HD Kote: ಕಬಿನಿ ಹಿನ್ನೀರಿನಲ್ಲಿ ಬಾರ್‌ ಹೆಡೆಡ್‌ಗೂಸ್‌ಗಳ ಕಲರವ


Team Udayavani, Dec 30, 2023, 6:29 PM IST

HD Kote: ಕಬಿನಿ ಹಿನ್ನೀರಿನಲ್ಲಿ ಬಾರ್‌ ಹೆಡೆಡ್‌ಗೂಸ್‌ಗಳ ಕಲರವ

ಎಚ್‌.ಡಿ.ಕೋಟೆ: ಮಧ್ಯ ಏಷ್ಯಾದಿಂದ ರಾಜ್ಯದ ದಕ್ಷಿಣ ಭಾಗಕ್ಕೆ ವಲಸೆ ಬರುವ ಪಟ್ಟೆ ತಲೆಯ ಹೆಬ್ಟಾತು (ಬಾರ್‌ ಹೆಡೆಡ್‌ ಗೂಸ್‌) ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಕಾಣಿಸಿಕೊಂಡು ಪಕ್ಷಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿವೆ.

ದೇಶ ವಿದೇಶಗಳಿಂದ ಹಾರಿಬರುವ ಸಾವಿರಾರು ಪಕ್ಷಿಗಳಾದ ಪಟ್ಟೆ ತಲೆ ಹೆಬ್ಟಾತು ಅಥವಾ ಗೀರು ತಲೆ ಹೆಬ್ಟಾತುಗಳು ತಾವು ಮೂಲ ಸ್ಥಳದಲ್ಲಿ ಬೇಸಿಗೆಯಲ್ಲಿ ಸಂತಾನೋತ್ಪತ್ತಿ ಮಾಡಿ, ಮಳೆಗಾಲದಲ್ಲಿ ಮರಿಗಳನ್ನು ಬೆಳೆಸಿಕೊಂಡು ಚಳಿಗಾಲದಲ್ಲಿ ದಕ್ಷಿಣ ಭಾರತದತ್ತ ವಲಸೆ ಬರುತ್ತಿವೆ. ಚಳಿಗಾಲ ಮುಗಿದ ನಂತರ ಮಾರ್ಚ್‌ – ಏಪ್ರಿಲ್‌ ಹೊತ್ತಿಗೆ ವಾಪಸ್‌ ತೆರಳುತ್ತವೆ. ಅದರಲ್ಲೂ ಕಳೆದ ಆರೇಳು ವರ್ಷಗಳಿಂದ ತಪ್ಪದೆ ತಾಲೂಕಿನ ಕಬಿನಿ ಜಲಾ ಶಯದ ಹಿನ್ನೀರಿನಲ್ಲಿ ಬಂದು ಬೀಡುತ್ತಿವೆ. ಸಾಮಾನ್ಯವಾಗಿ ಚಳಿಗಾಲ ಆರಂಭವಾಗುತ್ತಿದ್ದಂತೆ ಮಂಗೋಲಿಯ, ಸೈಬೀರಿಯಾ, ಮಧ್ಯ ಏಷ್ಯಾ ಮತ್ತು ಟಿಬೆಟ್‌ ದೇಶಗಳಿಂದ ಹಿಮಾಲಯ ಮಾರ್ಗ ವಾಗಿ ದಕ್ಷಿಣ ಭಾರತದತ್ತ ಈ ಬಾತುಕೋಳಿ ಜಾತಿಯ ಪಟ್ಟೆ ತಲೆ ಹೆಬ್ಟಾತು ಅಥವಾ ಬಾರ್‌ ಹೆಡೆಡ್‌ ಗೂಸ್‌ ಹಕ್ಕಿಗಳು ಪ್ರತಿ ವರ್ಷ ಡಿಸೆಂಬರ್‌ ತಿಂಗಳ ಕೊನೆಯಲ್ಲಿ ಇಲ್ಲಿಗೆ ಬರುತ್ತವೆ. ಸದ್ಯ ಕಬಿನಿ ಹಿನ್ನೀರಿನಲ್ಲಿ ಒಂದು ವಾರದ ಹಿಂದೆ ಬಂದು ಬಿಡು ಬಿಟ್ಟಿವೆ.

