಾರಾಮ ಭಟ್, ಶಾಲಾ ಸಂಚಾಲಕರು, ಶಾರದಾ ಗಣಪತಿ ವಿದ್ಯಾಕೇಂದ್ರ
ವಸಂತ ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.