Bangalore-Mysore Express: ಸರಣಿ ರಜೆ: ಎಕ್ಸ್‌ಪ್ರೆಸ್‌ ವೇನಲ್ಲಿ ಟ್ರಾಫಿಕ್‌ ಜಾಮ್‌


Team Udayavani, Dec 24, 2023, 3:32 PM IST

Bangalore-Mysore Express: ಸರಣಿ ರಜೆ: ಎಕ್ಸ್‌ಪ್ರೆಸ್‌ ವೇನಲ್ಲಿ ಟ್ರಾಫಿಕ್‌ ಜಾಮ್‌

ರಾಮನಗರ: ಸರಣಿ ರಜೆ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳ ರಸ್ತೆಗಿಳಿದ ಪರಿಣಾಮ ಬೆಂಗಳೂರು-ಮೈಸೂರು ಎಕ್ಸ್‌ ಪ್ರಸ್‌ ಹೈವೆ ಕಣ್ಮಿಣಕಿ ಗ್ರಾಮದ ಬಳಿ ಇರುವ ಟೋಲ್‌ನಲ್ಲಿ ಉಂಟಾದ ಟ್ರಾಫಿಕ್‌ ಜಾಮ್‌ ನಿಂದ ರಜೆಮೂಡ್‌ನ‌ಲ್ಲಿ ಪ್ರವಾಸಕ್ಕೆ ಹೊರಟಿದ್ದ ಬೆಂಗಳೂರು ನಿವಾಸಿಗಳು ಟೋಲ್‌ಬಳಿ ತಾಸುಗಟ್ಟಲೆ ಕಾಯ್ದು ನಿಲ್ಲುವಂತಾಯಿತು.

ಇಂದಿನಿಂದ ಮೂರು ದಿನಗಳ ಕಾಲ ಸರಣಿ ರಜೆ ಇರುವ ಕಾರಣ ರಾಜಧಾನಿಯ ನಿವಾಸಿಗಳು ಪ್ರವಾಸ ಹಾಗೂ ತಮ್ಮ ಸ್ವಂತ ಊರಿನತ್ತ ಪ್ರಯಾಣ ಬೆಳೆಸುವುದು ಸಾಮಾನ್ಯ. ಶನಿವಾರ ವೈಕುಂಠ ಏಕಾದಶಿ, ಭಾನುವಾರ ಹನುಮಜಯಂತಿ ಹಾಗೂ ಸೋಮವಾರ ಕ್ರಿಸ್‌ಮಸ್‌ ಹಬ್ಬ ಇರುವುದು ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಯಿತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಮೈಸೂರಿನತ್ತ ಪ್ರಯಾಣ ಬೆಳೆಸಿದ್ದರಿಂದ ಟೋಲ್‌ ಪ್ಲಾಜಾ ಬಳಿ ಸಂಚಾರ ದಟ್ಟಣೆ ಕಂಡು ಬಂದಿತು.

3ಕಿ.ಮೀ.ಗೂ ಹೆಚ್ಚು ಜಾಮ್‌: ಬೆಂಗಳೂರುರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವ ವಾಹನಗಳು ಕುಂಬಳಗೂಡಿನಿಂದ ತುಸು ಮುಂದೆ ಇರುವ ಕಣ್ಮಿಣಕಿ ಟೋಲ್‌ಪ್ಲಾಜಾದ ಬಳಿ ಪರದಾಡು ವಂತಾಯಿತು. ಸುಮಾರು 3 ಕಿ.ಮೀ.ಗೂ ಹೆಚ್ಚು ಉದ್ದದ ವಾಹನಗಳ ಸಾಲು ಟೋಲ್‌ಪ್ಲಾಜಾ ಬಳಿ ಕಂಡು ಬಂದಿತು. ಬೆಂಗಳೂರಿನಿಂದ ಕುಂಬಳ ಗೂಡು ಎಲಿವೇಟೆಡ್‌ ರಸ್ತೆ ಮೂಲಕ ಬಂದ ಪ್ರಯಾಣಿಕರು ಅತ್ತ ಸರ್ವಿಸ್‌ ರಸ್ತೆಗೆ ಸಂಪರ್ಕ ಪಡೆಯ ಲಾಗದೆ ಟೋಲ್‌ಭೂತ್‌ ಮುಂದೆ ತಾಸುಗಟ್ಟಲೆ ಕಾಯುವಂತಾಪರಿಸ್ಥಿತಿ ನಿರ್ಮಾಣಗೊಂಡಿತ್ತು. ಟೋಲ್‌ ದಾಟಲು ಪ್ರಯಾಣಿಕರು ಹೆಣಗಾಡುತ್ತಿದ್ದು ಕಂಡು ಬಂದಿತು. ಇನ್ನು ಎಕ್ಸ್‌ಪ್ರೆಸ್‌ ವೇ ನಿರ್ಮಾಣ ವಾದರೂ ಈ ಪರದಾಟ ತಪ್ಪಿದ್ದಲ್ಲ ಎಂದು ಪ್ರಯಾಣಿಕರು ಟೋಲ್‌ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದರು. ಸರ್ವಿಸ್‌ ರಸ್ತೆಯಲ್ಲೂ ವಾಹನ ಜಂಗುಳಿ ಇತ್ತಾದರೂ ಎಕ್ಸ್‌ಪ್ರೆಸ್‌ ವೇ ಗಿಂತ ಸರ್ವಿಸ್‌ ರಸ್ತೆಯೇ ಪರವಾಗಿಲ್ಲ ಎಂಬ ವಾತಾವರಣ ನಿರ್ಮಾಣವಾಗಿತು.

