ವೃಷಭ ರಾಶಿಯವರು ಸಾಹಿತ್ಯ, ಕವನ, ವಿಮರ್ಶೆಗಳಲ್ಲಿ ಬಹಳ ಕುಶಲಿಗಳು…


Team Udayavani, Jul 9, 2016, 6:34 AM IST

103.jpg

ವೃಷಭ ರಾಶಿಯವರು ಸಾಹಿತ್ಯ ಮತ್ತು ಕಲೆಯಲ್ಲಿ ಮಿಂಚುತ್ತಾರೆ. ಉತ್ತಮ ರೀತಿಯ ಶುಭಗ್ರಹಗಳ ದೃಷ್ಟಿಭಾಗ್ಯ ಇದ್ದಲ್ಲಿ ಕುಜ,ಶುಕ್ರ,ಯುತಿ ಈ ರಾಶಿಯವರಿಗೆ ತೊಂದರೆ ತರಲಾರದು. ಇಂಥ ಶೂಭ ದೃಷ್ಟಿ ಇರದಿದ್ದಲ್ಲಿ ಮದುವೆಯಲ್ಲಿ ತೊಂದರೆ ಲೈಂಗಿಕ ತಾಪತ್ರಯ ಸದಾ ಅಂತರ್ಮುಖೀಯಾಗುತ್ತಾ ದೈನಂದಿನ ಕೆಲಸಕಾರ್ಯಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲಾಗದೆ ಹೋಗುವುದು ಈ ರಾಶಿಯವರಿಗೆ ಸಾಮಾನ್ಯ.

ಇಂಗ್ಲಿಷ್‌ ಭಾಷೆ ಪ್ರತಿಭಾವಂತ ನವ್ಯ ಕವಿ ಟಿ. ಎಸ್‌ ಎಲಿಯೆಟ್‌, ಕ್ರಿಕೆಟ್‌ ಕಲಿ ವೀರೇಂದ್ರ ಸೆಹವಾಗ್‌ ಬಿಜೆಪಿ ನಾಯಕಿ ಮಾಜಿ ಮಹಾರಾಣಿ ದಿವಂಗತ ಜಯರಾಜೇ ಸಿಂಧ್ಯ, ಆಧ್ಯಾತ್ಮ ಗುರು ಶ್ರೀ ಪಂಡಿತ್‌ ರವಿಶಂಕರ್‌, ಮಹಾನ್‌ ಲೇಖಕ ಹಾಸ್ಯ ಪ್ರಜ್ಞೆಯ ಮಹಾ ಸಾಮ್ರಾಟ ಜಾರ್ಜ್‌ ಬರ್ನಾಡ್‌ಷಾ ಕ್ರಾಂತಿಕಾರಿ ಲೇಖಕ ಮ್ಯಾಕ್ಸಿಂ ಗಾರ್ಕಿ ಮುಂತಾದವರೆಲ್ಲ ವೃಷಭರಾಶಿಯಲ್ಲಿ ಜನಿಸಿದ ಪ್ರಖ್ಯಾತರಲ್ಲಿ ಕೆಲವರು. ಇವರ ಗುಣ ಮುನ್ನುಗ್ಗುವುದು ಅದಮ್ಯ ಚೇತನ. ಮುನ್ನುಗ್ಗುವ ಕ್ರಿಯೆಯಲ್ಲೂ ವಿವೇಚನೆ ತರ್ಕ ತಾಳ್ಮೆ ಹಾಗೂ ಧೈರ್ಯವನ್ನು ಸಾಕಾರಗೊಳಿಸಿಕೊಂಡೇ ಹೆಜ್ಜೆ ಇಡುವರು. ಬೇರೆಯವರಿಗೆ ಹೋಲಿಸಿದಾಗ ದೇಹದ ಎತ್ತರದಲ್ಲಿ ತುಸು ಗಿಡ್ಡರೇ ಆಗಿರುತ್ತಾರೆ. ಸೂರ್ಯ ಹಾಗೂ ಚಂದ್ರರ ಪ್ರಭೆಯು ಒಟ್ಟಾದ ಗಟ್ಟಿತನ ದೊರೆತಾಗ ಮಾನವತಾವಾದಿಯಾಗಿ ಕೈಗಾರಿಕೆ ಆಟೋಮೊಬೈಲ್ಸ್‌ ಉದ್ಯಮಿಯಾಗಿ ಹೆಸರು ಮಾಡಿದ ಜಾನ್‌ ರಾಕ್‌ ಫೆಲರ್‌ ರೀತಿಯಲ್ಲಿ ಎತ್ತರದ ಕಟ್ಟುಮಸ್ತಾದ ಆಳಾಗಿಯೂ ಇರುತ್ತಾರೆ. 

