Portable Hospital; ಆರೋಗ್ಯ ಸೇವಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ


Team Udayavani, Dec 26, 2023, 5:16 AM IST

1-cssadsad

ಪ್ರವಾಹ, ಭೂಕಂಪದಂತಹ ನೈಸರ್ಗಿಕ ವಿಕೋಪಗಳು, ಯುದ್ಧಗ್ರಸ್ತ ಪ್ರದೇಶ ಮತ್ತು ಆರೋಗ್ಯ ಸೇವೆಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗಾಯಗೊಂಡವರು ಹಾಗೂ ಅನಾರೋಗ್ಯಕ್ಕೆ ತುತ್ತಾಗುವ ನಾಗರಿಕರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಳ್ಳುವ ಘಟನೆಗಳು ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಗಾಯಾಳುಗಳು ಮತ್ತು ಅನಾರೋಗ್ಯ ಪೀಡಿತರಿಗೆ ತುರ್ತು ಆರೋಗ್ಯ ಸೇವೆ ದೊರಕದಿರುವುದೇ ಇದಕ್ಕೆ ಕಾರಣ. ಗೋಲ್ಡನ್‌ ಅವರ್‌ನಲ್ಲಿ ಚಿಕಿತ್ಸೆ ಲಭಿಸದೆ ಸಂಭವಿಸುವ ಸಾವುಗಳನ್ನು ತಪ್ಪಿಸಲು ಮತ್ತು ಗಾಯಾಳುಗಳಿಗೆ ಕ್ಲಪ್ತ ಸಮಯಕ್ಕೆ ಸ್ಥಳದಲ್ಲೇ ಅಥವಾ ಹತ್ತಿರದಲ್ಲೇ ಪರಿಪೂರ್ಣ ಆರೋಗ್ಯ ಸೇವೆಯನ್ನು ಒದಗಿಸಲು ಜೀವ ರಕ್ಷಕ ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌ ಪೋರ್ಟೇಬಲ್‌ ಆಸ್ಪತ್ರೆಯನ್ನು ರೂಪಿಸಲಾಗಿದ್ದು, ಇದು ಆರೋಗ್ಯ ಕ್ಷೇತ್ರದ ಭರವಸೆಯ ಬೆಳಕಾಗಿ ಕಾಣಿಸಿಕೊಂಡಿದೆ. ಏನಿದು ಯೋಜನೆ ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ? ಎನ್ನುವುದರ ಸಮಗ್ರ ಮಾಹಿತಿ ಇಲ್ಲಿದೆ.

ಏನಿದು ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌ ?
ಯಾವುದೇ ಸ್ಥಳಕ್ಕೂ ಸಾಗಾಟ ಮಾಡಬಹುದಾದ ಹಾಗೂ ಒಂದು ಗಂಟೆಯ ಅವಧಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಬಹುದಾದ ಸುಸಜ್ಜಿತವಾದ ಪೋರ್ಟೇಬಲ್‌ (ಜೋಡಿಸ ಬಹುದಾದ) ಆಸ್ಪತ್ರೆ. ಇದಕ್ಕೆ ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌ ಎಂದು ಹೆಸರಿಡಲಾಗಿದೆ. ಈ ಪೋರ್ಟೇಬಲ್‌ ಆಸ್ಪತ್ರೆಗಳು ವೆಚ್ಚದಾಯಕವಾದರೂ ಜೀವನ್ಮರಣ ಸ್ಥಿತಿಯಲ್ಲಿರುವವರ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.

ಎಲ್ಲಿ ಆರಂಭ ?
ದೇಶದ ಮೊದಲ ಪೋರ್ಟೇಬಲ್‌ ಆಸ್ಪತ್ರೆಯನ್ನು ಇತ್ತೀಚೆಗೆ ಹರಿಯಾಣದ ಗುರುಗ್ರಾಮದಲ್ಲಿ ಆರಂಭಿಸಲಾಗಿದೆ. ಭಾರತ್‌ ಹೆಲ್ತ್‌ ಇನಿಶಿಯೇಟಿವ್‌ ಯೋಜನೆಯ ಸಹಯೋಗ್‌ ಹಿತಾ ಮತ್ತು ಮೈತ್ರಿ (BHISHM) ಯಡಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಇದು ವಿಶ್ವದ ಮೊದಲ ಪೋರ್ಟೇಬಲ್‌ ವಿಪತ್ತು ಆಸ್ಪತ್ರೆ ಎಂದು ಗುರುತಿಸಿ ಕೊಂಡಿದೆ. ಸರಿ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ 72 ಕ್ಯೂಬ್‌ ಬಾಕ್ಸ್‌ ಗಳನ್ನು ಈ ಪೋರ್ಟೇಬಲ್‌ ಆಸ್ಪತ್ರೆ ಒಳಗೊಂಡಿದೆ.

