2023 Recap: ಈ ವರ್ಷ ಭಾರತೀಯ ಕ್ರೀಡಾಲೋಕದಲ್ಲಿ ಏನೇನು ನಡೆಯಿತು? ಇಲ್ಲಿದೆ ವರದಿ

Team Udayavani, Dec 28, 2023, 3:40 PM IST

ಈ ವರ್ಷದ ಭಾರತೀಯ ಕ್ರೀಡಾಲೋಕದಲ್ಲಿ ಏನೇನು ನಡೆಯಿತು? ಇಲ್ಲಿದೆ ವರದಿ

2023 – ಭಾರತೀಯ ಕ್ರೀಡಾ ಲೋಕದಲ್ಲಿ ಅತ್ಯಂತ ಪ್ರಮುಖ ವರ್ಷ. ಈ ವರ್ಷದಲ್ಲಿ ಕ್ರೀಡಾ ವಿಭಾಗದಲ್ಲಿ ಹಲವರು ತಾರೆಯರಾಗಿ ಮಿಂಚಿದ್ದಾರೆ. ನೀರಜ್ ಚೋಪ್ರಾ, ವಿರಾಟ್ ಕೊಹ್ಲಿ, ಚಿರಾಗ್ ಶೆಟ್ಟಿ ಹೀಗೆ ಹಲವರು ತಮ್ಮ ಆಟದಿಂದ ಈ ವರ್ಷ ಸಾಧನೆಯ ಶಿಖರವೇರಿ ಭಾರತದ ಗರಿಮೆ ಹೆಚ್ಚಿದವರು. ಕ್ರಿಕೆಟ್ ವಿಶ್ವಕಪ್, ಏಶ್ಯನ್ ಗೇಮ್ಸ್, ಕುಸ್ತಿ ಪಟುಗಳ ಪ್ರತಿಭಟನೆ, ಚೆಸ್ ವಿಶ್ವಕಪ್ ಹೀಗೆ ಹಲವು ಘಟನೆಗಳಿಗೆ ಸಾಕ್ಷಿಯಾಯಿತು 2023.

ಕೊಹ್ಲಿ ವಿರಾಟ್ ಪರ್ವ; 50ನೇ ಶತಕ

ಭಾರತೀಯ ಕ್ರಿಕೆಟ್ ನ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರು ಈ ವರ್ಷ ಅತ್ಯದ್ಭುತ ಪ್ರದರ್ಶನ ನೀಡಿದರು. ಸತತ ಮೂರು ವರ್ಷ ನಿರೀಕ್ಷೆಗೆ ತಕ್ಕ ಆಟವಾಡದ ವಿರಾಟ್ 2023ರಲ್ಲಿ ಎಲ್ಲಾ ಬರ ನೀಗಿಸಿದರು. ಟೆಸ್ಟ್ ನಲ್ಲಿ ಮೂರು ವರ್ಷದ ಬಳಿಕ ಶತಕ ಹೊಡೆದ ವಿರಾಟ್ ನಂತರದ ಏಕದಿನ ವಿಶ್ವಕಪ್ ನಲ್ಲಿ ಭರ್ಜರಿ ಆಟವಾಡಿದರು. 700ಕ್ಕೂ ಹೆಚ್ಚು ರನ್ ಪೇರಿಸಿದ ವಿರಾಟ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಅಲ್ಲದೆ ಸೆಮಿ ಫೈನಲ್ ಪಂದ್ಯದಲ್ಲಿ ಶತಕ ಬಾರಿಸುವುದರೊಂದಿಗೆ ಏಕದಿನ ಕ್ರಿಕೆಟ್ ನಲ್ಲಿ 50 ಶತಕ ಬಾರಿಸಿದ ವಿಶ್ವದ ಏಕೈಕ ಬ್ಯಾಟರ್ ಆದರು.

