IPL ಐಪಿಎಲ್ ಅರಬ್ ನಾಡಿನಲ್ಲಿ ಬಿಡ್ಡಿಂಗ್ ಅಬ್ಬರ
ರಚಿನ್ ರವೀಂದ್ರ ಬಂಪರ್ ಮೊತ್ತಕ್ಕೆ ಮಾರಾಟಗೊಳ್ಳುವುದು ಖಚಿತ
Team Udayavani, Dec 19, 2023, 6:55 AM IST
ಕೋಟಿ ಕೊಪ್ಪರಿಗೆಯ ನಿರೀಕ್ಷೆಯ ಐವರು
ಗೆರಾಲ್ಡ್ ಕೋಟ್ಜಿ
ಮೂಲಬೆಲೆ: 2 ಕೋಟಿ ರೂ.
ಹೆಡ್ ಬ್ಯಾಂಡ್ ಕಟ್ಟಿಕೊಂಡು ದಾಳಿಗೆ ಇಳಿಯುವ ದಕ್ಷಿಣ ಆಫ್ರಿಕಾದ ಭರವಸೆಯ ವೇಗಿ. ವಿಶ್ವಕಪ್‌ನ 8 ಇನ್ನಿಂಗ್ಸ್‌ಗಳಿಂದ 20 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದಾರೆ. ಆರಂಭಿಕ ಎಸ್‌ಎ20 ಸೀಸನ್‌ನಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ಪರ 17 ವಿಕೆಟ್ ಉರುಳಿಸಿ ಟಿ20ಗೂ ಸೈ ಎನಿಸಿದ್ದಾರೆ. ಮಿಡ್ಲ್ ಓವರ್‌ಗಳಲ್ಲಿ ಹೆಚ್ಚು ಪರಿಣಾಮಕಾರಿ.
ಮಿಚೆಲ್ ಸ್ಟಾರ್ಕ್
ಮೂಲಬೆಲೆ: 2 ಕೋಟಿ ರೂ.
ಆಸ್ಟ್ರೇಲಿಯದ ಎಡಗೈ ವೇಗಿ. ಸದಾ ಓಡುವ ಕುದುರೆ. ಮುಂದಿನ ವರ್ಷದ ವಿಶ್ವಕಪ್ ತಯಾರಿಯ ಹಿನ್ನೆಲೆಯಲ್ಲಿ ಐಪಿಎಲ್‌ನಲ್ಲಿ ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳನ್ನಾಡಿ ಸಿದ್ಧತೆ ಮಾಡುವ ಯೋಜನೆ ಸ್ಟಾರ್ಕ್ ಅವರದು. 27 ಐಪಿಎಲ್ ಪಂದ್ಯಗಳಲ್ಲಿ 34 ವಿಕೆಟ್ ಉಡಾಯಿಸಿದ ದಾಖಲೆ ಹೊಂದಿದ್ದಾರೆ.
ಟ್ರ್ಯಾವಿಸ್ ಹೆಡ್
ಮೂಲಬೆಲೆ: 2 ಕೋಟಿ ರೂ.
ವಿಶ್ವಕಪ್ ಫೈನಲ್ ಪಂದ್ಯದ ಹೀರೋ. ಅಗ್ರಕ್ರಮಾಂಕದ ಆಕ್ರಮಣಕಾರಿ ಆಟಗಾರ. ಎಡಗೈ ಬ್ಯಾಟರ್ ಎಂಬುದು ಪ್ಲಸ್ ಪಾಯಿಂಟ್. ಭಾರತದ ಟ್ರ್ಯಾಕ್‌ಗಳಲ್ಲಿ ಈಗಾಗಲೇ ಮಿಂಚು ಹರಿಸಿದ್ದಾರೆ. ಬಹುತೇಕ ತಂಡಗಳು ಹೆಡ್ ಖರೀದಿಗೆ ಹೊಂಚುಹಾಕಿ ಕುಳಿತಿವೆ. ದಾಖಲೆ ಮೊತ್ತಕ್ಕೆ ಹರಾಜಾಗುವ ಎಲ್ಲ ಸಾಧ್ಯತೆ ಇದೆ.
