Karnataka: ರಾಜ್ಯ ಪೊಲೀಸ್ ಇಲಾಖೆಗೆ ಐದು ರಾಷ್ಟ್ರೀಯ ಪ್ರಶಸ್ತಿ
Team Udayavani, Dec 26, 2023, 11:45 PM IST
ಬೆಂಗಳೂರು: ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗ (ಎನ್‌ಸಿಆರ್‌ಬಿ)ದ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಕರ್ನಾಟಕ ರಾಜ್ಯ ಪೊಲೀಸರಿಗೆ ಐದು ಪ್ರಶಸ್ತಿಗಳು ಲಭಿಸಿವೆ.
ಕೇಂದ್ರ ಗೃಹ ಮಂತ್ರಾಲಯದ ಸಹಯೋಗ ದೊಂದಿಗೆ ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗ ಮಹತ್ವಾಕಾಂಕ್ಷೆಯ ಯೋಜನೆಗಳಾದ ಕ್ರೈಂ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಆ್ಯಂಡ್ ಸಿಸ್ಟಂ(ಸಿಸಿಟಿಎನ್‌ಎಸ್)/ಇಂಟರ್ ಒಪೇರಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಂ(ಐಸಿಜೆಎಸ್) ಯೋಜನೆಗಳನ್ನು ದೇಶಾದ್ಯಂತ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಕೊಡುಗೆ ನೀಡಿದ ರಾಜ್ಯಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಡಿ. 21 ಮತ್ತು 22ರಂದು ಹೊಸದಿಲ್ಲಿಯಲ್ಲಿ ನಡೆದ 5ನೇ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಗಣಕೀಕರಣ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಗುರುತಿಸಿ ಐದು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಇಂಟರ್-ಆಪೀರಬಲ್ ಕ್ರಿಮಿನಲ್ ಜಸ್ಟಿಸ್ ಸಿಸ್ಟಂ(ಐಸಿಜೆಎಸ್) ಯೋಜನೆಯಡಿಯಲ್ಲಿ ಪೊಲೀಸ್ ಇಲಾಖೆ, ನ್ಯಾಯಾಂಗ ಇಲಾಖೆ, ಬಂದೀಖಾನೆ ಇಲಾಖೆ, ಅಭಿಯೋಗ ಇಲಾಖೆ ಮತ್ತು ನ್ಯಾಯ ವಿಜ್ಞಾನ ಪ್ರಯೋಗಾಲಯಗಳೊಂದಿಗೆ ಅಪರಾಧ ಮತ್ತು ಅಪರಾಧಿಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ವಿನಿಯಮ ಮಾಡಿಕೊಳ್ಳಲು ಮತ್ತು ತ್ವರಿತವಾಗಿ ಪ್ರಕರಣಗಳ ವಿಲೇವಾರಿಗೆ ಸಹಕಾರಿಯಾಗುವ ವ್ಯವಸ್ಥೆಯನ್ನು ಸೃಜಿಸುವಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ನೀಡಿರುವ ಉತ್ತಮ ಸೇವೆ ಗುರುತಿಸಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಬಾರಿಗೆ ಮೂರನೇ ಬಹುಮಾನ ನೀಡಿ ಪ್ರಶಂಸಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ
BJP Rift; ಆರ್. ಅಶೋಕ್ ದೆಹಲಿಗೆ: ನನಗೆ ಸ್ಪಷ್ಟ ಮಾಹಿತಿ ಇಲ್ಲ ಎಂದ ವಿಜಯೇಂದ್ರ
Earthquake; ತೆಲಂಗಾಣದ ಮುಲುಗುವಿನಲ್ಲಿ ಭೂಕಂಪನ: 5.3 ತೀವ್ರತೆ
Power sharing: ನಮ್ಮಲ್ಲಿ ಒಪ್ಪಂದ ನಿಜ: ಡಿ.ಕೆ.ಶಿವಕುಮಾರ್ ಪ್ರಥಮ ಹೇಳಿಕೆ
MUDA Scam: ಸಿದ್ದರಾಮಯ್ಯ ಪತ್ನಿ ಸಹಿತ ಸಾವಿರ ಮುಡಾ ನಿವೇಶನ ಅಕ್ರಮ ಹಂಚಿಕೆ: ಇ.ಡಿ.
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Gadaga: ಸಂತ ರಾಜಕಾರಣಿ ಡಿ.ಆರ್. ಪಾಟೀಲ ಗ್ರಂಥ ಬಿಡುಗಡೆ
Bantwal: ತುಂಬೆ ಹೆದ್ದಾರಿಯಲ್ಲಿ ನೀರು; ಪೆರಾಜೆ ರಿಕ್ಷಾ ನಿಲ್ದಾಣಕ್ಕೆ ಹಾನಿ
ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ
Subramanya: ಸಿದ್ಧಗೊಳ್ಳುತ್ತಿವೆ ಬೆತ್ತದ ತೇರು
Thirthahalli: ಡಿ.7 ರಂದು 18ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ, ಜಾತ್ರ ಮಹೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.