Freedom fighter, ಶೈಕ್ಷಣಿಕ ಹರಿಕಾರ ಪಂಡಿತ್‌ ಎಸ್‌.ಕೆ .ಸುವರ್ಣ ಸಂಸ್ಮರಣೆ


Team Udayavani, Dec 19, 2023, 8:26 PM IST

shFreedom fighter, ಶೈಕ್ಷಣಿಕ ಹರಿಕಾರ ಪಂಡಿತ್‌ ಎಸ್‌.ಕೆ .ಸುವರ್ಣ ಸಂಸ್ಮರಣೆ

ಶಿರ್ವ: ಬಾಲ್ಯದಲ್ಲಿಯೇ ಮುಂಬಯಿಗೆ ತೆರಳಿ,ದಿನವಿಡೀ ದುಡಿದು ರಾತ್ರಿ ಶಾಲೆಯಲ್ಲಿ ಕಲಿತು,ಸ್ವಾತಂತ್ರ್ಯ ಹೋರಾಟಗಾರರಾಗಿ, ಕ್ವಿಟ್‌ ಇಂಡಿಯಾ ಸಹಿತ ವಿವಿಧ ಚಳುವಳಿಗಳಲ್ಲಿ ಭಾಗವಹಿಸಿ,ನೆಹರೂ ಸಂಪುಟದ ರಕ್ಷಣಾ ಮಂತ್ರಿ ವಿ.ಕೆ ಕೃಷ್ಣ ಮೆನನ್‌ ಅವರ ಆಪ್ತ ಸಹಾಯಕರಾಗಿ,ತನಗಾಗಿ ಸ್ವಲ್ಪ,ಸಮಾಜಕ್ಕೆ ಸರ್ವಸ್ವ ಎಂಬ ನೀತಿಯಂತೆ ಜೀವನದುದ್ದಕ್ಕೂ ಆದರ್ಶಮಯ ಬದುಕನ್ನು ಬಾಳಿದ ಮೂಡುಬೆಳ್ಳೆಯ ದಿ|ಪಂಡಿತ್‌ ಡಾ|ಎಸ್‌. ಕೆ .ಸುವರ್ಣ ಅವರ 30ನೇ ಸಂಸ್ಮರಣೆ ಸಪ್ತಾಹ ಕಾರ್ಯಕ್ರಮ ಅವರ ಕರ್ಮಭೂಮಿ ಮುಂಬಯಿಯಲ್ಲಿ ಡಿ. 20 ರಿಂದ ನಡೆಯಲಿದೆ.

ಮುಂಬಯಿ ವಜ್ರೇಶ್ವರಿಯ ಅವಧೂತ ಭಗವಾನ್‌ ನಿತ್ಯಾನಂದರ ಶಿಷ್ಯತ್ವ ಸ್ವೀಕರಿಸಿದ್ದ ಸುವರ್ಣರು ಧಾರ್ಮಿಕ ರಂಗದ ಪಂಡಿತ ಗುರುವಾಗಿ,ಪಾರಂಪರಿಕ ವೈದ್ಯನಾಗಿ, ಉದ್ಯಮಿಯಾಗಿ ಮುಂಬಯಿ ಮತ್ತು ಬೆಳ್ಳೆಯಲ್ಲಿ ಜನಪರ ಕಾರ್ಯ ನಡೆಸಿದ್ದರು.ಮುಂಬಯಿ ಬಿಲ್ಲವರ ಎಸೋಸಿಯೇಶನ್‌ ಭಾಂಡುಪ್‌ ಶಾಖೆಯ ಸ್ಥಾಪಕರಾಗಿ,ಮುಂಬಯಿ ತುಳು-ಕನ್ನಡಿಗರ ಹೆಮ್ಮೆಯ ಆರ್ಥಿಕ ಸಂಸ್ಥೆ ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ನ ಸ್ಥಾಪಕ ನಿರ್ದೇಶಕರಾಗಿ,ಬೆಳ್ಳೆ ಬಿಲ್ಲವ ಸಂಘದ ಸ್ಥಾಪಕರಾಗಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಮಹಾದಾನಿಯಾಗಿ, ಬೆಳ್ಳೆ ಗೀತಾ ಮಂದಿರದ ಸ್ಥಾಪಕ ಟ್ರಸ್ಟಿ ಮತ್ತು ಸಲಹೆಗಾರರಾಗಿ,ಬೆಳ್ಳೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ,ಕಾಂಗ್ರೆಸ್‌ ಸೇವಾ ದಳದ ಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು.