ರಚಿನ್ ರವೀಂದ್ರ
ಮೂಲಬೆಲೆ: 50 ಲಕ್ಷ ರೂ.
ಈ ನ್ಯೂಜಿಲ್ಯಾಂಡ್ ಸವ್ಯಸಾಚಿಯ ಮೂಲಬೆಲೆ ಕಡಿಮೆ ಇರಬಹುದು, ಆದರೆ ಇವರ ಸಾಮರ್ಥ್ಯದ ಮೌಲ್ಯ ಖಂಡಿತ ಇದಕ್ಕೂ ಮಿಗಿಲಾಗಲಿದೆ. ವಿಶ್ವಕಪ್‌ನಲ್ಲಿ 578 ರನ್ ಪೇರಿಸಿದ ಬಳಿಕ ರಚಿನ್ ಹವಾ ಜೋರಾಗಿಯೇ ಬೀಸಿದೆ. ಬಂಪರ್ ಮೊತ್ತಕ್ಕೆ ಮಾರಾಟಗೊಳ್ಳುವುದು ಖಚಿತ ಎನ್ನಲಡ್ಡಿಯಿಲ್ಲ.
ವನಿಂದು ಹಸರಂಗ
ಮೂಲಬೆಲೆ:
1.5 ಕೋಟಿ ರೂ.
ಶ್ರೀಲಂಕಾದ ರಿಸ್ಟ್ ಸ್ಪಿನ್ನರ್. ಆಲ್‌ರೌಂಡರ್. ಆರ್‌ಸಿಬಿಯಿಂದ ಬಿಡುಗಡೆಗೊಂಡ ಕ್ರಿಕೆಟಿಗ. 2022ರಲ್ಲಿ ಪರ್ಪಲ್ ಕ್ಯಾಪ್‌ಗೆ ಹತ್ತಿರವಾಗಿದ್ದರು (16 ಪಂದ್ಯ, 26 ವಿಕೆಟ್). ಈ ವರ್ಷದ ವಿಶ್ವಕಪ್ ಅರ್ಹತಾ ಕೂಟದ 7 ಪಂದ್ಯಗಳಿಂದ 22 ವಿಕೆಟ್ ಹಾರಿಸಿದ್ದಾರೆ. ಹರಾಜಿನ ಕೇಂದ್ರಬಿಂದು ಎನ್ನಬಹುದು.
ಫ್ರಾಂಚೈಸಿಗಳ ಒಲವು
ಕ್ಯಾಶ್ ರಿಚ್ ಐಪಿಎಲ್‌ನ 2024ರ ಆವೃತ್ತಿಗಾಗಿ ಕ್ರಿಕೆಟಿಗರ ಹರಾಜು ಪ್ರಕ್ರಿಯೆ ಮಂಗಳವಾರ ದುಬಾೖಯಲ್ಲಿ ಏರ್ಪಡಲಿದೆ. ಐಪಿಎಲ್ ಬಿಡ್ಡಿಂಗ್ ಪ್ರಥಮ ಬಾರಿಗೆ ವಿದೇಶದಲ್ಲಿ ನಡೆಯಲಿದೆ ಎಂಬುದೇ ಮೊದಲ ವಿಶೇಷ. ಉಳಿದಂತೆ ಇದು ಮಿನಿ ಏಲಂ ಮಾತ್ರ. ಆದರೆ ಕಳೆದ ರೀಟೇನಿಂಗ್ ಹಾಗೂ ಟ್ರೇಡಿಂಗ್ ಪ್ರಕ್ರಿಯೆಯಲ್ಲಿ ಸಾಕಷ್ಟು ಅಚ್ಚರಿ ಹಾಗೂ ಅನಿರೀಕ್ಷಿತ ವಿದ್ಯಮಾನಗಳು ಸಂಭವಿಸಿದ್ದರಿಂದ ಈ ಹರಾಜು ದೊಡ್ಡ ಮಟ್ಟದಲ್ಲೇ ಸುದ್ದಿಯಾಗಲಿದೆ. ಬಿಡ್ಡಿಂಗ್ ರೇಸ್‌ನಲ್ಲಿ ಯಾವ ಕ್ರಿಕೆಟಿಗರು ಯಾವ ತಂಡದ ಪಾಲಾಗಲಿದ್ದಾರೆ, ಯಾರೆಲ್ಲ ಕರೋಡ್‌ಪತಿಗಳಾಗಲಿದ್ದಾರೆ, ತಂಡಗಳ ಅಂತಿಮ ಸ್ವರೂಪ ಹೇಗಿರಲಿದೆ ಎಂಬುದೆಲ್ಲ ತಿಳಿಯಲು ಕ್ರಿಕೆಟ್ ಅಭಿಮಾನಿಗಳು ಕಾತರಗೊಂಡಿದ್ದಾರೆ. ಇವೆಲ್ಲದರತ್ತ ಇಲ್ಲಿ ಮುನ್ನೋಟವನ್ನು ಹಾಯಿಸಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್
·ಉಳಿದಿರುವ ಮೊತ್ತ: 31.4 ಕೋಟಿ ರೂ.
