Wildlife Doctors: ರಾಜ್ಯದಲ್ಲಿ ಇರೋದು ಕೇವಲ ನಾಲ್ವರು ವನ್ಯಜೀವಿ ವೈದ್ಯರು!

ಇಲಾಖೆ ಸಿಬ್ಬಂದಿಯನ್ನೇ ಶಾರ್ಪ್‌ ಶೂಟರ್‌ಗಳಾಗಿ ಬಳಸಿಕೊಳ್ಳಲಾಗುತ್ತಿದೆ

Team Udayavani, Dec 18, 2023, 2:56 PM IST

Wildlife Doctors: ರಾಜ್ಯದಲ್ಲಿ ಇರೋದು ಕೇವಲ ನಾಲ್ವರು ವನ್ಯಜೀವಿ ವೈದ್ಯರು!

ಶಿವಮೊಗ್ಗ: ಹುಲಿ, ಚಿರತೆ, ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಅಗ್ರಗಣ್ಯ ಸ್ಥಾನದಲ್ಲಿರುವ ಇಡೀ ರಾಜ್ಯದಲ್ಲಿ ಇರುವುದು ನಾಲ್ಕೇ ಮಂದಿ ವನ್ಯಜೀವಿ ವೈದ್ಯಾಧಿಕಾರಿಗಳು. ಅವರು ಕೂಡ ಪೂರ್ಣಾವಧಿ ಅಲ್ಲ! ಭಾರತದ ಶೇ.20ರಷ್ಟು ಆನೆ ಸಂತತಿ, ಶೇ.18ರಷ್ಟು ಹುಲಿ ಸಂತತಿ, ಐದು ರಾಷ್ಟ್ರೀಯ ಉದ್ಯಾನವನಗಳು ಹಾಗೂ 30 ವನ್ಯಜೀವಿ ಅಭಯಾರಣ್ಯಗಳು ರಾಜ್ಯದಲ್ಲಿವೆ. 13 ಅರಣ್ಯ ವೃತ್ತ ಹಾಗೂ 600 ಅರಣ್ಯ ವಲಯಗಳಿವೆ. ಪ್ರತಿ ಜಿಲ್ಲೆ ಅಥವಾ ಪ್ರತಿ ವೃತ್ತಕ್ಕೆ ಒಬ್ಬರು ವನ್ಯಜೀವಿ ವೈದ್ಯಾಧಿಕಾರಿಗಳ ಅವಶ್ಯಕತೆ ಇದೆ. ಆದರೆ, ನಾಲ್ಕೇ ನಾಲ್ಕು ವನ್ಯಜೀವಿ ವೈದ್ಯರು ಕಾರ್ಯನಿರ್ವಹಿಸಬೇಕಾದ ದುಸ್ಥಿತಿ ಎದುರಾಗಿದೆ. ಈ ಕೊರತೆ ನೀಗಿಸಲು ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಶಾರ್ಪ್‌ ಶೂಟರ್‌ ಗಳಾಗಿ ಬಳಸಿಕೊಳ್ಳಲಾಗುತ್ತಿದೆ.

ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದರೂ ಅರಣ್ಯ ಇಲಾಖೆ ಪೂರ್ಣ ಪ್ರಮಾಣದ ವನ್ಯಜೀವಿ ವೈದ್ಯಾಧಿಕಾರಿಗಳ ನೇಮಕ ಮಾಡುತ್ತಿಲ್ಲ. ಕಳೆದ ಒಂದು ವರ್ಷದಲ್ಲಿ ವನ್ಯಜೀವಿಗಳ ದಾಳಿಗೆ 10ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ನಾಗರಿಕರಷ್ಟೇ ಅಲ್ಲದೆ, ಅರಣ್ಯ ಅಧಿಕಾರಿಗಳೂ ಇದ್ದಾರೆ. ಏಪ್ರಿಲ್‌ನಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡಿದ್ದ ಆನೆಯೊಂದು ವೈದ್ಯಾಧಿಕಾರಿ ಮೇಲೆಯೇ ದಾಳಿ ಮಾಡಿತ್ತು. ಸೆಪ್ಟೆಂಬರ್‌ನಲ್ಲಿ ಶಾರ್ಪ್‌ ಶೂಟರ್‌ ವೆಂಕಟೇಶ್‌ ಅವರನ್ನು ಬಲಿ ಪಡೆದಿತ್ತು. ಕಳೆದ ಕೆಲ ದಿನಗಳ ಹಿಂದೆ ಅರವಳಿಕೆ ಹೆಚ್ಚಾಗಿ ಒಂದು ಆನೆ ಸಹ ಮೃತಪಟ್ಟಿತ್ತು.

