Bigg Boss Telugu 7: ರೀಲ್ಸ್‌ನಿಂದಲೇ ಫೇಮಸ್ ಆಗಿದ್ದ ರೈತನಿಗೆ ‘ಬಿಗ್ ಬಾಸ್’ ಪಟ್ಟ
Team Udayavani, Dec 18, 2023, 10:18 AM IST
ಹೈದರಾಬಾದ್: ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡುವ ಬಿಗ್ ಬಾಸ್ ತೆಲುಗು ಸೀಸನ್ 7 ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ವೀಕ್ಷಕರ ಮೆಚ್ಚಿನ ಸ್ಪರ್ಧಿ ವೋಟಿನ ಲೆಕ್ಕಚಾರದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ತೆಲುಗು ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮ ಮುಕ್ತಾಯ ಕಂಡಿ್ದು, ಭಾನುವಾರ ನಡೆದ ಫಿನಾಲೆಯಲ್ಲಿ ಅಕ್ಕಿನೇನಿ ವಿನ್ನರ್ ನ್ನು ಅನೌನ್ಸ್ ಮಾಡಿದ್ದಾರೆ. ಆ ಮೂಲಕ ವೀಕ್ಷಕರಿಂದ ಅತೀ ಹೆಚ್ಚು ಮತ ಪಡೆದ ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ನಾಗಾರ್ಜುನ ಐದನೇ ಬಾರಿಗೆ ತೆಲುಗು ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಮೊದಲ ಸೀಸನ್ ನ್ನು ಜೂನಿಯರ್ ಎನ್‌ಟಿಆರ್ ಹೋಸ್ಟ್ ಮಾಡಿದ್ದರು. ಎರಡನೇ ಸೀಸನ್ ಅನ್ನು ನಾನಿ ಹೋಸ್ಟ್ ಮಾಡಿದ್ದರು.
ಭಾನುವಾರ(ಡಿ.17 ರಂದು) ಸ್ಟಾರ್ ಮಾ ವಾಹಿನಿ/ ಡಿಸ್ನಿ + ಹಾಟ್ ಸ್ಟಾರ್ ನಲ್ಲಿ ಪ್ರಸಾರ ಕಂಡ ಬಿಗ್ ಬಾಸ್ ಫಿನಾಲೆಯಲ್ಲಿ ಪ್ರಸಾರ ಕಂಡಿದೆ. ಈ ಬಾರಿ ಪಲ್ಲವಿ ಪ್ರಶಾಂತ್, ಅಮರದೀಪ್ ಚೌಧರಿ, ಅರ್ಜುನ್ ಅಂಬಟಿ, ಪ್ರಿಯಾಂಕಾ ಜೈನ್, ಶಿವಾಜಿ ಮತ್ತು ಪ್ರಿನ್ಸ್ ಯವರ್ ಫೈನಲಿಸ್ಟ್ ಆಗಿದ್ದರು.
ಇವರಲ್ಲಿ ವೀಕ್ಷಕರ ಅತೀ ಹೆಚ್ಚು ಮತ ಪಡೆದು ಪಲ್ಲವಿ ಪ್ರಶಾಂತ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅಮರದೀಪ್ ರನ್ನರ್ ಅಪ್ ಆಗಿದ್ದಾರೆ. ಪಲ್ಲವಿ ಪ್ರಶಾಂತ್ ಅವರಿಗೆ ಟ್ರೋಫಿ ಜೊತೆ 35 ಲಕ್ಷ ನಗದು ಬಹುಮಾನ ಸಿಕ್ಕಿದೆ.