ಸೂರ್ಯಗ್ರಸ್ತ ಅಸ್ತಂಗತ ಶುಕ್ರಗ್ರಹದ ಪೀಡೆಯಿದ್ದಾಗ ಮುಖದಲ್ಲಿ ಅನೇಕ ಕಲೆಗಳೊಂದಿಗೆ ಅಂದಗೆಡಿಸಿಕೊಂಡ ಜಾರ್ಜ್‌ ಬರ್ನಾಡ್‌ ಷಾನಂತೆ ತುಸು ಕುರೂಪಿಯಾಗಿರಲು ಸಾಧ್ಯ. ಬಲಾಡ್ಯನಾದ ಮಂಗಳನ ಜೊತೆಗೆ ಚಂದ್ರನಿದ್ದು ಶನೈಶ್ಚರನ ಪ್ರಭಾವ ತುಸು ಧನಾತ್ಮಕವಾದಾಗ ಇಟಲಿಯ ನಿರಂಕುಶ ಪ್ರಭುವಾಗಿ ರಾಜ್ಯವಾಳಿ ಜಾಗತಿಕ ತಲ್ಲಣಗಳಿಗೆ ಕಾರಣನಾದ ಮುಸಲೋನಿ ಕೂಡಾ ಸೃಷ್ಟಿಗೊಳ್ಳಬಲ್ಲರು. ಇದೇ ಶನಿ ಮಹಾರಾಜ ತನ್ನ ದಶಾ ಕಾಲದಲ್ಲಿ ನೇಣಿನ ಶಿಕ್ಷೆಗೊಳಪಡಿಸಿ ಮರಣದಂಡನೆಗೊಳಿಸಿದ್ದೂ ಗಮನಾರ್ಹವೇ ಆಗಿದೆ.
ಒಟ್ಟಿನಲ್ಲಿ ವೃಷಭ ರಾಶಿಯವರಿಗೆ ಚಂದ್ರನಿಂದ ಅನೇಕ ಸಿದ್ಧಿಗಳು ಒಗ್ಗೂಡಿ ಬರುತ್ತದೆ. ಇದೇ ಚಂದ್ರ ವಿಷಮತೆಯ ಕಗ್ಗಂಟಿನಲ್ಲಿ ಸಿಕ್ಕಿಬಿದ್ದಾಗ ಸುದೈವದ ಬಾಗಿಲು ವೃಷಭರಾಶಿಯವರಿಗೆ ಮುಚ್ಚಲ್ಪಡುತ್ತದೆ. ಶುಕ್ರನ ಅಗಾಧವಾದ ಶಕ್ತಿ, ರವಿ, ಕುಜ, ರಾಹುಗಳ ಪೀಡೆಗಳಿರದ ಶನೈಶ್ಚರನ ದಿವ್ಯಶಕ್ತಿ ಕೂಡಿಬಂದಲ್ಲಿ ವೃಷಭರಾಶಿಯ ಜನ ಬಹು ದೊಡ್ಡ ಎತ್ತರವನ್ನು ಏರಬಲ್ಲರು. ವೃಷಭರಾಶಿಯ ಜನ ಸಾಹಿತ್ಯ, ಕವನ, ವಿಮರ್ಶೆಗಳಲ್ಲಿ ಬಹಳ ಕುಶಲಿಗಳಾಗಬಲ್ಲರು. ಟಿ.ಎಸ್‌. ಎಲಿಯೆಟ್‌ ಇಂಗ್ಲೀಷ್‌ ಸಾಹಿತ್ಯದ ನವ್ಯದ ಕಾಲಕ್ಕೆ ಬಹುದೊಡ್ಡ ಹೆಸರು ಸಂಪಾದಿಸಿದ ಈ ಕವಿ ಬರೆದ ವೇಸ್ಟ್‌ ಲ್ಯಾಂಡ್‌ ಎಂಬ ಕಥಾ ಸಂಕಲನ ನಮ್ಮವರಾದ ಡಾ. ಗೋಪಾಲ ಕೃಷ್ಣ ಅಡಿಗರಂಥ ನವ್ಯದ ಆಧಾರ ಸ್ತಂಭಗಳಿಗೆ ಹೊಸ ಸ್ಫೂರ್ತಿಯನ್ನೇ ಒದಗಿಸಿತು. ಬರ್ನಾಡ್‌ ಷಾ ದೊಡ್ಡ ನಾಟಕಕಾರನಾದ. ತಮಾಷೆಯ ಮಾತು ಮತ್ತು ಭಾಷಣಗಳಿಂದ ಇಂಗ್ಲಿಷ್‌ ಸಾಹಿತ್ಯ ಹಾಗೂ ಸಾಮಾಜಿಕ ಜಗತ್ತು ಎಂದೂ ಮರೆಯಲಾರದ ಅನಘÂì ಆಸ್ತಿಯಾದ. ಎಲಿಯಟ್‌ ಮತ್ತು ಷಾ ಇಬ್ಬರೂ ನೊಬೆಲ್‌ ಪುಸ್ಕಾರವನ್ನು ಸಾಹಿತ್ಯಕ್ಕಾಗಿ ಸಂಪಾದಿಸಿದರೆಂಬುದು ಗಮನಾರ್ಹ. ಎಲಿಯಟ್‌ನ ಜಾತಕದ ಚಂದ್ರನ ದಿವ್ಯ ಸಂಪನ್ನತೆ ಗುರು ಹಾಗೂ ಕುಜರ ಪಾಲಿಗೆ ವೃಷಭರಾಶಿಯ ಫ‌ಲವಾಗಿ ಒದಗಿ ಅಪರೂಪದ ಸಂಪನ್ನ ಸಾಹಿತ್ಯ ಒದಗಿಬಂತು. ಜಾರ್ಜ್‌ ಬರ್ನಾಡ್‌ಷಾಗೆ ಚಂದ್ರ ಬಹು ದೊಡ್ಡ ಚೈತನ್ಯವನ್ನು ಬರಹಗಾರನಾಗಿ ರೂಪುಗೊಳ್ಳುವಲ್ಲಿ ಶನೈಶ್ಚರ ಯೋಗಕಾರಕ ಹಾಗೂ ಶುಭಕಾರಕ 

