2024 ಹೊಸ ದಿನಚರಿಗೆ ಹಸುರು ಅಧ್ಯಾಯಗಳು


Team Udayavani, Jan 1, 2024, 7:30 AM IST

2024 ಹೊಸ ದಿನಚರಿಗೆ ಹಸುರು ಅಧ್ಯಾಯಗಳು

ಬದುಕಿನ ಗೋಡೆಗೆ ಈಗ ತೂಗು ಹಾಕಿರುವ ತೂಗುಪಟ ಹೊಸತು. ಆಯಸ್ಸಿನ ಗಣಿತಕ್ಕೆ ಮತ್ತೂಂದು ಗೀಟು. ಕಾಲವೇ ಸುತ್ತಿಗೆ ಮತ್ತು ಚೇಣ ಹಿಡಿದು ನಮ್ಮನ್ನು ಇನ್ನಷ್ಟು ಸು#ಟಗೊಳಿಸು ತ್ತಿರುವ ಹೊತ್ತಿದು. ಅದಕ್ಕೇ ಹೊಸ ಸವಾಲುಗಳು, ಹೊಸ ಒತ್ತಡಗಳು. ಇವುಗಳಿಗೆ ಪರಿಹಾರ ಹುಡುಕಲು ಹಿಮ್ಮುಖ ನಡಿಗೆ ಆರಂಭಿಸಬೇಕು. ಜೀವನಶೈಲಿಯಿಂದ ಹಿಡಿದು ಪ್ರತಿಯೊಂದಕ್ಕೂ ಸರಳತೆಯ ಪಾಠ ಹೇಳಬೇಕು. ಈ ಹೊಣೆ ಸರಕಾರದ್ದು, ಅವರದ್ದು-ಇವರದ್ದು ಎನ್ನುವುದಕ್ಕಿಂತ ನಮ್ಮ ಮನೆಯ ಅಡುಗೆ ಮನೆಯಿಂದಲೇ ಪರಿಹಾರದತ್ತ ಪಾದಯಾತ್ರೆ ಆರಂಭಿಸೋಣ. ಕೆಂಪು ದೀಪ ಹೊತ್ತಿಕೊಳ್ಳುವ ಮೊದಲು ದಾಟಿ ಬಿಡೋಣ. ಅದಕ್ಕೆ ಪೂರಕವಾಗಿ ಇಲ್ಲಿವೆ ಕೆಲವು ಹಸುರು ಸಲಹೆಗಳು.

ಬದುಕಿಗೆ ಪಂಚತತ್ವ

01. ಕಾಡು
ಹಿಂದಿನ ದಶಕಕ್ಕೆ ಹೋಲಿಸಿದರೆ ನಮ್ಮ ಕಾಡಿನ ಪ್ರಮಾಣ ಕುಸಿಯುತ್ತಿದೆ. ಇರುವ ಕಾಡಿಗೆ ಬೆಂಕಿ ಹಾಕದಿರುವಂತೆ ನೋಡಿಕೊಳ್ಳೋಣ. ಕಾಡು ಹೊತ್ತಿ ಉರಿದು ನಾಶವಾದರೆ, ಮತ್ತೆ ಆ ಭಾಗದಲ್ಲಿ ಹೊಸದಾಗಿ ಗಿಡ ಬೆಳೆದು ದೊಡ್ಡ ದಾಗು ವುದು ಕಷ್ಟ. ಅದು ಬಂಜರಾಗು ವುದು, ಅಥವಾ ಉಪದ್ರವಕಾರಿ ಗಿಡಗಂಟಿ ಬೆಳೆದು ನಿಲ್ಲಬಹುದು. ಕಾಡಿನ ಬೆಂಕಿ ಗೊತ್ತಾದ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ಕೊಡೋಣ, ನಮ್ಮ ಊರಿನ ಎಲ್ಲ ಸಮರ್ಥ ಯುವಜನರ ತಂಡ ಸೇರಿ ಕಾಡಿಗೆ ಬೆಂಕಿ ಬಿದ್ದರೆ ನಂದಿಸಲು ಸಿದ್ಧರಾಗೋಣ.