·ಬೇಕಿರುವ ಆಟಗಾರರು: 6, ವಿದೇಶಿಗರು: 3
ಖರೀದಿಯ ಆಸಕ್ತಿ: ಶಾದೂìಲ್ ಠಾಕೂರ್, ಮನೀಷ್ ಪಾಂಡೆ, ಜೋಶ್ ಹೇಝಲ್‌ವುಡ್.
ಇವರಲ್ಲಿ ಶಾದೂìಲ್ ಠಾಕೂರ್ ಹಿಂದೆ ಸಿಎಸ್‌ಕೆ
ಪರ ಆಡಿದ್ದಾರೆ. ಆದರೆ ಭಾರತೀಯ ಆಲ್‌ರೌಂಡರ್ ಒಬ್ಬನ ಅನಿವಾರ್ಯತೆ ತಂಡಕ್ಕಿದೆ. ಡೆತ್ ಓವರ್ ಬೌಲಿಂಗ್ ಹಾಗೂ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿದ್ದಾರೆ. ಶಾದೂìಲ್‌ಗಾಗಿ 10 ಕೋಟಿ ತನಕ ಬಿಡ್ ಮಾಡಲು ಚೆನ್ನೈ ಸಿದ್ಧವಿದೆ ಎನ್ನಲಾಗಿದೆ. ಹಾಗೆಯೇ ಅಂಬಾಟಿ ರಾಯುಡು ಸ್ಥಾನ ತುಂಬಬಲ್ಲ ಭಾರತದ ಬ್ಯಾಟರ್ ಕೂಡ ಬೇಕಾಗಿದ್ದಾರೆ. ಇದಕ್ಕಾಗಿ ಮನೀಷ್ ಪಾಂಡೆ ಮೇಲೆ ಕಣ್ಣಿಟ್ಟಿದೆ. ವೇಗದ ಬೌಲಿಂಗ್ ವಿಭಾಗ ಗಟ್ಟಿಗೊಳಿಸಲು ಹೇಝಲ್‌ವುಡ್‌ಗೆ ಬಲೆ ಬೀಸಬಹುದು.
ಡೆಲ್ಲಿ ಕ್ಯಾಪಿಟಲ್ಸ್
·ಉಳಿದಿರುವ ಮೊತ್ತ: 28.95 ಕೋಟಿ ರೂ.
·ಬೇಕಿರುವ ಆಟಗಾರರು: 9, ವಿದೇಶಿಗರು: 4
ಖರೀದಿಯ ಆಸಕ್ತಿ: ಪ್ರಿಯಾಂಶ್ ಆರ್ಯ, ಹರ್ಷಲ್ ಪಟೇಲ್, ಶಾದೂìಲ್ ಠಾಕೂರ್, ಜೋಶ್ ಇಂಗ್ಲಿಸ್, ವನಿಂದು ಹಸರಂಗ.