ಹೇಗಿರಲಿದೆ ಈ ಆಸ್ಪತ್ರೆ ?
ಒಂದು ಪೋರ್ಟೇಬಲ್‌ ಆಸ್ಪತ್ರೆಯಲ್ಲಿ 200 ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಈ ಆಸ್ಪತ್ರೆಯು ಟೆಂಟ್‌ಗಳ ರೂಪದಲ್ಲಿದ್ದು, ಅಗತ್ಯಕ್ಕೆ ಅನುಗುಣವಾಗಿ ರೂಪಿಸಲಾಗಿರುವ ವೈದ್ಯಕೀಯ ಉಪಕರಣಗಳನ್ನು ಹೊಂದಿದೆ. ಜತೆಗೆ ಸುಸಜ್ಜಿತವಾದ 72 ಸಣ್ಣ ಕ್ಯೂಬ್‌ಗಳನ್ನು ಒಳಗೊಂಡಿದೆ. ಇಲ್ಲಿರುವ ಪ್ರತಿಯೊಂದು ಕ್ಯೂಬ್‌ಗಳು 15 ಕೆ.ಜಿ.ಗಿಂತ ಕಡಿಮೆ ತೂಕ ಮತ್ತು ಪ್ರತಿಯೊಂದು ಬದಿಯೂ 38 ಸೆಂ.ಮೀ. ಅಳತೆ ಹೊಂದಿದೆ. ಕೇವಲ ಒಂದು ಗಂಟೆಯಲ್ಲಿ ಈ ಕ್ಯೂಬ್‌ಗಳನ್ನು ಸುಸಜ್ಜಿತ ಆಸ್ಪತ್ರೆಯ ರೂಪದಲ್ಲಿ ಜೋಡಿಸಬಹುದಾಗಿದ್ದು, ಇದಕ್ಕೆ ತರಬೇತಿ ಪಡೆದ ಕನಿಷ್ಠ ಐದು ಮಂದಿಯ ಅಗತ್ಯವಿದೆ. ಸಂಚಾರ ದುಸ್ತರವಾಗಿರುವ ಕಡಿದಾದ ಮತ್ತು ದುರ್ಗಮ ಸ್ಥಳ ಹಾಗೂ ಯುದ್ಧ ಪೀಡಿತ ಪ್ರದೇಶಗಳಲ್ಲಿ ಇದು ಬಹಳಷ್ಟು ಉಪಯುಕ್ತವಾಗಿದ್ದು, ವಿಮಾನದ ಮೂಲಕ ಯಾವುದೇ ಸ್ಥಳದಲ್ಲೂ ಈ ಪೋರ್ಟೇಬಲ್‌ ಆಸ್ಪತ್ರೆಯನ್ನು ಲ್ಯಾಂಡ್‌ ಮಾಡಬಹುದಾಗಿದೆ.

