ರಾಜ್ಯದಲ್ಲಿ ಹುಚ್ ಮಹಮದನ ಸರ್ಕಾರ: ಓಸಿ ಚೀಟಿ ತರ ಅನುದಾನ ಕೇಳಿದರೆ ಬೆಲೆ ಇಲ್ಲ!- ಅನಂತಕುಮಾರ

ಇದು ಮುಂದುವರಿದರೆ ಕರ್ನಾಟಕಕ್ಕೆ ನೆಮ್ಮದಿ ಇಲ್ಲ

Team Udayavani, Dec 26, 2023, 6:23 PM IST

ananth kumar hegde

ಶಿರಸಿ: ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಹುಚ್ ಮಹಮದ್‌ನ ಸರಕಾರ. ದಿವಾಳಿಕೋರ ಸರಕಾರವಿದು. ಇದು ಮುಂದುವರಿದರೆ ಕರ್ಣಾಟಕಕ್ಕೆ ನೆಮ್ಮದಿ ಇಲ್ಲ. ಓಸಿ ಚೀಟಿ ತರ ಅನುದಾನಕ್ಕೆ ಯೋಜನೆ ಕಳಿಸಿದರೆ ಅದಕ್ಕೆ ಕೇಂದ್ರ ಬೆಲೆ ಕೊಡುವದಿಲ್ಲ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಸಂಪೂರ್ಣ ಆರ್ಥಿಕತೆ ಬದಿಗೊತ್ತಿ, ಕಾಂಗ್ರೆಸ್ಸಿಗರು ಅವರ ಚುನಾಚಣೆ ಘೋಷಣೆ ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವದು ಕರ್ನಾಟಕ ಜನತೆಗೆ ಮಾಡುತ್ತಿರುವ ದೊಡ್ಡ ದ್ರೋಹ. ಜನರನ್ನು ಉಚಿತವಾಗಿ ಏನೋ ಕೊಡುತ್ತಿರುವ ಹೆಸರಿನಲ್ಲಿ ಬಹು ಸಂಖ್ಯಾತ ಜನರನ್ನು ವಂಚವಿಸುತ್ತಿರುವ ಸರಕಾರ. ಅಭಿವೃದ್ಧಿಗೆ, ಸರಕಾರದ ನಿರಂತರ ಕಾರ್ಯಕ್ರಮಗಳಿಗೆ, ಶಾಸಕರಿಗೇ ಕೊಡಲು ಅನುದಾನ ಇಲ್ಲ, ಹಣವಿಲ್ಲದ ಸ್ಥಿತಿಗೆ ಬಂದಿದೆ ಎಂದು ವಾಗ್ದಾಳಿ ನಡೆಸಿ ಉಚಿತವಾಗಿ ಕೊಡಬಾರದು ಎಂಬುದಲ್ಲ, ಆದರೆ ಅದನ್ನು ಆರ್ಥಿಕ ಸ್ಥಿತಿ ನೋಡಿ ಕೆಲಸ ಮಾಡಬೇಕು ಎಂದರು.

ಸೋಗಲಾಡಿ ಸಿದ್ಧರಾಮಯ್ಯನವರ ಯೋಜನೆಯನ್ನು ಯಾರೂ ಒಪ್ಪುವುದಿಲ್ಲ. ಸರಿಯಾದ ರೀತಿಯಲ್ಲಿ ಆರ್ಥಿಕ ಯೋಜನೆ ಸಿದ್ಧಪಡಿಸಿ ನೀಡಿದರೆ ಕೇಂದ್ರ ಸರ್ಕಾರ ಒಪ್ಪಿಕೊಳ್ಳುತ್ತದೆ. ಓಸಿ ಚೀಟಿ ತರ ಯೋಜನೆಗಳನ್ನು ಕಳುಹಿಸಿದರೆ ಅದಕ್ಕೆ ಕೇಂದ್ರ ಬೆಲೆ ನೀಡುವುದಿಲ್ಲ. ಕೇಂದ್ರ ಸರಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದ್ದಾರೆ. ಪ್ರತೀ ಖರ್ಚಿಗೂ ಸರಿಯಾದ ಲೆಕ್ಕ ಕೇಳುತ್ತದೆ. ದಿಕ್ಕು ದೆಸೆ ಇಲ್ಲದ ಯೋಜನೆಗಳಿಗೆ ನೆರವಾಗುವದಿಲ್ಲ. ಜನರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಚೌಕಟ್ಟಿನಲ್ಲಿ ಸಿದ್ಧಪಡಿಸಿದರೆ ಸಲ್ಲಿಸಿದರೆ ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತದೆ. ಮನಸ್ಸಿಗೆ ಬಂದ ಹಾಗೇ ಹಣ ಕೇಳಿದರೆ ಅದು ಸಿದ್ದರಾಮಯ್ಯನವರ ಅಪ್ಪನ ಆಸ್ತಿಯಲ್ಲ. ಎಂದರು.