ಹೈವೇನಲ್ಲಿ ಹೈ ಅಲರ್ಟ್‌: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ವಾಹನ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ಅಪಘಾತ ಮತ್ತು ಅಪರಾಧ ಪ್ರಕರಣ ಗಳು ಸಂಭವಿಸದಂತೆ ಎಚ್ಚರವಹಿಸಿರುವ ಜಿಲ್ಲಾ ಪೊಲೀಸ್‌, ಎಕ್ಸ್‌ ಪ್ರಸ್‌ ವೇನಲ್ಲಿ ತೀವ್ರ ನಿಗಾವಹಿಸಿದೆ. ಇದಕ್ಕಾಗಿ ಎಕ್ಸ್‌ಪ್ರೆಸ್‌ ವೇನಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸಿದ್ದು, ಪ್ರಯಾಣಿಕರು ಸಂಚಾರ ನಿಯಮ ಉಲ್ಲಂಘಿಸದಂತೆ ಹಾಗೂ ಯಾವುದೇ ಅನಾಹುತಕಾರಿ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ.

ಸೋಮವಾರವೂ ಜಾಮ್‌ : ಆಗುವ ಸಾಧ್ಯತೆ ಸೋಮವಾರ ಸರಣಿ ರಜೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಸ್ಸಾಗುವವರ ಸಂಖ್ಯೆ ಹೆಚ್ಚಿರುವ ಕಾರಣ, ಅಂದು ಸಂಜೆ ಸಹ ಬಿಡದಿಯ ಶೇಷಗಿರಿ ಹಳ್ಳಿ ಟೋಲ್‌ಪ್ಲಾಜಾ ಬಳಿ ಟ್ರಾಫಿಕ್‌ ಜಾಮ್‌ ಆಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಎನ್‌ಎಚ್‌ಎಐ ಅಧಿಕಾರಿಗಳು ಇಂದೇ ಎಚ್ಚೆತ್ತುಕೊಂಡು ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ರಸ್ತೆಗಿಳಿದ 70 ಸಾವಿರಕ್ಕೂ ಹೆಚ್ಚು ವಾಹನ: ಸರಣಿ ರಜೆಯ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಟೋಲ್‌ ಪ್ಲಾಜಾಬಳಿ ಸಾವಿರಾರು ವಾಹನಗಳು ಸಾಲು ಗಟ್ಟಿ ನಿಲ್ಲುವಂತಾಗಿತ್ತು. ಟೋಲ್‌ ಪ್ಲಾಜಾ ಸಿಬ್ಬಂದಿಯ ಮಾಹಿತಿಯ ಪ್ರಕಾರ ಶುಕ್ರವಾರ ಸಂಜೆಯಿಂದಲೇ ವಾಹನಗಳ ಸಂಚಾರ ಹೆಚ್ಚಿದ್ದು, ಶನಿವಾರ ಸಂಜೆಯ ಸುಮಾರಿಗೆ 53 ಸಾವಿರದಷ್ಟು ವಾಹನಗಳ ಟೋಲ್‌ ಪ್ಲಾಜಾ ಹಾಯ್ದು ಹೋಗಿವೆ. ಇನ್ನು ಸರ್ವಿಸ್‌ ರಸ್ತೆಯಲ್ಲಿ 15 ರಿಂದ 20 ಸಾವಿರ ದಷ್ಟು ವಾಹನ ಗಳು ಹೋಗಿದ್ದು, ಎಕ್ಸ್‌ಪ್ರೆಸ್‌ ವೇನಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆ ಯವರೆಗೆ 70 ಸಾವಿರಕ್ಕೂ ಹೆಚ್ಚು ವಾಹನ ಸಂಚರಿಸಿವೆ.

