Mangaluru -Madgaon ರೈಲು: ವಂದೇ ಭಾರತ್ ಪರೀಕ್ಷಾರ್ಥ ಸಂಚಾರ
120 ಕಿ.ಮೀ. ಗರಿಷ್ಠ ವೇಗ
Team Udayavani, Dec 26, 2023, 11:22 PM IST
ಮಂಗಳೂರು: ಇದೇ ವರ್ಷಾಂತ್ಯ ಡಿ. 30ರಂದು ಆರಂಭಗೊಳ್ಳಲಿರುವ ಮಂಗಳೂರು-ಮಡಗಾಂವ್ ನೂತನ ವಂದೇಭಾರತ್ ರೈಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮಡಗಾಂವ್ ವರೆಗೆ ಮಂಗಳವಾರ ಪರಿಶೀಲನಾರ್ಥ ಸಂಚಾರ ನಡೆಸಿತು.
ಮಂಗಳೂರಿನಿಂದ ಬೆಳಗ್ಗೆ 8.30ಕ್ಕೆ ಹೊರಟ ರೈಲು ಸುಮಾರು 3.40 ಗಂಟೆ ಪ್ರಯಾಣಿಸಿ ಮಧ್ಯಾಹ್ನ 12.10ರ ಸುಮಾರಿಗೆ ಮಡಗಾಂವ್ ತಲುಪಿದೆ. 12.55ಕ್ಕೆ ಮಡಗಾಂವ್‌ನಿಂದ ರೈಲು ಹೊರಟಿದ್ದು 4.35ಕ್ಕೆ ಮಂಗಳೂರು ಸೆಂಟ್ರಲ್ ತಲುಪಿತು. ಮಧ್ಯೆ ಕಾರವಾರ ಮತ್ತು ಉಡುಪಿಯಲ್ಲಿ ನಿಲುಗಡೆ ನೀಡಲಾಗಿದೆ.
ಪರಿಶೀಲನಾ ಸಂಚಾರದ ವೇಳೆ ಮಾರ್ಗದ ಸುರಕ್ಷೆ, ತಗಲುವ ಸಮಯ, ಇರಬಹುದಾದ ಸವಾಲು ಇತ್ಯಾದಿಗಳನ್ನು ವೀಕ್ಷಿಸಲಾಗುತ್ತದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ. ಮುಖ್ಯ ವಾಗಿ ಮಂಗಳೂರು- ಮಡಗಾಂವ್ ಮಾರ್ಗವು ಗಂಟೆಗೆ 120 ಕಿ.ಮೀ. ವೇಗಕ್ಕೆ ನಿರ್ಮಾಣಗೊಂಡಿದೆ. ವಂದೇ ಭಾರತ್ ರೈಲನ್ನು 120 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಾಯಿಸಿ ಪರೀಕ್ಷೆ ನಡೆಸಲಾಗಿದೆ.
ಸಂಸದ ನಳಿನ್ ವೀಕ್ಷಣೆ
ಮಂಗಳೂರಿನಿಂದ ಬೆಳಗ್ಗೆ ಹೊರಡುವ ವೇಳೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್ ಮತ್ತಿತರರು ಆಗಮಿಸಿ, ರೈಲನ್ನು ವೀಕ್ಷಿಸಿದರು.
ಈ ವೇಳೆ ನಳಿನ್ ಮಾತನಾಡಿ, ಮಂಗಳೂರಿನಿಂದ ಕೋಯಿಕ್ಕೋಡ್‌ಗೆ ಇನ್ನೊಂದು ವಂದೇಭಾರತ್ ರೈಲು ಆರಂಭಿಸುವ ಪ್ರಸ್ತಾವವಿದ್ದು ಮುಂದಿನ ಬಾರಿ ಆರಂಭವಾಗುವ ನಿರೀಕ್ಷೆ ಇದೆ. ಹಳಿ ವಿದ್ಯುದೀಕರಣ ಪೂರ್ಣಗೊಂಡರೆ ಮಂಗಳೂರು-ಬೆಂಗಳೂರು ಮಧ್ಯೆಯೂ ಆರಂಭವಾಗಬಹುದು ಎಂದರು.
ಮಂಗಳೂರು ಸೆಂಟ್ರಲ್‌ನ ನೂತನ ಪ್ಲಾಟ್‌ಫಾರಂ 4 ಮತ್ತು 5ರ ಕಾಮಗಾರಿ ಪೂರ್ಣಗೊಂಡಿದ್ದು ಮುಂಬರುವ ಜ. 15ರಂದು ಉದ್ಘಾಟನೆಗೊಳ್ಳಲಿದೆ ಎಂದೂ ನಳಿನ್ ತಿಳಿಸಿದರು.
ಮಂಗಳೂರಿನಲ್ಲಿ ತಂಗಲಿದೆ ವಂದೇ ಭಾರತ್
ಡಿ. 30ರಂದು ಇತರ ಐದು ವಂದೇಭಾರತ್ ರೈಲುಗಳ ಜತೆ ಮಂಗಳೂರು-ಮಡಗಾಂವ್ ವಂದೇಭಾರತ್ ರೈಲಿಗೆ ಚಾಲನೆ ಸಿಗಲಿದೆ. ಬಳಿಕ ರೈಲು ಪ್ರತೀ ರಾತ್ರಿ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಸುಧಾರಣೆಗೊಂಡಿರುವ ಪಿಟ್‌ಲೈನಿನಲ್ಲಿ ತಂಗಲಿದೆ.
ರೈಲಿನ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಸೆಂಟ್ರಲ್‌ನಿಂದ ಬೆಳಗ್ಗೆ 8.30ಕ್ಕೆ ಹೊರಟು ಮಧ್ಯಾಹ್ನ 1.05ಕ್ಕೆ ಮಡಗಾಂವ್ ತಲಪುವುದು. ಮಡಗಾಂವ್‌ನಿಂದ 6.10ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರು ಸೆಂಟ್ರಲ್ ತಲುಪುವುದು. ಡಿ. 30ರಂದು ರೈಲಿಗೆ ಚಾಲನೆ ನೀಡಿದ ಬಳಿಕವಷ್ಟೇ ಅಂತಿಮ ವೇಳಾಪಟ್ಟಿ ಬರಬಹುದು.
ರೈಲಿನ ನಂಬರ್ ನೀಡುವುದು, ಬುಕ್ಕಿಂಗ್‌ಗೆ ತೆರೆಯುವುದು ಇತ್ಯಾದಿ ಮುಂದೆ ನಡೆಯಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ಅತ್ಯಾ*ಚಾರ ಪ್ರಕರಣ: ಆರೋಪಿಗೆ ಜಾಮೀನು
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.