Desi Swara: ಜನಮನ ರಂಜಿಸಿದ ಕನ್ನಡ ಸಂಘದ “ಕನ್ನಡ ಹಬ್ಬ’ದ ವೈಭವ

ದ್ವೀಪದಲ್ಲಿ ಕರುನಾಡ ವೈಭವ

Team Udayavani, Dec 30, 2023, 10:15 AM IST

Desi Swara: ಜನಮನ ರಂಜಿಸಿದ ಕನ್ನಡ ಸಂಘದ “ಕನ್ನಡ ಹಬ್ಬ’ದ ವೈಭವ

ಬಹ್ರೈನ್‌:ಇಲ್ಲಿನ ಕನ್ನಡ ಸಂಘವು ತನ್ನ ವಾರ್ಷಿಕ ಕಾರ್ಯಕ್ರಮವಾದ “ಕನ್ನಡ ವೈಭವ’ವನ್ನು ಕನ್ನಡ ಭವನದ ಸಭಾಂಗಣದಲ್ಲಿ ಕನ್ನಡ ನಾಡು-ನುಡಿಗಳ ಹಿರಿಮೆ, ಗರಿಮೆಗಳನ್ನು ಸಾರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಡಿನ ಸಾಧಕ ಗಣ್ಯರುಗಳೊಂದಿಗೆ ಬಹಳ ಅದ್ದೂರಿಯಾಗಿ ಆಚರಿಸಿತು. ನೆರೆದ ನೂರಾರು ಜನರು ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಮುತ್ತುಗಳ ದ್ವೀಪದಲ್ಲಿ ಕರುನಾಡಿನ ವೈಭವವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಈ ಕನ್ನಡ ವೈಭವ ಕಾರ್ಯಕ್ರಮದ ಉದ್ಘಾಟಕರಾಗಿ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಜಿ. ಆರ್‌. ಮೆಡಿಕಲ್‌ ಕಾಲೇಜ್‌ ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾದ ಎಸ್‌ .ಗಣೇಶ್‌ ರಾವ್‌ , ಮುಖ್ಯ ಅತಿಥಿಗಳಾಗಿ ಶಿರಸಿಯ ಮಾನ್ಯ ಶಾಸಕರಾದ ಭೀಮಣ್ಣ ನಾಯ್ಕ್‌  ಹಾಗೂ ಗೌರವಾನ್ವಿತ ಅತಿಥಿಗಳಾಗಿ ಕನ್ನಡ ಚಲನಚಿತ್ರರಂಗದ ಜನಪ್ರಿಯ ನಟರಾದ ರವಿಶಂಕರ್‌ ಗೌಡ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕನ್ನಡ ಸಂಘದ ಅಧ್ಯಕ್ಷರಾದ ಅಮರನಾಥ್‌ ರೈ ಅವರ ಸಾರಥ್ಯದಲ್ಲಿ ಜರಗಿದ ಈ ಕಾರ್ಯಕ್ರಮವನ್ನು ಉದ್ಘಾಟಕರಾದ ಎಸ್‌. ಗಣೇಶ್‌ ರಾವ್‌ ಮೊದಲ್ಗೊಂಡು ಇತರ ಅತಿಥಿಗಳು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಗಾಯಕ, ಗಾಯಕಿಯರು ಒಂದಾಗಿ ಸುಶ್ರಾವ್ಯವಾಗಿ ನಾಡಗೀತೆಯನ್ನು ಹಾಡುವಾಗ ಎಲ್ಲರೂ ಎದ್ದು ನಿಂತು ನಾಡ ಗೀತೆಗೆ ಗೌರವ ಸಲ್ಲಿಸಿದರು. ಬೆಂಗಳೂರಿನ ಖ್ಯಾತ ಸಂಕರ್ಷಣ ನೃತ್ಯ ಅಕಾಡೆಮಿಯವರಿಂದ ಡಾ| ಸುಮನಾ ರಂಜಲ್ಕರ್‌ ಅವರ ನೇತೃತ್ವದಲ್ಲಿ ಸುಮಾರು ಒಂದು ಘಂಟೆಗಳ ಕಾಲ ವೈವಿಧ್ಯಮಯವಾದ ಶಾಸ್ತ್ರೀಯ ನೃತ್ಯ ಪ್ರದರ್ಶನಗಳು ವೇದಿಕೆಯಲ್ಲಿ ಮೂಡಿಬಂದು ಒಂದು ಅದ್ಭುತ ಲೋಕ ಸೃಷ್ಟಿಯಾಗಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

