Lok Sabha; 3 ಪ್ರಮುಖ ಮಸೂದೆಗಳ ಅಂಗೀಕಾರ; ತ್ವರಿತ ನ್ಯಾಯದತ್ತ ಗಮನ ಎಂದ ಶಾ
ಕ್ರಿಮಿನಲ್ ಕೋಡ್ ಬಿಲ್ ಗಳು..
Team Udayavani, Dec 20, 2023, 9:05 PM IST
ಹೊಸದಿಲ್ಲಿ: ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಮೂರು ಪ್ರಮುಖ ಮಸೂದೆಗಳನ್ನು(IPC, CrPC, Evidence Act) ಲೋಕಸಭೆ ಬುಧವಾರ ಅಂಗೀಕರಿಸಿದ್ದು, ‘ಶಿಕ್ಷೆಯನ್ನು ನೀಡುವುದಕ್ಕಿಂತ ಮೊದಲು ತ್ವರಿತ ನ್ಯಾಯವನ್ನು ನೀಡುವತ್ತ ಗಮನಹರಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ.
ಮೂರು ಮಸೂದೆಗಳಾದ ಭಾರತೀಯ ನ್ಯಾಯ (ಎರಡನೇ) ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತೆ 2023 ಮತ್ತು ಭಾರತೀಯ ಸಾಕ್ಷಿ (ಎರಡನೇ) 2023 ಮಸೂದೆಗಳು ಭಯೋತ್ಪಾದನೆ, ಅಪರಾಧಗಳು ಮತ್ತು ದೇಶದ್ರೋಹದ ಸ್ಪಷ್ಟ ವ್ಯಾಖ್ಯಾನವನ್ನು ಹೊಂದಿವೆ ಎಂದು ಶಾ ಹೇಳಿದರು.
“ವಸಾಹತುಶಾಹಿ ಆಳ್ವಿಕೆಯ ಎಲ್ಲಾ ಚಿಹ್ನೆಗಳನ್ನು ತೆಗೆದುಹಾಕಲಾಗುವುದು ಮತ್ತು ಸಂಪೂರ್ಣ ಭಾರತೀಯ ಕಾನೂನು ಸಂಹಿತೆಯನ್ನು ಜಾರಿಗೆ ತರಲಾಗುವುದು” ಎಂದು ಶಾ ಹೇಳಿದರು.
‘ವೈಯಕ್ತಿಕವಾಗಿ ಎಲ್ಲವನ್ನೂ ವಿವರವಾಗಿ ಪರಿಶೀಲಿಸಿದ್ದು, 158 ಸಭೆಗಳನ್ನು ನಡೆಸಿ, ಹೊಸ ಕ್ರಿಮಿನಲ್ ಕಾನೂನುಗಳ ಪೂರ್ಣ ವಿರಾಮವನ್ನು ನಾನು ಪ್ರತಿ ಅಲ್ಪವಿರಾಮವನ್ನು ಕೂಡ ನೋಡಿದ್ದೇನೆ”, ಅವು ಸಂವಿಧಾನದ ಮನೋಭಾವಕ್ಕೆ ಅನುಗುಣವಾಗಿವೆ ಎಂದು ಹೇಳಿದರು.
ಜನರಿಗೆ ನ್ಯಾಯ ನೀಡುವಲ್ಲಿ ತಂತ್ರಜ್ಞಾನದ ಬಳಕೆಯನ್ನು ಮಸೂದೆಗಳು ಉತ್ತೇಜಿಸುತ್ತವೆ ಬಿಲ್‌ಗಳಲ್ಲಿ ಗುಂಪು ಹತ್ಯೆ(ಮಾಬ್-ಲಿಂಚಿಂಗ್) ಅನ್ನು ಅಪರಾಧ ಎಂದು ಸೇರಿಸಲಾಗಿದೆ ಎಂದು ಶಾ ಹೇಳಿದರು.
1860 ರ ಭಾರತೀಯ ದಂಡ ಸಂಹಿತೆ, 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಮತ್ತು 1872 ರ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲಿಸುವ ಮಸೂದೆಗಳ ಮೇಲಿನ ಚರ್ಚೆ ಮಂಗಳವಾರ ಪ್ರಾರಂಭವಾಗಿತ್ತು.
ಲೋಕಸಭೆಯಿಂದ 97 ಸಂಸದರನ್ನು ಅಮಾನತುಗೊಳಿಸಿದ ಕಾರಣದಿಂದ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಇತರ ವಿಪಕ್ಷಗಳ ಸದಸ್ಯರು ಸದನದಲ್ಲಿ ಚರ್ಚೆಯ ಸಮಯದಲ್ಲಿ ಹಾಜರಾಗಿರಲಿಲ್ಲ. ಅನೇಕ ವಿಪಕ್ಷಗಳು ಐಪಿಸಿ, ಸಿಆರ್‌ಪಿಸಿ ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಬದಲಿಸಲು ಪ್ರಯತ್ನಿಸುವ ಮಸೂದೆಗಳನ್ನು ಟೀಕಿಸಿದ್ದು, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಬಿಜು ಜನತಾ ದಳ ಮತ್ತು ಬಿಎಸ್ ಪಿ ಸಂಸದರು ಸೇರಿದಂತೆ ಬೆರಳೆಣಿಕೆಯಷ್ಟು ಎನ್‌ಡಿಎಯೇತರ ಸದಸ್ಯರು ಸದನದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.