ಸಸ್ಯಹಾರಿ ಹಕ್ಕಿಗಳು, ನಿಶಾ ಚರಿಯೂ ಹೌದು: ಪಟ್ಟೆ ತಲೆಯ ಹೆಬ್ಟಾತುಗಳು ಜಗತ್ತಿನಲ್ಲೇ ಅತಿ ಎತ್ತರದಲ್ಲಿ ಹಾರಬಲ್ಲ ಪಕ್ಷಿಗಳು. ಅವು ಅಪ್ಪಟ ಸಸ್ಯಹಾರಿಯೂ ಹೌದು. ಭತ್ತದ ಕಟಾವು ಮಾಡಿದ ಗದ್ದೆಯಲ್ಲಿ ಬಿದ್ದಿರುವ ಭತ್ತ ಮತ್ತು ಗದ್ದೆಯಲ್ಲಿ ಉದುರಿ ಹೊಸದಾಗಿ ಮೂಡಿದ ಚಿಗುರುನ್ನು ತಿಂದು ತಮ್ಮ ಆಹಾರವನ್ನು ಕಂಡುಕೊಳ್ಳುತ್ತವೆ. ಬೆಳಗ್ಗೆ ಸುಮಾರು 6 ಗಂಟೆಯಿಂದ 10 ರಿಂದ 11 ಗಂಟೆ ತನಕ ಗದ್ದೆಯಲ್ಲಿ ಆಹಾರವನ್ನು ತಿನ್ನುತ್ತವೆ, ನಂತರ ಬಿಸಿಲು ಹೆಚ್ಚಾಗುತ್ತಿದ್ದಂತೆ ಕಬಿನಿ ಹಿನ್ನೀರಿನ ನೀರಿನಲ್ಲಿ ಬಂದು ಆಶ್ರಯಿಸುತ್ತವೆ. ಪುನಃ ಸಂಜೆ ಹೊತ್ತಿಗೆ ಭತ್ತದ ಕಟಾವು ಆಗಿರುವ ಗದ್ದೆಯ ಬಯಲು ಪ್ರದೇಶಕ್ಕೆ ಹೋಗಿ ರಾತ್ರಿಯ ವೇಳೆಯಲ್ಲೂ ಆಹಾರ ಹುಡುಕಾಟ ದಲ್ಲಿ ತೊಡಗಿಕೊಳ್ಳುತ್ತವೆ.

ರೈತರಿಗೂ ಅನುಕೂಲ: ಒಂದೊಂದು ಗುಂಪಿನಲ್ಲಿ ನೂರಾರು ಬಾತುಕೋಳಿಗಳು ಪ್ರತಿನಿತ್ಯ 4 ರಿಂದ 5 ಗಂಟೆಗಳ ಕಾಲ ಭತ್ತ ಕಟಾವು ಆಗಿರುವ ಗದ್ದೆಯಲ್ಲಿ ಇರುವುದರಿಂದ ಇವುಗಳ ಪಿಕ್ಕೆ, ಜಮೀನಿಗೆ ಉತ್ತಮ ಗೊಬ್ಬರವಾಗುತ್ತದೆ. ರೈತರು ಬಾತು ಕೋಳಿಗಳು ಗದ್ದೆಗೆ ಬಂದು ಕುಳಿತಿವೆ ಎಂದರೆ ಯಾರೂ ಅವುಗಳ ಹತ್ತಿರವೇ ಹೋಗುವುದಿಲ್ಲ .

