ರಾಮ ಮಂದಿರ ಸಂಕೀರ್ಣದಲ್ಲಿ ಭಕ್ತರಿಗೆ ಸಿಗಲಿದೆ ಆಸ್ಪತ್ರೆ, ಲಾಕರ್ ವ್ಯವಸ್ಥೆ: ಚಂಪತ್ ರಾಯ್
Team Udayavani, Dec 27, 2023, 10:24 PM IST
ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ನೆರವೇರುತ್ತಿದ್ದಂತೆಯೇ ರಾಮ ಮಂದಿರದ ದರ್ಶನ ಪಡೆದುಕೊಳ್ಳಲು ದೇಶದ ಮೂಲೆ-ಮೂಲೆಗಳಿಂದಲೂ ಅಯೋಧ್ಯೆಗೆ ತೆರಳಲು ಜನರು ಸಜ್ಜುಗೊಂಡಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ರಾಮನ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳನ್ನು ಸ್ವಾಗತಿಸಲು ಸಿದ್ಧತೆಗಳು ನಡೆದಿವೆ. ಮಂದಿರ ಸಂಕೀರ್ಣದಲ್ಲೂ 25,000 ಮಂದಿ ಭಕ್ತಾದಿಗಳಿಗಾಗಿ ವಿಶೇಷ ಅತ್ಯಾಧುನಿಕ ಸೌಲಭ್ಯಗಳನ್ನು ನಿರ್ಮಿಸುತ್ತಿರುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್‌ನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.
ಎರಡು ತ್ಯಾಜ್ಯ ನಿರ್ವಹಣಾ ಘಟಕಗಳು
ಯಾತ್ರಾರ್ಥಿಗಳ ಅಗತ್ಯವನ್ನು ಗಮನದಲ್ಲಿರಿಸಕೊಂಡು ಉತ್ತಮ ಶೌಚಾಲಯಗಳು ಹಾಗೂ ಇತರೆ ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಚಂಪತ್ ರಾಯ್ ಹೇಳಿದ್ದಾರೆ. ತ್ಯಾಜ್ಯ ನೀರು ಮತ್ತು ವಸ್ತುಗಳನ್ನು ಸಂಸ್ಕರಿಸಲು 70 ಎಕರೆ ವ್ಯಾಪ್ತಿಯಲ್ಲಿ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ ನಗರ ಸ್ಥಳೀಯ ಸಂಸ್ಥೆಗಳನ್ನು ಅವಲಂಬಿಸದೇ ಇರಲು ತೀರ್ಮಾನಿಸಲಾಗಿದೆ ಎಂದರು.
ಸಣ್ಣ ಆಸ್ಪತ್ರೆ ನಿರ್ಮಾಣ
25 ಸಾವಿರ ಮಂದಿಗೆ ಅನುಕೂಲವಾಗುವಂತೆ ತೀರ್ಥಯಾತ್ರಿಗಳ ಕೇಂದ್ರ, ಒಂದು ಸಣ್ಣ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತದೆ. ಅದರಲ್ಲಿ ಪ್ರಾಥಮಿಕ ಔಷಧೋಪಚಾರ ಮಾಡುವ ವ್ಯವಸ್ಥೆ ಇರಲಿದೆ.
ಶೇ.70 ಹಸಿರು ವ್ಯವಸ್ಥೆ
70 ಎಕರೆ ಜಮೀನಿನಲ್ಲಿ ಶೇ.70ರಷ್ಟು ಹಚ್ಚ ಹಸುರಿಗೆ ಪ್ರಾಧಾನ್ಯತೆ ನೀಡಲಾಗಿದೆ. ಗಿಡ-ಮರಗಳನ್ನು ಬೆಳಸುವುದರ ಜತೆಗೆ ಸಂಪೂರ್ಣ ಹಸಿರು ಪರಿಸರವನ್ನು ನಿರ್ಮಿಸುವ ಮೂಲಕ ಯಾತ್ರಾತಿಗಳು ವಿಹರಿಸಕು, ವಿಶ್ರಮಿಸಲು ಪೂರಕವಾದ ವಾತಾವರಣವನ್ನೂ ಸೃಷ್ಟಿಸಲಾಗುತ್ತಿದೆ.
ದ್ವಾರದಲ್ಲೇ ಲಿಫ್ಟ್ ಸೌಲಭ್ಯ
ಮಂದಿರಕ್ಕೆ ಆಗಮಿಸುವ ವೃದ್ಧರು ಮತ್ತು ವಿಕಲ ಚೇತನರೂ ಕೂಡ ಆರಾಮದಾಯಕವಾಗಿ ಪ್ರವೇಶಿಸಲು ಪೂರಕವಾಗುವಂತೆ ದ್ವಾರದಲ್ಲೇ ಲಿಫ್ಟ್ ಅಳವಡಿಕೆಯನ್ನೂ ಮಾಡಲಾಗುತ್ತಿದೆ. ಅಲ್ಲದೇ, ವೀಲ್ ಚೇರ್‌ಗಳಲ್ಲಿ ಬರುವವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಇಳಿಜಾರು ವ್ಯವಸ್ಥೆಯನ್ನೂ ಸ್ಥಾಪಿಸಲಾಗುತ್ತಿದೆ.
ಮಂದಿರ ಉದ್ಘಾಟನೆಗೆ ಮಮತಾ ಗೈರು ಸಾಧ್ಯತೆ
ಕೋಲ್ಕತ್ತಾ: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಮಂದಿರ ಉದ್ಘಾಟನೆ ಸಮಾರಂಭಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರಾಗುವ ಸಾಧ್ಯತೆಗಳು ಇವೆ. ಟಿಎಂಸಿಯ ಇತರ ನಾಯಕರೂ ಕೂಡ ಭಾಗವಹಿಸುವ ಸಾಧ್ಯತೆಗಳು ಕಡಿಮೆ. ಮಂದಿರ ಉದ್ಘಾಟನೆಗೆ ನೀಡಿರುವ ಆಹ್ವಾನವನ್ನು ಕೆಲವು ಎಡ ಪಕ್ಷಗಳು ತಿರಸ್ಕರಿಸುತ್ತಿರುವ ನಡುವೆಯೇ ಈ ಬೆಳವಣಿಗೆ ವರದಿಯಾಗಿದೆ. 2024ರ ಲೋಕಸಭೆ ಚುನಾವಣೆಗೆ ರಾಮ ಮಂದಿರವನ್ನು ಪ್ರಚಾರವಾಗಿ ಬಿಜೆಪಿ ಬಳಸಿಕೊಳ್ಳುತ್ತಿದ್ದೆ ಎಂದು ಟಿಎಂಸಿ ಭಾವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.