ಡೆಲ್ಲಿಯ ದೊಡ್ಡ ಕೊರತೆಯೆಂದರೆ ಭಾರತೀಯ ಬ್ಯಾಟರ್‌ಗಳದ್ದು. ಆರಂಭಕಾರ ಆರ್ಯ “ಸ್ಮಾಟ್ ಟಿ20′ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಹಾಗೆಯೇ ಯುಪಿಯ ಅಪರಿಚಿತರಾದ ಸಮೀರ್ ರಿಝಿÌ ಮತ್ತು ಸ್ವಸ್ತಿಕ್ ಚಿಕ್ಕಾರ ಅವರನ್ನೂ ಗುರುತಿಸಿಟ್ಟಿದೆ. ಯುಪಿಸಿಎ ಟಿ20ಯಲ್ಲಿ ಇಬ್ಬರೂ ಅಮೋಘ ಆಟವಾಡಿದ್ದಾರೆ. ಕೋಟ್ಲಾ ಟ್ರ್ಯಾಕ್‌ನಲ್ಲಿ ಹರ್ಷಲ್ ಪಟೇಲ್ ಅವರ ನಿಧಾನ ಗತಿಯ ಎಸೆತಗಳು ಯಾವತ್ತೂ ಅಪಾಯಕಾರಿ ಎಂಬುದೂ ಡೆಲ್ಲಿಗೆ ತಿಳಿದಿದೆ.
ಆರ್‌ಸಿಬಿ
·ಉಳಿದಿರುವ ಮೊತ್ತ: 23.25 ಕೋಟಿ ರೂ.
·ಬೇಕಿರುವ ಆಟಗಾರರು: 6, ವಿದೇಶಿಗರು: 3
ಖರೀದಿಯ ಆಸಕ್ತಿ: ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಮುಜೀಬ್, ಕಾರ್ತಿಕ್ ತ್ಯಾಗಿ, ರೀಸ್ ಟಾಪ್‌ಲೀ.
ಹರ್ಷಲ್ ಪಟೇಲ್‌ಗೆ 10.75 ಕೋಟಿ ಮೊತ್ತಕ್ಕೆ ಬಿಡ್ ಮಾಡಿ ಹಳಿ ತಪ್ಪಿದ ಆರ್‌ಸಿಬಿ ಈ ಬಾರಿ ವಿದೇಶಿ ವೇಗಿಗಳತ್ತ ಚಿತ್ತ ನೆಟ್ಟಿದೆ. 6 ಸ್ಥಾನಗಳಲ್ಲಿ 3 ಸ್ಥಾನ ವಿದೇಶಿಯರಿಗೆ ಮೀಸಲಾಗಿದೆ. ಸ್ಟಾರ್ಕ್, ಕಮಿನ್ಸ್, ಇಂಗ್ಲೆಂಡ್‌ನ ಗಸ್ ಅಟಿRನ್ಸನ್, ರೀಸ್ ಟಾಪ್‌ಲೀ ಅವರೆಲ್ಲ ಆರ್‌ಸಿಬಿ ನಿಶಾನೆಯಲ್ಲಿದ್ದಾರೆ. ಸ್ಟಾರ್ಕ್ ಹಿಂದೆಯೂ ಆರ್‌ಸಿಬಿಯಲ್ಲಿದ್ದರು. ಕಮಿನ್ಸ್ ವಿಶ್ವಕಪ್ ವಿಜೇತ ತಂಡದ ಲಕ್ಕಿ ಕ್ಯಾಪ್ಟನ್. ಆದರೆ ಈ ಆಸ್ಟ್ರೇಲಿಯನ್ನರು ಪೂರ್ಣಾವಧಿ ಆಡು ವುದು ಅಷ್ಟರಲ್ಲೇ ಇದೆ. ಹಸರಂಗ ಸ್ಥಾನಕ್ಕೆ ಕ್ವಾಲಿಟಿ ಸ್ಪಿನ್ನರ್ ಒಬ್ಬರ ಅಗತ್ಯವಿದೆ. ಇಲ್ಲಿ ಮುಜೀಬ್ ರೇಸ್‌ನಲ್ಲಿದ್ದಾರೆ.
ಕೋಲ್ಕತಾ ನೈಟ್‌ರೈಡರ್ಸ್
·ಉಳಿದಿರುವ ಮೊತ್ತ: 32.70 ಕೋಟಿ ರೂ.
·ಬೇಕಿರುವ ಆಟಗಾರರು: 12, ವಿದೇಶಿಗರು: 4
ಖರೀದಿಯ ಆಸಕ್ತಿ: ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ರಚಿನ್ ರವೀಂದ್ರ, ಹರ್ಷಲ್ ಪಟೇಲ್.
