ರಾಮ ಮಂದಿರ ಉದ್ಘಾಟನೆಗೆ ಬರಬೇಡಿ… ಅಡ್ವಾಣಿ, ಜೋಶಿ ಬಳಿ ಮನವಿ ಮಾಡಿದ ರಾಮ ಮಂದಿರ ಟ್ರಸ್ಟ್
Team Udayavani, Dec 19, 2023, 9:02 AM IST
ಅಯೋಧ್ಯಾ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ದಿನ ಹತ್ತಿರದಲ್ಲಿದೆ. ಏತನ್ಮಧ್ಯೆ, ಉದ್ಘಾಟನಾ ಸಮಾರಂಭಕ್ಕೆ ಹಾಜರಾಗದಂತೆ ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಬಿಜೆಪಿಯ ಹಿರಿಯ ನಾಯಕರಾದ ಎಲ್‌ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ ಮನವಿ ಮಾಡಿದ್ದಾರಂತೆ.
90 ರ ದಶಕದಲ್ಲಿ ರಾಮ ಮಂದಿರ ಚಳವಳಿಯ ನೇತೃತ್ವ ವಹಿಸಿದ್ದ ಬಿಜೆಪಿ ಹಿರಿಯರಾದ ಎಲ್.ಕೆ. ಅಡ್ವಾಣಿ ಹಾಗೂ ಮುರಳಿಮನೋಹರ್ ಜೋಷಿ ಅವರು ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆಯಲಿರುವ “ಪ್ರಾಣ ಪ್ರತಿಷ್ಠಾ” ಸಮಾರಂಭಕ್ಕೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿದ ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಆರೋಗ್ಯ ಮತ್ತು ವಯೋಸಹಜ ಕಾರಣಗಳಿಂದಾಗಿ ಮುರಳಿ ಮನೋಹರ್ ಜೋಶಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇಬ್ಬರೂ ಹಿರಿಯರು. ಆದ್ದರಿಂದ ಅವರ ವಯಸ್ಸನ್ನು ಪರಿಗಣಿಸಿ ಬರದಂತೆ ಮನವಿ ಮಾಡಲಾಗಿದ್ದು, ಅದಕ್ಕೆ ಇಬ್ಬರೂ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ಜನವರಿ 15 ರೊಳಗೆ ಸಿದ್ಧತೆಗಳು ಪೂರ್ಣಗೊಳ್ಳಲಿವೆ ಮತ್ತು “ಪ್ರಾಣ ಪ್ರತಿಷ್ಠೆ” ಪೂಜೆಯು ಜನವರಿ 16 ರಂದು ಪ್ರಾರಂಭವಾಗಲಿದೆ. ಇದು ಜನವರಿ 22 ರವರೆಗೆ ನಡೆಯಲಿದೆ ಎಂದು ರೈ ತಿಳಿಸಿದ್ದಾರೆ.
ಜನವರಿ 22 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಸಮಾರಂಭಕ್ಕೆ ಆಹ್ವಾನಿಸಲು ಮೂವರು ಸದಸ್ಯರ ತಂಡವನ್ನು ರಚಿಸಲಾಗಿದೆ, ಶಂಕರಾಚಾರ್ಯರು ಮತ್ತು ಸುಮಾರು 150 ಸಂತರು ಮತ್ತು ಋಷಿಮುನಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ”, ಅಷ್ಟುಮಾತ್ರವಲ್ಲದೆ ಸಮಾರಂಭಕ್ಕೆ ಸುಮಾರು 4,000 ಸಂತರು ಮತ್ತು 2,200 ಇತರ ಅತಿಥಿಗಳನ್ನು ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು.
ಕಾಶಿ ವಿಶ್ವನಾಥ, ವೈಷ್ಣೋದೇವಿಯಂತಹ ಪ್ರಮುಖ ದೇವಾಲಯಗಳ ಮುಖ್ಯಸ್ಥರು ಮತ್ತು ಧಾರ್ಮಿಕ ಮತ್ತು ಸಾಂವಿಧಾನಿಕ ಸಂಸ್ಥೆಗಳ ಪ್ರತಿನಿಧಿಗಳನ್ನು ಸಹ ಆಹ್ವಾನಿಸಲಾಗಿದೆ.
ಆಧ್ಯಾತ್ಮಿಕ ನಾಯಕ ದಲೈಲಾಮಾ, ಕೇರಳದ ಮಾತಾ ಅಮೃತಾನಂದಮಯಿ, ಯೋಗ ಗುರು ಬಾಬಾ ರಾಮದೇವ್, ಸಿನಿ ತಾರೆಯರಾದ ರಜನಿಕಾಂತ್, ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್, ಅರುಣ್ ಗೋವಿಲ್, ಚಲನಚಿತ್ರ ನಿರ್ದೇಶಕ ಮಧುರ್ ಭಂಡಾರ್ಕರ್ ಮತ್ತು ಪ್ರಮುಖ ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಖ್ಯಾತ ಚಿತ್ರಕಲಾವಿದ ವಾಸುದೇವ್ ಕಾಮತ್, ಇಸ್ರೋ ನಿಲೇಶ್ ದೇಸಾಯಿ ಮತ್ತು ಇತರ ಅನೇಕ ಗಣ್ಯರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ರೈ ಹೇಳಿದರು.
ಮಹಾಮಸ್ತಕಾಭಿಷೇಕದ ನಂತರ ಜನವರಿ 24 ರಿಂದ 48 ದಿನಗಳ ಕಾಲ ಧಾರ್ಮಿಕ ಸಂಪ್ರದಾಯದಂತೆ ಮಂಡಲ ಪೂಜೆ ನಡೆಯಲಿದೆ. ಜನವರಿ 23 ರಂದು ಭಕ್ತರಿಗಾಗಿ ದೇವಾಲಯವನ್ನು ತೆರೆಯಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: Earthquake: ಚೀನಾದಲ್ಲಿ ಪ್ರಬಲ ಭೂಕಂಪ… 111 ಮಂದಿ ಸಾವು, 200 ಕ್ಕೂ ಹೆಚ್ಚು ಮಂದಿಗೆ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಮತ್ತೊಂದು ಸೇನಾ ಟ್ರಕ್ ದುರಂತ: 4 ಯೋಧರು ಹುತಾತ್ಮ
Twist; ಛತ್ತೀಸ್ ಗಢ ಪತ್ರಕರ್ತನ ಹ*ತ್ಯೆ: ಸೋದರ ಸಂಬಂಧಿಯೇ ಪ್ರಮುಖ ಆರೋಪಿ!
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.