Boult Z60: ಬಜೆಟ್ ಸ್ನೇಹಿ ಇಯರ್ ಬಡ್
Team Udayavani, Dec 22, 2023, 9:21 PM IST
ಬೌಲ್ಟ್ ಆಡಿಯೊ ಇತ್ತೀಚೆಗೆ ತನ್ನ TWS (ಟ್ರೂ ವೈರ್ಲೆಸ್ ಸ್ಟಿರಿಯೊ) ವರ್ಗಕ್ಕೆ ಇನ್ನೊಂದು ಹೊಸ ಮಾದರಿಯನ್ನು ಸೇರಿಸಿದೆ. ಅದುವೇ Boult Z60 TWS ಇಯರ್ಬಡ್ಸ್. ಇದೊಂದು ಬಜೆಟ್ ಸ್ನೇಹಿ ಇಯರ್ಬಡ್ ಆಗಿದೆ. ಇದರ ದರ ಅಮೆಜಾನ್.ಇನ್ ನಲ್ಲಿ 1399 ರೂ. ಇದೆ. ನೀಲಿ, ಕಪ್ಪು, ಹಸಿರು ಬಣ್ಣದಲ್ಲಿ ದೊರಕುತ್ತದೆ.
ವಿನ್ಯಾಸ: Boult Z60 ಕೇಸ್ ನೊಳಗೆ ಲಂಬವಾಗಿ ಇಟ್ಟು ಚಾರ್ಜ್ ಆಗುವಂತೆ ಕೇಸ್ ವಿನ್ಯಾಸವಿದೆ. ಕೇಸ್ಗೆ ಸಿ ಟೈಪ್ ಕೇಬಲ್ ಮೂಲಕ ಚಾರ್ಜ್ ಮಾಡಬಹುದಾಗಿದೆ. ಬಡ್ ನ ವಿನ್ಯಾಸ ಸ್ಟ್ಯಾಂಡರ್ಡ್ ಆಗಿದೆ. ಇದು ಸಾಕಷ್ಟು ಹಗುರವಾಗಿದ್ದು, ಸ್ಟಿಕ್ ಮೇಲೆ ಬೌಲ್ಟ್ ನ ಹೆಸರ ಬಿಳಿಯ ಬಣ್ಣದಲ್ಲಿ ಕಾಣುವಂತೆ ಅಚ್ಚಿಸಲಾಗಿದೆ. ಕಿವಿಗೆ ಹೊಂದುವ ಮೂರು ಅಳತೆಯ ಟಿಪ್ಗಳನ್ನು ನೀಡಲಾಗಿದೆ. ಸಾಮಾನ್ಯವಾಗಿ ಮೀಡಿಯಂ ಸೈಜ್ ಟಿಪ್ ಬಹುತೇಕರಿಗೆ ಹೊಂದುತ್ತದೆ. ಸ್ಟಿಕ್ ನಲ್ಲಿ ಪ್ಲೇ, ಪಾಸ್, ಮುಂದಿನ ಹಾಡು, ಧ್ವಿನಿ ಹೆಚ್ಚು ಕಡಿಮೆ ಮಾಡುವ, ಗೂಗಲ್ ಸಿರಿ ಸಹಾಯಕ, ಕರೆ ಸ್ವೀಕರಿಸುವ ಆಯ್ಕೆಗಳನ್ನು ಟ್ಯಾಪ್ ಮಾಡುವ ಮೂಲಕ ಮಾಡಿಕೊಳ್ಳಬಹುದು.
ಧ್ವನಿ ಗುಣಮಟ್ಟ: ಈ ಇಯರ್‌ಬಡ್‌ಗಳು ಕಿವಿ ಕಾಲುವೆಯಲ್ಲಿ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಇದು ಆಡಿಯೊ ಅನುಭವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 13mm ಡ್ರೈವರ್ ಮತ್ತು BoomX ತಂತ್ರಜ್ಞಾನವನ್ನು ಹೊಂದಿದೆ. Z60 ತೃಪ್ತಿಕರ ಧ್ವನಿ ಗುಣಮಟ್ಟವನ್ನು ನೀಡುತ್ತದೆ. ಈ ದರದಲ್ಲಿ ಇದರ boss ನ ಗುಣಮಟ್ಟ ಚೆನ್ನಾಗಿದೆ.