ಸಂಸತ್‌ನಲ್ಲಿ ಬೇಡದಿರುವ ಕೆಲಸ ಮಾಡಿದರೆ ಅಮಾನತ್ ಆಗುವುದು ಸಹಜ. ಸಂಸತ್‌ಗೆ ಅದರದ್ದೆ ಆದ ಗೌರವವಿದೆ. 142 ಸಂಸದರನ್ನು ಅಮಾನತು ಮಾಡಿರುವ ಬಗ್ಗೆ ಕಾಂಗ್ರೆಸ್ ನಾಯಕರನ್ನು ಕೇಳಬೇಕು. ಯಾಕೆ ಅವಮಾನ ಆಗಿದೆ ಎಂದು. ಸಂಸತ್ತಿನ ಘನತೆಗೆ ಚ್ಯುತಿ ತಂದರೆ ಸಭಾಧ್ಯಕ್ಷರು ಅವರದ್ದೇ ಆದ ತೀರ್ಮಾನ ಕೈಗೊಳ್ಳುತ್ತಾರೆ ಎಂದ ಅವರು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ ಅವರದ್ದು ಬೂಟ್ ನೆಕ್ಕುವ ಸಂಸ್ಕೃತಿ ಎಂಬಷ್ಟರ ಮಟ್ಟಿಗೆ ಆಗಿದೆ ಎಂದೂ ಹೇಳಿದರು.

ಇದನ್ನೂ ಓದಿ: 2024 Poll:1977ರಲ್ಲಿ PM ಅಭ್ಯರ್ಥಿ ಘೋಷಿಸದೇ ಕಾಂಗ್ರೆಸ್‌ ವಿರುದ್ಧ ವಿಪಕ್ಷ ಜಯ ಗಳಿಸಿತ್ತು!

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೂರರಲ್ಲಿ ಎರಡಂಶಕ್ಕಿಂತ ಜಾಸ್ತಿ ಸ್ಥಾನ ಬರುತ್ತದೆ. ಮುಂದೆ ದಿವಾಳಿಕೋರರ ಸರ್ಕಾರ ಇರಲು ಸಾಧ್ಯವಿಲ್ಲ ಎಂದ ಅನಂತ್, ಐಎನ್‌ಡಿಐಎ ಎಂಬುದನ್ನು ಕಟ್ಟಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ದೇಶಕ್ಕೋಸ್ಕರ ದಾನ ಮಾಡಿ ಅಂದರು. ಅದರ ಅರ್ಥ ದೇಶವನ್ನು ಕಾಂಗ್ರೆಸ್ ಗುತ್ತಿಗೆ ಪಡೆದಿದೆಯೇ? ಕಾಂಗ್ರೆಸ್‌ಗೆ ಹಣ ಬೇಕು ಎಂದು ನೇರವಾಗಿ ಕೇಳಲಿ. 75 ವರ್ಷಗಳಲ್ಲಿ ಚೀಪ್ ಪಬ್ಲಿಸಿಟಿ ಪಾಲಿಟಿಕ್ಸ್ ಮಾಡಿ ಜನರನ್ನು ಮೂರ್ಖರನ್ನಾಗಿ ಮಾಡಿದೆ. ಆದರೆ ಬಿಜೆಪಿಯು ರೈತರಿಗೆ, ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕೈಗಾರಿಕಾ, ವ್ಯಾಪಾರ, ಅಂತಾರಾಷ್ಟ್ರೀಯ ವ್ಯಾಪಾರದ ಆರ್ಥಿಕ ಸುಭದ್ರತೆಯ ನೆಲೆಗಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಜಾತಿ ದೇಶವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮೊದಲಿನಿಂದಲೂ ಮಾಡುತ್ತಿದ್ದು, ದೇಶ ಒಡೆಯುವ ಶಡ್ಯಂತರ ಏನು ಬೇಕಾದರೂ ಮಾಡಬಹುದು. ಇದರ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

