Scottish Junior Squash: ಅನಾಹತ್ ಸಿಂಗ್ ಚಾಂಪಿಯನ್
Team Udayavani, Dec 31, 2023, 11:35 PM IST
ಹೊಸದಿಲ್ಲಿ: ಭಾರತದ ಪ್ರತಿಭಾನ್ವಿತ ಆಟಗಾರ್ತಿ ಅನಾಹತ್ ಸಿಂಗ್ 2023ರ ಸ್ಕಾಟಿಷ್ ಜೂನಿಯರ್ ಓಪನ್ ಸ್ಕ್ವಾಷ್ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಫೈನಲ್‌ನಲ್ಲಿ ಅವರು ಆತಿಥೇಯ ಸ್ಕಾಟ್ಲೆಂಡ್‌ನ ರೊಬಿನ್ ಮೆಕಾಲ್ಫಿನ್ ವಿರುದ್ಧ 11-6, 11-1, 11-5 ಅಂತರದ ಗೆಲುವು ಸಾಧಿಸಿದರು.
ಬಾಲಕರ ಅಂಡರ್-15 ಹಾಗೂ ಅಂಡರ್-13 ವಿಭಾಗಗಳಲ್ಲೂ ಭಾರತಕ್ಕೆ ಪ್ರಶಸ್ತಿ ಒಲಿದಿದೆ. ಅಂಡರ್-15 ವಿಭಾಗದ ಫೈನಲ್ “ಆಲ್ ಇಂಡಿಯನ್’ ಕಾಳಗವಾಗಿತ್ತು. ಇಲ್ಲಿ ಸುಭಾಷ್ ಚೌಧರಿ 5-11, 11-4, 6-11, 11-8, 11-5ರಿಂದ ಶಿವೇನ್ ಅಗರ್ವಾಲ್ ಅವರನ್ನು ಸೋಲಿಸಿದರು. ಅಂಡರ್-19 ವಿಭಾಗದ ಪ್ರಶಸ್ತಿ ಕಾಳಗದಲ್ಲಿ ಆದ್ಯ ಬುಧಿಯ ಮಲೇಷ್ಯಾದ ನೀಯ ಚ್ಯೂ ವಿರುದ್ಧ 9-11, 11-8, 8-11, 11-8, 11-9 ಅಂತರದಿಂದ ಗೆದ್ದು ಬಂದರು.
ಬಾಲಕರ ಅಂಡರ್-11 ವಿಭಾಗ ಕೂಡ “ಆಲ್ ಇಂಡಿಯಾ’ ಫೈನಲ್‌ಗೆ
ಸಾಕ್ಷಿಯಾಯಿತು. ಇಲ್ಲಿ ಅಗ್ರ ಶ್ರೇಯಾಂ ಕದ ಪ್ರಭವ್ ಬಜೋರಿಯಾ ದ್ವಿತೀಯ ಶ್ರೇಯಾಂಕದ ಆದಿತ್ಯ ಶಾ ಅವರನ್ನು 5-11, 9-11, 11-5, 11-8, 11-6ರಿಂದ ಪರಾಭವಗೊಳಿಸಿದರು. ಬಾಲಕಿಯರ ಅಂಡರ್-11 ವಿಭಾಗ ದಲ್ಲಿ ದಿವ್ಯಾಂಶಿ ಜೈನ್ ರನ್ನರ್-ಅಪ್ ಆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.