ಬುಧಗ್ರಹಗಳಿಂದ ಧಾರೆ ಎರೆಸಿದ. ಇದೇ ಚಂದ್ರನೇ ರಾಹು ಹಾಗೂ ಗುರು ಗ್ರಹಗಳ ಮೂಲಕ ಪ್ರೇಮಚಂದ್ರ ಮುನ್ಷಿ ಅವರನ್ನು ದೊಡ್ಡ ಕಾದಂಬರಿಕಾರರನ್ನಾಗಿಸಿ ಹೆಸರು ತಂದ. ಮ್ಯಾಕ್ಸಿಂಗಾರ್ಕಿ ಬಗೆಗೂ ಇದನ್ನೇ ಹೇಳಬಹುದು. ಆದರೆ ಗಾರ್ಕಿ ವಿಷಯದಲ್ಲಿ ಶನೈಶ್ಚರನ ಕ್ರೂರ ದೃಷ್ಟಿ ಚಂದ್ರನ ಮೇಲೆ ಬಿದ್ದು ಗಾರ್ಕಿಗೆ ಸೆರೆಮನೆ ವಾಸ ಕೂಡಾ ಒದಗಿಬಂದದ್ದು ಒಂದು ಪರ್ಯಾಸ. ಇವರ ಜಾತಕದಲ್ಲಿ ಸೆರೆಮನೆಗೆ ತಳ್ಳಲ್ಪಡುವ ಪಾಶಯೋಗ ಇದ್ದದ್ದೂ ಒಂದು ವಿಪರ್ಯಾಸವೇ ಸರಿ. ಝಾರ್‌ ದೊರೆಯ ವಿರುದ್ಧ ಸಿಡಿದೆದ್ದು ಗಾರ್ಕಿ ಕ್ರಾಂತಿಯ ಕಹಳೆಯನ್ನು ರಷ್ಯಾದಲ್ಲಿ ಊದಿದ್ದರು. ಇದೊಂದು ಅಚ್ಚರಿಯೇ.

