ಇಂದು ರಾಷ್ಟ್ರೀಯ ರೈತ ದಿನ- ಕೃಷಿಯನುದ್ಯೋಗಿಸುವ ಜನವನು ಪಾಲಿಸೋಣ

Team Udayavani, Dec 23, 2023, 1:32 AM IST

paddy farmers

ಅಂದಿನ ಕೃಷಿ: ಕುಮಾರವ್ಯಾಸ ಭಾರತದ ಸಭಾಪರ್ವದಲ್ಲಿ ಕೃಷಿ ಕುರಿತು ಭಾಮಿನಿಯೊಂದಿದೆ. ಅದರ ಒಂದು ಸಾಲು ಕೃಷಿ ಮೊದಲು ದೇಶಕ್ಕೆ. ನಮ್ಮ ದೇಶವೂ ಕೃಷಿ ಪ್ರಧಾನ. ಕೃಷಿಯೇ ಇಲ್ಲಿ ಬದುಕಿನ ಜೀವಾಳ. ದೇಶದಲ್ಲಿ ಒಂದು ಕಾಲದಲ್ಲಿ ಕೃಷಿಗೆ ಎಷ್ಟು ಗೌರವ ಎಂದರೆ ವೇತನ ಪಡೆಯುವ ಉದ್ಯೋಗಗಳಿಂದ ಹೊರಬಂದು ಕೃಷಿಯನ್ನೇ ಕೈಗೆತ್ತಿಕೊಳ್ಳುತ್ತಿದ್ದರು. ಇದರ ಹಿಂದಿರುವುದು ಸ್ವಾಭಿಮಾನ ಹಾಗೂ ಸ್ವತಂತ್ರ ಬದುಕಿನ ಹಂಬಲ. ನಮ್ಮ ಬಾಲ್ಯದ ದಿನಗಳಲ್ಲಿ ಕಂಡ ಕೃಷಿಯ ಖುಷಿ ಇಂದು ನೆನಪು ಮಾತ್ರ. ಅವಿಭಕ್ತ ಕುಟುಂಬ. ಮನೆಯವರೆಲ್ಲರ ಕಾಯಕ ಕೃಷಿ.

ಜಾನುವಾರುಗಳೇ ಉಳುಮೆ, ಹಾಲು ಹಾಗೂ ಕೃಷಿಗೆ ಅಗತ್ಯವಾದ ಗೊಬ್ಬ ರಕ್ಕೆ ಆಧಾರ. ಯಂತ್ರಗಳಿಲ್ಲದ ಕಾಲ. ಸಾವಯವ ಕೃಷಿಗೆ ಆದ್ಯತೆ. ಮರದ ನೇಗಿಲು, ನೊಗಗಳೇ ಕೃಷಿಕನ ಉಳು ಮೆಯ ಆಯುಧ. ಮಳೆಗಾಲದ ತುಸು ಬಿರುಸಿನ ಮಳೆಯ ನಡುವೆಯೂ ಉತ್ಸಾಹದ ನಾಟಿಕಾರ್ಯ. ಮನೆಮಂದಿಯೆಲ್ಲ ಗದ್ದೆಯ ನಾಟಿಕಾಯಕದಲ್ಲಿ. ಮನೆಯ ಕಣದಲ್ಲಿ ಬೆಳೆದ ಭತ್ತವನ್ನು ಒಡಲೊಳು ಹೊತ್ತು ನಿಂತ ತಿರಿ. ಭತ್ತದೊಂದಿಗೆ ಸಾವಯವ ಆಧಾರಿತ ತರಕಾರಿಗಳ ಬೆಳೆ. ಮನೆಗೆ ಸಾಕಾಗಿ ಮಾರುವ ಮಟ್ಟದಲ್ಲಿ ಹುಲುಸಾದ ಬೆಳೆ. ಅಂದಿನ ಅವಿಭಕ್ತ ಕೃಷಿಕುಟುಂಬದ ಮೊದಲ ನಿರೀಕ್ಷೆ ಬದುಕಿಗೆ ಅಗತ್ಯವಾದಷ್ಟು ಆಹಾರ ಉತ್ಪಾದನೆ. ಬೆಳೆದ ಕೃಷಿ ಉತ್ಪನ್ನಗಳಿಂದ ರುಚಿಯಾದ ಹಾಗೂ ಸತ್ವ ಭರಿತವಾದ ಊಟ. ಮಾನಸಿಕವಾಗಿ ಯೂ ಆರೋಗ್ಯಪೂರ್ಣ ಪರಿಸರ. ಹಿರಿಯ ರಿಗೆ ಮನ್ನಣೆ.