ಬೆಂಗಳೂರು -ಮೈಸೂರು ಎಕ್ಸ್‌ ಪ್ರಸ್‌ ವೇನಲ್ಲಿ ಸರಾಸರಿ 35 ಸಾವಿರ ವಾಹನ ಪ್ರತಿದಿನ ಸಂಚರಿಸುತ್ತವೆ ಎಂದು ಅಂದಾಜು ಮಾಡಿದ್ದು, ವಾರಾಂತ್ಯದ ದಿನಗಳಲ್ಲಿ ಈ ಸಂಖ್ಯೆ 50 ಸಾವಿರದ ಆಸುಪಾಸಿದೆ. ಸರಣಿ ರಜೆ ಹಿನ್ನೆಲೆಯಲ್ಲಿ ಸಾಮಾನ್ಯ ದಿನಗಳಿಗಿಂತ ವಾಹನಗಳ ಸಂಚಾರ ಪ್ರಮಾಣ ದುಪಟ್ಟಿದೆ.

ಫಾಸ್ಟ್‌ ಟ್ಯಾಗ್‌ ಕಿರಿಕಿರಿಯೇ ಕಾರಣ:  ಟೋಲ್‌ಪ್ಲಾಜಾ ಬಳಿ ಸಂಚಾರ ಸಮಸ್ಯೆ ಎದುರಾಗಿದ್ದಕ್ಕೆ ಸಂಚಾರ ಫಾಸ್ಟ್‌ಟ್ಯಾಗ್‌ ಗೊಂದಲ ಪ್ರಮುಖ ಕಾರಣವಾಗಿತ್ತು. ಕೆಲ ವಾಹನಗಳು ಫಾಸ್ಟ್‌ ಟ್ಯಾಗ್‌ಇಲ್ಲದೆ ಟೋಲ್‌ ದಾಟಲು ಮುಂದಾದ ಪರಿಣಾಮ ಇವ ರಿಂದ ಟೋಲ್‌ ಶುಲ್ಕ ಸಂಗ್ರಹಿಸಿ ರಶೀದಿ ನೀಡುವುದಕ್ಕೆ ಸಾಕಷ್ಟು ಸಮಯವಾಗುತ್ತಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ವಿಳಂಬವಾಯಿತು. ಇದರೊಂದಿಗೆ ಕೆಲ ವಾಹನಗಳ ಫಾಸ್ಟ್‌ಟ್ಯಾಗ್‌ ಖಾತೆಯಲ್ಲಿ ಹಣ ಖಾಲಿಯಾಗಿದ್ದು, ಒಂದರ ಹಿಂದೆ ಒಂದು ವಾಹನ ಚಲಿಸುತ್ತಿದ್ದ ಕಾರಣ ಫಾಸ್ಟ್‌ಟ್ಯಾಗ್‌ ಸ್ಕ್ಯಾನ್‌ ಮಾಡುವಲ್ಲಿ ತಾಂತ್ರಿಕ ಅಡಚಣೆಗಳಿಂದಾಗಿ ಟೋಲ್‌ ಪ್ಲಾಜಾ ಪಾಸ್‌ ಮಾಡುವಷ್ಟರಲ್ಲಿ ಚಾಲಕರು ಹೈರಾಣಾಗಿ ಹೋದರು. ಟೋಲ್‌ ಸಿಬ್ಬಂದಿ ಸಹ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಸಾಕು ಬೇಕಾಗಿ ಹೋದರು.

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

10-ramanagara

Ramanagara: ಬೆಂ.-ಮೈ. ಎಕ್ಸ್‌ ಪ್ರೆಸ್‌ವೇ ಬಿಡದಿ ಎಕ್ಸಿಟ್‌ ಬಂದ್‌

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

3-bank

Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.