Beauty Tips: ಕಡಲೆ ಹಿಟ್ಟು ಉಪಯೋಗಿಸಿ.. ತ್ವಚೆಯ ಸೌಂದರ್ಯ ವೃದ್ದಿಸಿಕೊಳ್ಳಿ


Team Udayavani, Dec 29, 2023, 5:06 PM IST

web-exclusive

ಕಡಲೆ ಹಿಟ್ಟು .. ಬಜ್ಜಿ ಮಾಡಲು ಪ್ರಮುಖವಾಗಿ ಉಪಯೋಗಿಸುವ ಹಿಟ್ಟುಗಳಲ್ಲಿ ಒಂದು. ಕಡಲೆ ಹಿಟ್ಟು ಎಂದಾಗ ಮೆಣಸಿನಕಾಯಿ ಬಜ್ಜಿ, ಈರುಳ್ಳಿ ಬಜ್ಜಿ ನೆನಪಾಗುವುದು ಸಾಮಾನ್ಯ. ಕಡಲೆಹಿಟ್ಟು ಅಡುಗೆಗೆ ಮಾತ್ರವಲ್ಲದೆ, ಸೌಂದರ್ಯ ವೃದ್ಧಿಸಲೂ ಕೂಡಾ ಉಪಯೋಗಿಸಲಾಗುತ್ತದೆ.

ಹಿಂದಿನ ಕಾಲದಿಂದಲೂ ಕಡಲೆಹಿಟ್ಟನ್ನು ಸೌಂದರ್ಯ ವರ್ಧಕವಾಗಿ ಬಳಸಲಾಗುತ್ತಿತ್ತು. ಸೋಪ್‌ ಕಂಡುಹಿಡಿಯುವ ಮೊದಲು ಕಡಲೆಹಿಟ್ಟನ್ನು ಸೋಪ್‌ ನಂತೆ ಉಪಯೋಗಿಸುತ್ತಿದ್ದರು. ಕಡಲೆ ಹಿಟ್ಟಿನಲ್ಲಿರುವ ಕೆಲವೊಂದು ಗುಣಗಳಿಂದಾಗಿ ಇಂದಿನ ದಿನಗಳಲ್ಲೂ ಕಡಲೆಹಿಟ್ಟಿನಿಂದ ತಯಾರಿಸಿದ ಸೋಪ್ ಗಳು ಮಾರುಕಟ್ಟೆಯಲ್ಲಿವೆ.

ಚರ್ಮದಲ್ಲಿ ಉಂಟಾಗುವ ಅಲರ್ಜಿ, ತುರಿಕೆ, ಉರಿಗಳಿಂದ ದೂರವಿಡಲು ಕಡಲೆ ಹಿಟ್ಟು ಉತ್ತಮ ಪರಿಹಾರ. ಕಡಲೆ ಹಿಟ್ಟನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಚರ್ಮ ಸುಕ್ಕುಗಟ್ಟದಂತೆ ತಡೆದು, ಯಾವುದೇ ರೀತಿಯ ಚರ್ಮದ ಕಾಯಿಲೆ ಬರದಂತೆ ತಡೆಯುತ್ತದೆ.

ಸೌಂದರ್ಯದ ದೃಷ್ಟಿಯಿಂದ ನೋಡಿದಾಗಲೂ ಕಡಲೆ ಹಿಟ್ಟು ಹಲವು ವಿಧದಲ್ಲಿ ತ್ವಚೆಗೆ ಉಪಯೋಗಕಾರಿಯಾಗಿದೆ. ಸತತವಾಗಿ ಕಡ್ಲೆ ಹಿಟ್ಟಿನಿಂದ ಮುಖ ತೊಳೆಯುವುದರಿಂದ ಚರ್ಮ ನಯವಾಗಿ ಕಾಣಿಸುತ್ತದೆ. ಕಡಲೆ ಹಿಟ್ಟಿನಿಂದ ಮುಖದ ಕಲೆ ದೂರವಾಗುತ್ತದೆ. ಬಿಸಿಲಿನಿಂದ ತ್ವಚೆ ಕಪ್ಪಗಾಗಿದ್ದರೆ ಅದನ್ನು ಹೋಗಲಾಡಿಸುತ್ತದೆ.

