New Year 2024:ಹೊಸ ವರ್ಷದ ಸ್ವಾಗತಕ್ಕೆ ಐಟಿ ನಗರ ಝಗಮಗ-ಎಂಜಿ ರಸ್ತೆಯಲ್ಲಿ ಯಾಕೆ ಹಬ್ಬ?


Team Udayavani, Dec 27, 2023, 11:42 AM IST

New Year 2024:ಹೊಸ ವರ್ಷದ ಸ್ವಾಗತಕ್ಕೆ ಐಟಿ ನಗರ ಝಗಮಗ-ಎಂಜಿ ರಸ್ತೆಯಲ್ಲಿ ಯಾಕೆ ಹಬ್ಬ?

2023ಕ್ಕೆ ಗುಡ್‌ ಬೈ ಹೇಳಿ 2024ನೇ ಹೊಸ ವರ್ಷ ಬರಮಾಡಿಕೊಂಡು ಸಂಭ್ರಮಿಸಲು ಸಿಲಿಕಾನ್‌ ಸಿಟಿ ಸಜ್ಜಾಗಿದೆ. ಹೊಸ ವರ್ಷದ ಆಗಮನಕ್ಕಾಗಿ ಕಾದು ಕುಳಿತಿರುವ ಬೆಂಗಳೂರಿಗರು ಅದ್ದೂರಿಯಾಗಿ ನೂತನ ವರ್ಷವನ್ನು ಬರಮಾಡಿಕೊಳ್ಳಲು ಭರ್ಜರಿ ಸಿದ್ದತೆ ನಡೆಸಿದ್ದಾರೆ. ಜಗಮಗಿಸುವ ದ್ವೀಪಗಳ ನಡುವೆ ಕುಣಿದುಕುಪ್ಪಳಿಸಿ ನಲಿಯಲು ಯುವ ಪಡೆ ಡಿಸೆಂಬರ್‌ 31 ರಾತ್ರಿಯನ್ನು ಕಾಯುತ್ತಿದೆ.

ಸಿಲಿಕಾನ್‌ ಸಿಟಿಯಲ್ಲಿ ಹೊಸ ವರ್ಷದ ಆಚರಣೆಯನ್ನು ಕ್ರಿಸ್ಮಸ್‌ನಿಂದಲೇ ಆರಂಭಿಸಲಾಗುತ್ತದೆ. ನ್ಯೂ ಇಯರ್‌ ಬಂತೆಂದರೆ ಸಾಕು ಬೆಂಗಳೂರಿನಲ್ಲಿ ಥಟ್‌ ಎಂದು ಕಣ್ಮುಂದೆ ಭಾಸವಾಗುವುದು ಹರ್ಷೋದ್ಗಾರ, ಕೇಕೆ-ಶಿಳ್ಳೆ, ಕೂಗಾಟ, ಪಬ್‌ಗಳಲ್ಲಿ ನಶೆಯ ಗುಂಗಲ್ಲಿ ಕಿವಿಗಡಚ್ಚುವ ಡಿಜೆ ಸದ್ದು, ಆಗಸದೆತ್ತರದಲ್ಲಿ ಮೋಡಿ ಮಾಡುವ ಹೂ ಕುಂಡಗಳು, ಭಕ್ತರಿಂದ ತುಂಬಿ-ತುಳುಕುವ ದೇವಾಲಯಗಳು, ಗ್ರಾಹಕರಿಂದ ತುಂಬಿ ತುಳುಕುವ ಬಟ್ಟೆ,ಚಿನ್ನಾಭರಣ ಮಳಿಗೆಗಳು, ಹೌಸ್‌ಫ‌ುಲ್‌ ಆಗಿರುವ ಶಾಪಿಂಗ್‌ ಮಾಲ್‌ಗ‌ಳು, ಬಾರ್‌ಗಳ ತುಂಬಾ ಮದ್ಯಪ್ರಿಯರದ್ದೇ ಕಾರು-ಬಾರು. ಬೆಳದಿಂಗಳ ರಾತ್ರಿಯಲಿ ಪ್ರಮುಖ ರಸ್ತೆಯುದ್ದಕ್ಕೂ ಕಂಗೊಳಿಸುವ ವಿದ್ಯುತ್‌ ದೀಪಗಳು, ಕುಟುಂಬಸ್ಥರು ಕೇಕ್‌ ಕತ್ತರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯಗಳು….