ಯಶಸ್ವಿ ಏಕದಿನ ವಿಶ್ವಕಪ್

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಕೂಟಕ್ಕೆ ಭಾರತ ಆತಿಥ್ಯ ವಹಿಸಿತ್ತು. ಏಕದಿನ ವಿಶ್ವಕಪ್ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಕೂಟ ಇದಾಗಿದೆ. ಹತ್ತು ತಂಡಗಳ, ಹತ್ತು ಮೈದಾನದಲ್ಲಿ ನಡೆದ ಕೂಟದಲ್ಲಿ ಹಲವು ದಾಖಲೆಗಳು ಬರೆದವು. ವಿಶೇಷವಾಗಿ ಭಾರತ ತಂಡವು ಸತತ ಹತ್ತು ಪಂದ್ಯ ಗೆದ್ದು ಫೈನಲ್ ತಲುಪಿತು. ಆದರೆ ಆಸ್ಟ್ರೇಲಿಯಾ ತಂಡವು ಫೈನಲ್ ನಲ್ಲಿ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತು.

ಏಷ್ಯನ್ ಗೇಮ್ಸ್

2023 ರ ಏಷ್ಯನ್ ಗೇಮ್ಸ್‌ನಲ್ಲಿ 107 ಪದಕಗಳೊಂದಿಗೆ ಭಾರತ ಅತ್ಯುತ್ತಮ ಪ್ರದರ್ಶನ ತೋರಿತು. 2018 ರ ಏಷ್ಯನ್ ಗೇಮ್ಸ್‌ನಲ್ಲಿನ ಪದಕಗಳ ಸಂಖ್ಯೆಗಿಂತ 38 ಹೆಚ್ಚು ಪದಕ ಗೆದ್ದ ಭಾರತ ಏಷ್ಯನ್ ವಲಯದಲ್ಲಿ ಯಾರಿಗೂ ಕಡಿಮೆಯಿಲ್ಲ ಎಂದು ತೋರಿಸಿತು.

ವನಿತಾ 5000 ಮೀ. ಓಟದಲ್ಲಿ ಚಿನ್ನ ಗೆದ್ದ ಪಾರುಲ್ ಚೌಧರಿ, ಸ್ಟೀಪಲ್ ಚೇಸ್ ನಲ್ಲಿ ಏಷ್ಯನ್ ದಾಖಲೆ ಬರೆದ ಅವಿನಾಶ್ ಸಬ್ಲೆ, ಹೈಜಂಪ್ ರಜತ ಪದಕ ಗೆದ್ದ ಮುರಳಿ ಶ್ರೀಶಂಕರ್, ಆ್ಯನ್ಸಿ ಸೋಜನ್ ಈ ಬಾರಿಯ ಹೈಲೈಟ್ಸ್.

ರಾಂಕಿ ರೆಡ್ಡಿ- ಚಿರಾಗ್ ಶೆಟ್ಟಿ

ಭಾರತದ ತಾರಾ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಇದೇ ವರ್ಷ ನಡೆದಿದ್ದ ಪ್ರತಿಷ್ಠಿತ ಇಂಡೋನೇಷ್ಯಾ ಓಪನ್‌ ಟೂರ್ನಿಯ ಪುರುಷರ ಡಬಲ್ಸ್​ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈ ಮೂಲಕ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿ ಎಂಬ ಐತಿಹಾಸಿಕ ಸಾಧನೆ ಮಾಡಿದ್ದರು. ಅಲ್ಲದೆ ಬಿಡಬ್ಲ್ಯೂಎಫ್ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿ, ಈ ಸಾಧನೆ ಮಾಡಿದ ಮೊದಲ ಭಾರತೀಯ ಜೋಡಿ ಎಂದೆನಿಸಿತು.

