I.N.D.I.A ಒಕ್ಕೂಟಕ್ಕೆ ‘ಕೈ’ಕೊಟ್ಟರೇ ಮಮತಾ, ಉದ್ಧವ್ ಠಾಕ್ರೆ?
ಸೀಟು ಹಂಚಿಕೆ ಬಿಕ್ಕಟ್ಟು, 48ರಲ್ಲಿ 23 ಸೀಟಿಗೆ ಉದ್ಧವ್ ಬೇಡಿಕೆ: ಸಿಗದಿದ್ದರೆ ಏಕಾಂಗಿ ಸ್ಪರ್ಧೆಗೆ ಇಂಗಿತ
Team Udayavani, Dec 30, 2023, 6:35 AM IST
ಮುಂಬಯಿ/ಹೊಸದಿಲ್ಲಿ: ವಿಪಕ್ಷಗಳ ಮೈತ್ರಿಕೂಟ ಐ.ಎನ್.ಡಿ.ಐ.ಎ. ಪಾಲುದಾರ ಪಕ್ಷಗಳಾಗಿರುವ ತೃಣಮೂಲ ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ನೇತೃ ತ್ವದ ಶಿವಸೇನೆ ಬಣ ಕ್ರಮವಾಗಿ ಪಶ್ಚಿಮ ಬಂಗಾಲ ಮತ್ತು ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿ ಕೊಳ್ಳದೆ ಸ್ವತಂತ್ರ ವಾಗಿ ಸ್ಪರ್ಧಿ ಸಲು ಮುಂದಾಗಿದೆ.
ಈ ಎರಡು ಪಕ್ಷಗಳ ಈ ತೀರ್ಮಾನದಿಂದ ಐ.ಎನ್.ಡಿ.ಐ.ಎ.ಮೈತ್ರಿ ಕೂಟಕ್ಕೆ ತೀವ್ರ ಹಿನ್ನಡೆಯಾಗಿದೆ. ಇದರ ಹೊರತಾ ಗಿಯೂ ಕಾಂಗ್ರೆಸ್ ಮಿತ್ರ ಪಕ್ಷಗಳನ್ನು ಸಮಾಧಾನ ಗೊಳಿಸುವ ಪ್ರಯತ್ನಗಳನ್ನು ಮುಂದು ವರಿಸಿದ್ದು ಸೀಟು ಹಂಚಿಕೆಗೆ ಸಂಬಂಧಿ ಸಿದಂತೆ ರಾಜಿ ಸೂತ್ರವೊಂದರ ತಲಾಶೆಯಲ್ಲಿ ನಿರತವಾಗಿದೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಹಾ ರಾಷ್ಟ್ರದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಲು ಸನ್ನದ್ಧವಾಗಿದೆ ಎಂದು ಶಿವಸೇನೆ ಉದ್ಧವ್ ಬಣದ ಸಂಸದ ಸಂಜಯ್ ರಾವುತ್ ಶುಕ್ರವಾರ ಘೋಷಿಸಿದರು. ಮಹಾರಾಷ್ಟ್ರ ದಲ್ಲಿ ಶಿವಸೇನೆ ಅತೀ ದೊಡ್ಡ ಪಕ್ಷವಾಗಿರುವುದರಿಂದ 23 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಈಗಾಗಲೇ ಕಾಂಗ್ರೆಸ್ ನಾಯಕರಿಗೆ ತಿಳಿಸಿದೆ. ತಮ್ಮ ಬೇಡಿಕೆಗೆ ಮಿತ್ರಪಕ್ಷಗಳು ಒಪ್ಪಿಗೆ ನೀಡದಿದ್ದಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದವರು ಹೇಳಿದರು.