ಏನೆಲ್ಲ ಸೌಲಭ್ಯವಿದೆ ?
72 ಸಣ್ಣ ಕ್ಯೂಬ್‌ಗಳು, ವೆಂಟಿಲೇಟರ್‌ಗಳು, ಸೌರ ಫ‌ಲಕ ಆಧಾರಿತ ಜನರೇಟರ್‌ಗಳು, ಅಲ್ಟ್ರಾಸೌಂಡ್‌ ಯಂತ್ರಗಳು,
ಡಿಜಿಟಲ್‌ ಇಮೇಜಿಂಗ್‌, ರೇಡಿಯೋಗ್ರಾಫಿ ಯಂತ್ರಗಳು, ಡಿಫಿಬ್ರಿಲೇಟರ್‌ಗಳು, ಹೈ-ಮೌಂಟೆಡ್‌ ಒಟಿ ಲೈಟ್‌ಗಳು, ಸ್ಟ್ರೆಚರ್‌ಗಳು, ಆಧುನಿಕ ಶಸ್ತ್ರಚಿಕಿತ್ಸಕ ಸಾಧನಗಳು ಮತ್ತು ಪೋಟೇìಬಲ್‌ ಪ್ರಯೋಗಾಲಯದಂತಹ ವಿಭಿನ್ನ ಸಾಧನಗಳನ್ನು ಈ ಆಸ್ಪತ್ರೆಗಳು ಒಳಗೊಂಡಿವೆ. ಇವುಗಳಲ್ಲಿರುವ ಕಿಟ್‌ಗಳು ಜಲನಿರೋಧಕ ಮತ್ತು ತುಕ್ಕು ನಿರೋಧಕವಾಗಿವೆ. ಜತೆಗೆ ಶಸ್ತ್ರಚಿಕಿತ್ಸೆಯ ತುರ್ತು ಪರಿಸ್ಥಿತಿ ಎದುರಾದಾಗ ಈ ಕಿಟ್‌ಗಳ ಸಹಾಯದಿಂದ 10 ನಿಮಿಷ ಅವಧಿಯಲ್ಲಿ ಆಪರೇಶನ್‌ ಥಿಯೇಟರ್‌ ಅನ್ನು ಸಿದ್ಧಪಡಿಸಬಹುದಾಗಿದೆ. ಇದಕ್ಕೆ ಬೇಕಾಗಿರುವ ಅಗತ್ಯ ಸಾಧನ, ಸಲಕರಣೆಗಳ ಸಹಿತ ಎಲ್ಲ ವ್ಯವಸ್ಥೆಗಳನ್ನು ಇದರಲ್ಲಿ ಕಲ್ಪಿಸಲಾಗಿದೆ. ಆಸ್ಪತ್ರೆಯು 100 ಜನರಿಗೆ 48 ಗಂಟೆಗಳವರೆಗೆ ವೈದ್ಯಕೀಯ ಆರೈಕೆಯನ್ನು ಒದಗಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ.

ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌
ಪ್ರಾಕೃತಿಕ ವಿಕೋಪ, ಯುದ್ಧದ ಸಂದರ್ಭದಲ್ಲಿ ಸಂತ್ರಸ್ತರಿಗೆ ತುರ್ತು ಆರೋಗ್ಯ ಸೇವೆ
ಗೋಲ್ಡನ್‌ ಅವರ್‌ನಲ್ಲಿ ವಿಪತ್ತು ಪೀಡಿತರ ಜೀವ ರಕ್ಷಣೆಗೆ ಆದ್ಯತೆ
ಅವಶ್ಯವಿದ್ದಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಲೂ ಸಾಧ್ಯ
ವಿಪತ್ತು ಪೀಡಿತ ದುರ್ಗಮ ಪ್ರದೇಶಗಳಲ್ಲಿಯೇ ಸಂತ್ರಸ್ತರಿಗೆ ಸಿಗಲಿದೆ ವೈದ್ಯಕೀಯ ಚಿಕಿತ್ಸೆ

