Goggles; ಮನುಷ್ಯರಂತೆ ಈಗ ಕನ್ನಡಕಗಳೂ ಸ್ಮಾರ್ಟ್‌!


Team Udayavani, Dec 22, 2023, 5:24 AM IST

1-sadasds

ಪ್ರತಿಯೊಂದು ವಸ್ತು, ಸಾಧನಗಳಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ಹೊಸದೇನಲ್ಲ. ಆದರೆ ಒಂದು ವಸ್ತು ಅಥವಾ ಸಾಧನಕ್ಕೆ ಪರ್ಯಾಯವಾಗಿ ಇನ್ನೊಂದು ಸಾಧನ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬಂದಾಗ ಅದು ಕುತೂಹಲ ಸೃಷ್ಟಿಸದೇ ಇರಲಾರದು. ಅಂಥಹುದೇ ಒಂದು ತಂತ್ರಜ್ಞಾನಾಧಾರಿತ ಸಾಧನ ಈಗ ಜಾಗತಿಕವಾಗಿ ತೀವ್ರ ಕುತೂಹಲ ಮೂಡಿಸುತ್ತಿದೆ. ಇದುವೇ “ಸ್ಮಾರ್ಟ್‌ ಗ್ಲಾಸ್‌’. ಕಂಪ್ಯೂಟರ್‌ಗಳು ಮಾಡುವ ಹಲವು ಕೆಲಸಗಳನ್ನು ಸ್ಮಾರ್ಟ್‌ಗ್ಲಾಸ್‌ಗಳು ಮಾಡುವುದರಿಂದ “ತಲೆಗೆ ಧರಿಸುವ ಕಂಪ್ಯೂಟರ್‌’ಗಳೆಂಬ ವಿಶೇಷಣವೂ ಇದಕ್ಕಿದೆ.

ಮೊದಮೊದಲು ದಪ್ಪಗಿನ ಮಸೂರಗಳನ್ನು ಹೊಂದಿರುವ ಕನ್ನಡಕಗಳನ್ನು ಜನರು ಧರಿಸುತ್ತಿದ್ದರು, ಅನಂತರ ಗುಣಮಟ್ಟದ ಮಸೂರಗಳನ್ನು ಕನ್ನಡಕಗಳಲ್ಲಿ ಬಳಸಲು ಪ್ರಾರಂಭಿಸಲಾಯಿತು. ಅದಾದ ಬಳಿಕ ಮಸೂರಗಳ ಮೇಲೆ ಪದರವಾಗಿ ಲೇಪಿಸುವಂತಹ ಲೇಪನಗಳನ್ನು ಕಂಡುಹಿಡಿಯಲಾಯಿತು.
ಇದರಿಂದ ಇನ್ನೂ ಹೆಚ್ಚಿನ ಗುಣಮಟ್ಟವನ್ನು ಪಡೆಯಲು ಸಾಧ್ಯವಾಯಿತು. ಉದಾಹರಣೆಗೆ, ಗೀರು ನಿರೋಧಕ ಅಥವಾ ಗೀಚು ನಿರೋಧಕ (ಸ್ಕ್ರ್ಯಾಚ್ ಪ್ರೂಫ್), ಪ್ರತಿಫ‌ಲಿತ ನಿರೋಧಕ (ಆ್ಯಂಟಿ ರಿಫ್ಲೆಕ್ಟಿವ್‌), ಮಂಜು ಅಥವಾ ಇಬ್ಬನಿ ನಿರೋಧಕ(ಆ್ಯಂಟಿ ಫಾಗ್‌), ನೇರಳಾತೀತ ಕಿರಣ ನಿರೋಧಕ (ಯುವಿ ಬ್ಲಾಕಿಂಗ್‌) ಇತ್ಯಾದಿ ಲೇಪನಗಳನ್ನು ಬಳಸಿ ವೀಕ್ಷಣ ಗುಣಮಟ್ಟ ಹೆಚ್ಚಾಗಿರುವ ಕನ್ನಡಕಗಳು ಚಾಲ್ತಿಗೆ ಬಂದವಲ್ಲದೆ ಕ್ಷಿಪ್ರಗತಿಯಲ್ಲಿ ಜನಪ್ರಿಯತೆಯನ್ನೂ ಪಡೆದುಕೊಂಡವು.