ಹೀಗೆ ವೃಷಭ ರಾಶಿಯವರು ಸಾಹಿತ್ಯ ಮತ್ತು ಕಲೆಯಲ್ಲಿ ಮಿಂಚುತ್ತಾರೆ. ಉತ್ತಮ ರೀತಿಯ ಶುಭಗ್ರಹಗಳ ದೃಷ್ಟಿಭಾಗ್ಯ ಇದ್ದಲ್ಲಿ ಕುಜ,ಶುಕ್ರ,ಯುತಿ ಈ ರಾಶಿಯವರಿಗೆ ತೊಂದರೆ ತರಲಾರದು. ಇಂಥ ಶುಭ ದೃಷ್ಟಿ ಇರದಿದ್ದಲ್ಲಿ ಮದುವೆಯಲ್ಲಿ ತೊಂದರೆ ಲೈಂಗಿಕ ತಾಪತ್ರಯ ಸದಾ ಅಂತರ್ಮುಖೀಯಾಗುತ್ತಾ ದೈನಂದಿನ ಕೆಲಸಕಾರ್ಯಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲಾಗದೆ ಹೋಗುವುದು ಈ ರಾಶಿಯವರಿಗೆ ಸಾಮಾನ್ಯ. ಚಂದ್ರನ ದೌರ್ಬಲ್ಯಗಳು ನಕಾರಾತ್ಮಕ ಭಾವನೆಗಳನ್ನೇ ಹೆಚ್ಚು ಹೆಚ್ಚು ತಂದು ಬಿಡುವ ಅಪಾಯ ಸೃಷ್ಟಿಯಾಗುತ್ತದೆ. ಈ ರಾಶಿಯವರಿಗೆ ಗಣಿತ ಸಂಖ್ಯಾಶಾಸ್ತ್ರ ಧಾತು ಸಂವರ್ಧನಾ ವಿಚಾರಗಳಲ್ಲಿ ಸದಾ ಆಸಕ್ತಿ. ವಿಜಾnನಿಗಳಾಗಲು ತವಕ ತೋರಿಸುತ್ತಾರೆ. ಕುಜನ ಅಥವಾ ಕೇತುವಿನ ಶುದ್ಧತೆ ಒದಗಿಬಂದಲ್ಲಿ ವೈದ್ಯಕೀಯದಲ್ಲಿ ತುಡಿತ ತೋರಿ ಉತ್ತಮ ಪ್ರಾಜ್ಞತೆಯನ್ನು ಸಂಪಾದಿಸಬಲ್ಲರು.

