Kaatera: ಇಂದಿನಿಂದ ಫ್ಯಾನ್ಸ್‌ಗೆ ‘ಕಾಟೇರ’ ಉತ್ಸವ
Team Udayavani, Dec 29, 2023, 10:32 AM IST
ಬಹುಶಃ ಈ ವರ್ಷ ಇಂತಹ ಒಂದು ಕ್ರೇಜ್ ಯಾವ ಸಿನಿಮಾಕ್ಕೂ ಸಿಕ್ಕಿರಲಿಲ್ಲ. ಅಂತಹ ಒಂದು ಕ್ರೇಜ್ ದರ್ಶನ್ ನಟನೆಯ “ಕಾಟೇರ’ ಚಿತ್ರಕ್ಕೆ ಸಿಕ್ಕಿದೆ. ಈ ಮೂಲಕ ಕನ್ನಡ ಚಿತ್ರರಂಗ ವರ್ಷಾಂತ್ಯದಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಗುರುವಾರ ಮಧ್ಯರಾತ್ರಿಯಿಂದಲೇ ಶೋಗಳು ಆರಂಭವಾಗಿದ್ದು, ಮುಂಗಡ ಬುಕ್ಕಿಂಗ್‌ನಿಂದಲೇ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸುವ ಮೂಲಕ “ಕಾಟೇರ’ ತನ್ನ ಹವಾ ಸಾಬೀತುಪಡಿಸಿದೆ.
ಇದು ಒಂದಾದರೆ ತುಂಬಾ ದಿನಗಳ ನಂತರ ಒಂದು ಚಿತ್ರಮಂದಿರದ ಮಾಲೀಕರು ಭರ್ಜರಿ ನಿರೀಕ್ಷೆಯಿಂದ ಎದುರು ನೋಡುತ್ತಿರುವ ಚಿತ್ರವಿದು. ಪ್ರತಿ ಚಿತ್ರಮಂದಿರ ಗಳಲ್ಲೂ ದಿನವೊಂದಕ್ಕೆ 6 ರಿಂದ 7 ಶೋಗಳು ನಡೆಯುವ ಸಾಧ್ಯತೆಗಳಿವೆ. ಆಯಾ ಏರಿಯಾದ ಚಿತ್ರಮಂದಿರಗಳನ್ನು ಅಭಿಮಾನಿಗಳು ದೇವಾಲಯದಂತೆ ಸಿಂಗರಿಸುವ ಮೂಲಕ ತಮ್ಮ ಅಭಿಮಾನ ತೋರಿಸುತ್ತಿದ್ದಾರೆ.
ರಾಜ್ಯಾದ್ಯಂತ ಈಗಾಗಲೇ 550ಕ್ಕೂ ಹೆಚ್ಚು ಸ್ಕ್ರೀನ್‌ಗಳು ಅಧಿಕೃತವಾಗಿದ್ದು, ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು 1000ಕ್ಕೂ ಹೆಚ್ಚು ಸ್ಕ್ರೀನ್ ಗಳನ್ನು ನಿರೀಕ್ಷಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಹಾಡು, ಟ್ರೇಲರ್ ಹಿಟ್ ಆಗುವ ಮೂಲಕ ಸಿನಿಮಾದ ಕ್ರೇಜ್ ಭರ್ಜರಿ ಯಾಗಿ ಹೆಚ್ಚಿರೋದು ಸುಳ್ಳಲ್ಲ.
ಇನ್ನು, “ಕಾಟೇರ’ ಸಿನಿಮಾದಲ್ಲಿ ದರ್ಶನ್ ಹಳ್ಳಿ ಹೈದನಾಗಿ ಕುಲುಮೆಯಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ಕಾಣಿಸಿ ಕೊಂಡಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ, ತರುಣ್ ಸುಧೀರ್ ನಿರ್ದೇಶನ ಚಿತ್ರಕ್ಕಿದೆ.
ಮಾಲಾಶ್ರೀ ಪುತ್ರಿಯ ಅದ್ಧೂರಿ ಲಾಂಚ್
ಕನಸಿನ ರಾಣಿ ಮಾಲಾಶ್ರೀ ಹಾಗೂ ಕೋಟಿ ನಿರ್ಮಾಪಕ ಎಂದೇ ಕರೆಸಿಕೊಂಡಿದ್ದ ನಿರ್ಮಾಪಕ ಕೋಟಿ ರಾಮು ಅವರ ಪುತ್ರಿ ಆರಾಧನಾ ರಾಮು ಇಂದು ಕಾಟೇರ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಮೊದಲ ಚಿತ್ರದಲ್ಲೇ ಅದ್ಧೂರಿ ಲಾಂಚ್ ಸಿಕ್ಕಿದೆ. ಒಂದು ಕಡೆ ರಾಕ್‌ಲೈನ್ ವೆಂಕಟೇಶ್ ಬ್ಯಾನರ್ ಮತ್ತೂಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಇನ್ನೊಂದು ಕಡೆ “ರಾಬರ್ಟ್’ನಂತಹ ಹಿಟ್ ಸಿನಿಮಾ ಕೊಟ್ಟ ತರುಣ್ ಸುಧೀರ್… ಈ ಮೂವರ ಕಾಂಬಿನೇಶನ್‌ನಲ್ಲಿ ಬಂದಿರುವ “ಕಾಟೇರಾ’ ಸಿನಿಮಾ ಮೂಲಕ ಆರಾಧಾನಾ ಅದ್ಧೂರಿಯಾಗಿ ಇಂದು ಲಾಂಚ್ ಆಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.