-ಪ್ರತಿ ವರ್ಷವೂ ವನ ಮಹೋತ್ಸವವನ್ನು ಲೆಕ್ಕಕ್ಕೆ ಆಚರಿಸು ವುದು ಬೇಡ. ಈ ವರ್ಷ ಸಸಿ ನೆಡುವ ಮುನ್ನ ಹಿಂದಿನ ವರ್ಷಗಳಲ್ಲಿ ನೆಟ್ಟ ಸಸಿಗಳ ಆರೋಗ್ಯವನ್ನು ನೋಡೋಣ. ಅವುಗಳನ್ನು ಚೆನ್ನಾಗಿ ನೋಡಿಕೊಂಡು ಹೊಸತನ್ನು ನೆಡೋಣ. ನಗರ ಅರಣ್ಯದ ಬಗ್ಗೆಯೂ ಯೋಚಿಸೋಣ.
-ಈಗ ಮರ ಕಡಿಯುವುದು ಒಂದು ಫ್ಯಾಷನ್‌. ಅವುಗಳ ಒಣಗಿದ ಎಲೆಗಳು ಬೀಳುತ್ತವೆ ಎಂದೋ, ವೈರ್‌ಗೆ ತಾಗುತ್ತದೆ ಎಂದೋ ಇತ್ಯಾದಿ ಕಾರಣವೊಡ್ಡಿ ಟೊಂಗೆ ಕಡಿಯುವ ಬದಲು ಮರವನ್ನೇ ಕಡಿಯುತ್ತಿದ್ದೇವೆ. ನಮ್ಮ ದೃಷ್ಟಿಯಲ್ಲಿ ಮರಗಳು ಕಾಡಿನಲ್ಲಿದ್ದರೆ ಸಾಕೆಂಬ ಲೆಕ್ಕಾಚಾರ. ಅದು ಆಗಲ್ಲ. ಮರ -ಗಿಡಗಳು ಎಲ್ಲೆಲ್ಲೂ ಬೇಕು, ನಮ್ಮ ಅಂಗಳದಲ್ಲೂ ಸಹ. ಹಾಗಾಗಿ ಮನೆಯ ಅಂಗಳವನ್ನೂ ಸಣ್ಣ ಕಾಡಿನಂತೆ ಮಾಡೋಣ.
-ಅರಣ್ಯದ ಬಗ್ಗೆ ಪ್ರೀತಿ ಇರಲಿ. ಅದಕ್ಕಿಂತಲೂ ಹೆಚ್ಚಾಗಿ ನಮ್ಮ ಊರಿನ ಆರೋಗ್ಯದ ಬಗ್ಗೆಯೂ ಹೆಚ್ಚು ಪ್ರೀತಿ ಇರಲಿ. ಊರು ಬರಡಾದರೆ ಪಶ್ಚಿಮ ಘಟ್ಟ ಮರಗಳಿಂದ ತುಂಬಿ ತುಳುಕಿದರೂ ಅಷ್ಟೇ. ಅದಕ್ಕೇ ನಮ್ಮ ಊರಿನಲ್ಲೂ ಮರ ಗಿಡಗಳು ಕೊರತೆಯಾಗದಂತೆ ನೋಡಿಕೊಳ್ಳುವ.
-ಮರವಿದ್ದರೆ ಬರೀ ಗಾಳಿಯಲ್ಲ, ಹಸಿರಲ್ಲ. ಮಣ್ಣಿನ ಸವಕಳಿಯನ್ನೂ ತಡೆಯಬಹುದು. ನೆರೆಯ ಅಬ್ಬರಕ್ಕೂ ಕಡಿವಾಣ ಹಾಕಬಹುದು. ಅಂತರ್ಜಲದ ಆರೋಗ್ಯವನ್ನೂ ಕಾಪಾಡ ಬಹುದು. ಆಗ ಜೋರು ಮಳೆ ಬಂದರೆ ಊರು ಮುಳುಗುವುದಿಲ್ಲ, ಅದಕ್ಕೆಂದೇ ಮರಗಳಿರಲಿ ಊರಿನಲ್ಲೂ.
– ಭವಿಷ್ಯದ ಪೀಳಿಗೆಗೆ ಮರ-ಗಿಡಗಳ ಮಹತ್ವ, ಕಾಡಿನ ಅಗತ್ಯ, ಮರ- ಗಿಡಗಳು, ಜಲ ಮೂಲಗಳ ಸಂಬಂಧ ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳಬೇಕು, ಮನದಟ್ಟು ಮಾಡಬೇಕು. ಆ ಕುರಿತ ಜಾಗೃತಿಯನ್ನು ಆರಂಭಿಸೋಣ. ಇದು ಸುಸ್ಥಿರ ಬದುಕಿಗೆ ನಾಂದಿ.