ಏನಿದು ಸ್ಮಾರ್ಟ್‌ ಗ್ಲಾಸ್‌?
ಸ್ಮಾರ್ಟ್‌ ಗ್ಲಾಸ್‌ಗಳು ತಂತ್ರಜ್ಞಾನದ ಹೊಸ ಆವಿಷ್ಕಾರವಾಗಿದ್ದು, ಸಾಮಾನ್ಯ ಕನ್ನಡಕಗಳಿಗಿಂತ ಭಿನ್ನವಾಗಿವೆ. ಸ್ಮಾರ್ಟ್‌ಗ್ಲಾಸ್‌ಗಳಿಗೆಂದೇ ರಚಿಸಲಾದ ವಿಶೇಷ ಚಿಪ್‌ಗ್ಳ ಸಹಾಯದಿಂದ ಅದನ್ನು ಧರಿಸಿದವರಿಗೆ ತಮ್ಮ ಕಣ್ಣು ಮುಂದೆ ಇನ್ನೊಂದು ಪದರವನ್ನು ಸೃಷ್ಟಿಸಿ ಅದರಲ್ಲಿ ವಿವಿಧ ರೀತಿಯ ಮಾಹಿತಿ, ಚಿತ್ರಣಗಳನ್ನು ತೋರಿಸುತ್ತದೆ. ಇದರಲ್ಲಿ ಗೂಗಲ್‌ ಮ್ಯಾಪ್‌ ಸಹ ಬಳಸಬಹುದಾಗಿದೆ. ಸ್ಮಾರ್ಟ್‌ಗ್ಲಾಸ್‌ಗಳ ಉತ್ಪಾದನೆಗೆ ಇನ್ನಷ್ಟೇ ವೇಗ ಲಭಿಸಬೇಕಿರುವುದರಿಂದ ಮತ್ತು ಇವುಗಳಲ್ಲಿ ಬಳಸಲಾಗುತ್ತಿರುವ ಎಆರ್‌ ಮತ್ತು ವಿಆರ್‌ ತಂತ್ರಜ್ಞಾನ ತುಟ್ಟಿಯಾಗಿರುವುದರಿಂದ ಇವುಗಳ ಬೆಲೆ ಅಧಿಕವಾಗಿರಲಿದೆ. ಹೀಗಾಗಿ ಇವು ಜನಸಾಮಾನ್ಯರನ್ನು ತಲುಪಲು ಇನ್ನಷ್ಟು ವರ್ಷಗಳು ಬೇಕಾದೀತು.

ಇದು ಹೇಗೆ ಕೆಲಸ ಮಾಡುತ್ತವೆ?
ಸ್ಮಾರ್ಟ್‌ಗ್ಲಾಸ್‌ಗಳು ನಮ್ಮನ್ನು ಪ್ರತಿಶತ ತಲ್ಲೀನಗೊಳಿಸುವ ವರ್ಚುವಲ್‌ ರಿಯಾಲಿಟಿ(ವಿ.ಆರ್‌.) ಹೆಡ್‌ಸೆಟ್‌ಗಳಂತೆ ಕೆಲಸ ಮಾಡದೆ ದೈಹಿಕ ಮತ್ತು ಡಿಜಿಟಲ್‌ ಅನುಭವವನ್ನು ಒಂದೇ ಬಾರಿಗೆ ನೀಡುವುದರಿಂದ ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತವೆ. ಈ ಅನುಭವವನ್ನು ಸ್ಮಾರ್ಟ್‌ಗ್ಲಾಸ್‌ಗಳು ಆಪ್ಟಿಕಲ್‌ ಹೆಡ್‌ ಮೌಂಟೆಡ್‌ ಡಿಸ್‌ ಪ್ಲೆ (ಒಎಂಎಚ್‌ಡಿ) ಮೂಲಕ ನೀಡಬಹುದು ಅಥವಾ ವರ್ಧಿತ ವಾಸ್ತವ (ಆಗೆ¾ಂಟೆಡ್‌ ರಿಯಾಲಿಟಿ) ತಂತ್ರಜ್ಞಾನ ಅಥವಾ ಹೆಡ್ಸ್‌ ಅಪ್‌ ಡಿಸ್‌ಪ್ಲೆ ಗೇಮ್ಸ್‌ (ಎಚ್‌ಯುಡಿ) ಬಳಸಿಕೊಂಡು ನೀಡಬಹುದು. ಇವುಗಳು ವೈಫೈ ಹಾಗೂ ಮೊಬೈಲ್‌ ಆ್ಯಪ್‌ಗ್ಳ ಸಹಾಯದಿಂದ ಕಾರ್ಯನಿರ್ವಹಿಸುತ್ತವೆ.

