Daily Horoscope:ಸಕಾರಾತ್ಮಕ ಚಿಂತನೆಯಿಂದ ಆತ್ಮವಿಶ್ವಾಸ ವೃದ್ಧಿ, ಯಶಸ್ಸು ಸಾಧಿಸಲು ಪ್ರಯತ್ನ
Team Udayavani, Dec 21, 2023, 7:57 AM IST
ಮೇಷ: ಭವಿಷ್ಯದಲ್ಲಿ ಏನಾಗಬಹುದೆಂಬ ಚಿಂತೆ ಬೇಡ. ಉದ್ಯೋಗದಲ್ಲಿ ಹೊಣೆಗಾರಿಕೆಯ, ಸ್ವರೂಪದಲ್ಲಿ ಕೊಂಚ ವ್ಯತ್ಯಾಸ. ಎಲ್ಲರ ವಿಶ್ವಾಸ ಗಳಿಸಿ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಪ್ರಯತ್ನ. ಮಹಿಳೆಯರ ನೇತೃತ್ವದ ಗೃಹೋದ್ಯಮಗಳು ಉನ್ನತಿ.
ವೃಷಭ: ನಿರ್ದಿಷ್ಟ ಗುರಿಯ ನಡೆಯಿಂದ ಕಾರ್ಯದಲ್ಲಿ ಜಯ. ಉದ್ಯೋಗದಲ್ಲಿ ಅಬಾಧಿತ ಮುನ್ನಡೆ. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನದ ಹೊಣೆಗಾರಿಕೆ. ಯುವಜನರಿಗೆ ಕೃಷಿಕ್ಷೇತ್ರದತ್ತ ಆಕರ್ಷಣೆ.
ಮಿಥುನ: ಸಕಾರಾತ್ಮಕ ಚಿಂತನೆಯಿಂದ ಆತ್ಮವಿಶ್ವಾಸ ವೃದ್ಧಿ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆಗೆ ಸಂದ ಗೌರವ. ಅನಾಯಾಸವಾಗಿ ವೃದ್ಧಿ ಸಾಧಿಸಿದ ಉದ್ಯಮದ ಕೀರ್ತಿ. ವಸ್ತ್ರ, ಸಿದ್ಧ ಉಡುಪು, ಆಭರಣ ಕ್ಷೇತ್ರದಲ್ಲಿ ನಿರೀಕ್ಷೆ ಮೀರಿದ ಲಾಭ.
ಕರ್ಕಾಟಕ: ಸರ್ವರ ಹಿತಸಾಧನೆಯೇ ಕಾರ್ಯದ ಲಕ್ಷÂವಾಗಿರಲಿ. ಉದ್ಯೋಗದಲ್ಲಿ ಪದೋನ್ನತಿ ಸಂಭವ. ಉದ್ಯಮ ಉತ್ಪನ್ನಗಳ ಗುಣಮಟ್ಟ ಏರಿಕೆ. ಸರಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಮುಂದುವರಿದ ಪ್ರಯತ್ನ.
ಸಿಂಹ: ಸಾಧನೆಗಳ ಬಗ್ಗೆ ಅಪಾರ ತೃಪ್ತಿಯೊಂದಿಗೆ ಕ್ರಿಯಾರಂಭ. ಜತೆಗಾರರಿಗೆ ಸಂದಭೋìಚಿತ ಮಾರ್ಗದರ್ಶನ. ಸ್ವಂತ ಉದ್ಯಮದಲ್ಲಿ ನೌಕರರ ಹಿತರಕ್ಷಣೆಗೆ ಸಮಾನ ಪ್ರಾಧಾನ್ಯ. ಸಮಾಜದಲ್ಲಿ ಗೌರವ ವೃದ್ಧಿ. ಸಂಸ್ಥೆಗೋಸ್ಥರ ನೂತನ ವಾಹನ ಖರೀದಿ.