ಬಹು ಸೂಕ್ಷ್ಮಮತಿ ಈ ಬಾತು ಹಕ್ಕಿಗಳು! : ಯಾರದರೂ ಸಣ್ಣ ಕಲ್ಲು ಹೊಡೆಯುವುದು, ಇನ್ನಿತರ ಯಾವುದಾದರೂ ರೀತಿಯಲ್ಲಿ ತೊಂದರೆ ಕೊಟ್ಟರೆ ಪುನಃ ಅವುಗಳು ಈ ಜಮೀನಿಗೆ ಬರುವುದಿಲ್ಲ. ಹಾಗಾಗಿ ಇಲ್ಲಿನ ರೈತರು ಈ ಬಾತು ಕೋಳಿಗಳು ಗದ್ದೆಗೆ ಬಂದ ಸಮಯದಲ್ಲಿ ಅವುಗಳಿಗೆ ಯಾವುದೇ ರೀತಿ ಯಲ್ಲಿ ತೊಂದರೆ ಆಗದ ರೀತಿಯಲ್ಲಿ ಎಚ್ಚರಿಕೆ ಯಿಂದ ನೋಡಿಕೊಳ್ಳುತ್ತಾರೆ. ತಾಲೂಕಿನ ಕಬಿನಿ ಹಿನ್ನೀರಿಗೆ ಗುಂಪು ಗುಂಪಾಗಿ ಬಂದು ವಿರಮಿ ಸುವ ಈ ವಲಸೆ ಹಕ್ಕಿಗಳು ವಲಸೆ ಬರುವಾಗ ದಿನವೊಂದಕ್ಕೆ ನೂರಾರು ಕಿ.ಮೀ. ಸಾಗುತ್ತವೆ. ಜತೆಗೆ ಆಮ್ಲಜನಕ ಕೊರತೆ ಎದುರಿಸಿ ಹಿಮಾ ಲಯ ಪರ್ವತವನ್ನು ದಾಟಲು 18 ಸಾವಿರ ದಿಂದ 26 ಸಾವಿರ ಅಡಿಗಳ ಎತ್ತರದಲ್ಲಿ ಹಾರಿ ಬರುತ್ತವೆ ಆದ್ದರಿಂದ ಇವುಗಳನ್ನು ಪರ್ವತ ಹಕ್ಕಿಗಳೆಂದು ಸಹ ಕರೆಯುತ್ತಾರೆ.

ಕಳೆದ ಆರೇಳು ವರ್ಷದಲ್ಲಿ ನಾನು ಕಂಡಂತೆ ಬಾರ್‌ ಹೆಡೆಡ್‌ ಗೂಸ್‌ ಹೆಬ್ಟಾತುಗಳು ಡಿಸೆಂ ಬರ್‌ ತಿಂಗಳ ಆರಂಭದಲ್ಲೇ ಕಬಿನಿ ಹಿನ್ನೀರಿಗೆ ಆಗಮಿ ಸುತ್ತಿದ್ದವು, ಈ ವರ್ಷ ಡಿಸೆಂಬರ್‌ ಅಂತ್ಯದಲ್ಲಿ ಆಗಮಿ ಸಿದ್ದು, ಮೊದಲೆಲ್ಲ ಹಿಂಡು ಹಿಂಡಾಗಿ ಕಾಣಿಸಿಕೊಳ್ಳು ತ್ತಿದ್ದ ವಲಸೆ ಹಕ್ಕಿಗಳು ವರ್ಷಗಳು ಉರುಳಿದಂತೆ ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ವನ್ಯಜೀವಿ ಛಾಯಾಗ್ರಾಹಕರಿಗೆ, ಪಕ್ಷಿ ಪ್ರಿಯರಿಗೆ ಬಹಳ ನಿರಾಸೆಯಾಗಿದೆ. ● ಸಮೀರ್‌ ಕೋಟೆ, ವನ್ಯಜೀವಿ ಛಾಯಾಗ್ರಾಹಕ, ಎಚ್‌.ಡಿ.ಕೋಟ

– ಬಿ.ನಿಂಗಣ್ಣಕೋಟೆ

 

ಟಾಪ್ ನ್ಯೂಸ್

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.