Mangaluru ಭಾರತೀಯ ಹಡಗು ಸಿಬಂದಿಗೆ ವೇತನ ಹೆಚ್ಚಳದ ಒಪ್ಪಂದ


Team Udayavani, Dec 20, 2023, 11:31 PM IST

Mangaluru ಭಾರತೀಯ ಹಡಗು ಸಿಬಂದಿಗೆ ವೇತನ ಹೆಚ್ಚಳದ ಒಪ್ಪಂದ

ಮಂಗಳೂರು: ಇಂಡಿಯನ್‌ ನ್ಯಾಶನಲ್‌ ಶಿಪ್ಪಿಂಗ್‌ ಅಸೋಸಿಯೇಶನ್‌ (ಐಎನ್‌ಎಸ್‌ಎ) ಮತ್ತು ಸಮುದ್ರಯಾನಗಾರರ ಸಂಸ್ಥೆಗಳ ನ್ಯಾಶನಲ್‌ ಯೂನಿಯನ್‌ ಆಫ್‌ ಸೀಫೇರರ್ಸ್‌ ಆಫ್‌ ಇಂಡಿಯಾ (ಎನ್‌ಯುಎಸ್‌ಐ) ನಡುವಿನ ಒಪ್ಪಂದದ ಪ್ರಕಾರ ಈ ವರ್ಷ ಭಾರತೀಯ ನಾವಿಕರಿಗೆ ವೇತನ ಪರಿಷ್ಕರಣೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ.

2024ರ ಜ. 1ರಿಂದ ಪರಿಷ್ಕರಣೆ ಜಾರಿಯಾಗಲಿದೆ. ಭಾರತೀಯ ಹಡಗುಗಳಲ್ಲಿನ ಸಿಬಂದಿಗೆ ವೇತನ ಮತ್ತು ಇತರ ಸೌಲಭ್ಯಗಳಲ್ಲಿ ಹೆಚ್ಚಳ ಲಭ್ಯವಿರುವ ಮಾಹಿತಿಯಂತೆ ವಿದೇಶಕ್ಕೆ ಹೋಗುವ ನೌಕೆಗಳಲ್ಲಿ ಕೆಲಸ ಮಾಡುವವರ ಮೂಲ ವೇತನ ಶೇ. 42ರ ವರೆಗೆ, ಹೋಂ ಟ್ರೇಡ್‌ ಹಡಗುಗಳಲ್ಲಿ ಕೆಲಸ ಮಾಡುವವರಿಗೆ ಶೇ. 25ರಷ್ಟು ಹೆಚ್ಚಾಗಲಿದೆ.

ಕೆಲಸದ ವೇಳೆ ಜೀವ ಕಳೆದು ಕೊಳ್ಳುವ ಉದ್ಯೋಗಿಗಳ ಕುಟುಂಬಕ್ಕೆ ನೀಡುತ್ತಿದ್ದ ನಷ್ಟ ಪರಿಹಾರ 22 ಲಕ್ಷದಿಂದ 40 ಲಕ್ಷ ರೂ. ವರೆಗೆ ಹೆಚ್ಚಿಸಲಾಗಿದೆ. ಉದ್ಯೋಗದ ಸಂದರ್ಭಲ್ಲಿ ಶೇ. 100 ಅಂಗವೈಕಲ್ಯಕ್ಕೆ ಒಳಗಾದವರಿಗೆ ನೀಡುವ ನೆರವು 25 ಲಕ್ಷದಿಂದ 35 ಲಕ್ಷ ರೂ. ವರೆಗೆ ಹೆಚ್ಚಿಸಲಾಗಿದೆ. 55 ವರ್ಷದಲ್ಲಿ ಕೆಲಸದಿಂದ ನಿವೃತ್ತರಾದರೆ 6 ಲಕ್ಷ ರೂ., 58ರಲ್ಲಿ 4.5 ಲಕ್ಷ, 58ರ ಮೇಲೆ ನಿವೃತ್ತರಾದರೆ 4 ಲಕ್ಷ ರೂ. ನೀಡಲಾಗುತ್ತದೆ.

ರೇಟಿಂಗ್‌, ಪೆಟ್ಟಿ ಆಫೀಸರ್‌, ರಾಂಕಿಲ್‌ ನೌಕರಿ ಮಾಡುವ ನೌಕಾ ಯಾನದ ಸಿಬಂದಿ, ಆಫ್‌ಶೋರ್‌ ಉದ್ಯೋಗ ಮಾಡುವವರು ಕೂಡ ಎನ್‌ಎಂಬಿ (ಐ) ಒಪ್ಪಂದದ ಅಡಿ ಯಲ್ಲಿ ಬರುತ್ತಾರೆ.

ಎನ್‌ಯುಎಸ್‌ಐನ ಜನರಲ್‌ ಸೆಕ್ರೆಟರಿ ಮಿಸ್ಟರ್‌ ಮಿಲಿಂದ್‌ ಕಂಡಲ್‌ ಗಾಂವ್ಕರ್‌, ಉಪಾಧ್ಯಕ್ಷ ಲೂಯಿಸ್‌ ಗೋಮ್ಸ್‌, ಸಹಾಯಕ ಕರ್ಯದರ್ಶಿ ಸುನಿಲ್‌ ನಾಯರ್‌ ಮೊದಲಾದವರು ಮಾಡಿಕೊಂಡಿರುವ ಒಪ್ಪಂದವು 2027ರ ಡಿ. 31ರ ವರೆಗೆ ಜಾರಿಯಲ್ಲಿ ರುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

7

Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ

5(1

Mangaluru: 7 ಕೆರೆ, ಪಾರ್ಕ್‌ ಅಭಿವೃದ್ಧಿಗೆ ಅಮೃತ 2.0

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.