ISRO ಹೊಸ ವರ್ಷದ ಮೊದಲ ದಿನವೇ ಇಸ್ರೋ ಸಾಹಸ
ಕಪ್ಪುಕುಳಿ ಅಧ್ಯಯನಕ್ಕೆ ಇಂದು ಉಪಗ್ರಹ ನಭಕ್ಕೆ
Team Udayavani, Jan 1, 2024, 7:10 AM IST
ಶ್ರೀಹರಿಕೋಟ: ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಹೊಸ ಸಾಹಸಕ್ಕೆ ಮುಂದಡಿ ಇರಿಸಿದೆ.
ಬಾಹ್ಯಾಕಾಶದಲ್ಲಿ ಕಂಡುಬರುವ ಪ್ರಬಲವಾದ ಕ್ಷಕಿರಣಗಳನ್ನು ಅಧ್ಯ ಯನ ಮಾಡುವ ಎಕ್ಸ್ಪೊಸ್ಯಾಟ್ ಉಪಗ್ರಹವನ್ನು ಸೋಮವಾರ ಇಸ್ರೋ ಉಡಾವಣೆ ಮಾಡಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದ ಉಡಾವಣ ನೆಲೆಯಿಂದ ಬೆಳಗ್ಗೆ 9.10ಕ್ಕೆ ಪಿಎಸ್ಎಲ್ವಿ-ಸಿ58 ರಾಕೆಟ್ ಮೂಲಕ ಎಕ್ಸ್ಪೋಸ್ಯಾಟ್ ನಭಕ್ಕೆ ನೆಗೆಯಲಿದೆ. ಅದಕ್ಕೆ ಬೆಳಗ್ಗೆ 8.10ರಿಂದಲೇ ಕ್ಷಣಗಣನೆ ಪ್ರಾರಂಭವಾಗಲಿದೆ.
ಗಮನಾರ್ಹ ಅಂಶವೆಂದರೆ ಪಿಎಸ್ಎಲ್ವಿ- ಸಿ58ಕ್ಕೆ ಇದು 60ನೇ ಉಡಾವಣೆ. ಬಾಹ್ಯಾಕಾಶದಲ್ಲಿರುವ ಕಪ್ಪುಕುಳಿ (ಬ್ಲ್ಯಾಕ್ ಹೋಲ್) ಸಹಿತ ಅಲ್ಲಿ ಹೊರಹೊಮ್ಮುವ ಕ್ಷಕಿರಣಗಳ ಮೂಲ ವನ್ನು ಅಧ್ಯಯನ ಮಾಡಲು ಇಸ್ರೋ ಮೊದಲ ಬಾರಿ ಹೆಜ್ಜೆ ಇರಿಸಿದೆ. ಹಾಗಾಗಿ ಇಡೀ ಜಗತ್ತು ಈ ಉಡಾವಣೆಯನ್ನು ಕುತೂ ಹಲದಿಂದ ನೋಡುತ್ತಿದೆ. ಇದು ಜಗತ್ತಿನಲ್ಲೇ ದ್ವಿತೀಯ ಪ್ರಯತ್ನ.
ಇದಕ್ಕಿಂತ ಮುನ್ನ ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ 2021ರಲ್ಲಿ ಎಕ್ಸ್ ರೇ ಪೊಲಾರಿಮೆಟ್ರಿ ಎಕ್ಸ್ಪ್ಲೋರರ್ ಉಪಗ್ರಹದ ಮೂಲಕ ಇಂಥದ್ದೇ ಅಧ್ಯಯನ ಕೈಗೊಂಡಿತ್ತು.
11 ಉಪಗ್ರಹಗಳು
ಸೋಮವಾರ ಕೇವಲ ಎಕ್ಸ್ ಪೋಸ್ಯಾಟ್ ಮಾತ್ರ ಉಡಾವಣೆ ಯಾಗುತ್ತಿಲ್ಲ. ಅದರೊಂದಿಗೆ 10 ಇತರ ಉಪಗ್ರಹಗಳೂ ನಿಗದಿತ ಕಕ್ಷೆ ಸೇರಲಿವೆ.
ಅಧ್ಯಯನದಿಂದ ಲಾಭವೇನು?
ಖಗೋಳಶಾಸ್ತ್ರಜ್ಞರಿಗೆ ಈ ಉಪಗ್ರಹ ದಿಂದ ಬಹಳ ಲಾಭವಾಗಲಿದೆ. ಈ ಉಪಗ್ರಹ ಸುತ್ತುವಾಗ ಸಣ್ಣ ಧೂಮಕೇತುಗಳಿಂದ ಹಿಡಿದು ದೂರದ ಆಕಾಶಕಾಯಗಳ ಬಗ್ಗೆಯೂ ಮಾಹಿತಿ ಸಿಗಲಿದೆ. ಬಾಹ್ಯಾ ಕಾಶದಲ್ಲಿರುವ ದ್ರವ್ಯಗಳು ಒಂದು ರೂಪ ಪಡೆಯುವು ದನ್ನು, ಅವು ಬೇರೆಬೇರೆ ಕಡೆಗೆ ಹರಡುವುದನ್ನು ಅರ್ಥ ಮಾಡಿಕೊಳ್ಳಬಹುದು.
