Uroos: ಡಿ. 25ರಿಂದ 29ರ ವರೆಗೆ ಅಜಿಲಮೊಗರು ಉರೂಸ್
Team Udayavani, Dec 22, 2023, 12:08 AM IST
ಮಂಗಳೂರು: ಅಜಿಲಮೊಗರು ಜುಮಾ ಮಸೀದಿಯ ಸಂಸ್ಥಾಪಕ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ವಲಿ (ಖ.ಸಿ.) ಸ್ಮರಣಾರ್ಥ 751ನೇ ಮಾಲಿದಾ ಉರೂಸ್ ಡಿ. 25ರಿಂದ 29ರ ವರೆಗೆ ನಡೆಯಲಿದೆ ಎಂದು ಮಸೀದಿಯ ಸಾವಿರ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಎಂ.ಕೆ. ಸಿನಾನ್ ಸಖಾಫಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದಕ್ಷಿಣ ಭಾರತದ ಪ್ರಮುಖ ಹಾಗೂ ಸರ್ವಧರ್ಮೀಯರು ಪಾಲ್ಗೊಳ್ಳುವ ಉರೂಸ್ ಇದಾಗಿದೆ. ಡಿ. 25ರಂದು ಮಗ್ರಿಬ್ ನಮಾಜ್ ಬಳಿಕ ಅಸ್ಸಯ್ಯಿದ್ ಜಅಫರ್ ಸ್ವಾದಿಕ್ ತಂšಳ್ ಕುಂಬೋಳ್ ನೇತೃತ್ವದಲ್ಲಿ ಜಲಾಲಿಯ್ನಾ ರಾತೀಬ್, ಡಿ. 26ರಂದು ಭಂಡಾರದ ಹರಕೆ ಪ್ರಾರಂಭ ಹಾಗೂ ಬುರ್ದಾ ಮಜ್ಲಿಸ್, ಸಯ್ಯಿದ್ ಮುಖಾ¤ರ್ ತಂšಳ್ ಕುಂಬೋಳ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಡಿ. 27ರಂದು ಬೆಳಗ್ಗೆ 8ರಿಂದ ಊರ ಪರವೂರವರ ಕೂಡುವಿಕೆಯಿಂದ ಮಾಲಿದಾ ಹರಕೆ ಆರಂಭವಾಗಲಿದೆ. ಮಗ್ರಿಬ್ ನಮಾಝ್ ಬಳಿಕ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಅವರಿಂದ ಧಾರ್ಮಿಕ ಪ್ರವಚನ, ಡಿ. 28ರಂದು ಬೆಳಗ್ಗೆ 9ಕ್ಕೆ ಮಾಲಿದಾ ವಿತರಣೆ, ಸಾಮೂಹಿಕ ಪ್ರಾರ್ಥನೆ ಹಾಗೂ ಮಗ್ರಿಬ್ ನಮಾಝಿನ ಬಳಿಕ ಆಶಿಕ್ ದಾರಿಮಿ ಆಲಪ್ಪುಝ ಅವರ ಧಾರ್ಮಿಕ ಪ್ರವಚನ ನಡೆಯಲಿದೆ. ಡಿ. 29ರಂದು ಹಗಲು ಸಾಮೂಹಿಕ ಪ್ರಾರ್ಥನೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ ಕಂದೂರಿ ಊಟ ವಿತರಣೆಯಾಗಲಿದೆ ಎಂದು ವಿವರಿಸಿದರು.
5 ದಿನಗಳಲ್ಲಿ ಖ್ಯಾತ ಸಾದಾತುಗಳು ಹಾಗೂ ಧಾರ್ಮಿಕ ವಿದ್ವಾಂಸರಿಂದ ಝಿಯಾರತ್, ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಉರೂಸ್‌ನಲ್ಲಿ ಫ್ಯಾನ್ಸಿ ಟಾಯ್ಸಗಳ ವ್ಯಾಪಾರ, ಮನೋರಂಜನಾ ಕಾರ್ಯಕ್ರಮ ನಿಷೇಧಿಸಲಾಗಿದೆ ಎಂದು ಜಮಾಅತ್ ಅಧ್ಯಕ್ಷ ಹಾಗೂ ಕಮಿಟಿ ಸದಸ್ಯ ಹಾಜಿ ಪಿ.ಬಿ. ಅಬ್ದುಲ್ ಹಮೀದ್ ತಿಳಿಸಿದರು.
ಮಸೀದಿಯ ಧರ್ಮಗುರು ಪಿ.ಎಸ್. ತ್ವಾಹಾ ಸಅದಿ, ಇಬ್ರಾಹಿಂ ಜಿ. ಅಜಿಲಮೊಗರು, ಆದಂ ಕುಂಞಿ ನಡುಮೊಗರು ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.