ಶಿವಮೊಗ್ಗದಲ್ಲಿ ಮಹಿಳೆಯೊಬ್ಬರನ್ನು ಚಿರತೆ ತಿಂದು ಹಾಕಿತ್ತು. ಇತ್ತೀಚೆಗಷ್ಟೇ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಎಂಟು ಬಾರಿ ಅಂಬಾರಿ ಹೊತ್ತ ಅರ್ಜುನ ಅಸುನೀಗಿದ್ದಾನೆ. ಹೀಗೆ ಸಂಘರ್ಷದ ಹಾದಿ ದೊಡ್ಡದಿದೆ. ದೇಶದಲ್ಲೇ ಆನೆಗಳ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿದೆ. ಮೂರ್‍ನಾಲ್ಕು ಆನೆಗಳಿದ್ದ ಶಿವಮೊಗ್ಗದ ಶೆಟ್ಟಿಹಳ್ಳಿ ಅಭಯಾರಣ್ಯ, ಭದ್ರಾ ಅಭಯಾರಣ್ಯ, ಹಾಸನ, ಚಿಕ್ಕಮಗಳೂರಿನಲ್ಲಿ ಹಿಂಡು ಹಿಂಡು ಆನೆಗಳು ಕಂಡುಬರುತ್ತಿವೆ. ಹುಲಿ, ಚಿರತೆ, ಕರಡಿ ಹಾವಳಿ ವಿಪರೀತವಾಗಿದೆ. ಅರಣ್ಯದಂಚಿನ ಗ್ರಾಮಗಳೇ ಅವುಗಳ ಟಾರ್ಗೆಟ್‌. ಪ್ರತಿದಿನ ರಾತ್ರಿ ದಾಳಿ ಮಾಡಿ ಆಹಾರ ಬೆಳೆಗಳನ್ನು ಹಾಳು ಮಾಡುತ್ತಿವೆ. ಇದನ್ನು ತಡೆಯುವ ಅರಣ್ಯ ಇಲಾಖೆ ಪ್ರಯತ್ನಗಳು ಫಲಪ್ರದವಾಗುತ್ತಿಲ್ಲ.

