ಯುರೋಪ್ನಲ್ಲಿ ಇಸ್ಲಾಂನ ಶರಿಯಾ ಕಾನೂನಿಗೆ ಜಾಗವಿಲ್ಲ: ಇಟಲಿ ಪ್ರಧಾನಿ ವೀಡಿಯೋ ವೈರಲ್
Team Udayavani, Dec 19, 2023, 12:40 AM IST
ರೋಮ್: ಶರಿಯಾ ಕಾನೂನು ಎಂದರೆ ಬರೀ ವ್ಯಭಿಚಾರ, ಧರ್ಮಭ್ರಷ್ಟ ಹಾಗೂ ಸಲಿಂಗಕಾಮಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದು ಮಾತ್ರ! ಅಂಥ ಕಾನೂನನ್ನು ಇಟಲಿಯಲ್ಲಿ ಜಾರಿಗೊಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿಕೆ ನೀಡಿರುವ ವೀಡಿಯೋ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಯುರೋಪಿನಲ್ಲಿ ಇಸ್ಲಾಮೀಕರಣದ ಬೆಳವಣಿಗೆ ಬಗ್ಗೆ ಆಕ್ಷೇಪಿಸಿರುವ ಅವರು “ಇಟಲಿಯ ಬಹುತೇಕ ಇಸ್ಲಾಮಿಕ್ ಕೇಂದ್ರಗಳಿಗೆ ಸೌದಿ ಅರೇಬಿಯಾ ಅನುದಾನ ನೀಡುತ್ತಿದೆ. ಶರಿಯಾದಂಥ ಕಾನೂನುಗಳ ನ್ನು ಸೌದಿ ರಾಷ್ಟ್ರಗಳು ಅನುಸರಿಸುತ್ತಿವೆ. ಶರಿಯಾ ಅಂದರೆ ಮತ್ತೇನಲ್ಲ, ಬರೀ ವ್ಯಭಿಚಾರ, ಧರ್ಮಭ್ರಷ್ಟ ಹಾಗೂ ಸಲಿಂಗಕಾಮಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದು. ಇಂಥ ನೀತಿ ಅನುಸರಿಸುವ ಇಸ್ಲಾಮಿಗೂ, ಯುರೋಪಿನ ನಾಗರಿಕ ಮೌಲ್ಯಗಳು, ಹಕ್ಕುಗಳಿಗೂ ಹೊಂದಾಣಿಕೆಯ ಸಮಸ್ಯೆ ಇದೆ. ಹಾಗಾಗಿ ಇಂಥ ಕಾನೂನು ಜಾರಿಗೆ ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ. ಆದರೆ ಅವರ ಈ ವೀಡಿಯೋ ಯಾವಾಗಿನದ್ದು ಎಂಬುದು ಬಹಿರಂಗಗೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.