ಸಚಿವ ಜಮೀರ್ ಅಹಮ್ಮದ್ ಹೇಳಿಕೆ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರಿಗೆ ಸಿಕ್ಕಿರುವ ಸಂಸ್ಕಾರ. ಮತೀಯ ವಿಚಾರ ನಾವ್ಯಾರು ಮಾಡಲು ಸಾಧ್ಯವಿಲ್ಲ. ಅವರ ಯೋಗ್ಯತೆ ತಕ್ಕಂತೆ ಹೇಳುತ್ತಾರೆ ಎಂದೂ ಹೇಳಿದರು.

ಟಾಪ್ ನ್ಯೂಸ್

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

School bag

School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್‌ ಆಧಾರಿತ ಹಾಜರಾತಿ?

KUNDAPURA-BOA

Kundapura: ಮುಳುಗುತ್ತಿದ್ದ ಬೋಟ್‌ ರಕ್ಷಣೆ: 6 ಮೀನುಗಾರರು ಪಾರು

BY-Vijayendra

Government Failure: ಹಿಂದೂಗಳ ಮೇಲೆ ಕಾಂಗ್ರೆಸ್‌ ಸರಕಾರ ದಬ್ಬಾಳಿಕೆ: ಬಿಜೆಪಿ

Daily Horoscope

Daily Horoscope; ಈ ರಾಶಿಯ ಅವಿವಾಹಿತರಿಗೆ ಬಾಳ ಸಂಗಾತಿ ಲಭಿಸುವ ಚಿಂತೆ.

1-rrttt

Yakshagana;ಕಲೆ ಬದುಕಿನ ಸಂಪಾದನೆಗಲ್ಲ, ನಮ್ಮ ಸಂತೋಷಕ್ಕೆ:ಸಂಜೀವ ಸುವರ್ಣ

tirupati

Tirupati; ಶೀಘ್ರ ಕಲಬೆರಕೆ ಪತ್ತೆ ಯಂತ್ರ ಅಳವಡಿಸಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

School bag

School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್‌ ಆಧಾರಿತ ಹಾಜರಾತಿ?

BY-Vijayendra

Government Failure: ಹಿಂದೂಗಳ ಮೇಲೆ ಕಾಂಗ್ರೆಸ್‌ ಸರಕಾರ ದಬ್ಬಾಳಿಕೆ: ಬಿಜೆಪಿ

Vijayendra (2)

BJP; ಬೇಗುದಿಗೆ ವರಿಷ್ಠರ ಸೂತ್ರ : ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಇಲ್ಲ

Thavar chand gehlot

Karnataka Govt; ರಾಜ್ಯಪಾಲ ಅರ್ಕಾವತಿ ಬಾಣ :ಕಾಳಗ ಈಗ ಮತ್ತೊಂದು ಸುತ್ತಿಗೆ!

1-qwewqwqe

World Book of Records; ಪ್ರಜಾಪ್ರಭುತ್ವ ಮಾನವ ಸರಪಳಿಗೆ ವಿಶ್ವದಾಖಲೆ ಗರಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

School bag

School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್‌ ಆಧಾರಿತ ಹಾಜರಾತಿ?

KUNDAPURA-BOA

Kundapura: ಮುಳುಗುತ್ತಿದ್ದ ಬೋಟ್‌ ರಕ್ಷಣೆ: 6 ಮೀನುಗಾರರು ಪಾರು

BY-Vijayendra

Government Failure: ಹಿಂದೂಗಳ ಮೇಲೆ ಕಾಂಗ್ರೆಸ್‌ ಸರಕಾರ ದಬ್ಬಾಳಿಕೆ: ಬಿಜೆಪಿ

Daily Horoscope

Daily Horoscope; ಈ ರಾಶಿಯ ಅವಿವಾಹಿತರಿಗೆ ಬಾಳ ಸಂಗಾತಿ ಲಭಿಸುವ ಚಿಂತೆ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.