ಈ ಬಾರಿಯೂ ತಡರಾತ್ರಿ 12 ಗಂಟೆಯ ಬೆಳದಿಂಗಳಲ್ಲಿ ಬೆಳಕು ಹಚ್ಚಿ ಸಂಭ್ರಮಿಸಲು ಬೆಂಗಳೂರಿಗರು ಕಾತುರರಾಗಿದ್ದಾರೆ. 2024ರ
ಹೊಸ ವರ್ಷ ಸ್ವಾಗತಿಸಲು ಇನ್ನೇನು ಕೌಂಟ್‌ಡೌನ್‌ ಶುರುವಾಗಿದೆ ಎನ್ನುವಾಗಲೇ ಐಟಿ ಸಿಟಿಯ ಸಾವಿರಾರು ಪಬ್‌ಗಳಲ್ಲಿ ಮಂದ ಬೆಳಕಿನಲ್ಲಿ ನೃತ್ಯ ಮಾಡಲು, ವಿಶೇಷ ಪಾರ್ಟಿಗಳಲ್ಲಿ ಮದ್ಯಪಾನ ಮಾಡಿ ನಾನಾ ಹಾಡುಗಳಿಗೆ ಹೆಜ್ಜೆ ಹಾಕಿ ಹೊಸ ವರ್ಷ ಸ್ವಾಗತಿಸಲು ಭರ್ಜರಿ ತಯಾರಿ ನಡೆದಿದೆ.

ಪ್ರತಿಷ್ಠಿತ ಪಬ್‌ಗಳು, ಪಂಚತಾರಾ ಹೋಟೆಲ್‌ ಗಳು, ಬಾಡಿಗೆ ಅಪಾರ್ಟ್‌ಮೆಂಟ್‌ಗಳು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಹೊಸ ವರ್ಷದ ಸಂಭ್ರಮಾಚರಣೆಯ ರಾತ್ರಿಗೆ ಪಬ್‌, ರೆಸ್ಟೋರೆಂಟ್‌ ಗಳು ಪ್ಯಾಕೇಜ್‌ ಘೋಷಣೆ ಮಾಡಿದ್ದು, ಶೇ.85ರಷ್ಟು ಸೀಟುಗಳು ಬುಕ್‌ ಆಗಿವೆ. ಪ್ರತಿಷ್ಠಿತ ಓರಿಯನ್‌, ಮಂತ್ರಿ ಮಾಲ್‌, ಗರುಡ ಮಾಲ್‌, ಫೋರಂ ಮಾಲ್‌ಗ‌ಳು ಸೇರಿದಂತೆ ರಾಜಧಾನಿಯ ಬಹುತೇಕ ಶಾಪಿಂಗ್‌ ಮಾಲ್‌ಗ‌ಳೂ ಹೊಸ ವರ್ಷಾಚರಣೆಗೆ ಸಿಂಗಾರಗೊಂಡಿವೆ.