ಇಂದಿನ ಸ್ಥಿತಿ: ಇಂದಿನ ಕೃಷಿ ಪರಿಸರ ಬದಲಾಗಿದೆ. ಕೃಷಿ ಕ್ಷೇತ್ರಕ್ಕೆ ಕಾಲಿಡಲೂ ಹಿಂಜರಿಕೆ. ಕೃಷಿಯನ್ನು ಕೈಹಿಡಿವ ವಿದ್ಯಾವಂತ ಯುವಕೃಷಿಕರಿಗೆ ಕನ್ಯೆ ಕೈಹಿಡಿವಳ್ಳೋ ಇಲ್ಲವೋ? ಎಂಬ ಸಂದೇಹ. ಹಿಂದೆ ಇದ್ದ ಅವಿಭಕ್ತ ಕುಟುಂಬಗಳು ಇಂದು ವಿಭಕ್ತ ಕುಟುಂಬಗಳಾಗಿವೆ. ಕೃಷಿಕುಟುಂಬದ ವಿದ್ಯಾವಂ ತರು ಹಳ್ಳಿಯ ಜೀವನವನ್ನು ತೊರೆಯಲು ಮುಂದಾಗು ತ್ತಿದ್ಧಾರೆ. ವೇತನ ಎಷ್ಟೇ ಸಿಗಲಿ, ನಗರದಲ್ಲಿ ಬದುಕು ಬೇಕೆಂಬ ಬಯಕೆ. ಹಾಗಾಗಿ ಹಳ್ಳಿಗಳಲ್ಲಿ ಕೃಷಿಕುಟುಂ ಬಗಳು ಖಾಲಿಯಾಗುತ್ತಿವೆ. ಈ ಸಮಸ್ಯೆಗಳ ನಡುವೆ ಯೂ ಕೃಷಿಯನ್ನು ಕೈ ಬಿಡದ ಕೆಲವು ಮಂದಿ ನಮ್ಮ ನಡುವೆ ಇದ್ಧಾರೆ. ಹಳೆಯ ಪದ್ಧತಿಯ ಜಾಗದಲ್ಲಿ ಹೊಸ ಪದ್ಧತಿ ಕೃಷಿಕ್ಷೇತ್ರವನ್ನು ಆವರಿಸಿದೆ. ರಾಸಾಯನಿಕ ಗೊಬ್ಬರಗಳ ಬೇಡಿಕೆ ಹೆಚ್ಚುತ್ತಿದೆ. ಕಾರ್ಮಿಕರ ಕೊರತೆಯ ಕೂಗಿಗೆ ಯಂತ್ರಗಳು ಕೊಂಚ ಪರಿಹಾರ ಒದಗಿಸಿವೆ. ಆದರೂ ಹೊಸ ವಿಧಾನದಿಂದ ಕೃಷಿ ಭೂಮಿಯ ಮಣ್ಣಿನ ಸತ್ವ ವರ್ಷದಿಂದ ವರ್ಷಕ್ಕೆ ಕುಸಿಯಬಹುದೆಂಬ ಆತಂಕ ಕಾಡುತ್ತಿದೆ. ಲಾಭದಾಯಕವಾದ ವಾಣಿಜ್ಯ ಬೆಳೆಗಳಿಂದಾಗಿ ಆಹಾರಕ್ಕೆ ಅಗತ್ಯವಾದ ಭತ್ತದ ಬೆಳೆ ಬತ್ತಲಾರಂಭಿಸಿದೆ. ಕೃಷಿಯೋಗ್ಯ ಭೂಮಿಯಲ್ಲಿ ಗಗನ ಚುಂಬಿ ಕಟ್ಟಡಗಳ ನಿರ್ಮಾಣ ಮುಂದುವರಿ ದರೆ ಕೃಷಿಗೆ ಮತ್ತಷ್ಟು ಹೊಡೆತ. ಕೃಷಿಭೂಮಿ ಯನ್ನು ಹಡಿಲು ಭೂಮಿಯನ್ನಾಗಿರಿಸಿದರೆ ಅದೂ ಇಳುವರಿಗೆ ಆತಂಕ.

ಮುಂದಿನ ದಿನ: ಕೃಷಿ ಉಳಿಯಲು ಮೊದಲು ಆಗಬೇಕಾದ ಕೆಲಸ ಕೃಷಿ ಕ್ಷೇತ್ರವನ್ನು ಆಕರ್ಷಕವನ್ನಾ ಗಿರಿಸಲು ಯೋಜನೆಗಳನ್ನು ರೂಪಿಸುವುದು. ವಿದ್ಯಾ ವಂತ ಯುವಕರು ನಗರದತ್ತ ವಲಸೆ ಹೋಗುವುದನ್ನು ತಡೆದು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹದ ವಾತಾವರಣದ ನಿರ್ಮಾಣ. ಕೃಷಿಕ್ಷೇತ್ರದ ಸಮಸ್ಯೆಗಳಿಗೆ ಶೀಘ್ರ ಸ್ಪಂದನ. ಕೃಷಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕ್ರಮ ಗಳು. ಕೃಷಿಯಲ್ಲಿ ಅಗತ್ಯವಾದ ಯಂತ್ರಗಳ ಪ್ರಯೋಗ ಹಾಗೂ ಈ ಕುರಿತು ಅಗತ್ಯ ಮಾಹಿತಿ. ಕೃಷಿಯನ್ನು ಲಾಭದಾಯಕವನ್ನಾಗಿ ರೂಪಿಸಲು ಅಗತ್ಯವಾದ ಸಲಹೆ ಹಾಗೂ ಮಾರ್ಗದರ್ಶನ. ಭಾರತದ ಪ್ರಧಾನಿಯಾಗಿದ್ದ ಚರಣ್‌ಸಿಂಗ್‌ ಅವರ ಜನ್ಮದಿನವಾದ ಡಿ.23ರಂದು ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. ಕುಮಾರವ್ಯಾಸನ ಸಲಹೆಯಂತೆ ಕೃಷಿಯಂ ಪಸರಿಸುವುದರೊಂದಿಗೆ ಆ ಕೃಷಿಯನುದ್ಯೋಗಿಸುವ ಜನವನು ಪಾಲಿಸೋಣ.

ಡಾ| ಶ್ರೀಕಾಂತ್‌ , ಸಿದ್ದಾಪುರ

ಟಾಪ್ ನ್ಯೂಸ್

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್‌ ಷೇರು ಮೌಲ್ಯ ಏರಿಕೆ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.