ಕೆಕೆಆರ್‌ಗೆ ತುರ್ತಾಗಿ 2-3 ಮಂದಿ ಪೇಸ್ ಬೌಲರ್‌ಗಳು ಬೇಕಾಗಿದ್ದಾರೆ. ಹೀಗಾಗಿ ಆಸ್ಟ್ರೇಲಿಯದ ಸ್ಟಾರ್ಕ್, ಕಮಿನ್ಸ್ ಮೇಲೆ ಕಣ್ಣಿಟ್ಟಿದೆ. ಜತೆಗೆ ಹರ್ಷಲ್ ಪಟೇಲ್ ಅವರನ್ನೂ ಸೆಳೆಯುವ ಸಾಧ್ಯತೆ ಇದೆ. ತಂಡ ಸಾಕಷ್ಟು ಆಲ್‌ರೌಂಡರ್‌ಗಳನ್ನು ಹೊಂದಿದ್ದರೂ ಯಾರೂ ಪರಿಣಾಮಕಾರಿ ಪ್ರದರ್ಶನ ನೀಡದಿರುವ ಕಾರಣ ಹಿನ್ನಡೆ ಆಗಿದೆ. ಹೀಗಾಗಿ ರಚಿನ್ ರವೀಂದ್ರ ಉಪಯುಕ್ತರಾಗಬಲ್ಲರು ಎಂಬ ಲೆಕ್ಕಾಚಾರದಲ್ಲಿದೆ. ಗೌತಮ್ ಗಂಭೀರ್ ಫ್ರಾಂಚೈಸಿಗೆ ವಾಪಸಾಗಿರುವುದರಿಂದ ಅವರ “ಮಾಸ್ಟರ್ ಮೈಂಡ್’ ಇಲ್ಲಿ ಕೆಲಸ ಮಾಡುವ ಎಲ್ಲ ಸಾಧ್ಯತೆ ಇದೆ.
ಮುಂಬೈ ಇಂಡಿಯನ್ಸ್
·ಉಳಿದಿರುವ ಮೊತ್ತ: 17.75 ಕೋಟಿ ರೂ.
·ಬೇಕಿರುವ ಆಟಗಾರರು: 8, ವಿದೇಶಿಗರು: 4
ಖರೀದಿಯ ಆಸಕ್ತಿ: ವನಿಂದು ಹಸರಂಗ, ಮಾನವ್ ಸುತಾರ್, ಅಶುತೋಷ್ ಶರ್ಮ, ದರ್ಶನ್ ಮಿಸಾಲ್.
ಹಾರ್ದಿಕ್ ಪುನರಾಗಮನದಿಂದ ಕೆಲವರಿಗೆ ಅಸಮಾಧಾನವಾದರೂ ತಂಡಕ್ಕೆ ಲಾಭವಂತೂ ಇದೆ. ರೋಹಿತ್, ಬುಮ್ರಾ ಬೇರೆ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಗಾಳಿ ಸುದ್ದಿಯ ಹೊರತಾಗಿ ತಂಡ ಹೆಚ್ಚು ಬಲಿಷ್ಠಗೊಂಡಿದೆ. ಹೀಗಾಗಿ ಭಾರತದ ಕೆಲವು ಮಂದಿ ಅನ್‌ಕ್ಯಾಪ್ಡ್ ಆಟಗಾರರನ್ನಷ್ಟೇ ಖರೀದಿಸಲು ಮುಂದಾಗಬಹುದು. “ಮುಂಬೈ ಪ್ರತಿಭಾ ಪ್ರಗತಿ ತಂಡ’ದಲ್ಲಿದ್ದ ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಆಯ್ಕೆ ಖಚಿತ ಎನ್ನಲಡ್ಡಿಯಿಲ್ಲ. ವಿದೇಶಿ ಸ್ಪಿನ್ನರ್‌ಗಳ ಅಗತ್ಯ ಕಂಡುಬಂದರೆ ಹಸರಂಗ ಇದ್ದಾರೆ.