ಯಾವುದೇ ಅಡ್ಡಪರಿಣಾಮವಿಲ್ಲದೇ ಕಡಲೆ ಹಿಟ್ಟು ಉಪಯೋಗಿಸಿ ಸೌಂದರ್ಯ ವೃದ್ಧಿಸಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಹೊಳಪಿನ ತ್ವಚೆಗೆ

ಮೊದಲು ಕಡಲೆಹಿಟ್ಟಿಗೆ ಸ್ವಲ್ಪ ಹಾಲು ಬೆರೆಸಿ, ಕೇಸರಿ ಹಾಕಿ ಐದು ನಿಮಿಷ ನೆನೆಯಲು ಬಿಡಿ. ಬಳಿಕ ಪೇಸ್ಟ್ ರೀತಿಯಾಗಿ ಮುಖಕ್ಕೆ ಹಚ್ಚಿಕೊಂಡು 30 ನಿಮಿಷಗಳ ಬಳಿಕ ಮುಖ ತೊಳೆಯಬೇಕು. ಹೀಗೆ ಮಾಡುವುದರಿಂದ ತ್ವಚೆ ಹೊಳಪು ಪಡೆದುಕೊಳ್ಳುವುದನ್ನು ಗಮನಿಸಬಹದು.

ಎರಡು ಚಮಚ ಕಡಲೆಹಿಟ್ಟಿಗೆ ಒಂದು ಚಮಚ ಮಿಲ್ಕ್ ಕ್ರೀಮ್ ಮತ್ತು ಒಂದು ಚಮಚ ಜೇನು ಸೇರಿಸಿ ಮಿಶ್ರಣ ತಯಾರಿಸಿ ಸ್ವಚ್ಛಗೊಳಿಸಿದ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ.

ಮುಖದಲ್ಲಿನ ಕಲೆ ಹೋಗಲಾಡಿಸಲು:

ಮುಖಕ್ಕೆ ಸೋಪ್‌ ಅಥವಾ ವಿವಿಧ ಫೇಸ್‌ ವಾಶ್‌ ಬಳಸುವ ಬದಲು ದಿನನಿತ್ಯ ಕಡ್ಲೆ ಹಿಟ್ಟು ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆದರೆ ಕಲೆಗಳು ಕಡಿಮೆಯಾಗುತ್ತಾ ಬರುತ್ತದೆ.

ಟೊಮೆಟೊ ರಸ ತೆಗೆದುಕೊಂಡು ಅದಕ್ಕೆ 2-3 ಚಮಚ ಕಡಲೆಹಿಟ್ಟನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಈ ಮಿಶ್ರಣವನ್ನು ಸ್ವಚ್ಛಗೊಳಿಸಿದ ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15-20 ನಿಮಿಷ ಬಿಟ್ಟು ತೊಳೆಯಿರಿ.

ಎಣ್ಣೆ ತ್ವಚೆ ಹೋಗಲಾಡಿಸಲು:

ಮೊಸರು ಮತ್ತು ಕಡ್ಲೆ ಹಿಟ್ಟಿನ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆದರೆ, ಮುಖದ ಎಣ್ಣೆ ಅಂಶ ಕಡಿಮೆಯಾಗುತ್ತದೆ.

ಮೊಡವೆ ಸಮಸ್ಯೆ ನಿವಾರಣೆಗೆ:

ಮೊಡವೆ ಸಮಸ್ಯೆ ನಿವಾರಿಸಲು ಕಡ್ಲೆಹಿಟ್ಟಿನ ಜೊತೆ ಸ್ವಲ್ಪ ಹಾಲು, ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿ. 15-30 ನಿಮಿಷಗಳ ಬಳಿಕ ಮುಖ ತೊಳೆದು ಸ್ವಚ್ಛಗೊಳಿಸಿ. ವ್ಯತ್ಯಾಸ ಗಮನಿಸಿ.