ನೆನಪಿನ ಶಕ್ತಿಗೆ ತೀವ್ರವಾದ ಹರಿತತ್ವ ಇವರ ದೊಡ್ಡ ಆಸ್ತಿ. ಭಾರತದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್‌ ಇದಕ್ಕೆ ದೊಡ್ಡ ಉದಾಹರಣೆ. ಇದಕ್ಕೆ ದೊಡ್ಡ ಉದಾಹರಣೆ. ಬಲಾಡ್ಯವಾದ ವೃಷಭ ರಾಶಿಯ ಚಂದ್ರನಿಂದ ಇಂಥದೊಂದು ಸಿದ್ಧಿ ದೊರಕಿತ್ತು. ಪ್ರಧಾನಿ ನೆಹರು ಅವರನ್ನು ಕೂಡಾ ರಾಜೇಂದ್ರಪ್ರಸಾದ ನಿಯಂತ್ರಿಸುವ ಬಲ ಪಡೆದಿದ್ದರು. ದೈವನಿಷ್ಠೆ ಅಪಾರವಾಗಿತ್ತು. ಪೂರ್ವ ಪುಣ್ಯ ಸ್ಥಾನಾಧಿಪತಿ ಗುರು ಭಾಗ್ಯದಲ್ಲಿದ್ದು ಚಂದ್ರ ಬೃಹಸ್ಪತಿ ಕೇಂದ್ರ ಯೋಗ ಪಡೆದದ್ದು ಇದಕ್ಕೆ ಕಾರಣ.

ಮಾಜಿ ಮಹಾರಾಣಿ ವಿಜಯರಾಜೇ ಸಿಂಧ್ಯಾ ಕುಶಾಗ್ರಮತಿ, ಧೈರ್ಯ, ಜನಪ್ರಿಯತೆ ಎಲ್ಲ ಪಡೆದಿದ್ದರೂ ವೃಷಭ ರಾಶಿಯ ಚಂದ್ರ ಕೇತುಗ್ರಸ್ತನಾಗಿ ನಷ್ಟಕ್ಕೆ ಕಾರಣನಾಗುವ ದೌರ್ಬಲ್ಯ ಪಡೆದಿದ್ದ. ಕುಟುಂಬ ಸ್ಥಾನಾಧಿಪತಿ ಚಂದ್ರ ದುಸ್ಥಾನ ಸ್ಥಿತನಾದದ್ದು ಮಗ ಮಾಧವರಾವ್‌ ಸಿಂಧ್ಯಾ ಜೊತೆ  ತೀವ್ರತರವಾದ ಭಿನ್ನಾಭಿಪ್ರಾಯಗಳು, ಶ್ರೀಮತಿ ವಿಜಯರಾಜೇ ಸಿಂಧ್ಯಾ ಅವರಿಗಿದ್ದವು. ಮಾಧವರಾವ್‌ ಸಿಂಧ್ಯಾ ಅವರ ಜಾತಕದಲ್ಲೀ ಮಾತೃಸ್ಥಾನಧಿಪತಿ ಶನಿಗೆ ದೋಷಗಳಿದ್ದವು. ಕುಟುಂಬ ಸ್ಥಾನದ ಚಂದ್ರನೂ ಕೇತುಗ್ರಹದ ಪೀಡೆಯಲ್ಲಿ ಶನಿದೃಷ್ಟಿಯೊಂದಿಗೆ ಭಾದಿತನಾಗಿದ್ದ.