ಪಂಜಾಬ್ ಕಿಂಗ್ಸ್
·ಉಳಿದಿರುವ ಮೊತ್ತ: 29.10 ಕೋಟಿ ರೂ.
·ಬೇಕಿರುವ ಆಟಗಾರರು: 8, ವಿದೇಶಿಗರು: 2
ಖರೀದಿಯ ಆಸಕ್ತಿ: ಶಾದೂìಲ್ ಠಾಕೂರ್, ರಚಿನ್ ರವೀಂದ್ರ, ಹರ್ಷಲ್ ಪಟೇಲ್.
ಪಂಜಾಬ್ ಬಳಿ 8 ಸ್ಥಾನ ಖಾಲಿ ಇದೆ. ತಂಡಕ್ಕೆ ತುರ್ತಾಗಿ ಬೇಕಿರುವುದು ವಿದೇಶಿ ಸ್ಪಿನ್ನರ್. ರಾಹುಲ್ ಚಹರ್, ಹರ್‌ಪ್ರೀತ್ ಬ್ರಾರ್, ಆಲ್‌ರೌಂಡರ್ ಸಿಕಂದರ್ ರಝ, ಲಿವಿಂಗ್‌ಸ್ಟೋನ್ ಅವರನ್ನು ಈಗಾಗಲೇ ಹೊಂದಿರುವುದರಿಂದ ರಚಿನ್ ರವೀಂದ್ರ ಅವರಿಗೆ ಬಿಡ್ ಸಲ್ಲಿಸುವ ಎಲ್ಲ ಸಾಧ್ಯತೆ ಇದೆ. ಕೈಯಲ್ಲಿ ದೊಡ್ಡ ಮೊತ್ತ ಇರುವುದರಿಂದ ಇದು ಅಸಾಧ್ಯವೇನೂ ಅಲ್ಲ. ಹಾಗೆಯೇ ತವರಿನ ಕ್ವಾಲಿಟಿ ಸೀಮರ್‌ಗಳ ಅನಿವಾರ್ಯತೆಯೂ ಇದೆ. ಇಲ್ಲಿ ಹರ್ಷಲ್ ಪಟೇಲ್, ಶಾದೂìಲ್ ಠಾಕೂರ್, ಉಮೇಶ್ ಯಾದವ್ ಅವರನ್ನು ಕೊಳ್ಳುವ ಯೋಜನೆಯಲ್ಲಿದೆ.
ಗುಜರಾತ್ ಟೈಟಾನ್ಸ್
·ಉಳಿದಿರುವ ಮೊತ್ತ: 38.15 ಕೋಟಿ ರೂ.
·ಬೇಕಿರುವ ಆಟಗಾರರು: 8, ವಿದೇಶಿಗರು: 2
ಖರೀದಿಯ ಆಸಕ್ತಿ: ಶಾದೂìಲ್ ಠಾಕೂರ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಅಜ್ಮತುಲ್ಲ ಒಮರ್‌ಜಾಯ್.
ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಸ್ವತಃ ಗುಜರಾತ್ ಅಭಿಮಾನಿಗಳೇ ಅರಿತಿರುವ ಸಂಗತಿ. ಸಾಹಾ, ನೂತನ ನಾಯಕ ಗಿಲ್, ಸಾಯಿ ಸುದರ್ಶನ್ ಮೊದಲ 3 ಬ್ಯಾಟಿಂಗ್ ಕ್ರಮಾಂಕ ಭರ್ತಿಗೊಳಿಸಿದ ಬಳಿಕ ಪರಿಪೂರ್ಣ ಸವ್ಯಸಾಚಿಯೊಬ್ಬರ ಅಗತ್ಯ ತಂಡಕ್ಕಿದೆ. ಇಂಥ ಸ್ಥಿತಿಯಲ್ಲಿ ಸಹಜವಾಗಿಯೇ ಶಾದೂìಲ್ ಠಾಕೂರ್ ಮತ್ತು ರಚಿನ್ ರವೀಂದ್ರ ಅವರನ್ನು ಸೆಳೆದುಕೊಳ್ಳಲು ಪ್ರಯತ್ನಿಸಬಹುದು. ಇವರಲ್ಲಿ ರಚಿನ್ ಹೆಚ್ಚು ಪರಿಣಾಮಕಾರಿ.