ಒಂದು ಚಮಚ ಕಡಲೆಹಿಟ್ಟಿಗೆ ಗಂಧದ ಹುಡಿ ಮತ್ತು ಹಾಲನ್ನು ಬೆರೆಸಿ ಇದಕ್ಕೆ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಳ್ಳಬೇಕು. (ಸ್ವಲ್ಪ ಅರಿಶಿನವನ್ನು ಇದಕ್ಕೆ ಸೇರಿಸಿಕೊಳ್ಳಬಹುದು.)

ಟೊಮೇಟೊ ಹಣ್ಣಿನ ರಸವನ್ನು ಕಡಲೆಹಿಟ್ಟಿನೊಂದಿಗೆ ಬೆರೆಸಿಕೊಂಡು ಇದಕ್ಕೆ ಎರಡು ಚಮಚ ಅಲೊವೇರಾ ಜೆಲ್ ಸೇರಿಸಿಕೊಳ್ಳಬೇಕು. ನಂತರ ಮುಖಕ್ಕೆ ಹಚ್ಚಿ 20 ನಿಮಿಷ ಹಾಗೆಯೇ ಬಿಟ್ಟು ಮುಖ ತೊಳೆಯಬೇಕು.

ತ್ವಚೆಯ ಕಪ್ಪು ಕಲೆ ನಿವಾರಣೆಗೆ:

ಕೈ, ಕುತ್ತಿಗೆ ಕಪ್ಪಾಗಿದ್ದರೆ ಕಡ್ಲೆ ಹಿಟ್ಟಿಗೆ ಮೊಸರು ಮತ್ತು ನಿಂಬೆ ರಸ (ಬೇಕಾದಲ್ಲಿ ಈ ಮಿಶ್ರಣಕ್ಕೆ ಅರಶಿನ ಸ್ವಲ್ಪ ಸೇರಿಸಬಹುದು) ಬೆರೆಸಿ ಹಚ್ಚಬೇಕು. ಕಪ್ಪು ಕಲೆ ನಿವಾರಣೆಯಾಗುವುದರೊಂದಿಗೆ ಮುಖದ ಡೆಡ್ ಸ್ಕಿನ್ ದೂರ ಮಾಡಲು ಸಹಾಯ ಮಾಡುತ್ತದೆ.

ಒಣ ಚರ್ಮ ನಿವಾರಣೆ:

ಕಡಲೆಹಿಟ್ಟು ಮತ್ತು ಹಸಿ ಹಾಲನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮಸಾಜ್‌ ಮಾಡಿ 15-20 ನಿಮಿಷ ಹಾಗೇ ಬಿಟ್ಟು ತೊಳೆಯಿರಿ. ಇದರಿಂದ ಒಣ ಚರ್ಮ ನಿವಾರಣೆ ಮಾಡುವುದು ಮಾತ್ರವಲ್ಲದೆ, ಚರ್ಮಕ್ಕೆ ಪೋಷಣೆ ನೀಡುತ್ತದೆ.

ಚರ್ಮದ ಕಾಂತಿ ಹೆಚ್ಚಿಸಲು:

ಕಡಲೆಹಿಟ್ಟು ಚರ್ಮಕ್ಕೆ ಪೋಷಣೆ ನೀಡುತ್ತದೆ ಹಾಗೂ ಲಿಂಬೆಯಲ್ಲಿ ಇರುವಂತಹ ವಿಟಮಿನ್ ಸಿ ಚರ್ಮದಲ್ಲಿರುವ ಸತ್ತ ಕೋಶಗಳನ್ನು ತೆಗೆಯುತ್ತದೆ ಮತ್ತು ಚರ್ಮದ ಬಣ್ಣ ಬಿಳಿಯಾಗಿಸುವುದರಲ್ಲಿ ಸಹಕರಿಸುತ್ತದೆ. ಒಂದು ಚಮಚ ಕಡಲೆಹಿಟ್ಟಿಗೆ ಕೆಲವು ಹನಿ ಲಿಂಬೆರಸ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಬಿಟ್ಟು ತೊಳೆಯಬೇಕು.