1950ರ ದಶಕದಲ್ಲಿ ದಿ| ಡಾ|ಎಸ್‌.ಕೆ. ಸುವರ್ಣರು ಮುಂಬಯಿಯ ಭಾಂಡುಪ್‌ನಲ್ಲಿ ಸ್ಥಾಪಿಸಿದ್ದ ಶ್ರೀ ನಿತ್ಯಾನಂದ ಆಶ್ರಮ ಇಂದು ಭಾಂಡುಪ್‌ನ ಖ್ಯಾತ ಸ್ವಾಮಿ ನಿತ್ಯಾನಂದ ಮಂದಿರವಾಗಿದೆ. ಹುಟ್ಟೂರಿನ ಮೂಡುಬೆಳ್ಳೆಯ ಕಪ್ಪಂದ ಕರಿಯದಲ್ಲಿ ಕೂಡಾ 1960ರಲ್ಲಿ ಶ್ರೀ ನಿತ್ಯಾನಂದ ಆಶ್ರಮ ಸ್ಥಾಪಿಸಿದ್ದರು. ಮುಂಬಯಿ,ಉಡುಪಿ ಮತ್ತು ದ.ಕ.ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ, ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳಿಗೆ ಕೊಡುಗೈ ದಾನಿಯಾಗಿ ಬೆಂಬಲ ನೀಡಿದ್ದ ಅವರು 1960ರ ದಶಕದಲ್ಲಿ ಮುಂಬಯಿ ಮಹಾನಗರಕ್ಕೆ ಉದ್ಯೋಗ ಅರಸಿ ಬಂದ ಯುವಕರಿಗೆ ಮಾರ್ಗದರ್ಶಕರಾಗಿದ್ದರು.

ಪಡುಬೆಳ್ಳೆಯಲ್ಲಿ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಪಡುಬೆಳ್ಳೆ ಎಂಬ ಕುಗ್ರಾಮವನ್ನು ಶಿಕ್ಷಣ ಕಾಶಿಯಾಗಿ ಪರಿವರ್ತಿಸಿದ ಕೀರ್ತಿ ದಿ| ಡಾ|ಎಸ್‌.ಕೆ. ಸುವರ್ಣ ಅವರಿಗೆ ಸಲ್ಲುತ್ತದೆ.ಮುಂಬಯಿಯಲ್ಲಿ ತುಳು ಕನ್ನಡಿಗರು ಮಾತ್ರವಲ್ಲದೆ ಕೋಳಿ,ಆಗ್ರಿ,ಗುಜರಾತಿ ಮತ್ತು ಸಿಂಧಿ ಅಭಿಮಾನಿ ಬಳಗವನ್ನು ಹೊಂದಿದ್ದ ಅವರು ಬಡ ಕುಟುಂಬಗಳ ಅನ್ನದಾತರಾಗಿದ್ದರು.

1993ರ ಡಿ. 20 ರಂದು ಮುಂಬಯಿಯಲ್ಲಿ ಇಹಲೋಕ ತ್ಯಜಿಸಿದ್ದ ಅವರ 30ನೇ ಸಂಸ್ಮರಣೆ ಕಾರ್ಯಕ್ರಮವು ಮುಂಬಯಿಯಲ್ಲಿ ಅವರೇ ಸ್ಥಾಪಿಸಿದ ಭಾಂಡುಪ್‌ನ ಶ್ರೀ ನಿತ್ಯಾನಂದ ಮಂದಿರದಲ್ಲಿ ಡಿ. 20ರಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಟಾಪ್ ನ್ಯೂಸ್

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.