Temple; ಫಲಪುಷ್ಪಗಳಿಂದ ಸಿಂಗಾರಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ
Team Udayavani, Dec 31, 2023, 11:35 PM IST
ಬೆಳ್ತಂಗಡಿ: ಕ್ಯಾಲೆಂಡರ್ ವರ್ಷವನ್ನು ಸ್ವಾಗತಿಸುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ಭಕ್ತರ ಸ್ವಾಗತಕ್ಕೆ ದೇಗುಲವು ಫಲಪುಷ್ಪಗಳಿಂದ ಕಂಗೊಳಿಸುತ್ತಿದೆ.
ಬೆಂಗಳೂರಿನ ಟಿವಿಎಸ್ ಉದ್ಯಮಿಯಾಗಿರುವ ಗೋಪಾಲ್ ರಾವ್ ಹಾಗೂ ಇತರ ಉದ್ಯಮಿಗಳಾದ ಆನಂದ, ಮಂಜು, ಪುಟ್ಟಸ್ವಾಮಿ, ರಾಜು ಜತೆಗೂಡಿ ಬೆಂಗಳೂರಿನ ಶರವಣ್ ಅವರ ನೂರು ಮಂದಿ ಪುಷ್ಪಾಲಂಕಾರ ಮಾಡುವಲ್ಲಿ ಸಹಕರಿಸಿದ್ದಾರೆ. ಕಳೆದ 15 ವರ್ಷಗಳಿಂದ ಅವರು ಈ ಸೇವೆಯನ್ನು ನೀಡುತ್ತಿದ್ದಾರೆ.
ದೇಗುಲದ ಮುಖಮಂಟಪ, ಒಳಾಂಗಣ, ಹೊರಾಂಗಣ, ಗೋಪುರ, ಹೆಗ್ಗಡೆಯವರ ಬೀಡು ಸೇರಿದಂತೆ ಸುಮಾರು 15 ಲಕ್ಷಕ್ಕೂ ಅಧಿಕ ವೆಚ್ಚದ ಹಣ್ಣು, ವಿದೇಶಿ, ಸಹಿತ ಸ್ವದೇಶಿ ಹೂಗಳು, ಕೊಯಮತ್ತೂರಿನ ಬಾಳೆದಿಂಡು, 8000 ತೆಂಗಿನಕಾಯಿ, 1 ಟನ್ ಬದನೆ, ಜೋಳ, ಸೇಬು, ಎಳನೀರು, ಡ್ರ್ಯಾಗನ್ ಫ್ರೂಟ್, ಅಡಿಕೆ ಸಹಿತ ವಿವಿಧ ಹಣ್ಣುಗಳಿಂದ ಅಲಂಕರಿಸಲಾಗಿದೆ. ದೇಗುಲದ ಮುಂಭಾಗ ಶಿವಪಾರ್ವತಿ, ಷಣ್ಮುಖ, ಗಣೇಶನ ಪ್ರತಿಕೃತಿಗಳಿಂದ ಸಾಂಪ್ರದಾಯಿಕವಾಗಿ ಅಲಂಕಾರ ನಡೆಸಲಾಗಿದೆ. ಒಳಾಂಗಣದಲ್ಲಿ ಹೂಗಳ ತೋರಣ ಭಕ್ತರನ್ನು ಮಂತ್ರಮುಗ್ಧಗೊಳಿಸಿದೆ.
ದೇವರ ದರ್ಶನದ ಜತೆಗೆ ಅಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಶನಿವಾರ ರವಿವಾರ ರಜೆ ಹಾಗೂ ಹೊಸ ವರ್ಷವಾದ್ದರಿಂದ ಭಕ್ತರ ಭೇಟಿ ಅಧಿಕವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹೊಸ ವರ್ಷಕ್ಕೆ ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ ಕರುಣಿಸಲಿ ಎಂದು ಶುಭ ಹಾರೈಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.