ಈ ಬಾರಿ ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಜ.1ರ ಮುಂಜಾನೆವರೆಗೂ ಪಟಾಕಿಗಳದ್ದೇ ಸದ್ದು ಕಿವಿಗಡಚ್ಚಲಿದ್ದು, ಪಟಾಕಿ ಮಾರಾಟ ಜೋರಾಗಿದೆ. ವೈಟ್‌ಫೀಲ್ಡ್‌, ಮಾರತ್ತಹಳ್ಳಿ, ಬ್ರಿಗೇಡ್‌, ಎಂಜಿ ರಸ್ತೆಗಳು ಅಲಂಕಾರಿಕ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿವೆ. 2024ರ ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಸ್ನೇಹಿತರು, ಪ್ರೇಮಿಗಳೊಂದಿಗೆ ಔಟಿಂಗ್‌, ಗೆಟ್‌ ಟು ಗೆದರ್‌, ಪಾರ್ಟಿಗಳಲ್ಲಿ ಮೋಜು-ಮಸ್ತಿ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು, ಆಪ್ತರ ಜೊತೆಗೆ ಕೈ ಕುಲುಕಿ ಮನೆ ಮುಂದಿನ ರಸ್ತೆಯುದ್ದಕ್ಕೂ ತಿರುಗಾಡುತ್ತಾ ಖುಷಿ ಹಂಚಿಕೊಳ್ಳಲು ಸಾವಿರಾರು ಯುವಪಡೆ ಭರ್ಜರಿ ತಯಾರಿ ನಡೆಸಿದೆ. ಬೆಂಗಳೂರಿನಲ್ಲಿ 2023ರ ಡಿ.31 ರಂದು ರಾತ್ರಿ ಪ್ರಾರಂಭವಾಗುವ ಹೊಸ ವರ್ಷದ ಸಂಭ್ರಮಾಚರಣೆಯು 2024ರ ಜ.1ರ ಮುಂಜಾನೆವರೆಗೂ ಮುಂದುವರೆಯಲಿದೆ. ಪಂಚತಾರಾ ಹೋಟೆಲ್‌ಗ‌ಳಲ್ಲಿ ರೂಫ್ಟಾಪ್‌ ಪಾರ್ಟಿಗಳು, ಪೂಲ್‌ ಸೈಡ್‌ ಪಾರ್ಟಿ, ಬಾರ್‌-ಕ್ಲಬ್‌ ಒಳಗೆ ಡಿಜೆ ಹಾಡಿಗೆ ಕುಣಿಯುತ್ತಾ ಡ್ರಿಂಕ್ಸ್‌ ಪಾರ್ಟಿ ಆಚರಿಸಿ ಪುಳಕಿತರಾಗಲು ಈ ಬಾರಿ ಬೆಂಗಳೂರಿನ ಜನ ಯೋಜನೆ ರೂಪಿಸಿಕೊಂಡಿದ್ದಾರೆ. ಹೊಸ ವರ್ಷಕ್ಕೆ ಇನ್ನೂ ವಾರ ಇರುವಾಗಲೇ ಸಂಭ್ರಮಾಚರಣೆಯ ಸ್ಪಾಟ್‌ ರೆಡಿ ಮಾಡಿಕೊಂಡಿದ್ದಾರೆ. ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್ ಸ್ಟ್ರೀಟ್‌, ಕೋರಮಂಗಲ, ಇಂದಿರಾನಗರ, ವೈಟ್‌‌ ಫೀಲ್ಡ್‌, ಮಾರತ್ತಹಳ್ಳಿ, ಸರ್ಜಾಪುರ ರಸ್ತೆಗಳೇ ಬೆಂಗಳೂರಿನ ಹೊಸ ವರ್ಷದ ಪಾರ್ಟಿಗಳ ಹಾಟ್‌ಸ್ಪಾಟ್‌ಗಳು. 2023ರಹಳೆಯ ಕಹಿಯನ್ನು ಮರೆಯೋಣ 2024ರ
ಹೊಸತನ್ನು ಸ್ವಾಗತಿಸೋಣ.

ಚರ್ಚ್‌ಸ್ಟ್ರೀಟ್‌ನಲ್ಲಿ ಪಬ್‌ಗಳ ಗಮ್ಮತ್ತು
ಬ್ರಿಗೇಡ್‌ ರಸ್ತೆಗೆ ತಾಕಿಕೊಂಡಿರುವ ಚರ್ಚ್‌ಸ್ಟ್ರೀಟ್‌ಗೆ ಕಾಲಿಟ್ಟರೆ ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ಬೆಳಕಿನ ಆಟದ
ಹೊಸ ಜಗತ್ತು ತೋರಿಸುವ ಹತ್ತಾರು ಪಬ್‌ಗಳಲ್ಲಿ ಮದ್ಯದ ಜೊತೆಗೆ ಮಾನಿನಿಯರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸುವ ವರ್ಗವೇ ಇದೆ. ಇಲ್ಲಿ ಹೊಸ ವರ್ಷ ಬಂತೆಂದರೆ ಗುಂಡು-ತುಂಡಿನೊಂದಿಗೆ ಹೊಗೆ ಬಿಡುವುದೇ ಗಮ್ಮತ್ತು. ಇಲ್ಲಿನ ಪಬ್‌ ಗಳಲ್ಲಿ ನ್ಯೂ ಇಯರ್‌ ಬಂತೆಂದರೆ ಭಿನ್ನಣ ನಡೆಯ ಲಲನೆಯರು ನೃತ್ಯದ ಮೂಲಕ ರಸಿಕರನ್ನು ತಮ್ಮತ್ತ ಸೆಳೆದು ಮೋಡಿ ಮಾಡುತ್ತಾರೆ. ಇದನ್ನು ಆಸ್ವಾಧಿಸಲೆಂದೇ ಸಾವಿರಾರು ಮಂದಿ ಇಲ್ಲಿಗೆ ಭೇಟಿ ಕೊಡುತ್ತಾರೆ.