ವಿವಿಧ ಕ್ಷೇತ್ರಗಳಲ್ಲಿ ಉಪಯೋಗ
ಅತ್ಯಾಧುನಿಕ ತಂತ್ರಜ್ಞಾನ ಆಧರಿತ ಈ ಕನ್ನಡಕವನ್ನು ಸ್ವರಕ್ಷಣೆ, ವೈದ್ಯಕೀಯ ಕ್ಷೇತ್ರಗಳಲ್ಲಿಯೂ ಬಳಸಿಕೊಳ್ಳಲಾಗುತ್ತಿದೆ. ಉದಾಹರಣೆಗೆ ಮೊದಲನೆಯದಾಗಿ ನಮ್ಮೊಂದಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರೊಂದಿಗೆ ಯಾರಾದರೂ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದಾದರೆ ಅದನ್ನು ಸ್ಮಾರ್ಟ್‌ಗ್ಲಾಸ್‌ಗಳ ಮೂಲಕ ಸೆರೆಹಿಡಿದು ಅವರಿಗೆ ತಕ್ಕ ಪಾಠ ಕಲಿಸಬಹುದು. ಎರಡನೆಯದಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ದೂರದಲ್ಲಿರುವ ತಜ್ಞರ ಸಲಹೆಗಳನ್ನು ಪಡೆದುಕೊಂಡು ಶಸ್ತ್ರಚಿಕಿತ್ಸೆ ಮಾಡಬಹುದು. ಅಷ್ಟು ಮಾತ್ರವಲ್ಲದೆ “ಗೂಗಲ್‌ ಸ್ಮಾರ್ಟ್‌ ಗ್ಲಾಸ್‌’, ಕ್ಷಕಿರಣಗಳನ್ನು ವಿಶ್ಲೇಷಿಸಿ ರೋಗಿಯ ಸಮಸ್ಯೆಯನ್ನು ಪತ್ತೆಹಚ್ಚಿ, ಯಾವ ತೆರನಾದ ಚಿಕಿತ್ಸೆ ನೀಡಿದರೆ ಉಪಯೋಗ ಎಂದು ತಿಳಿಸುವಷ್ಟು ಸಾಮರ್ಥ್ಯವನ್ನು ಹೊಂದಿದ್ದು ಇದು ವೈದ್ಯಲೋಕ ಮತ್ತು ವಿಜ್ಞಾನ ಲೋಕವನ್ನೇ ಅಚ್ಚರಿಯಲ್ಲಿ ಕೆಡಹುವಂತೆ ಮಾಡಿದೆ. ಇತ್ತೀಚಿನ ಸ್ಮಾರ್ಟ್‌ ಗ್ಲಾಸ್‌ಗಳು, ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಕಲಿಕೆ(ಮೆಷಿನ್‌ ಲರ್ನಿಂಗ್‌)ಯನ್ನು ಬಳಸಿ ಕಾರ್ಯನಿರ್ವಹಿಸುತ್ತಿದ್ದು, ಬಳಕೆದಾರರಿಗೆ ಇನ್ನೂ ಹೆಚ್ಚಾಗಿ ಸಂವಾದ ನಡೆಸಲು ಸಹಕಾರಿಯಾಗಿದೆ.

ದೃಷ್ಟಿಹೀನರಿಗೆ ಸಹಕಾರ
ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಭಾರತದಲ್ಲಿ ಸುಮಾರು 15 ದಶಲಕ್ಷ ಅಂಧರಿದ್ದರೆ, 135 ದಶಲಕ್ಷ ಜನರು ದೃಷ್ಟಿದೋಷದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ನೆರವಿಗಾಗಿ ದಿಲ್ಲಿಯ ಖಾಸಗಿ ಆಸ್ಪತ್ರೆ ವಿಷನ್‌ ಏಡ್‌ ಇಂಡಿಯಾ ಮತ್ತು ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ಎಸ್‌ಎಚ್‌ಜಿ ಟೆಕ್ನಾಲಜಿಸ್‌ ಜಂಟಿಯಾಗಿ ಹೊಸ ಎಐ ಚಾಲಿತ ಸ್ಮಾರ್ಟ್‌ ವಿಷನ್‌ ಗ್ಲಾಸ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ ವಿಷನ್‌ ಗ್ಲಾಸ್‌ಗಳು ರೀಡಿಂಗ್‌ ಅಸಿಸ್ಟೆನ್ಸ್‌ ತಂತ್ರಜ್ಞಾನವನ್ನೂ ಹೊಂದಿರುವ ಕಾರಣ ದೃಷ್ಟಿಹೀನ ಬಳಕೆದಾರರಿಗೆ ಮುದ್ರಿತ ಮತ್ತು ಕೈಬರಹ‌ಗಳನ್ನೂ ಸಹ ಓದಲು ಸಹಕರಿಸುತ್ತದೆ. ಈ ಗ್ಲಾಸ್‌ಗಳಲ್ಲಿ ವಾಕಿಂಗ್‌ ಅಸಿಸ್ಟೆನ್ಸ್‌ಗಳೂ ಸಹ ಇದೆ. ಅದರಂತೆ ನಡೆದುಕೊಂದು ಹೋಗುತ್ತಿರಬೇಕಾದರೆ ಏನಾದರೂ ಅಡಚಣೆ ಬಂದರೆ ಧ್ವನಿ ಎಚ್ಚರಿಕೆಗಳನ್ನು ಅದು ನೀಡಬಲ್ಲುದು.