ಲಕ್ನೋ ಸೂಪರ್ ಜೈಂಟ್ಸ್
·ಉಳಿದಿರುವ ಮೊತ್ತ: 13.15 ಕೋಟಿ ರೂ.
·ಬೇಕಿರುವ ಆಟಗಾರರು: 6, ವಿದೇಶಿಗರು: 2
ಖರೀದಿಯ ಆಸಕ್ತಿ: ಗೆರಾಲ್ಡ್ ಕೋಟಿj, ನಾಂಡ್ರೆ ಬರ್ಗರ್, ದಿಲ್ಶನ್ ಮದುಶಂಕ, ಅಶುತೋಷ್ ಶರ್ಮ.
ಲಕ್ನೋಗೆ ಅಗತ್ಯವಾಗಿ ಬೇಕಿರುವುದು “ಕ್ವಾಲಿಟಿ ಫಾಸ್ಟ್ ಬೌಲಿಂಗ್’ ಯೂನಿಟ್. ಮಾರ್ಕ್ ವುಡ್ ಈಗಾಗಲೇ ತಂಡದಲ್ಲಿದ್ದಾರೆ. ಇವರೊಂದಿಗೆ ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್, ದಕ್ಷಿಣ ಆಫ್ರಿಕಾದ ಗೆರಾಲ್ಡ್ ಕೋಟಿj, ನಾಂಡ್ರೆ ಬರ್ಗರ್ ಅವರಿಗೆಲ್ಲ ಕೋಟಿ ಸುರಿಯುವ ಉತ್ಸಾಹವೇನೋ ಇದೆ. ಆದರೆ ಕೈಯಲ್ಲಿರುವ ಕಾಸು ಬಹಳ ಕಡಿಮೆ. “ಸ್ಮಾಟ್’ನಲ್ಲಿ 12 ಎಸೆತಗಳಿಂದ 50 ರನ್ ಸಿಡಿಸಿದ ರೈಲ್ವೇಯ ಬ್ಯಾಟರ್ ಅಶುತೋಷ್ ಶರ್ಮ ಮೇಲೂ ಕಣ್ಣಿರಿಸಿದೆ. ಒಟ್ಟು 6 ಆಟಗಾರರ ಅಗತ್ಯವಿದೆ.
ಸನ್‌ರೈಸರ್ ಹೈದರಾಬಾದ್
·ಉಳಿದಿರುವ ಮೊತ್ತ: 34 ಕೋಟಿ ರೂ.
·ಬೇಕಿರುವ ಆಟಗಾರರು: 6, ವಿದೇಶಿಗರು: 3
ಖರೀದಿಯ ಆಸಕ್ತಿ: ಹಸರಂಗ, ರಚಿನ್ ರವೀಂದ್ರ, ಗೆರಾಲ್ಡ್ ಕೋಟಿj, ಮುಜೀಬ್ ಉರ್ ರೆಹಮಾನ್.
ಒಂದು ಕಾಲದ ಬಲಿಷ್ಠ ತಂಡವಾಗಿದ್ದ ಎಸ್‌ಆರ್‌ಎಚ್ ಈಗ ಪಾತಾಳಾಭಿಮುಖವಾಗಿದೆ. ಪ್ರತಿಭೆಗಳಿದ್ದರೂ ಮಿಂಚದಿರುವುದು ದೊಡ್ಡ ಸಮಸ್ಯೆ. ಹ್ಯಾರಿ ಬ್ರೂಕ್ ಹೊರತುಪಡಿಸಿ ಉಳಿದ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ. ಕೈಯಲ್ಲಿ 34 ಕೋಟಿ ರೂ.ಗಳ ದೊಡ್ಡ ಮೊತ್ತವಿದೆ. 6 ಸ್ಥಾನ ಖಾಲಿ ಇದೆ. ಇದರಲ್ಲಿ 3 ವಿದೇಶಿಯರಿಗೆ ಮೀಸಲು. ರಚಿನ್, ಕೋಟಿj, ಮುಜೀಬ್, ಹಸರಂಗ ಮತ್ತು ಬ್ರೂಕ್ಸ್ ಅವರ ನಡುವೆ ಈ ಆಯ್ಕೆ ನಡೆದೀತು. ಭಾರತದ ಸ್ಟಾರ್ ಆಟಗಾರರು ಇಲ್ಲದಿರುವುದರಿಂದ ಶಾದೂìಲ್ ಮತ್ತು ಹರ್ಷಲ್ ಪಟೇಲ್ ಖರೀದಿಗೆ ಉತ್ಸುಕವಾಗಿದೆ.
