Auto Expo: ಡಿಸೆಂಬರ್ 29, 30: “ಉಡುಪಿ ಆಟೋ ಎಕ್ಸ್‌ಪೋ-2023′
Team Udayavani, Dec 27, 2023, 12:00 PM IST
ಉಡುಪಿ: ಜಿಲ್ಲಾ ಆಟೋಮೊಬೈಲ್ ಡೀಲರ್ ಅಸೋಸಿಯೇಶನ್ ಮತ್ತು ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಆಶ್ರಯದಲ್ಲಿ ಮಣಿಪಾಲ ಆಟೋ ಕ್ಲಬ್ ಸಹಕಾರದಲ್ಲಿ ಡಿ. 29 ಮತ್ತು 30ರಂದು ಬೆಳಗ್ಗೆ 8.30ರಿಂದ ರಾತ್ರಿ 8ರ ತನಕ ಎಂಜಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ “ಉಡುಪಿ ಆಟೋ ಎಕ್ಸ್‌ಪೋ-2023′ ಹಮ್ಮಿಕೊಳ್ಳಲಾಗಿದೆ.
ಡಿ. 29ರ ಬೆಳಗ್ಗೆ 10ಕ್ಕೆ ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಎಕ್ಸ್‌ಪೋಗೆ ಚಾಲನೆ ನೀಡಲಿದ್ದಾರೆ. ಡಿ. 30ರ ಸಂಜೆ 4ರಿಂದ ನಡೆಯಲಿರುವ ಸಮಾರೋಪದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಎರಡೂ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಜಿಲ್ಲಾ ಆಟೋಮೊಬೈಲ್ ಡೀಲರ್ ಅಸೋಸಿಯೇಶನ್ ಕಾರ್ಯದರ್ಶಿ ಕಾಶಿನಾಥ್ ನಾಯಕ್ ವಹಿಸಲಿದ್ದಾರೆ.
ವಿಶೇಷ ಉಪನ್ಯಾಸ
ಡಿ. 29ರ ಮಧ್ಯಾಹ್ನ 12ಕ್ಕೆ “ಭಾರತದಲ್ಲಿ ಆಟೋಮೋಬೈಲ್’ ವಿಷಯದ ಕುರಿತು ಮಣಿಪಾಲ ಆಟೋ ಕ್ಲಬ್ ಕಾರ್ಯಕಾರಿ ಸದಸ್ಯ ಅತುಲ್ ಪ್ರಭು ಉಪನ್ಯಾಸ ನೀಡುವರು. ಮಧ್ಯಾಹ್ನ 2ರಿಂದ 3ರ ತನಕ ಉಡುಪಿಯ ಆರ್‌ಟಿಒ ಸಿಬಂದಿ “ರಸ್ತೆ ಸುರಕ್ಷೆ’ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಂಜೆ 5ರಿಂದ 7ರ ತನಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ವಿಂಟೇಜ್ ಕಾರ್, ಬೈಕ್ ಶೋ
ಡಿ. 30ರ ಬೆಳಗ್ಗೆ 10ರಿಂದ ಕಲಾಮಯಂ ತಂಡದಿಂದ ಸಾಂಸ್ಕೃತಿಕ ಜಾನಪದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2ರಿಂದ 3ರ ತನಕ ಅರವಿಂದ್ ಮೋಟಾರ್ ಅವರಿಂದ ಮೆಕ್ಯಾನಿಕ್ ತರಬೇತಿ ನಡೆಯಲಿದೆ ಮತ್ತು ವಿಂಟೇಜ್ ಕಾರ್ ಆ್ಯಂಡ್ ಸೂಪರ್ ಕಾರ್ ಶೋ, ಬೈಕ್ ಶೋ, ನೇತ್ರ ತಪಾಸಣೆ ಮತ್ತು ಆರೋಗ್ಯ ತಪಾಸಣೆ ಶಿಬಿರ ಜರಗಲಿದೆ.
ನೋಡಲು ಬನ್ನಿ ಬಹುಮಾನ ಗೆಲ್ಲಿರಿ
ಉಡುಪಿ ಆಟೋ ಎಕ್ಸ್‌ಪೋ-2023 ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಒಂದು ಕೂಪನ್ ನೀಡಲಾಗುವುದು. ಕೂಪನ್‌ನ ಲಕ್ಕಿ ಡ್ರಾ ಫಲಿತಾಂಶ ಮತ್ತು ಬಹುಮಾನ ವಿತರಣೆ ಸಮಾರೋಪದಲ್ಲಿ ನಡೆಯಲಿದೆ. ವಿಜೇತರಿಗೆ ಪ್ರಥಮ 5 ಗ್ರಾಂ, ದ್ವಿತೀಯ 3 ಗ್ರಾಂ, ತೃತೀಯ 1 ಗ್ರಾಂ ಚಿನ್ನ ನೀಡಲಾಗುವುದು.
ವಾಹನ ಪ್ರದರ್ಶನ
ಎಕ್ಸ್‌ಪೋದಲ್ಲಿ ವಿವಿಧ ಕಂಪೆನಿಗಳ ದ್ವಿಚಕ್ರ, ತ್ರಿಚಕ್ರ, ಕಾರು, ಜೀಪು, ಟೆಂಪೋ, ಬಸ್, ಲಾರಿ, ಎಲ್ಲ ಮಾದರಿಯ ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ವಾಹನಗಳ ಪ್ರದರ್ಶನ ನಡೆಯಲಿದೆ.
ಎಕ್ಸ್‌ಪೋ ನಡೆಯುವ ಸ್ಥಳದಲ್ಲೇ ವಾಹನಗಳ ಬುಕ್ಕಿಂಗ್ ಮಾಡಲು ಅವಕಾಶವಿದ್ದು, ಸ್ಥಳದಲ್ಲೇ ಬುಕ್ಕಿಂಗ್ ಮಾಡಿದವರಿಗೆ ಕಂಪೆನಿ ವತಿಯಂದ ವಿಶೇಷ ಕೊಡುಗೆ ದೊರೆಯಲಿದೆ. ಬ್ಯಾಂಕ್ ಸಾಲ ಸೌಲಭ್ಯ ಕಲ್ಪಿಸಲಾಗುವುದು. ವಿವಿಧ ಬ್ಯಾಂಕಿಂಗ್, ಹಣಕಾಸು ಸಾಲ ಸೌಲಭ್ಯ ನೀಡುವ ಸಂಸ್ಥೆಗಳು ಎಕ್ಸ್ ಪೋದಲ್ಲಿ ಭಾಗವಹಿಸಲಿವೆ ಎಂದು ಸಂಸ್ಥೆಗಳ ಪ್ರಕಟನೆ ತಿಳಿಸಿದೆ.
ಇದನ್ನೂ ಓದಿ: New Year 2024:ಹೊಸ ವರ್ಷದ ಸ್ವಾಗತಕ್ಕೆ ಐಟಿ ನಗರ ಝಗಮಗ-ಎಂಜಿ ರಸ್ತೆಯಲ್ಲಿ ಯಾಕೆ ಹಬ್ಬ?
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.