ಸಂಪರ್ಕ: ಈ ಇಯರ್‌ಬಡ್‌ಗಳು ಇತ್ತೀಚಿನ ಬ್ಲೂಟೂತ್ 5.3 ಸ್ಟ್ಯಾಂಡರ್ಡ್ ಹೊಂದಿವೆ. ಇದು ಫೋನ್ನೊಂದಿಗೆ ಸ್ಥಿರವಾದ ಸತತವಾದ ಸಂಪರ್ಕ ಹೊಂದಲು ಸಹಾಯಕ. ಕೇಸ್ ಅನ್ನು ತೆರೆದು ಫೋನ್ ಬ್ಲೂಟೂತ್ ಆನ್ ಮಾಡಿದರೆ ಸಾಕು ಬೌಲ್ಟ್ ಜಡ್ 60 ಇಯರ್ಬಡ್ ಹೆಸರು ತೋರಿಸುತ್ತದೆ. ಬಹಳ ಬೇಗ ಸಂಪರ್ಕಗೊಳ್ಳುತ್ತದೆ. ಸಂಪರ್ಕಿಸಲು ಇನ್ನಾವುದೇ ಬಟನ್ ಒತ್ತಿ ಪೇರ್ ಮಾಡಬೇಕಾಗಿಲ್ಲ.
ಕರೆ ಗುಣಮಟ್ಟ: TWS ಇಯರ್‌ಬಡ್‌ಗಳಿಗೆ ಉತ್ತಮ ಕರೆ ಗುಣಮಟ್ಟ ಮತ್ತು ಮೈಕ್ರೊಫೋನ್ ಕಾರ್ಯಕ್ಷಮತೆ ಅತ್ಯಗತ್ಯ. Boult Z60 ಈ ವಿಭಾಗದಲ್ಲಿ ಪರವಾಗಿಲ್ಲ. ಇದು ನಾಲ್ಕು ಮೈಕ್ಗಳನ್ನು ಹೊಂದಿದೆ. ಇದರಲ್ಲಿ ವಾತಾವರಣದ ಗೌಜು ಶಬ್ದ ಕೇಳಿಸದಂಥ ಸೌಲಭ್ಯ ನೀಡಲಾಗಿದೆ. ಇನ್ನೂ ಹೆಚ್ಚಿನ ನಾಯ್ಸ್ ಕ್ಯಾನ್ಸಲೇಷನ್ ಬೇಕಾದರೆ ಆರು ಮೈಕ್ ಗಳಿರುವ ಇಯರ್ ಬಡ್ ಅಗತ್ಯ. ಆದರೆ ಈ ಬಜೆಟ್ ದರಕ್ಕೆ ನಾಲ್ಕು ಮೈಕ್ ಸೌಲಭ್ಯ ನೀಡಲಷ್ಟೇ ಸಾಧ್ಯ. ಒಳಾಂಗಣದಲ್ಲಿ ಮಾತನಾಡಲು, ಆನ್ಲೈನ್ ಮೀಟಿಂಗ್ ನಲ್ಲಿ ಮಾತನಾಡಲು ಈ ಮೈಕ್ ಸಾಕು. 50 ಮಿಲಿಸೆಕೆಂಡ್ Low Latency Gaming Mode ಹೊಂದಿದ್ದು ಗೇಮಿಂಗ್ ಗೂ ಕೂಡ ಬಳಸಬಹುದಾಗಿದೆ.
ಬ್ಯಾಟರಿ: ಇದರ ಕೇಸ್ ಗೆ ಸಂಪೂರ್ಣ ಚಾರ್ಜ್ ಮಾಡಲು 90 ನಿಮಿಷ ತೆಗೆದುಕೊಳ್ಳುತ್ತದೆ. ಒಮ್ಮೆ ಕೇಸ್ ಚಾರ್ಜ್ ಮಾಡಿದರೆ ಒಟ್ಟು 60 ಗಂಟೆಗಳ ಕಾಲ ಬ್ಯಾಟರಿ ಬರುತ್ತದೆ. 10 ನಿಮಿಷ ಚಾರ್ಜ್ ಮಾಡಿದರೆ 150 ನಿಮಿಷಗಳ ಕಾಲ ಹಾಡು ಕೇಳಬಹುದಾಗಿದೆ.
ಒಂದೂವರೆ ಸಾವಿರ ರೂ.ಗಳ ಒಳಗೆ ಇಯರ್ ಬಡ್ ತೆಗೆದುಕೊಳ್ಳಬೇಕೆಂದುಕೊಂಡಿರುವವರು ಇದನ್ನು ಸಹ ಪರಿಗಣಿಸಬಹುದು.
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.