ಮೂರು ಮಾದರಿ ನಂಬರ್ 1

ಏಕದಿನ ವಿಶ್ವಕಪ್ ಫೈನಲ್ ಸೋಲು ಹೊರತುಪಡಿಸಿ 2023 ಭಾರತೀಯ ಕ್ರಿಕೆಟ್ ಗೆ ಭರ್ಜರಿ ಯಶಸ್ಸು ತಂದು ಕೊಟ್ಟ ವರ್ಷ. ಎಲ್ಲಾ ಮಾದರಿ ಕ್ರಿಕೆಟ್ ನಲ್ಲಿ ಪ್ರಭುತ್ವ ಮೆರೆದ ಭಾರತೀಯ ತಂಡವು ಮೂರು ಮಾದರಿಯಲ್ಲಿ ಅಗ್ರ ಶ್ರೇಯಾಂಕಕ್ಕೆ ಏರಿತು.

ಹುಬ್ಬೇರಿಸಿದ ಆರ್. ಪ್ರಜ್ಞಾನಂದ

ಭಾರತದ ಯುವ ಚೆಸ್ ಆಟಗಾರ ಆರ್.ಪ್ರಜ್ಞಾನಂದ ಅವರು ಈ ಬಾರಿ ವಿಶ್ವದ ಗಮನ ಸೆಳೆದವರು. ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕೇವಲ 18 ವರ್ಷದ ರಮೇಶ್‌ ಬಾಬು ಪ್ರಜ್ಞಾನಂದ ಫೈನಲ್ ತಲುಪಿದ್ದರು. ಅಂತಿಮ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ನಾರ್ವೆ ದೇಶದ 34 ವರ್ಷ ಪ್ರಾಯದ ಮ್ಯಾಗ್ನಸ್ ಕಾರ್ಲಸೆನ್ ಅವರು ಅಮೋಘ ಪೈಪೋಟಿ ನೀಡಿದರೂ ದ್ವಿತೀಯ ಪ್ರಶಸ್ತಿಗೆ ತೃಪ್ತಿಪಡಬೇಕಾಯಿತು.

ನೀರಜ್ ಚೋಪ್ರಾ

ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಸಾಧನೆಯ ಪಯಣ 2023ರಲ್ಲಿಯೂ ಮುಂದುವರಿಯಿತು. ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಗೆದ್ದಿದ್ದ ನೀರಜ್ ಚೋಪ್ರಾ ಅವರು ಬುಡಾಪೆಸ್ಟ್​ನಲ್ಲಿ ನಡೆದಿದ್ದ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 88.17 ಮೀ. ದೂರ ಜಾವೆಲಿನ್​ ಎಸೆದು ಭಾರತಕ್ಕೆ ಚೊಚ್ಚಲ ಮತ್ತು ಐತಿಹಾಸಿಕ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.

ಕುಸ್ತಿ ಪಟುಗಳ ಪ್ರತಿಭಟನೆ

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಭಾರತೀಯ ಕುಸ್ತಿ ಪಟುಗಳು ಪ್ರತಿಭಟನೆ ನಡೆಸಿದ ಘಟನೆಯೂ ಈ ವರ್ಷ ನಡೆಯಿತು. ಒಲಿಂಪಿಕ್ ಪದಕ ವಿಜೇತರಾದ ವಿನೇಶ್ ಪೋಗಟ್, ಭಜರಂಗ್ ಪೂನಿಯಾ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವಿದೇಶದಲ್ಲಿಯೂ ಸದ್ದು ಮಾಡಿತ್ತು. ಬೀದಿಗಳಲ್ಲಿ ತಿಂಗಳುಗಟ್ಟಲೆ ಪ್ರತಿಭಟನೆ ಮಾಡಿದ ನಂತರ ತನಿಖೆ ಮಾಡಲು ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆಯ ವಹಿಸಿ ಸೂಚಿಸಿತ್ತು. ಸಿಂಗ್ ವಿರುದ್ಧ ಬಳಿಕ ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದರು.

