Sirsi: ಸ್ವರ್ಣವಲ್ಲೀ ಶ್ರೀಗಳಿಂದ ನೂತನ ಶಿಷ್ಯ ಸ್ವೀಕಾರ: ಇಲ್ಲಿದೆ ಸಂಪೂರ್ಣ ವಿವರ
Team Udayavani, Dec 29, 2023, 5:03 PM IST
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ‍್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನೂತನ ಶಿಷ್ಯರ ಸ್ವೀಕಾರಕ್ಕೆ ತೀರ್ಮಾನಿಸಿ, ನೇಮಕಗೊಳಿಸಿದ್ದಾರೆ.
ಆಧ್ಯಾತ್ಮ, ಧಾರ್ಮಿಕ, ಸಮಾಜಮುಖಿ, ಶೈಕ್ಷಣಿಕ, ಪರಿಸರದ ಸಂರಕ್ಷಣೆ, ಭಗವದ್ಗೀತಾ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಸ್ವರ್ಣವಲ್ಲೀ ಶ್ರೀಗಳ ಅಪೇಕ್ಷೆ ಹಾಗೂ ಸೂಚನೆಯಂತೆ ಕಳೆದ ಹಲವು ವರ್ಷಗಳಿಂದ ಶಿಷ್ಯರ ಹುಡುಕಾಟ ನಡೆದಿತ್ತು. ಜೋತಿಷ್ಯರ ಸಲಹೆ, ಸೂಚನೆ ಪಡೆದು ಯಲ್ಲಾಪುರ ತಾಲೂಕಿನ ಈರಾಪುರ ತಾಲೂಕಿನ ಗಂಗೇಮನೆಯ ವಿದ್ವಾನ್ ನಾಗರಾಜ್ ಭಟ್ಟ ಅವರನ್ನು ಶ್ರೀಗಳ ಶಿಷ್ಯರಾಗಿ ಸ್ವೀಕರಿಸಲು ತೀರ್ಮಾನಿಸಲಾಗಿದೆ.
ಸ್ವರ್ಣವಲ್ಲೀ ಮಠದಲ್ಲೇ ಕಳೆದ ಒಂದು ದಶಕಗಳಿಂದ ವೇದಾಧ್ಯಯನ ನಡೆಸಿ, ಇದೀಗ ವೇದಾಂತ ಶಾಸ್ತ್ರ ಅಧ್ಯಯನ ಮಾಡುತ್ತಿರುವ ೨೩ರ ವಯೋಮಾನದ ನಾಗರಾಜ್ ಭಟ್ಟ ಅವರು ಗಣಪತಿ ಭಟ್ಟ ಹಾಗೂ ಭುವನೇಶ್ವರಿ ಅವರ ಪ್ರಥಮ ಪುತ್ರರು. ನಾಗರಾಜ್ ಭಟ್ಟ ಅವರನ್ನು ಶ್ರೀಗಳ ಶಿಷ್ಯರನ್ನಾಗಿ ಸ್ವೀಕರಿಸಲು ಕಳೆದ ಡಿ.೨೫ರಂದು ನಡೆದ ಆಡಳಿತ ಮಂಡಳಿ ಸಭೆ ಕೂಡ ನಿರ್ಣಯಿಸಿ ಸಮ್ಮತಿಸಿದೆ.
ಮೂಲತಃ ಈರಾಪುರ ಗಂಗೆಮನೆಯ ಕೃಷಿ ಕುಟುಂಬದ ನಾಗರಾಜ ಭಟ್ಟ ಅವರಿಗೆ ಮೊದಲಿಂದಲೂ ಆಧ್ಯಾತ್ಮದ ಆಸಕ್ತಿ ಇತ್ತು. ಸ್ವರ್ಣವಲ್ಲೀ ಮಠದಲ್ಲೀ ಅತ್ಯಂತ ಆಸ್ಥೆಯಿಂದ ವೇದಾಧ್ಯಯನ, ವೇದಾಂತ ಶಾಸ್ತ್ರ ಅಧ್ಯಯನ ಮಾಡುತ್ತಿದ್ದು, ನಾಗರಾಜ ಭಟ್ಟ ಅವರ ಕುಂಡಲಿಯನ್ನೂ ಮೂರು ಪ್ರಮುಖ ಜೋತಿಷ್ಯ ರತ್ನರ ಮೂಲಕ ಪರಿಶೀಲಿಸಿ ಒಪ್ಪಿಗೆ ಪಡೆದು ನೇಮಕ ಮಾಡಲಾಗಿದೆ. ನಾಗರಾಜ್ ಭಟ್ಟ ಅವರ ಸಹೋದರ ಉಡುಪಿಯಲ್ಲಿ ಜೋತಿಷ್ಯ ಶಾಸ್ತ್ರ ಅಧ್ಯಯನ ನಡೆಸುತ್ತಿದ್ದಾರೆ.
ಶಿಷ್ಯ ಸ್ವೀಕಾರದ ಕಾರ್ಯಕ್ರಮ ಮಾಘ ಶುದ್ಧ ತ್ರಯೋದಶಿ ಫೆ ೨೨ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Kannada cinema; ‘ಫ್ರೈಡೇ’ ಸಂಭ್ರಮದಲ್ಲಿ ಶೃತಿ ಪ್ರಕಾಶ್: ಹೊಸಬರ ಚಿತ್ರಕ್ಕೆ ಮುಹೂರ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.