ವೀರೇಂದ್ರ ಸೆಹವಾಗ್‌ ಎಲ್ಲಾ ಕ್ರಿಕೆಟರಿಗೂ ಅತ್ಯಾಕರ್ಷಕ ಹೆಸರು. ಪ್ರಪಂಚದ ಯಾವುದೇ ಬೌಲರ್‌ ಮನೋಸ್ಥೈರ್ಯವನ್ನು ಕುಟ್ಟಿ ಪುಡಿ ಮಾಡಬಲ್ಲ ಅಸಾಧ್ಯ ಚೈತನ್ಯ ಸೆಹವಾಗ್‌ ಜೀವಸೆಲೆಯಲ್ಲಿ ನಿರಂತರವಾಗಿ ಅಡಕವಾಗಿತ್ತು.  ಚಂದ್ರ ಆತ್ಮಸ್ಥೈರ್ಯ ಹಾಗೂ ನೀಚಭಂಗ ರಾಜಯೋಗವನ್ನು ಸೂರ್ಯನಿಂದ ಸಂಪಾದಿಸಿಕೊಂಡು ಚಿಮ್ಮುತ್ತಿದ್ದ ಧೈರ್ಯ ಸೆಹವಾಗ್‌ ಬಲಾಡ್ಯತೆಗೆ ತಳಹದಿಯಾಗಿದ್ದವು. ಆದರೂ ಸೆಹವಾಗ್‌ ಕ್ರೀಡಾ ಜೀವನದ ಏರಿಳಿತಗಳು ದುಷ್ಟ ಶನೈಶ್ಚರನಿಂದ ಒದಗುವಂತಾಗಿ ನೆಲಕಚ್ಚಿ ಇನ್ನಿಂಗ್ಸ್‌ ಬೆಳೆಸುವ ವರ್ಚಸ್ಸು ಸಿದ್ಧಿಸಲಿಲ್ಲ.
ಒಟ್ಟಿನಲ್ಲಿ ಕಾಂತೀಯ ಚಂದ್ರ ವೃಷಭ ರಾಶಿಯವರಿಗೆ ಸಿದ್ಧಿ ನೀಡಬಲ್ಲ. ಕ್ಷೀಣಚಂದ್ರನಾದಾಗ ಅನೇಕ ಅಡೆತಡೆಗಳು ನಿಶ್ಚಿತ. ಶುಕ್ರನ, ಶನೈಶ್ಚರನ ಹಾಗೂ ಬುಧರ ಸಿದ್ಧಿ ದೊರಕಿದಲ್ಲಿ ವೃಷಭರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ. ಸಾಹಿತ್ಯ, ಲಲಿತ ಕಲೆಗಳ ಸಿದ್ಧಿ ಇವರಿಗೆ ಬಹುಸುಲಭ. ಚಿಕ್ಕ ವಯಸ್ಸಿಗೇ ದೃಷ್ಟಿ ಕಳೆದುಕೊಂಡರೂ ಕಾವ್ಯ ಲೋಕದ ಧೀಮಂತ ಜಾನ್‌ ಮಿಲ್ಟನ್‌. ಆತ್ಮ ಹಾಗೂ ಪರಮಾತ್ಮ ಸಿದ್ಧಿಗಳಿಗೆ ಮುಮ್ಮುಖರಾಗುವ ವೃಷಭರಾಶಿಯ ಧೀಮಂತರು ಪಂಡಿತ್‌ ರವಿಶಂಕರ ಗುರೂಜಿಯವರಂತೆ ಲೋಕವಂದ್ಯರಾಗಬಲ್ಲರು. ಕ್ಷೀಣ ಚಂದ್ರನಾದರೂ ಆತ್ಮಕಾರಕ ರುಂದ ಧ್ಯಾನ ಸಿದ್ಧಿಗೆ ಕಾರಣನಾದ. ಅಧ್ಯಾತ್ಮದ ಯೋಚನಾ ಲಹರಿಗೆ ರಾಹು ಶನಿಗಳು ಧೃತಿ ಹಾಗೂ ಶೃತಿ ನೀಡಿದವು. ಉತ್ತಮ ಸಂವಾದಿ ಹಾಗೂ ಕುಜ, ಗುರು, ಚಂದ್ರ, ಸೂರ್ಯರ ಉತ್ಛ ಸ್ಥಿತಿ ಹಾಗೂ ಕೇಂದ್ರ ಯೋಗಗಳಿಂದಾಗಿ ಬಹುಎತ್ತರದ ಸಿದ್ಧಿ ಗುರು ಹಾಗೂ ಚೈತನ್ಯದ ಶೀಖರವಾಗಿದ್ದಾರೆ. 

ಅನಂತಶಾಸ್ತ್ರಿ 

ಟಾಪ್ ನ್ಯೂಸ್

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ

ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ

ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.