ಕನ್ಯಾ: ದೇವರಲ್ಲಿ ಸ್ಥಿರವಾದ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ಮುಂದೆ ಸಾಗಿರಿ. ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಲಾಭ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಸಾಮಗ್ರಿ ವ್ಯಾಪಾರಿಗಳಿಗೆ ಆದಾಯ ವೃದ್ಧಿ.
ತುಲಾ: ಎದುರಾದ ಸಮಸ್ಯೆಗಳಿಗೆ ಬೆನ್ನು ತೋರಿಸಿ ಓಡಿ ಹೋಗದಿರಿ. ಉದ್ಯೋಗದಲ್ಲಿ ಯಥೋಚಿತ ಗೌರವ ಪ್ರಾಪ್ತಿ. ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಮನಸ್ಸಮಾಧಾನ. ಮಕ್ಕಳ ಪ್ರತಿಭೆಯಲ್ಲಿ ಪ್ರಶಂಸೆ, ಎಲ್ಲರಿಗೂ ಉತ್ತಮ ಆರೋಗ್ಯ.
ವೃಶ್ಚಿಕ: ದೇಹಾರೋಗ್ಯ ಸ್ಥಿರವಾಗಿರುವುದರಿಂದ ಕಾರ್ಯಕ್ಕೆ ಹಾನಿ ಇಲ್ಲ. ಉದ್ಯೋಗದಲ್ಲಿ ಗೌರವದ ಸ್ಥಾನಮಾನ. ಉದ್ಯಮದಲ್ಲಿ ಎದುರಾಳಿಗಳ ಪೈಪೋಟಿ. ಸರಕಾರಿ ನೌಕರರಿಗೆ ವರ್ಗಾವಣೆಯ ಚಿಂತೆ. ಲೇವಾದೇವಿ ವ್ಯವಹಾರದಲ್ಲಿ ಮಧ್ಯಮ ಲಾಭ.
ಧನು: ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ. ಸಣ್ಣ ಉದ್ಯಮ ಘಟಕಕ್ಕೆ ಪ್ರಾರಂಭಿಕ ಲಾಭ. ಕೃಷಿ ಅಭಿವೃದ್ಧಿ ಪ್ರಯತ್ನದಲ್ಲಿ ಮುನ್ನಡೆ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಜೇನು ಸಾಕಣೆ ಆರಂಭಿಸಲು ನಿರ್ಧಾರ.
ಮಕರ: ಮನಸ್ಸಿನ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಸಫಲ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಗಿಸಲು ಸಮನ್ವಯಿತ ಪ್ರಯತ್ನ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಗ್ರಾಹಕರ ಸಂಖ್ಯೆ ವೃದ್ಧಿ.
ಕುಂಭ: ಕಾರ್ಯಭಾರಕ್ಕೆ ಮಣಿಯದ ದೇಹ ಹಾಗೂ ಮನಸ್ಸು. ಹಲವು ಕರ್ತವ್ಯಗಳ ಕಡೆಗೆ ಏಕಕಾಲದಲ್ಲಿ ಗಮನ ಹರಿಸುವ ಅನಿವಾರ್ಯತೆ. ಸಾಮಾಜಿಕ ವಲಯದ ಆಪ್ತರಿಂದ ಸಹಾಯ ಹಸ್ತ. ಉದ್ಯೋಗ ರಂಗದಲ್ಲಿ ಗುರುಸ್ಥಾನ ನಿರ್ವಹಣೆ.
ಮೀನ: ಕಡಿಮೆಯಾಗದ ಕಾರ್ಯಕ್ರಮಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳತ್ತ ಲಕ್ಷÂ ಹರಿಸಬೇಕಾದ ಸಂದರ್ಭ. ಸರಕಾರಿ ಇಲಾಖೆಗಳವರ ಸಕಾರಾತ್ಮಕ ಸ್ಪಂದನ. ಕೃಷಿ ಆಧಾರಿತ ಉದ್ಯಮ ಘಟಕ ಸ್ಥಾಪನೆ. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ. ಸಾಮಾಜಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಶೋಧನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.