ವಿಧವಿಧದ ಸ್ಮಾರ್ಟ್‌ಗ್ಲಾಸ್‌ಗಳು;ಮತ್ತವುಗಳ ಕಾರ್ಯನಿರ್ವಹಣೆ
01ಏಕರೂಪದ ಸ್ಮಾರ್ಟ್‌ಗ್ಲಾಸ್‌ಗಳು (ಮೊನೋಕ್ಯಲರ್‌): ಇವುಗಳು ಮಸೂರಗಳಲ್ಲಿ ಒಂದರ ಮೇಲೆ ಇರಿಸಲಾದ ಆಪ್ಟಿಕಲ್‌ ಎಂಜಿನ್‌ ಅನ್ನು ಒಳಗೊಂಡಿರುವ ಹೆಡ್‌ ಮೌಂಟೆಡ್‌ ಡಿಸ್‌ಪ್ಲೇಗಳಾಗಿವೆ. ವರ್ಧಿತ ಮಾಹಿತಿ (ಆಗ್ಮೆಂಟೆಡ್ ಇನ್ಫಾ ರ್ಮೇಶನ್‌)ಯು ದೃಷ್ಟಿ ರೇಖೆಯ ಹೊರಗೆ ಇದೆಯಾದರೂ, ಒಂದು ಪಾರದರ್ಶಕ ಸ್ಮಾರ್ಟ್‌ಫೋನ್‌ನಂತೆ ಇದು ಕೆಲಸ ಮಾಡುತ್ತದೆ.
ಉದಾಹರಣೆ: ಗೂಗಲ್‌ ಗ್ಲಾಸ್‌, ಲೂಮಸ್‌ಸ್ಲೀಕ್ , ಆಪ್ಟಿವೆಂಟ್ಸ್‌ ಓರ-2 ಮತ್ತು ವುಝಿಕ್ಸ್‌ ಎಂ300.
02ಬೈನಾಕ್ಯುಲರ್‌ ಸ್ಮಾರ್ಟ್‌ಗ್ಲಾಸ್‌ಗಳು: ಇವುಗಳು ಪ್ರತೀ ಕಣ್ಣಿನ ಮುಂದೆ ಎರಡು ಪಾರದರ್ಶಕ ಡಿಸ್‌ಪ್ಲೇಗಳನ್ನು ಹೊಂದಿದ್ದು, ಬಳಕೆದಾರರಿಗೆ ಹೊಸ ರೀತಿಯ ಅನುಭವ ಮತ್ತು ದೃಷ್ಟಿ ನೀಡುತ್ತದೆ. ಮಾಹಿತಿಯನ್ನು ಎರಡೂ ಕಣ್ಣುಗಳ ಮುಂದೆ ಪ್ರದರ್ಶಿಸಲಾಗುತ್ತದೆ.
ಉದಾಹರಣೆ: ಎಪ್ಸಾನ್‌ ಮೊವೆರಿಯೋ, ಸೋನಿ ಎಸ್‌ಇಡಿ-ಇ1, ಒಡಿಜಿ ಆರ್‌-9
03ಎಎಆರ್‌(ಆಡಿಯೋ ಆಗ್ಮೆಂಟೆಡ್ ರಿಯಾಲಿಟಿ) ಸ್ಮಾರ್ಟ್‌ ಗ್ಲಾಸ್‌ಗಳು: ವರ್ಧಿತ ರಿಯಾಲಿಟಿ (ಎಆರ್‌) ಸಾಮಾನ್ಯವಾಗಿ ದೃಶ್ಯಗಳೊಂದಿಗಿನ ಸಂಬಂಧ ಹೊಂದಿದ್ದರೂ, ಈ ಸ್ಮಾರ್ಟ್‌ಗ್ಲಾಸ್‌ಗಳು ಧ್ವನಿ ಆಧಾರಿತ ಎಆರ್‌ ಅನ್ನು ಬಳಸಿಕೊಳ್ಳುತ್ತವೆ. ಚಲನೆಯ ಸಂವೇದಕಗಳು ಮತ್ತು ಮೊಬೈಲ್‌ ಫೋನ್‌ನ ಜಿಪಿಎಸ್‌ನಿಂದ ಸಂಗ್ರಹಿಸಿದ ಮಾಹಿತಿಯನ್ನು ಸಂಯೋಜಿಸಲಾಗುತ್ತದೆ.
ಉದಾಹರಣೆ: ಬೋಸ್‌ ಫ್ರೇಮ್ಸ್