ಪ್ಲಾಸ್ಟಿಕ್‌ ದೂರ ಇಡೋಣ
ಪ್ಲಾಸ್ಟಿಕ್‌ನ್ನು ತೀರಾ ಅಗತ್ಯವೆನ್ನುವುದಕ್ಕಷ್ಟೇ ಬಳಸೋಣ. ಅಂಗಡಿಗೆ ಹೋಗುವಾಗ ಸ್ಕೂಟರಲ್ಲೇ ಬಟ್ಟೆಯ ಚೀಲ ಕೊಂಡೊಯ್ಯೋಣ. ಎಲ್ಲಿ ಹೋಗು ವಾಗಲೂ ನಮ್ಮದೇ ನೀರಿನ ಬಾಟಲಿ (ಸ್ಟೀಲಿನದ್ದು) ಬಳಸೋಣ. ಹೋದಲ್ಲಿ ಪ್ಲಾಸ್ಟಿಕ್‌ ಕಂಟೈನರ್‌ಗಳ ನೀರು ಕುಡಿ ಯುವುದನ್ನು ಬಿಡೋಣ. ಒಣ ಕಸ ವಾದ ಪ್ಲಾಸ್ಟಿಕ್‌ಅನ್ನು ತೊಳೆದು ಒಣಗಿಸಿ ಪುನರ್‌ ಬಳಕೆಗೆ ಕೊಡೋಣ. ಕೆಲಸ ಸ್ವಲ್ಪ ಕಿರಿಕಿರಿ ಇರಬಹುದು, ಆದರೆ ಈ ಪಾಲನೆಯಿಂದ ನಮಗೆ, ಊರಿಗೆ ಒಳ್ಳೆಯದಾಗುವುದು ಖಚಿತ.

02. ನದಿ
ಅಚೀಚೆ ಹೋಗುವಾಗಲೆಲ್ಲ ನದಿಗೆ ಕಸ ಎಸೆಯುವವರನ್ನು ನೋಡುತ್ತೇವೆ. ಇನ್ನು ಅವರಿಗೆ ಹಾಗೆ ಮಾಡದಂತೆ ಎಚ್ಚರಿ ಸೋಣ. ಅವರೂ ಅದನ್ನು ಮನಗಂಡು ಬೇರೊಬ್ಬರಿಗೂ ಅದನ್ನು ತಿಳಿಸುವಂತೆ ಪರಿವರ್ತಿಸೋಣ. ನದಿ ಕಸಮುಕ್ತವಾದರೆ ಕಡಲು ಸ್ವತ್ಛವಿರುತ್ತದೆ. ಕಡಲು ಆರೋಗ್ಯವಾಗಿದ್ದರೆ ನಮ್ಮ ಬದುಕೂ ಸುಸ್ಥಿರವಾಗಿರಬಲ್ಲದು. ಈ ಸೂಕ್ಷ್ಮತೆಯನ್ನು ನಾವು ಮನಗಾಣಬೇಕಿದೆ.