ಯಾರು ಈ ಪಲ್ಲವಿ ಪ್ರಶಾಂತ್:
ತೆಲಂಗಾಣದ ಹಳ್ಳಿಯೊಂದರಲ್ಲಿ ಬೆಳೆದ ಪಲ್ಲವಿ ಪ್ರಶಾಂತ್ ವೃತ್ತಿಯಲ್ಲಿ ರೈತನಾಗಿದ್ದಾರೆ. ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ನ್ನು ಹೊಂದಿದ್ದಾರೆ. ಕೃಷಿ ಸಂಬಂಧಿತ ನಿತ್ಯದ ವ್ಲಾಗ್ ಗಳನ್ನು ಅವರು ಅಪ್ಲೋಡ್ ಮಾಡುತ್ತಿರುತ್ತಾರೆ. ʼನಾನೊಬ್ಬ ರೈತ..ʼ ಎನ್ನುವ ರೈತ ಎನ್ನುವ ಅವರ ವಿಡಿಯೋ ವೈರಲ್ ಆಗಿದೆ. ರೀಲ್ಸ್ ಹಾಗೂ ವಿಡಿಯೋಗಳಿಂದಲೇ ಅವರು ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಗದ್ದೆಬದಿಯ ಕೆಲಸದ ರೀಲ್ಸ್, ರೈತರ ಬಗೆಗಿನ ರೀಲ್ಸ್ ಹಾಗೂ ವ್ಲಾಗ್ ಮಾಡಿಯೇ ಅಪಾರ ಫಾಲೋವರ್ಸ್ ಗಳನ್ನು ಪ್ರಶಾಂತ್ ಪಡೆದುಕೊಂಡಿದ್ದು. ಬಿಗ್ ಬಾಸ್ ಕಾರ್ಯಕ್ರಮದ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಸೆಲೆಬ್ರಿಟಿಗಳೊಂದಿಗೆ ಸಾಮಾನ್ಯವಾಗಿ ದೊಡ್ಮನೆಯಲ್ಲಿ ನೂರು ದಿನ ಕಳೆದ ಪ್ರಶಾಂತ್ ಈಗ ಸಾಮಾನ್ಯದಿಂದ ಸೆಲೆಬ್ರಿಟಿಯಾಗಿದ್ದಾರೆ.
ಅವರ ಬಿಗ್ ಬಾಸ್ ಪಯಣ ಟ್ರೋಲ್ ನಿಂದ ಆರಂಭವಾಗಿ, ಸ್ಪೂರ್ತಿದಾಯಕವಾಗುವವರೆಗಿನ ರೋಚಕತೆಯಿಂದ ಕೂಡಿತ್ತು ಎನ್ನುವುದು ವೀಕ್ಷಕರ ಅಭಿಪ್ರಾಯ.
ಫಿನಾಲೆ ಸ್ಪರ್ಧಿಯಾಗಿದ್ದ ಪ್ರಿನ್ಸ್ ಯವರ್ ಅವರು 15 ಲಕ್ಷ ರೂ. ಸೂಟ್ ಕೇಸ್ ಹಣ ಪಡೆದು ಫಿನಾಲೆಯಿಂದ ಕೆಳಗಿಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಟ ರವಿತೇಜ ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನನ್ನ ನಾಯಿಗಳಿಗೆ ಕ್ರಾಸಿಂಗ್ ಮಾಡಿಸಬೇಕು.. ಸೋನು ನ್ಯೂ ಇಯರ್ ರೆಸಲ್ಯೂಷನ್ ಏನೇನು ಗೊತ್ತಾ?
BBK11: ನೀವೆಷ್ಟು ಕಳಪೆ ಕೊಟ್ರು ನನ್ನ ಮಗಳು ನಮಗೆ ಉತ್ತಮನೇ- ಚೈತ್ರಾ ತಾಯಿ ಭಾವುಕ ನುಡಿ
BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಬಿರುಗಾಳಿ ಎಂದ ಉಗ್ರಂ ಮಂಜು ತಂದೆ
BBK11: ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಪೋಷಕರು ಎಂಟ್ರಿ; ತಾಯಿ ನೋಡಿ ತ್ರಿವಿಕ್ರಮ್ ಕಣ್ಣೀರು
BBK11: ಮಂಜುಗೆ ದುರಹಂಕಾರ ನಿರ್ವಹಣೆಯ ಕಷಾಯ ಕುಡಿಸಿದ ಭವ್ಯ.! ಇಬ್ಬರ ನಡುವೆ ಟಾಕ್ ವಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.