Congress ಪಕ್ಷಕ್ಕೆ ತಮ್ಮ ಮಾಸಿಕ ವೇತನದ 1.38 ಲ.ರೂ.ದೇಣಿಗೆ ನೀಡಿದ ಎಐಸಿಸಿ ಅಧ್ಯಕ್ಷ ಖರ್ಗೆ
ಕಾಂಗ್ರೆಸ್ ಆರಂಭ ದಲ್ಲೇ ಪೇಚಿಗೆ ... ಕಾಂಗ್ರೆ ಸ್‌ಗೆ ದೇಣಿಗೆ ನೀಡಲು ಹೋದರೆ ಬಿಜೆಪಿ ಪೇಜ್ ಓಪನ್!
Team Udayavani, Dec 19, 2023, 5:19 AM IST
ಹೊಸದಿಲ್ಲಿ: ತಮ್ಮ ವೇತ ನದ 1,38,000ರೂ.ಗಳ ನ್ನು ದೇಣಿಗೆ ನೀಡುವ ಮೂಲಕ ಕಾಂಗ್ರೆಸ್‌ನ “ದೇಶಕ್ಕಾಗಿ ದೇಣಿಗೆ’ ಅಭಿ ಯಾನಕ್ಕೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಖರ್ಗೆ, “ಸಣ್ಣ ದೇಣಿಗೆದಾರ ರಿಂದ ಪಕ್ಷ ಹಣ ಸಂಗ್ರಹಿಸಲಿದೆ. ಶ್ರೀಮಂತರಿಂದ ಮಾತ್ರ ದೇಣಿಗೆ ಸಂಗ್ರಹಿಸಿದರೆ, ಅವರ ಪರವಾಗಿ ಯೋಜನೆಗಳು, ನೀತಿಗಳನ್ನು ರೂಪಿಸಬೇಕಾಗುತ್ತದೆ. ನಮ್ಮ ಪಕ್ಷ ಶೋಷಿತರ, ದಲಿತರ, ಆದಿವಾಸಿಗಳ, ಹಿಂದುಳಿದ ವರ್ಗ ಗಳ, ಅಲ್ಪಸಂಖ್ಯಾಕರ ಪರವಾಗಿ ಮೊದಲಿನಿಂದಲೂ ಇದೆ. ಅವರೂ ನಮಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಜನಸಾಮಾ ನ್ಯರ ಸಹಾಯದಿಂದ ದೇಶ ಕಟ್ಟಲು ಈ ಅಭಿಯಾನ ಆರಂಭಿಸಿ ದ್ದೇವೆ’ ಎಂದರು. ಡಿ.28ರಂದು ಕಾಂಗ್ರೆಸ್ ಪಕ್ಷಕ್ಕೆ 138 ವರ್ಷ ತುಂಬಲಿದ್ದು, ಈ ಹಿನ್ನೆಲೆಯಲ್ಲಿ 138 ರೂ., 1,380 ರೂ., 13,800ರೂ. ದೇಣಿಗೆ ನೀಡುವಂತೆ ಜನಸಾಮಾನ್ಯರಲ್ಲಿ ಕೋಶಾಧಿಕಾರಿ ಅಜಯ್ ಮಕೇನ್ ಮನವಿ ಮಾಡಿದರು.
ಕಾಂಗ್ರೆಸ್‌ಗೆ ದೇಣಿಗೆ ನೀಡಲು ಹೋದರೆ ಬಿಜೆಪಿ ಪೇಜ್ ಓಪನ್!
ದೇಣಿಗೆ ಅಭಿ ಯಾನ ಆರಂಭಿ ಸಿದ ಕಾಂಗ್ರೆ ಸ್ ಆರಂಭ ದಲ್ಲೇ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. “ಡೊನೇಟ್ ಫಾರ್ ದೇಶ್’ ಹೆಸರಿನ ಡೊಮೈನ್ ಅನ್ನು ಇಂಟರ್‌ನೆಟ್‌ನಲ್ಲಿ ಬಿಜೆಪಿ ಮೊದಲೇ ಬಿಜೆಪಿ ಕ್ರಿಯೇಟ್ ಮಾಡಿತ್ತು. ಆದರೆ ಇದೇ ಹೆಸ ರಲ್ಲಿ ಸೋಮವಾರ ಕಾಂಗ್ರೆಸ್ ಅಭಿಯಾನ ಆರಂಭಿಸುತ್ತಿದ್ದಂತೆ, ದೇಣಿಗೆ ನೀಡ ಲೆಂದು ಈ ಡೊಮೈನ್‌ಗೆ ಹೋದರೆ ಬಿಜೆಪಿಯ ಪೇಜ್ ಓಪನ್ ಆಗುತ್ತಿತ್ತು. ಅನಂತರ ಇದನ್ನು ಅರಿತ ಕಾಂಗ್ರೆಸ್, ತನ್ನ ಡೊಮೈನ್ ಹೆಸರನ್ನು ಬದಲಿಸಿತು. ಜತೆಗೆ ಬಿಜೆಪಿ ವಿರುದ್ಧ ಕಿಡಿ ಕಾ ರಿದ ಕಾಂಗ್ರೆಸ್, “ನಾವು ಅಭಿಯಾನ ಆರಂಭಿಸುತ್ತಿದ್ದೇವೆ ಎಂದು ಹೇಳಿದ ತತ್‌ಕ್ಷಣ ಬಿಜೆಪಿ ಕಡೆಯವರು ನಕಲಿ ಡೊಮೈನ್‌ಗಳನ್ನು ಕ್ರಿಯೇಟ್ ಮಾಡಿ, ಗೊಂದಲ ಉಂಟುಮಾಡಿದ್ದಾರೆ. ಆದರೆ ಅಭಿಯಾನದ ಹೆಸರಲ್ಲೂ ನಮ್ಮನ್ನೇ ಕಾಪಿ ಮಾಡಿದ್ದಕ್ಕೆ ಧನ್ಯವಾದಗಳು’ ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ವ್ಯಂಗ್ಯವಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.