ಆರೋಗ್ಯ ಸೇವೆಯಲ್ಲಿ ಕ್ರಾಂತಿಕಾರಿ ಹೆಜ್ಜೆ
ಕೊರೊನಾ ಸಾಂಕ್ರಾಮಿಕದ ಬಳಿಕ ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರದತ್ತ ಹೆಚ್ಚಿನ ಲಕ್ಷ್ಯ ಹರಿಸಿದ್ದು ದೇಶದ ನಾಗರಿಕರೆಲ್ಲರಿಗೂ ಆರೋಗ್ಯ ಸೇವೆ ಲಭಿಸುವಂತಾಗಲು ಹೊಸ ಉಪಕ್ರಮ, ಯೋಜನೆ, ಆವಿಷ್ಕಾರಗಳನ್ನು ಜಾರಿಗೊಳಿಸುತ್ತಲೇ ಬಂದಿದೆ. ಅಷ್ಟು ಮಾತ್ರವಲ್ಲದೆ ಆರೋಗ್ಯ ಸೇವೆಯಲ್ಲಿ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಲೇ ಬಂದಿದ್ದು ಈ ದಿಸೆಯಲ್ಲಿ ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌ ಅತ್ಯಂತ ಮಹತ್ವದ ಮತ್ತು ಕ್ರಾಂತಿಕಾರಿ ಉಪಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಏಡ್‌ ಕ್ಯೂಬ್‌ಗಳನ್ನು ಹೊಂದಲು ಸರಕಾರ ಈಗಾಗಲೇ ಯೋಜನೆ ರೂಪಿಸಿದೆ. ದೇಶದ ಒಟ್ಟಾರೆ ಆರೋಗ್ಯ ಸೇವಾ ಕ್ಷೇತ್ರ ಸುಧಾರಣೆಯ ಹಾದಿಯಲ್ಲಿದ್ದು ಪೋಟೇìಬಲ್‌ ಆಸ್ಪತ್ರೆ ಸದ್ಯೋಭವಿಷ್ಯದಲ್ಲಿ ದೇಶದೆಲ್ಲೆಡೆ ವಿಪತ್ತುಗಳ ಸಂದರ್ಭದಲ್ಲಿ ಸಂಕಷ್ಟಪೀಡಿತರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಬಳಕೆಯಾಗಲಿದೆ.

ಎಲ್ಲೆಲ್ಲಿ ಬಳಕೆ ಸಾಧ್ಯ?
ಸಾಮಾನ್ಯವಾಗಿ ಯುದ್ಧ ಪೀಡಿತ ಪ್ರದೇಶ, ಭೂಕಂಪ, ಪ್ರವಾಹ, ಹಿಮಪಾತಗಳಂತಹ ನೈಸರ್ಗಿಕ ವಿಕೋಪಗಳಿಂದ ತೀವ್ರ ಹಾನಿಗೊಳಗಾದ ಮತ್ತು ಸಾರಿಗೆ ಸಂಪರ್ಕ ಕಡಿತಗೊಂಡ ದುರ್ಗಮ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ತುರ್ತು ಆರೋಗ್ಯ ಸೇವೆ ನೀಡಲು ಈ ಪೋಟೇìಬಲ್‌ ಆಸ್ಪತ್ರೆ ಸಹಕಾರಿ ಮಾತ್ರವಲ್ಲದೆ ಅತ್ಯಂತ ಪರಿಣಾಮಕಾರಿ ಕೂಡ. ಈ ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌ ಕಿಟ್‌ನಲ್ಲಿ ಒದಗಿಸಲಾದ ಟ್ಯಾಬ್ಲೆಟ್‌ ಆಧಾರಿತ ಆ್ಯಪ್ಲಿಕೇಶನ್‌ ಬಳಸಿಕೊಂಡು ಆಸ್ಪತ್ರೆಯನ್ನು ಸಂತ್ರಸ್ತರ ಸೇವೆಗೆ ಕ್ಷಿಪ್ರಗತಿಯಲ್ಲಿ ಅಣಿಗೊಳಿಸಬಹುದಾಗಿದೆ.

ವಿದೇಶಗಳಿಗೂ ನೆರವು
ಪೋಟೇìಬಲ್‌ ಆಸ್ಪತ್ರೆಗಳು ಭಾರತದಲ್ಲಿ ಎದುರಾಗುವ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಮಾತ್ರವಲ್ಲದೇ ಇತರ ದೇಶಗಳ ನೆರವಿಗೂ ಒದಗಿಬರಲಿದೆ. ಇದರ ಭಾಗವಾಗಿ ಭಾರತವು ಈಗಾಗಲೇ ಎರಡು ಆರೋಗ್ಯ ಮೈತ್ರಿ ಏಡ್‌ ಕ್ಯೂಬ್‌ಗಳನ್ನು ಮ್ಯಾನ್ಮಾರ್‌ಗೆ ನೀಡಿದ್ದು, ಶ್ರೀಲಂಕಾಕ್ಕಾಗಿ ಒಂದನ್ನು ಸಿದ್ಧಪಡಿಸಲಾಗುತ್ತಿದೆ.

ಪೂಜಾ ಆರ್‌. ಹೆಗಡೆ, ಮೇಲಿನಮಣ್ಣಿಗೆ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.