Uppinangady: ಲಾರಿಯೊಳಗೆ ಚಾಲಕ ಸಾವು- ಎರಡು ದಿನದ ಬಳಿಕ ಪ್ರಕರಣ ಬೆಳಕಿಗೆ
Team Udayavani, Dec 29, 2023, 11:12 PM IST
ಉಪ್ಪಿನಂಗಡಿ: ಇಲ್ಲಿನ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದ ಲಾರಿ ಚಾಲಕ ಹೃದಯಾಘಾತದಿಂದ ಲಾರಿಯಲ್ಲೇ ಮೃತಪಟ್ಟಿದ್ದು, ಎರಡು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಚನ್ನಪಟ್ಟಣದ ಖಲೀಲ್ ಖಾನ್ (58) ಮೃತ ವ್ಯಕ್ತಿ. ಮೈಸೂರಿನಿಂದ ಬಿ.ಸಿ. ರೋಡಿಗೆ ಹಾಸಿಗೆಯ ಲೋಡನ್ನು ಲಾರಿಯಲ್ಲಿ ತಂದಿದ್ದ ಅವರು ಅದನ್ನು ಖಾಲಿ ಮಾಡಿ ಎರಡು ದಿನಗಳ ಹಿಂದೆ ರಾತ್ರಿ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿರುವುದು ಕಂಡು ಬಂದಿದೆ.
ಮೃತ ಖಲೀಲ್ ಖಾನ್ ಬುಧವಾರ ರಾತ್ರಿ ತನ್ನ ಮನೆಗೆ ಪೋನಾಯಿಸಿ ತನಗೆ ಎದೆ ನೋವು ಕಾಣಿಸಿರುವುದರಿಂದ ಉಪ್ಪಿನಂಗಡಿಯಲ್ಲಿ ವಿಶ್ರಾಂತಿ ಪಡೆದು ನಾಳೆ ಬರುವೆನೆಂದು ತಿಳಿಸಿದ್ದು, ಗುರುವಾರ ಅವರು ಮನೆಗೆ ಹಿಂತಿರುಗದೇ ಇದ್ದ ಕಾರಣ ಅವರ ಪತ್ತೆಗಾಗಿ ಸಾಮಾಜಿಕ ಜಾಲತಾಣದ ಮೊರೆ ಹೋಗಲಾಯಿತು. ಈ ವೇಳೆ ಉಪ್ಪಿನಂಗಡಿಯ ರಾ.ಹೆ. 75ರಲ್ಲಿನ ಲೋಬೊ ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಿಲ್ಲಿಸಲಾದ ಲಾರಿಯನ್ನು ಪರಿಶೀಲಿಸಿದಾಗ ಅದರಲ್ಲಿ ವ್ಯಕ್ತಿಯೋರ್ವರು ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿರುವುದು ಕಂಡುಬಂತು.
ಸದಾ ಜನ ಸಂಚಾರವಿರುವ ಸ್ಥಳದಲ್ಲಿ ಲಾರಿಯೊಂದು ದಿನವಿಡೀ ನಿಂತಿರುವುದನ್ನು ಯಾರೂ ಗಮನಿಸದ ಕಾರಣಕ್ಕೆ ಲಾರಿಯೊಳಗೆ ಶವ ಎರಡು ದಿನಗಳ ಕಾಲ ಇರುವಂತಾಯಿತು. ಬಳಿಕ ಉಪ್ಪಿನಂಗಡಿಯ ಸಾಮಾಜಿಕ ಕಾರ್ಯಕರ್ತ ಫಾರೂಕ್ ಜಿಂದಗಿ ಹಾಗೂ ಉಪ್ಪಿನಂಗಡಿ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದವರು ಲಾರಿಯಿಂದ ಮೃತದೇಹವನ್ನು ತೆಗೆದು, ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಇಲ್ಲಿನ ಮಾಲೀಕುದ್ದೀನಾರ್ ಮಸೀದಿಯಲ್ಲಿ ಮೃತದೇಹದ ಅಂತಿಮ ವಿಧಿ-ವಿಧಾನಗಳನ್ನು ನಡೆಸಿ, ಅವರ ಊರಿಗೆ ಮೃತದೇಹವನ್ನು ಕಳುಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.