ನಾಲ್ಕೇ ಮಂದಿ ಡಾಕ್ಟರ್‌: ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಆನೆ ತೂಕ, ವಯಸ್ಸು ಅಂದಾಜಿನ ಮೇಲೆ ಇಷ್ಟೇ ಪ್ರಮಾಣ ಅರವಳಿಕೆ ನೀಡಬೇಕೆಂಬ ನಿಯಮವಿದೆ. ಇದಕ್ಕೆ ಅರಣ್ಯ ಇಲಾಖೆಯ ವನ್ಯಜೀವಿ ವೈದ್ಯಾಧಿಕಾರಿಗಳು ನೇತೃತ್ವ ವಹಿಸುತ್ತಾರೆ. ಬಂಡೀಪುರ, ಹುಣಸೂರು, ಮೈಸೂರು, ಶಿವಮೊಗ್ಗದಲ್ಲಿ ಮಾತ್ರ ವನ್ಯಜೀವಿ ವೈದ್ಯಾಧಿಕಾರಿಗಳಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ವನ್ಯಜೀವಿ ಹಿಡಿಯುವ ಕಾರ್ಯಾಚರಣೆ ಇದ್ದರೆ ಅದಕ್ಕೆ ಇವರೇ ಹೋಗುತ್ತಾರೆ. ಯಾವುದೇ ಪ್ರಾಣಿ, ಎಷ್ಟೇ ದೂರವಿದ್ದರೂ ನಿಖರವಾಗಿ ಡಾರ್ಟ್‌ ಮಾಡುವಷ್ಟು ಪರಿಣತಿ ಇವರಿಗಿದೆ. ಅನೇಕ ವರ್ಷಗಳಿಂದ ಯಶಸ್ವಿ ಕಾರ್ಯಾಚರಣೆ
ಮಾಡುತ್ತಿರುವ ಇವರಿಗೆ ಇತ್ತೀಚಿನ ವರ್ಷಗಳು ಸವಾಲಾಗಿವೆ. ವೈದ್ಯಾಧಿಕಾರಿಗಳಲ್ಲದೇ ಅನುಭವದ ಆಧಾರದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಶಾರ್ಪ್‌ ಶೂಟರ್‌ಗಳಾಗಿ ಬಳಸಿಕೊಳ್ಳಲಾಗುತ್ತಿದೆ!

ಯಾವುದೇ ಕಾರ್ಯಾಚರಣೆಯಲ್ಲಿ ಕನಿಷ್ಟ ಇಬ್ಬರು ವೈದ್ಯಾಧಿಕಾರಿಗಳು ಇರುವುದು ಅವಶ್ಯ. ಇಲ್ಲಿ ಅದು ಪಾಲನೆಯಾಗುತ್ತಿಲ್ಲ. ಅರಣ್ಯ ಇಲಾಖೆ ವೈದ್ಯಾಧಿಕಾರಿಗಳು ಬಿಟ್ಟರೆ ರಾಜ್ಯದಲ್ಲಿರುವ ಮೃಗಾಲಯಗಳಲ್ಲಿ ವನ್ಯಜೀವಿ ವೈದ್ಯಾಧಿಕಾರಿಗಳು ಇದ್ದಾರೆ. ಮೃಗಾಲಯದಲ್ಲಿ ನೂರಾರು ವಿವಿಧ ಪ್ರಭೇದಗಳ ಪ್ರಾಣಿ, ಪಕ್ಷಿಗಳು ಇದ್ದು ಪ್ರತಿನಿತ್ಯ ಒಂದಿಲ್ಲೊಂದು ಸಮಸ್ಯೆ, ಸವಾಲುಗಳು ಇರುತ್ತವೆ. ಇವರನ್ನು ವನ್ಯಜೀವಿ ಸೆರೆ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳುವುದು ವಿರಳ.

ಮಧ್ಯಪ್ರದೇಶ ಮಾದರಿಯಾಗಲಿ
ಮಧ್ಯಪ್ರದೇಶದಲ್ಲಿ ವನ್ಯಜೀವಿಗಳ ಅಧ್ಯಯನ, ತರಬೇತಿ ಪಡೆದ ಪೂರ್ಣಾವಧಿ ವೈದ್ಯರನ್ನು ಅರಣ್ಯ ಇಲಾಖೆ ನೇಮಕ ಮಾಡಿಕೊಂಡಿದೆ. ಇವರು ನಿವೃತ್ತಿಯಾಗುವವರೆಗೂ ಇಲಾಖೆ ಸೇವೆಯಲ್ಲೇ ಇರುತ್ತಾರೆ. ಕರ್ನಾಟಕದಲ್ಲಿ ಹಂಗಾಮಿ ವೈದ್ಯರಾಗಿ ನೇಮಕಗೊಳ್ಳುವ ಇವರು ಪೂರ್ಣಾವಧಿ ಪೂರೈಸುವುದು ತುಂಬಾ ವಿರಳ. ಪಶು ವೈದ್ಯಾಧಿಕಾರಿಗಳಾದರೆ ಡ್ರಾಯಿಂಗ್‌ ಆಫೀಸರ್‌ ಆಗಿರುವ ಇವರಿಗೆ ಅರಣ್ಯ ಇಲಾಖೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿರುವುದಿಲ್ಲ. ಅರಣ್ಯಾಧಿಕಾರಿಗಳು
ಹಾಗೂ ವೈದ್ಯಾಧಿಕಾರಿಗಳ ನಡುವೆ ಒಂದು ಸಂಘರ್ಷ ಇದ್ದೇ ಇರುತ್ತದೆ. ದೀರ್ಘ‌ ಅವಧಿಗೆ ಸೇವೆ ಸಲ್ಲಿಸುವುದು ವಿರಳ.