ಬೆಂಗಳೂರಿನ ಬೆಲೇಟ್ರಿಕ್ಸ್ ಸಹಿತ
4 ಸ್ಟಾರ್ಟಪ್ಗಳ ಪೇಲೋಡ್
ಇಸ್ರೋದ ನೌಕೆಯಲ್ಲಿ ಬೆಂಗಳೂರಿನ ಬೆಲೇಟ್ರಿಕ್ಸ್ ಏರೋಸ್ಪೇಸ್ ಸಹಿತ ದೇಶದ ಒಟ್ಟು ನಾಲ್ಕು ಬಾಹ್ಯಾಕಾಶ ಸಂಬಂಧಿ ಸ್ಟಾರ್ಟಪ್ ಗಳು ತಮ್ಮ ಪೇಲೋಡ್ಗಳನ್ನು ಸೇರಿಸಿವೆ. ಬೆಲೇಟ್ರಿಕ್ಸ್ ಸಂಸ್ಥೆ ರುದ್ರ 0.3 ಎಚ್ಪಿ ಜಿಪಿ ಎಂಬ ಥÅಸ್ಟರ್, ಅರ್ಕ-200 ಎಂಬ ಕಡಿಮೆ ಬಿಸಿಯಾಗುವ ಥಸ್ಟರ್ ಅನ್ನು ಸೇರಿಸಿದೆ. ಹೈದರಾಬಾದ್ನ ಧ್ರುವ ಸ್ಪೇಸ್ ಸಂಸ್ಥೆ ಲೀಪ್-ಟಿಡಿಯನ್ನು, ಟೇಕ್ಮಿ2ಸ್ಪೇಸ್ ಸಂಸ್ಥೆಯು ಆರ್ಎಸ್ಇಎಂ, ಮುಂಬಯಿಯ ಇನ್ಸ್ಪೆಸಿಟಿ ಸ್ಪೇಸ್ ಲ್ಯಾಬ್ಸ್ ಪ್ರೈ.ಲಿ. ಗಿತಾ ವನ್ನು ಕಳುಹಿಸಿಕೊಡಲಿವೆ. ಪೋಲಿಕ್ಸ್ ಅನ್ನು ಬೆಂಗಳೂರಿನ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಯು.ಆರ್. ರಾವ್ ಸ್ಯಾಟ ಲೈಟ್ ಸೆಂಟರ್ ಸಹಯೋಗದೊಂದಿಗೆ ನಿರ್ಮಿಸಿದೆ.
ಉದ್ದೇಶವೇನು?
-ಬಾಹ್ಯಾಕಾಶದ ಅಪರಿಚಿತ ಮೂಲಗಳಿಂದ ಹೊಮ್ಮುವ ಕ್ಷಕಿರಣಗಳು, ಅವು ಚದುರುವ ರೀತಿಯನ್ನು ಅಧ್ಯಯನ ಮಾಡು ವುದು ಮೂಲ ಉದ್ದೇಶ.
-ಬಾಹ್ಯಾಕಾಶದಲ್ಲಿರುವ ಕಾಂತೀಯ ವಲಯದ ವ್ಯಾಪ್ತಿಯನ್ನು ಅರಿಯುವುದು, ಬಾಹ್ಯಾಕಾಶದಿಂದ ಹೊಮ್ಮುವ ಬ್ರಹ್ಮಕಿರಣಗಳ (ಕಾಸ್ಮಿಕ್ ರೇ) ಸ್ವರೂಪವನ್ನು ಅಧ್ಯಯನ ಮಾಡುವುದು.
-ಕ್ಷ ಕಿರಣಗಳ ಉತ್ಪಾದನ ಕ್ರಮವನ್ನು ತಿಳಿಯುವುದು
-ಕಪ್ಪುಕುಳಿ (ಬ್ಲ್ಯಾಕ್ಹೋಲ್)ಗಳ ಭಿನ್ನ ಮೂಲಗಳನ್ನು ಅರ್ಥ ಮಾಡಿಕೊಳ್ಳುವುದು.
-ನಕ್ಷತ್ರಗಳ ಸ್ಫೋಟದ ಅನಂತರ ಉಳಿಯುವ ಅವಶೇಷಗಳಿಂದ ಹೊಮ್ಮುವ ಉಷ್ಣವನ್ನು ಅರ್ಥ ಮಾಡಿಕೊಳ್ಳುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ
Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.