28 BJP ನಾಯಕರು ಡಾ.ಮೋಹನ್ ಯಾದವ್ ಸಂಪುಟಕ್ಕೆ ಸೇರ್ಪಡೆ
ತಂಡವು ಟೆಸ್ಟ್ ಆಟಗಾರರು ಮತ್ತು ಟಿ 20 ಆಟಗಾರರನ್ನು ಹೊಂದಿದೆ: ವಿಜಯವರ್ಗಿಯಾ
Team Udayavani, Dec 25, 2023, 5:26 PM IST
ಭೋಪಾಲ್ : ಮಧ್ಯಪ್ರದೇಶ ಸಚಿವ ಸಂಪುಟವನ್ನು ಸೋಮವಾರ (ಡಿ.25) ವಿಸ್ತರಣೆ ಮಾಡಲಾಗಿದ್ದು, ಒಟ್ಟು 28 ಬಿಜೆಪಿ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ನೇತೃತ್ವದಲ್ಲಿ ಮೊದಲ ಸಂಪುಟ ವಿಸ್ತರಣೆ ನಡೆದಿದ್ದು, ಹಿರಿಯ ಬಿಜೆಪಿ ನಾಯಕರಾದ ಪ್ರದ್ಯುಮನ್ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್, ಕೈಲಾಶ್ ವಿಜಯವರ್ಗಿಯಾ ಮತ್ತು ವಿಶ್ವಾಸ್ ಸಾರಂಗ್ ಸೇರಿದಂತೆ 18 ನಾಯಕರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 6 ನಾಯಕರು ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಮತ್ತು 4 ನಾಯಕರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದ್ದು ನಿರ್ಮಲಾ ಭೂರಿಯಾ ಅವರಿಗೆ ಕ್ಯಾಬಿನೆಟ್ ಮಂತ್ರಿ , ಪ್ರತಿಮಾ ಬಗ್ರಿ ಅವರಿಗೆ ರಾಜ್ಯಖಾತೆ ಸಚಿವೆಯನ್ನಾಗಿ ಮಾಡಲಾಗಿದೆ.
“ಎಲ್ಲಾ ಹೊಸ ಸಚಿವರನ್ನು ನಾನು ಅಭಿನಂದಿಸುತ್ತೇನೆ. ಹೊಸ ಕ್ಯಾಬಿನೆಟ್ ಹೊಸ ದಾಖಲೆಗಳನ್ನು ಮಾಡಲಿದೆ.” ಎಂದು ಸಿಎಂ ಮೋಹನ್ ಯಾದವ್ ಹೇಳಿದರು.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಸಚಿವ ಕೈಲಾಶ್ ವಿಜಯವರ್ಗಿಯಾ, “ಈ ತಂಡವು ಟೆಸ್ಟ್ ಆಟಗಾರರು ಮತ್ತು ಟಿ 20 ಆಟಗಾರರನ್ನು ಹೊಂದಿದೆ ಮತ್ತು ಆದ್ದರಿಂದ ಇದು ಅತ್ಯಂತ ಸಮತೋಲಿತ ತಂಡವಾಗಿದೆ” ಎಂದು ಹೇಳಿದ್ದಾರೆ.
ಈಗಾಗಲೇ ಯಾದವ್ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೊಂದಿದ್ದು, ರಾಜೇಂದ್ರ ಶುಕ್ಲಾ ಮತ್ತು ಜಗದೀಶ್ ದೇವ್ಡಾ ಅವರೊಂದಿಗೆ ಸಂಪುಟ ಸದಸ್ಯರ ಸಂಖ್ಯೆ 31ಕ್ಕೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.