ಮಾಯಾಲೋಕ ತೆರೆದಿಡುವ ಬ್ರಿಗೇಡ್‌ ರಸ್ತೆ
ನ್ಯೂ ಇಯರ್‌ ಬಂತೆಂದರೆ ಸಾಕು ಎಂಜಿ ರೋಡ್‌ ನಂತೆಯೇ ಬ್ರಿಗೇಡ್‌ ರಸ್ತೆಯೂ ಹೊಸ ಮಾಯಾಲೋಕವನ್ನೇ ತೆರೆದಿಡುತ್ತದೆ. ಕ್ರಿಸ್ಮಸ್‌ ನಿಂದಲೇ ಇಲ್ಲಿನ ರಸ್ತೆಗಳ ಎರಡೂ ಬದಿಗಳು ವಿದ್ಯುತ್‌ ದೀಪಗಳಿಂದ ಅಲಂಕಾರಗೊಳ್ಳುತ್ತವೆ. ಡಿ.31ರಂದು ಕತ್ತಲಾಗುತ್ತಿದ್ದಂತೆ ಇಲ್ಲಿ ಬೆಳಕಿನ ಹಬ್ಬ ಶುರುವಾಗುತ್ತದೆ. ಯುವಕ-ಯುವತಿಯರು ಇಲ್ಲಿನ ಬೀದಿ ಬದಿಗಳಲ್ಲೇ ಸ್ನೇಹಿತರೊಂದಿಗೆ ಹಾಡು, ಕುಣಿತದ ಮೂಲಕ ಎಂಜಾಯ್‌ ಮಾಡಲು ಅಣಿಯಾಗಿದ್ದಾರೆ.

ಎಂಜಿ ರಸ್ತೆಯಲ್ಲಿ ಯಾಕೆ ಹಬ್ಬ?
ಬೆಂಗಳೂರಿನಲ್ಲಿ ಹೊಸ ವರ್ಷದಂದು ಹೊಸದಾಗಿ ಕಾಣಿಸುವ ಪ್ರಮುಖ ಸ್ಥಳವೆಂದರೆ ಮಹಾತ್ಮ ಗಾಂಧಿ ರಸ್ತೆ. ಎಂಜಿ ರಸ್ತೆಯಿಂದ
ಬ್ರಿಗೇಡ್‌ ರಸ್ತೆಯುದ್ದಕ್ಕೂ ದೀಪಾಲಂಕಾರಗೊಂಡಿರುವ ಬೀದಿಗಳಲ್ಲಿ ಸಾಗುವ ಲಕ್ಷಾಂತರ ಜನ ಸಾಗರ ಹರ್ಷೋದ್ಗಾರ
ಮೊಳಗಿಸುವುದನ್ನು ಕಣ್ತುಂಬಿ ಕೊಳ್ಳುವುದೇ ಚೆಂದ. ಈ ಬಾರಿಯೂ ಬೆಂಗಳೂರಿನ ಮೂಲೆ-ಮೂಲೆಗಳಿಂದ ಇಲ್ಲಿಗೆ ಜನ
ಜಂಗುಳಿಯೇ ದಾಂಗುಡಿ ಇಡಲಿದೆ. ಡಿಜೆ ಸದ್ದಿನೊಂದಿಗೆ ಮದ್ಯದ ನಶೆಯಲ್ಲೇ ಯುವಕ- ಯುವತಿಯರೆನ್ನದೇ ಎಲ್ಲ ವಯೋಮಾನದವರೂ ಶಿಳ್ಳೆ, ಚಪ್ಪಾಳೆಗಳ ಮೂಲಕ ರಾತ್ರಿ 12ರ ವರೆಗೆ ರಸ್ತೆಯುದ್ದಕ್ಕೂ ಗುಂಪು-ಗುಂಪಾಗಿ ತಿರುಗಾಡಲಿದ್ದಾರೆ. ಇದಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ.

