Vijayapura; ಬಿಜೆಪಿಯಿಂದ ಹೊರ ಹಾಕಲಿ, ಎಲ್ಲರ ಬಣ್ಣ ಬಯಲು ಮಾಡುತ್ತೇನೆ: ಯತ್ನಾಳ್ ಸವಾಲು
Team Udayavani, Dec 26, 2023, 2:40 PM IST
ವಿಜಯಪುರ: ಸತ್ಯ ಹೇಳಿದರೆ ಎಲ್ಲರಿಗೂ ಭಯವಾಗುತ್ತದೆ. ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಅವ್ಯವಹಾರ ಮಾಡಿದ್ದಾರೆ. ನಾನು ಮೋದಿ ಅವರಿಗಾಗಿ ಕೆಲಸ ಮಾಡುತ್ತಿದ್ದೇನೆ. ಯಡಿಯೂರಪ್ಪ ಅವರಿಗಾಗಿ ಅಲ್ಲ. ಹೀಗಾಗಿ ನನಗೆ ನೋಟಿಸ್ ಕೊಟ್ಟು, ಪಕ್ಷದಿಂದ ಹೊರಹಾಕಲು ನೋಡಲಿ. ಆಗ ಇವರೆಲ್ಲರ ಬಣ್ಣ ಬಯಲು ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸವಾಲು ಹಾಕಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜನವರಿ 5ಕ್ಕೆ ಡಿ.ಕೆ. ಶಿವಕುಮಾರ್ ವಿರುದ್ಧ ಹೈಕೋರ್ಟ್ ನಲ್ಲಿ ಹೂಡಿರುವ ಪ್ರಕರಣದ ವಿಚಾರಣೆಯಿದೆ. ಬಳಿಕ ಅಪ್ಪಾಜಿ ಅವರದ್ದು ಹೊರ ತೆಗೆಯುತ್ತೇನೆ. ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಅವ್ಯವಹಾರ ಬಯಲಿಗೆ ತರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೇರ ಎಚ್ಚರಿಕೆ ನೀಡಿದರು.
ಮೋದಿಗಾಗಿ ಕೆಲಸ: ಪ್ರಧಾನಿ ಮೋದಿ ಅವರ ಕಾಲದಲ್ಲಿ ಒಂದಾದರೂ ಹಗರಣ, ಅವ್ಯವಹಾರ ನೋಡಿದ್ದೀರಾ. ಕೇವಲ ಟೀಕೆ ಮಾಡುತ್ತಾರೆಯೆ ಹೊರತು ಮೋದಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳುವ ತಾಕತ್ತು ದೇಶದಲ್ಲೇ ಯಾರಿಗೂ ಇಲ್ಲ. ಹೀಗಾಗಿ ನಾನು ಮೋದಿ ಅವರಿಗಾಗಿ ಕೆಲಸ ಮಾಡುತ್ತೇನೆ ಎಂದರು.
ಕೋವಿಡ್ ಕಾಲಘಟ್ಟದಲ್ಲಿ 45 ರೂ ಮಾಸ್ಕ್ ಗೆ 485 ರೂ. ಖರ್ಚು ಹಾಕಲಾಗಿದೆ. ಬೆಂಗಳೂರಿನಲ್ಲಿ 10 ಸಾವಿರ ಬೆಡ್ ಮಾಡಿದ್ದಾಗಿ ಬಾಡಿಗೆ ಪಡೆದಿದ್ದಾರೆ. ಬಾಡಿಗೆ ಪಾತಸಿದ ಹಣದಲ್ಲೇ ಬೆಡ್ ಖರೀದಿಸಿದ್ದರೆ ಎರಡೆರಡು ಬೆಡ್ ಬರುತ್ತಿದ್ದವು. ಇದರಲ್ಲಿ ಎಷ್ಟು ಸಾವಿರ ಕೋಟಿ ಕೊಳ್ಳೆ ಹೊಡೆದಿದ್ದಾರೆ ಎಂದು ಸರ್ಕಾರ ನಡೆಸಿದ ಸ್ವಪಕ್ಷೀಯರನ್ನೇ ಪ್ರಶ್ನಿಸಿದರು.
ಕೋವಿಡ್ ವೇಳೆ 40 ಸಾವಿರ ಕೋಟಿ ರೂ. ಅವ್ಯವಹಾರವಾಗಿದೆ. ಪ್ರತಿ ರೋಗಿಗೆ 8-10 ಲಕ್ಷ ರೂ. ಬಿಲ್ ಮಾಡಿದ್ದಾರೆ. ಸರ್ಕಾರದ ಯಾವ ಪಕ್ಷದ್ದಾದರೂ ಏನು, ಕಳ್ಳರು ಕಳ್ಳರೇ. ಯಡಿಯೂರಪ್ಪ ಅವರ ಬಗ್ಗೆ ಸದನದಲ್ಲೇ ಹೇಳಿದ್ದೇನೆ. ಕೋವಿಡ್ ಸೋಂಕಿತನಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ನನ್ನಿಂದ 5.80 ಲಕ್ಷ ರೂ. ಬಿಲ್ ಪಡೆದಿದ್ದರು. ಇಷ್ಟೊಂದು ಹಣವನ್ನು ಬಡವರು ಪಾವತಿಸಲು ಸಾಧ್ಯವೇ ಎಂದು ವಿಧಾನಸಭೆಯಲ್ಲೇ ಪ್ರಶ್ನಿಸಿದ್ದೆ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.
ಶಾಸಕರಿಗೆ ಮಾಸಿಕ 2 ಲಕ್ಷ ರೂ. ಸಂಬಳ, ಸಮಿತಿ ಸಭೆಯಲ್ಲಿ ಪಾಲ್ಗೊಂಡರೆ 65 ಸಾವಿರ ರೂ. ಸಿಗುತ್ತದೆ. ಆದರೆ ನಾನು ಈವರೆಗೂ ಆರೋಗ್ಯದ ವಿಷಯವಾಗಿ ನಾನು ಸರ್ಕಾರದಿಂದ ಈವರೆಗೂ ಹಣವನ್ನೇ ಪಡೆದಿಲ್ಲ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.