ಹೊಸಬರು ಬಂದು ಮತ್ತೆ ಅನುಭವ ಪಡೆಯಬೇಕು. ಪೂರ್ಣ ಪ್ರಮಾಣದ ವನ್ಯಜೀವಿ ವೈದ್ಯಾಧಿಕಾರಿಗಳ ನೇಮಕದಿಂದ ಇಲಾಖೆಗೆ ಹೆಚ್ಚಿನ ಅನುಕೂಲವಿದೆ. ಯಾವುದೇ ವೈದ್ಯಾಧಿಕಾರಿ ಕಾರ್ಯಾಚರಣೆಗೆ ಹೋದರೆ ಅದು ಎಷ್ಟು ದಿನ ಹಿಡಿಯುತ್ತದೆ ತಿಳಿಯಲ್ಲ. ಇಂತಹ ಸಂದರ್ಭಗಳಲ್ಲಿ ಬಿಡಾರದ ಆನೆಗಳಿಗೆ ಚಿಕಿತ್ಸೆ, ಆರೈಕೆಗೆ ತೊಂದರೆಯಾಗುತ್ತದೆ. ಕನಿಷ್ಟ ವಿಭಾಗವಾರು ವೈದ್ಯಾಧಿಕಾರಿಗಳ ನೇಮಕವಾದರೆ ಮಾನವ-ಪ್ರಾಣಿ ಸಂಘರ್ಷ ನಿಯಂತ್ರಣ ಮಾಡಬಹುದು ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ನಮ್ಮ ಅರಣ್ಯ ಇಲಾಖೆಯಲ್ಲಿ ಪರಿಣತಿ ಹೊಂದಿದ ವನ್ಯಜೀವಿ ವೈದ್ಯಾಧಿಕಾರಿಗಳಿಲ್ಲ. ಪಶು ವೈದ್ಯ ಇಲಾಖೆಯಿಂದ ಇವರು ಬರುತ್ತಾರೆ. ಮೂರ್‍ನಾಲ್ಕು ವರ್ಷ ಅನುಭವ ಪಡೆದು ಹೋಗುತ್ತಾರೆ. ಹೊಸಬರು ಬಂದು ಎಬಿಸಿಡಿಯಿಂದ ಕಲಿಯಬೇಕು. ಮಧ್ಯಪ್ರದೇಶದಲ್ಲಿ ತರಬೇತಿ ಪಡೆದ ವನ್ಯಜೀವಿ ವೈದ್ಯಾಧಿಕಾರಿಗಳ ಕೇಡರ್‌ ಇದೆ. ಅದೇ ರೀತಿ ರಾಜ್ಯದಲ್ಲೂ ಆಗಬೇಕು.
● ಜೋಸೆಫ್‌ ಹೂವರ್‌, ವನ್ಯಜೀವಿ ಮಂಡಳಿ ಮಾಜಿ ಸದಸ್ಯ

● ಶರತ್‌ ಭದ್ರಾವತಿ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.