ಕ್ರಿ.ಶ 1800ರ ವೇಳೆಗೆ ಬ್ರಿಟಿಷರು ಬೆಂಗಳೂರಿಗೆ ಆಗಮಿಸುವುದರೊಂದಿಗೆ ಜ.1ರ ಹೊಸ ವರ್ಷದ ಆಚರಣೆಗೆ ಈ ನಗರದಲ್ಲಿ ಮನ್ನಣೆ ದೊರಕಿದೆ. ಮಿಲಿಟರಿ ನೆಲೆಯಾಗಿದ್ದ ಕಂಟೋನ್ಮೆಂಟ್‌ ಬಳಿ ಬ್ರಿಟಿಷರು ಜ.1ರಂದು ಹೊಸ ವರ್ಷಾಚರಣೆ
ಆಚರಿಸುತ್ತಿದ್ದರು. ಕ್ರಮೇಣ ಸೌತ್‌ ಪರೇಡ್‌ ಎಂದು ಖ್ಯಾತಿ ಪಡೆದಿದ್ದ ಎಂಜಿ ರೋಡ್‌, ಬ್ರಿಗೇಡ್‌ ರೋಡ್‌ಗಳಲ್ಲಿ ಬ್ರಿಟಿಷರ ಅಭಿರುಚಿಗೆ ತಕ್ಕಂತೆ ಬಾರ್‌, ರೆಸ್ಟೋರೆಂಟ್‌ಗಳು ತಲೆ ಎತ್ತಿದ್ದವು. ನಂತರ ಇದೇ ಪ್ರದೇಶದಲ್ಲಿ ಬ್ರಿಟಿಷರು ಹೊಸ ವರ್ಷ ಆಚರಿಸುತ್ತಿದ್ದರು. ನಂತರದ ದಿನಗಳಲ್ಲಿ ಹೊಸ ವರ್ಷಾಚರಣೆಗೆ ಈ ರಸ್ತೆಗಳು ಪ್ರಾಮುಖ್ಯತೆ
ಪಡೆದುಕೊಳ್ಳುತ್ತಾ ಬಂದವು.

1949ರಿಂದ ಈ ಜಾಗಗಳಿಗೆ ಬೆಂಗಳೂರಿನ ಸಾರ್ವಜನಿಕರಿಗೂ ಮುಕ್ತ ಪ್ರವೇಶ ಸಿಕ್ಕಿತು. ಬಳಿಕ ಬೆಂಗಳೂರಿಗರೂ ಇಲ್ಲಿ ಜ.1ರಂದು ವರ್ಷಾಚರಣೆ ಮಾಡಲು ಪ್ರಾರಂಭಿಸಿದರು. 1990ರ ನಂತರ ಇಲ್ಲಿಗೆ ಸಾಮೂಹಿಕ ಆಚರಣೆಯ ಸ್ವರೂಪ ದೊರೆತಿದೆ. ಕ್ರಮೇಣ ಈ ಪ್ರದೇಶವು ಕಾರ್ಪೊರೇಟ್‌ ರೂಪ ತಳೆದು ಸಡಗರದ ನ್ಯೂ ಇಯರ್‌ ಆಚರಣೆ ಮುಂದುವರೆಸಿಕೊಂಡು ಬಂದಿದೆ. ರಾಜ್ಯ ರಾಜಧಾನಿಗೆ ಬಹುರಾಷ್ಟ್ರೀಯ ಕಂಪೆನಿಗಳು ಆಗಮಿಸಲಾರಂಭಿಸಿದ ಮೇಲೆ ದೇಶದ ನಾನಾ ಭಾಗಗಳಿಂದ ಇಲ್ಲಿಗೆ ಬಂದು ನೆಲೆಸಿದ್ದ ಯುವ ಪೀಳಿಗೆಯೂ ಇಲ್ಲೇ ಹೊಸ ವರ್ಷ ಆಚರಿಸಲು ಶುರು ಮಾಡಿಕೊಂಡಿತು. ಹೀಗೆ ವರ್ಷದಿಂದ ವರ್ಷಕ್ಕೆ ಬ್ರಿಗೇಡ್‌, ಎಂಜಿ ರಸ್ತೆಗಳ ವರ್ಣರಂಜಿತ ಸಂಭ್ರಮ ಹೆಚ್ಚುತ್ತಲೇ ಇದೆ.

ಟಾಪ್ ನ್ಯೂಸ್

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Tiger

Gundlupet: ಬಂಡೆ ಮೇಲೆ ಹುಲಿ; ಆತಂಕ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

voter

RSS ಕಚೇರಿ ಟೆಕ್ಕಿಗಳ ಬಳಸಿ ಇವಿಎಂ ಹ್ಯಾಕ್‌: ವಸಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.