ಗುರುವಾರದಂದು ಪಶ್ಚಿಮ ಬಂಗಾಲ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಅವರು, ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಲೋಕಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಮುಂದಿನ ವಾರ ಕಾಂಗ್ರೆಸ್‌ನಿಂದ ಸೀಟು ಹಂಚಿಕೆ ಮಾತುಕತೆ ಆರಂಭ
ಎರಡು ಪ್ರಮುಖ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಘೋಷಣೆ ಮಾಡಿರುವಂತೆಯೇ ಕಾಂಗ್ರೆಸ್‌ನ ರಾಷ್ಟ್ರೀಯ ಮೈತ್ರಿಕೂಟದ ಸಮಿತಿ ವಿವಿಧ ರಾಜ್ಯಗಳಲ್ಲಿನ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಸಂಬಂಧ ಮುಂದಿನ ವಾರ ಮಾತುಕತೆಯನ್ನು ಆರಂಭಿಸಲು ನಿರ್ಧರಿಸಿದೆ. ಶುಕ್ರವಾರ ಮತ್ತು ಶನಿವಾರ ವಿವಿಧ ಪಕ್ಷಗಳ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮಿತಿ ತನ್ನ ವರದಿಯನ್ನು ಸಲ್ಲಿಸಲಿದೆ. ಆ ಬಳಿಕ ಪಕ್ಷ ಅಧಿಕೃತವಾಗಿ ಸೀಟು ಹಂಚಿಕೆ ಸಂಬಂಧ ಮಾತುಕತೆ ಆರಂಭಿಸಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸಿ, ಮುಂಬರುವ ಲೋಕಸಭೆ ಚುನಾವಣೆಯ ಸಿದ್ಧತೆ, ಮಿತ್ರಪಕ್ಷಗಳೊಂದಿಗಿನ ಸೀಟು ಹಂಚಿಕೆಯ ಕುರಿತಂತೆ ವಿಚಾರವಿಮರ್ಶೆ ನಡೆಸಿದರು. ಕಾಂಗ್ರೆಸ್ ಕಳೆದ ವಾರ ಈ ಸಮಿತಿಯನ್ನು ರಚಿಸಿದ್ದು, ಪಿ. ಚಿದಂಬರಂ ನೇತೃತ್ವದ ಈ ಸಮಿತಿಯಲ್ಲಿ ಪಕ್ಷದ ನಾಯಕರಾದ ಮುಕುಲ್ ವಾಸ್ನಿಕ್, ಅಶೋಕ್ ಗೆಹೊÉàಟ್, ಭೂಪೇಶ್ ಬಘೇಲ್, ಸಲ್ಮಾನ್ ಖುರ್ಷಿದ್ ಇದ್ದಾರೆ.
ಜ. 4ಕ್ಕೆ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಮೊದಲ ಸಭೆ
ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ನೇತೃತ್ವದ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಮೊದಲ ಸಭೆಯು ಜನವರಿ 4ರಂದು ನಡೆಯಲಿದೆ. ಇದೇ ದಿನದಂದು ಕಾಂಗ್ರೆಸ್ ಹಮ್ಮಿಕೊಂಡಿರುವ “ಭಾರತ್ ನ್ಯಾಯ್ ಯಾತ್ರಾ’ ಸಾಗಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಘಟಕಗಳ ಮುಖ್ಯಸ್ಥರು ಮತ್ತು ಶಾಸಕಾಂಗ ಪಕ್ಷದ ನಾಯಕರೊಂದಿಗೆ ಕಾಂಗ್ರೆಸ್‌ನ ಉನ್ನತ ನಾಯಕರು ಸಭೆ ನಡೆಸಲಿರುವರು. ಜ. 8ರಂದು ಯಾತ್ರೆ ಸಾಗಲಿರುವ ಮಾರ್ಗದ ವಿವರಗಳು ಬಿಡುಗಡೆಗೊಳ್ಳಲಿದ್ದರೆ, ಜ. 12ರಂದು ಯಾತ್ರೆಯ ಧ್ಯೇಯ ಗೀತೆ’ಯನ್ನು ಪಕ್ಷದ ನಾಯಕರು ಬಿಡುಗಡೆ ಮಾಡಲಿರು ವರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಸಮಿತಿ ಯಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸದಸ್ಯರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.