04ತಲ್ಲೀನಗೊಳಿಸುವ ಅಥವಾ ಮಿಶ್ರ ರಿಯಾಲಿಟಿ (ಇಮ್ಮಸ್ಲೀವ್‌ ಆರ್‌ ಮಿಕ್ಸೆಡ್‌ ರಿಯಾಲಿಟಿ) ಸ್ಮಾರ್ಟ್‌ಗ್ಲಾಸ್‌ಗಳು: ಈ ಸ್ಮಾರ್ಟ್‌ ಗ್ಲಾಸ್‌ಗಳು ಬಳಕೆದಾರರನ್ನು ಸಂಪೂರ್ಣವಾಗಿ ತಲ್ಲೀನವಾಗುವಂತೆ ಮಾಡುತ್ತದೆ. ಇವುಗಳು ಅದ್ವಿತೀಯ ವ್ಯವಸ್ಥೆಗಳನ್ನು ಹೊಂದಿರುವ ಕಾರಣ ಡಿಸ್‌ಪ್ಲೇಗಳಲ್ಲಿ 3ಡಿ ಮಾದರಿಗಳನ್ನು ನಿರೂಪಿಸಲು ಸಹಕಾರಿಯಾಗಿದೆ. 3ಡಿ ಸಂವೇದಕ(3ಡಿ ಸೆನ್ಸರ್)ಗಳೊಂದಿಗೆ ಇವುಗಳು ಬರುವುದರಿಂದ ಸುಲಭವಾಗಿಯೇ ಕಂಪ್ಯೂಟರ್‌ ರಚಿತ ವಸ್ತುಗಳನ್ನು, ರಚನೆಗಳನ್ನು ಮೇಲ್ಪದರದಲ್ಲಿ ತೋರಿಸುತ್ತದೆ.
ಉದಾಹರಣೆ: ಮೈಕ್ರೋಸೋಫ್ಟ್ ಹೋಲೋಲೆನ್ಸ್‌, ಒಡಿಜಿ-9
05ಮಿಶ್ರ ರಿಯಾಲಿಟಿ ಫೋಟೋ ಪ್ರದರ್ಶಿಸುವ (ಮಿಕ್ಸೆಡ್‌ ರಿಯಾಲಿಟಿ ಫೋಟೋ ಪ್ರೊಜೆಕ್ಷನ್‌ ಆ್ಯಕ್ಷನ್‌) ಸ್ಮಾರ್ಟ್‌ಗ್ಲಾಸ್‌ಗಳು: ಇತರ ಸ್ಮಾರ್ಟ್‌ಗ್ಲಾಸ್‌ಗಳು ಕಣ್ಣಿನಿಂದ ನಿಗದಿತ ದೂರದಲ್ಲಿ ಇರಿಸಲಾದ ಪರದೆಯನ್ನು ಬಳಸುತ್ತವೆ. ಆದರೆ ಈ ಪ್ರಕಾರದ ಸ್ಮಾರ್ಟ್‌ಗ್ಲಾಸ್‌ಗಳು ಫೋಟೋಗಳನ್ನು ನೇರವಾಗಿ ಬಳಕೆದಾರರ ಕಣ್ಣಿಗೆ ಕಾಣುವ ಹಾಗೆ ಮಾಡುತ್ತದೆ. ಇದರಿಂದ ಬಳಕೆದಾರರಿಗೆ ವಿಸ್ತೃತ ವೀಕ್ಷಣೆಯ ಅನುಭವ ನೀಡುವ ಮೂಲಕ ಈಗಾಗಲೇ ಇರುವ ಎಆರ್‌ ಸ್ಮಾರ್ಟ್‌ಗ್ಲಾಸ್‌ಗಳ ನ್ಯೂನತೆಯನ್ನು ನೀಗಿಸುತ್ತವೆ.
ಉದಾಹರಣೆ: ಮ್ಯಾಜಿಕ್‌ ಲೀಪ್‌ ಕಂಪೆನಿಯ ಸ್ಮಾರ್ಟ್‌ಗ್ಲಾಸ್‌ಗಳು.

ಟಾಪ್ ನ್ಯೂಸ್

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.