ರಾಜಸ್ಥಾನ್ ರಾಯಲ್ಸ್
·ಉಳಿದಿರುವ ಮೊತ್ತ: 14.50 ಕೋಟಿ ರೂ.
·ಬೇಕಿರುವ ಆಟಗಾರರು: 8, ವಿದೇಶಿಗರು: 3
ಖರೀದಿಯ ಆಸಕ್ತಿ: ಸಮೀರ್ ರಿಜ್ವಿ, ಸ್ವಸ್ತಿಕ್ ಚಿಕ್ಕಾರ, ಅಶುತೋಷ್ ಶರ್ಮ, ಅಭಿಮನ್ಯು ಸಿಂಗ್, ಸೌರಭ್ ಚೌಹಾನ್.
ಯುವ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅತ್ಯಂತ ಮುಂದಿರುವ ತಂಡ ರಾಜಸ್ಥಾನ್ ರಾಯಲ್ಸ್. ಮೇಲೆ ಹೆಸರಿಸಲ್ಪಟ್ಟ ಆಟಗಾರರೆಲ್ಲ ಸಯ್ಯದ್ ಮುಷ್ತಾಕ್ ಅಲಿ, ಟಿಎನ್‌ಪಿಎಲ್, ಯುಪಿ ಪ್ರೀಮಿಯರ್ ಲೀಗ್‌ಗಳಲ್ಲಿ ಮಿಂಚಿದ್ದಾರೆ. ಹಾಗೆಯೇ ಚೇತನ್ ಸಕಾರಿಯಾ, ಶಾರುಕ್ ಖಾನ್, ಮುಶೀರ್ ಖಾನ್ ಅವರನ್ನೂ ಖರೀದಿಸಲು ಮುಂದಾಗಬಹುದು. ಹ್ಯಾರಿ ಬ್ರೂಕ್ ಮೇಲೂ ಆಸಕ್ತಿ ಇದೆ. ಉಳಿದಿರುವ ಸಣ್ಣ ಮೊತ್ತವನ್ನು ಬಳಸಿಕೊಳ್ಳುವುದರಲ್ಲಿ ಫ್ರಾಂಚೈಸಿಯ ಜಾಣ್ಮೆ ಅಡಗಿದೆ.
ಹರಾಜಿಗೆ ನೋಂದಾಯಿಸಿದವರು: 1,166
ಆಯ್ಕೆಯಾದ ಆಟಗಾರರು: 333
ಹರಾಜಿನಲ್ಲಿರುವ ಭಾರತದ ಕ್ರಿಕೆಟಿಗರು: 214
ಹರಾಜಿನಲ್ಲಿರುವ ವಿದೇಶಿ ಆಟಗಾರರು: 119
ವಿದೇಶಿಗರಿಗೆ ಮೀಸಲಿರುವ ಕೋಟಾ: 30
10 ತಂಡಗಳಿಗೆ ಬೇಕಿರುವ ಆಟಗಾರರು: 77
ಅಂತಾರಾಷ್ಟ್ರೀಯ ಪಂದ್ಯ ಆಡಿದವರು: 116
ಅಂತಾರಾಷ್ಟ್ರೀಯ ಪಂದ್ಯ ಆಡದವರು: 215
ಅಸೋಸಿಯೇಟ್ ರಾಷ್ಟ್ರದ ಆಟಗಾರರು: 02
ಸ್ಥಳ: ದುಬಾೖಯ “ಕೋಕಾ ಕೋಲಾ ಅರೆನಾ’
ಆರಂಭ: ಭಾರತೀಯ ಕಾಲಮಾನದಂತೆ ಅಪರಾಹ್ನ 1.00
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.