ಸಾನಿಯಾ ಮಿರ್ಜಾ ವಿದಾಯ

ಮೂಗುತಿ ಸುಂದರಿ ಎಂದೇ ಖ್ಯಾತಿ ಪಡೆದ, ಭಾರತದಲ್ಲಿ ಟೆನ್ನಿಸ್ ಹುಚ್ಚು ಹೆಚ್ಚಿಸಿದ ಸಾನಿಯಾ ಮಿರ್ಜಾ ಅವರು ಈ ವರ್ಷದ ಆರಂಭದಲ್ಲೇ ತಮ್ಮ ಟೆನಿಸ್ ವೃತ್ತಿಬದುಕಿಗೆ ವಿದಾಯ ಘೋಷಿಸುವ ತೀರ್ಮಾನ ಪ್ರಕಟಿಸಿದ್ದರು. 2023ರ ಆಸ್ಟ್ರೇಲಿಯನ್ ಓಪನ್​ಲ್ಲಿ ಆಡುವ ಮೂಲಕ ಸಾನಿಯಾ ಟೆನಿಸ್​ಗೆ ವಿದಾಯ ಹೇಳಿದ್ದರು. ಕೊನೆಯದಾಗಿ ರೋಹನ್ ಬೋಪಣ್ಣ ಜತೆ ಮಿಶ್ರ ಡಬಲ್ಸ್​ ಆಡಿದ್ದ ಅವರು ಈ ಟೂರ್ನಿಯಲ್ಲಿ ರನ್ನರ್​ ಅಪ್ ಆದರು.

ವನಿತಾ ಪ್ರೀಮಿಯರ್ ಲೀಗ್

ಇಂಡಿಯನ್ ಪ್ರೀಮಿಯರ್ ಲೀಗ್ ನಂತೆ ವನಿತಾ ಪ್ರೀಮಿಯರ್ ಲೀಗ್ ನಡೆಸಬೇಕೆಂಬ ಬೇಡಿಕೆ ಈ ವರ್ಷ ಈಡೇರಿತು. ಬಿಸಿಸಿಐ ಕಳೆದ ಮಾರ್ಚ್ ನಲ್ಲಿ ಮೊದಲ ವನಿತಾ ಪ್ರೀಮಿಯರ್ ಲೀಗ್ ಆಯೋಜಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಸೆಣಸಾಡಿದ್ದವು. ಹರ್ಮನ್ ನಾಯಕತ್ವದ ಮುಂಬೈ ಇಂಡಿಯನ್ಸ್ ಮೊದಲ ಕಪ್ ಗೆದ್ದುಕೊಂಡಿತು.

ಟಾಪ್ ನ್ಯೂಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರಾಧ ಜಗತ್ತಿನಲ್ಲಿ 2023ರ ತಲ್ಲಣ; ಸೈಬರ್‌ ವಂಚನೆಗಿಲ್ಲ ಕಡಿವಾಣ

ಅಪರಾಧ ಜಗತ್ತಿನಲ್ಲಿ 2023ರ ತಲ್ಲಣ; ಸೈಬರ್‌ ವಂಚನೆಗಿಲ್ಲ ಕಡಿವಾಣ

3–recap

2023 Recap: ವಿನೋದ-ವಿವಾದಗಳ ಸಾಗರ

2023 Recap: ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ CNG ಕಾರುಗಳು

2023 Recap: ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ CNG ಕಾರುಗಳು

2023 Flashback: ಭಾರತದಲ್ಲಿ ಬಿಡುಗಡೆಯಾದ ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳಿವು…

2023 Flashback: ಭಾರತದಲ್ಲಿ ಬಿಡುಗಡೆಯಾದ ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳಿವು…

2023 Recap; ಸಿಹಿ-ಕಹಿ ನೆನಪುಗಳ ಆಗರ

2023 Recap; ಸಿಹಿ-ಕಹಿ ನೆನಪುಗಳ ಆಗರ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.