ಅನಂತರ ಜರಗಿದ ಸಭಾಕಾರ್ಯಕ್ರಮದಲ್ಲಿ ಉದ್ಘಾಟಕರಾದ ಎಸ್‌. ಗಣೇಶ್‌ ರಾವ್‌, ಮುಖ್ಯ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಸಾಂಪ್ರಾದಾಯಿಕವಾಗಿ ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಅತಿಥಿಗಳೂ ತಾಯ್ನಾಡಿನಿಂದ ಸಾವಿರಾರು ಮೈಲು ದೂರವಿದ್ದೂ ದ್ವೀಪದ ಕನ್ನಡಿಗರ ಕನ್ನಡದ ಕಾಳಜಿ, ಅಪ್ಪಟ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸರಲ್ಲದೆ ಬಹ್ರೈನ್‌ ಕನ್ನಡಿಗರಿಗೆ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕಲೆಯ ಮೇಲಿರುವ ಪ್ರೀತಿ, ಅಭಿಮಾನ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಸಂಘದ ಅಧ್ಯಕ್ಷರಾದ ಅಮರನಾಥ್‌ ರಾಯ್‌ ಅವರು ಎಲ್ಲರಿಗೂ ಶುಭಹಾರೈಸಿ ಮಾತನಾಡಿ, ಸಂಘವು ಮುಂದಿನ ದಿನಗಳಲ್ಲಿ ಹಾಕಿಕೊಂಡಿರುವ ಹೊಸ ಹೊಸ ಯೋಜನೆಗಳ ಬಗ್ಗೆ ಮಾತನಾಡಿ ಇದಕ್ಕೆ ಸರ್ವ ಸದಸ್ಯರ ಸಹಕಾರ ಅತ್ಯಗತ್ಯ ಎಂದರು. ಇದೆ ಸಂದರ್ಭದಲ್ಲಿ ಕನ್ನಡ ಸಂಘದ ವಾರ್ಷಿಕ ಸ್ಮರಣ ಸಂಚಿಕೆ “ಕಾವೇರಿ’ಯನ್ನು ಶಾಸಕ ಭೀಮಣ್ಣ ನಾಯ್ಕ್ ಅವರು ಬಿಡುಗಡೆಗೊಳಿಸಿದರು. ಕಾವೇರಿ ಸಂಪಾದಕ ಸಮಿತಿಯ ಕೃಷ್ಣ ಭಟ್‌ , ಡಿ.ರಮೇಶ್‌, ಕಿರಣ್‌ ಉಪಾಧ್ಯಾಯ, ಪೂರ್ಣಿಮಾ ಜಗದೀಶ್‌, ಮಾಧ್ಯಮ ಸಹಕಾರಕ್ಕಾಗಿ ಕಮಲಾಕ್ಷ ಅಮೀನ್‌ , ಸ್ವಯಂಸೇವಕರಾದ ಸಂಧ್ಯಾ ಪೈ, ಸತೀಶ್‌ ಮಲ್ಪೆ, ಪುಷ್ಪರಾಜ್‌ ಪೂಜಾರಿಯವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಆಭ್ಯಾಗತರಾಗಿ ಉಪಸ್ಥಿತರಿದ್ದ ಸಮಾಜಸೇವಕ ವೆಂಕಟೇಶ್‌ ಹೆಗಡೆ ಹೊಸಬಾಳೆ ಅವರನ್ನು ಗೌರವಿಸಲಾಯಿತು. ಕನ್ನಡ ಸಂಘವು ಜನವರಿ 2024ರಲ್ಲಿ ಬ್ರಹತ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಆಯೋಜಿಸಿದ್ದು ಅದರ ಕರಪತ್ರವನ್ನು ರವಿಶಂಕರ್‌ ಗೌಡ ಅವರು ಬಿಡುಗಡೆಗೊಳಿಸಿದರು. ಈ ವೇಳೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರವಿಶಂಕರ್‌ ಗೌಡ ಅವರು ಕನ್ನಡದ ಹಿರಿಮೆ ಗರಿಮೆಗಳನ್ನು ಸಾರುವ ಕನ್ನಡ ಚಲನ ಚಿತ್ರಗೀತೆಗಳನ್ನು ಹಾಡಿ ತಮ್ಮ ಸುಮಧುರ ಧ್ವನಿಯಿಂದ ಪ್ರೇಕ್ಷಕರನ್ನು ರಂಜಿಸಿದರು. ಸಂಘದ ಪ್ರತಿಭಾನ್ವಿತ ಕಲಾವಿದರುಗಳಿಂದ ವೈವಿಧ್ಯಮಯವಾದಂತಹ ನೃತ್ಯ ಪ್ರದರ್ಶನಗಳು,ಪ್ರಹಸನಗಳು ರಂಗದಲ್ಲಿ ಮೂಡಿಬಂದು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಹೇಶ್‌ ಕುಮಾರ್‌ ಅವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಾಮ್‌ ಪ್ರಸಾದ್‌ ಅಮ್ಮೆನಡ್ಕ ಸ್ವಾಗತಿಸಿ ಸಭಾಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಸಮರ್ಪಣೆ ಮಾಡಿದರೆ. ದೀಪಕ್‌ ರಾವ್‌ ಪೇಜಾವರ ಹಾಗೂ ಹೇಮಾ ಶಿವಾನಂದ್‌ ಪಾಟೀಲ್‌ ಒಟ್ಟು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ವರದಿ-ಕಮಲಾಕ್ಷ ಅಮೀನ್‌

ಟಾಪ್ ನ್ಯೂಸ್

1-deee

Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Minchu Hulu Review

Minchu Hulu Review: ಮಿಂಚುಹುಳು ತಂದ ಹೊಸಕಿರಣ

1-deee

Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ

Vinesh Phogat forgot my father’s help: Babita Phogat

Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್‌ ಮರೆತಿದ್ದಾರೆ: ಬಬಿತಾ ಫೋಗಾಟ್

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.