ಕಡಲೆಹಿಟ್ಟು ಮತ್ತು ಕಿತ್ತಳೆ ಸಿಪ್ಪೆಯ ಹುಡಿ ತಯಾರಿಸುವ ವಿಧಾನ ಈ ಮಾಸ್ಕ್ ಸತ್ತ ಚರ್ಮವನ್ನು ಕಿತ್ತುಹಾಕಿ ಕಾಂತಿಯನ್ನು ನೀಡುವುದು. ಕಿತ್ತಳೆ ಚರ್ಮಕ್ಕೆ ಕಾಂತಿ ನೀಡುವ ಗುಣ ಹೊಂದಿದ್ದು, ಕಡಲೆಹಿಟ್ಟು ಮತ್ತು ಕಿತ್ತಳೆ ಸಿಪ್ಪೆ ಹುಡಿಯಿಂದ ತಯಾರಿಸಿದ ಫೇಸ್‌ ಮಾಸ್ಕ್‌ ಉಪಯುಕ್ತ. ಒಂದು ಚಮಚ ಕಿತ್ತಳೆ ಸಿಪ್ಪೆ ಹುಡಿಯನ್ನು ಒಂದು ಚಮಚ ಕಡಲೆಹಿಟ್ಟಿಗೆ ಬೆರೆಸಿಕೊಂಡು ಈ ಮಿಶ್ರಣಕ್ಕೆ 1-4 ಹನಿ ಹಾಲು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಮಸಾಜ್‌ ಮಾಡಬೇಕು. 15 ನಿಮಿಷ ಹಾಗೆ ಬಿಟ್ಟು ತೊಳೆಯಬೇಕು.

ಕಡಲೆಹಿಟ್ಟಿನೊಂದಿಗೆ ಪಪ್ಪಾಯವನ್ನು ಮಿಕ್ಸಿಯಲ್ಲಿ ಅರೆದುಕೊಂಡು ಇದಕ್ಕೆ 1 ಚಮಚ ಕಿತ್ತಳೆ ರಸ ಮತ್ತು ಒಂದು ಚಮಚ ಕಡಲೆಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಪೇಸ್ಟ್ ತಯಾರಿಸಿ ಮುಖ ಮತ್ತು ಕತ್ತಿಗೆ ಹಚ್ಚಿ ಮಸಾಜ್‌ ಮಾಡಿಕೊಂಡು 20 ನಿಮಿಷ ಬಿಟ್ಟ ನಂತರ ಮುಖ ತೊಳೆಯಬೇಕು.

ವಾರಕ್ಕೆರಡು ಸಲ ಮುಖಕ್ಕೆ ಹಚ್ಚಿಕೊಂಡರೆ ಒಳ್ಳೆಯ ಫಲಿತಾಂಶ ಪಡೆದುಕೊಳ್ಳಬಹುದು. ಮುಖದೊಂದಿಗೆ ಕುತ್ತಿಗೆಗೂ ಹಚ್ಚಿದರೆ ಉತ್ತಮ.

*ಕಾವ್ಯಶ್ರೀ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

ಬಚ್ಚನ್, ಮೋಹನ್‌ಲಾಲ್‌ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

Birds Mystery: ಭಾರತದಲ್ಲೊಂದು ಪಕ್ಷಿಗಳು ಆತ್ಮಹ*ತ್ಯೆ ಮಾಡಿಕೊಳ್ಳುವ ನಿಗೂಢ ಸ್ಥಳ!

Birds Mystery: ಭಾರತದಲ್ಲೊಂದು ಪಕ್ಷಿಗಳು ಆತ್ಮಹ*ತ್ಯೆ ಮಾಡಿಕೊಳ್ಳುವ ನಿಗೂಢ ಸ್ಥಳ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.