Kerala border: ಕೇರಳ ಗಡಿಯಲ್ಲಿ ಕೊರೊನಾ ತಪಾಸಣೆಯೇ ಇಲ್ಲ
Team Udayavani, Dec 19, 2023, 2:45 PM IST
ಗುಂಡ್ಲುಪೇಟೆ: ಕೇರಳದಲ್ಲಿ ಕೊರೊನಾ ಹೊಸ ಸೋಂಕು ಪತ್ತೆ ಯಾಗಿ ನಾಳ್ವರು ಸಾವನ್ನಪ್ಪಿದ್ದರೂ ಸಹ ತಾಲೂಕಿನ ಗಡಿ ಮೂಲೆ ಹೊಳೆ ಚೆಕ್ ಪೋಸ್ಟ್ನಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆಯಾಗಿ ತಪಾಸಣೆ ಆರಂಭಿಸದೆ ನಿರ್ಲಕ್ಷ್ಯ ವಹಿಸಿದೆ. ಇದು ತಾಲೂಕಿನ ಗಡಿ ಅಂಚಿನ ಜನರಲ್ಲಿ ಆತಂಕ ತಂದೊಡ್ಡಿದೆ.
ಗುಂಡ್ಲುಪೇಟೆ ಮಾರ್ಗವಾಗಿ ಕೇರಳಕ್ಕೆ ಮೂಲೆಹೊಳೆ ಚೆಕ್ಪೋಸ್ಟ್ ಮೂಲಕ ನಿತ್ಯ ಸಾವಿರಾರು ಸರ್ಕಾರಿ ಹಾಗೂ ಗೂಡ್ಸ್ ವಾಹನಗಳು ಸಂಚಾರ ಮಾಡುತ್ತವೆ. ಈ ಮೊದಲು ಕೊರೊನಾ ಮಹಾಮಾರಿ ವ್ಯಾಪಿಸಿದ್ದಾಗ ಪಕ್ಷಿ, ಜನ, ಜಾನುವಾರುಗಳಿಗೆ ಯಾವುದೇ ರೀತಿ ಸೋಂಕು ತಗುಲಿದರೂ ಸಹ ಚೆಕ್ ಪೋಸ್ಟ್ನಲ್ಲಿ ತಪಾಸಣೆ ಆರಂಭಿಸಿ, ಪ್ರತಿಯೊಂದು ವಾಹನಗಳಿಗೂ ಸ್ಯಾನಿಟೈಸರ್ ಮಾಡಿ ಪ್ರವೇಶ ನೀಡಲಾಗುತ್ತಿತ್ತು.
ಆದರೆ ಇದೀಗ ಕೇರಳದಲ್ಲಿ ಕೊರೊನಾ ಹೊಸ ತಳಿ ಪತ್ತೆಯಾಗಿ ದ್ದರೂ ಸಹ ಆರೋಗ್ಯ ಇಲಾಖೆ ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ ಎಂದು ತಪಾಸಣೆಗೆ ನಿರ್ಲಕ್ಷ್ಯ ವಹಿಸಿದೆ. ಇದರಿಂದ ರಾಜಾರೋಷವಾಗಿ ತಪಾಸಣೆ ಇಲ್ಲದೆ ಕೇರಳ ವಾಹನಗಳು ರಾಜ್ಯ ಪ್ರವೇಶಿಸುತ್ತಿವೆ.
ತಪಾಸಣೆ ನಡೆಸದ ಅಧಿಕಾರಿಗಳು: ತಾಲೂಕಿನಿಂದ ಕೇರಳಕ್ಕೆ ಕೂಲಿ ಕೆಲಸಕ್ಕೆಂದು ಪ್ರತಿನಿತ್ಯ ನೂರಾರು ಮಂದಿ ಹೋಗಿ ಬರುತ್ತಿದ್ದಾರೆ. ಇವರ ಮೇಲು ಸಹ ಆರೋಗ್ಯ ಇಲಾಖೆ ನಿಗಾ ವಹಿಸದೆ ನಿರ್ಲಕ್ಷ್ಯ ಧೋರಣೆ ತಾಳಿದೆ. ಇನ್ನೂ ಈ ಮಧ್ಯೆ ಶಬರಿಮಲೆಗೆ ದಿನಂಪ್ರತಿ ನೂರಾರು ವಾಹನಗಳು ತೆರಳಿ ಮನೆಗೆ ವಾಪಸ್ ಆಗುತ್ತಿದ್ದರು
ಸಹ ತಪಾಸಣೆ ಮಾತ್ರ ನಡೆಯುತ್ತಿಲ್ಲ. ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ. ಅಲೀಂ ಪಾಷಾ ಉದಯವಾಣಿಗೆ ಪ್ರತಿಕ್ರಿಯೆ ನೀಡಿ, ಕೇರಳ ಗಡಿಯಲ್ಲಿ ತಪಾಸಣೆ ಆರಂಭಿಸಲು ಇಲ್ಲಿಯ ತನಕ ಇಲಾಖೆಯಿಂದ ಆದೇಶ ಬಂದಿಲ್ಲ. ಆದರೂ ಸಹ ಮೂಲೆಹೊಳೆ ಚೆಕ್ ಪೋಸ್ಟ್ಗೆ ಭೇಟಿ ಕೊರೊನಾ ಸೋಂಕಿನ ಕುರಿತು ಪೋಸ್ಟ್ ಅಂಟಿಸಲಾಗಿದೆ.
ಜೊತೆಗೆ ಚೆಕ್ ಪೋಸ್ಟ್ ಸಿಬ್ಬಂದಿಗೂ ಎಚ್ಚರಿಕೆಯಿಂದಿರಲು ತಿಳಿಸ ಲಾಗಿದೆ. ಚೆಕ್ಪೋಸ್ಟ್ ಅಕ್ಕಪಕ್ಕದ ಗ್ರಾಮಗಳ ಜನರ ಮೇಲೆ ನಿಗಾ ವಹಿಸಲು ಆಯಾಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೂಚನೆ ನೀಡಲಾಗಿದೆ. ಜೊತೆಗೆ ತಾಲೂಕು ಆಸ್ಪತ್ರೆಯಲ್ಲಿಯೂ ಪ್ರತ್ಯೇಕ ವಾರ್ಡ್ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಕೇರಳದಲ್ಲಿ ಕೊರೊನಾ ಹೊಸ ಸೋಂಕಿಗೆ ವ್ಯಕ್ತಿ ಸಾವನ್ನಪ್ಪಿರುವ ಹಿನ್ನೆಲೆ ಗಡಿಭಾಗ ಮೂಲೆಹೊಳೆ ಚೆಕ್ ಪೋಸ್ಟ್ನಲ್ಲಿ ಆರೋಗ್ಯ ಇಲಾಖೆ ಶೀಘ್ರ ತಪಾಸಣೆ ಆರಂಭಿಸಬೇಕು. ಹೊಸ ಸೊಂಕು ರಾಜ್ಯ ಪ್ರವೇಶಿಸದಂತೆ ಕ್ರಮ ವಹಿಸಬೇಕು. ಸೋಂಕು ತಗುಲಿದ ನಂತರ ತಪಾಸಣೆ ಬಿಗಿಗೊಳಿಸುವ ಬದಲು ಈಗಲೇ ಮುನ್ನೆಚ್ಚರಿಕೆ ವಹಿಸಲಿ.-ಮಹದೇವಸ್ವಾಮಿ, ಮಾಡ್ರಹಳ್ಳಿ ಗ್ರಾಮಸ್ಥ
–ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.