ನದಿಗಳ ಸಂರಕ್ಷಣೆ: ಇತ್ತ ಗಮನಹರಿಸೋಣ
-ಮನೆ ಮತ್ತು ಕೈಗಾರಿಕ ತ್ಯಾಜ್ಯಗಳನ್ನು ನಾವು ನದಿಗೆ ಸೇರಿಸಿ ಕಲುಷಿತಗೊಳಿಸುತ್ತಿದ್ದೇವೆ. ಹಾಗಾಗಿ ನದಿಗೆ ಬಿಡುವ ಯಾವುದೇ ತೆರನಾದ ತ್ಯಾಜ್ಯ ನೀರನ್ನು ಸಂಸ್ಕ ರಿಸಿದ ಬಳಿಕವೇ ಬಿಡಬೇಕು. ಇನ್ನು ವಾಹನಗಳು ಮತ್ತು ಕೈಗಾರಿಕೆಗಳ ತ್ಯಾಜ್ಯ ಗಳಲ್ಲಿನ ತೈಲಯುಕ್ತ ಅಂಶಗಳು ನದಿಗೆ ಸೇರಿ ಮಲಿನವಾಗದಂತೆ ತಡೆಯಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ನಾಗರಿಕರಾದ ನಾವು ಸ್ಥಳೀಯ ಸಂಸ್ಥೆ , ಸರಕಾರವನ್ನು ಆಗ್ರಹಿಸಬೇಕು. ಈ ಸಂಬಂಧ ಜನರಲ್ಲೂ ಜಾಗೃತಿ ಮೂಡಿಸಬೇಕು.
– ಕೆಲವೆಡೆ ನದಿಗಳಿಗೆ ಮಾನವನ ಶವಗಳು ಮತ್ತು ಮೃತ ಪ್ರಾಣಿಗಳ ಕಳೇಬರ ವನ್ನು ಎಸೆಯಲಾಗುತ್ತದೆ. ಇದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕಿದೆ. ನದಿಗಳು ನಮ್ಮೆಲ್ಲರ ಆಸ್ತಿ ಎಂದು ಅರಿತರಷ್ಟೇ ಸಾಲದು, ಸಂರಕ್ಷಿಸಲು ಮುಂದಾಗಬೇಕು.
-ನದಿ ತೀರದಲ್ಲಿ ಮೇಳ, ಪಾರ್ಟಿ ಇತ್ಯಾದಿ ನಡೆಸುವ ಪದ್ಧತಿಯೂ ಆರಂಭ ವಾಗಿದೆ. ನೂರಾರು ಮಂದಿ ಸೇರಿ ಸಂಭ್ರಮಿಸಿ ತ್ಯಾಜ್ಯಗಳನ್ನು ಸೃಷ್ಟಿಸುತ್ತಾರೆ. ಅದು ನದಿಗೆ ಸೇರಿ ಕಲುಷಿತವಾಗುತ್ತದೆ. ನಾವು ಕಾವಲುಗಾರರಂತೆ ಕಾದು, ಇಂಥ ಸಂದರ್ಭಗಳನ್ನು ನಾವು ತಡೆಯಬೇಕು.
– ಹವಾಮಾನ ವೈಪರೀತ್ಯದಿಂದಾಗಿ ನದಿಗಳು ಬರಡಾಗುತ್ತಿದ್ದು ನೀರಿನ ಮಟ್ಟ ಕುಸಿಯುತ್ತಲೇ ಸಾಗಿದೆ. ಹಾಗಾಗಿ ಜಾಗತಿಕ ತಾಪಮಾನ ಕಡಿಮೆ ಮಾಡಲು ಅರಣ್ಯ ಸಂರಕ್ಷಣೆಗೆ ಮುಂದಾಗ ಬೇಕು. ಪ್ರತಿ ಮರವೂ ಮಹತ್ವದ್ದು ಎಂಬ ಜಾಗೃತಿ ಎಲ್ಲರಲ್ಲೂ ಮೂಡಬೇಕು ಮತ್ತು ಮೂಡಿಸಬೇಕು.
-ನದಿ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಪಾತ್ರ ಅತ್ಯಂತ ಮಹತ್ವದ್ದು. ನಮ್ಮ ಜಿಲ್ಲೆಗಳಲ್ಲಿ ನದಿಗಳಿರುವುದೇ ಒಂದು ವರದಾನ. ಆದ ಕಾರಣ ಅವುಗಳನ್ನು ಉಳಿಸಿಕೊಳ್ಳಲು ಪ್ರಮುಖವಾಗಿ ಇಂದಿ ನಿಂದಲೇ ನಾಲ್ಕು ಮಹತ್ವದ ಕೆಲಸಗಳನ್ನು ಮಾಡಬೇಕು. ಮೊದಲನೆಯದಾಗಿ, ನದಿಗೆ ಘನತ್ಯಾಜ್ಯ, ದ್ರವ ತ್ಯಾಜ್ಯವಾಗಲಿ ಸೇರದಂತೆ ಎಚ್ಚರ ವಹಿಸಬೇಕು. ಎರಡನೆಯದಾಗಿ, ನದಿ ಭಾಗದ ಒತ್ತುವರಿ ಕಂಡುಬಂದರೆ ಸಂಘಟಿ ತರಾಗಿ ವಿರೋಧಿಸಬೇಕು. ಮೂರನೆಯದಾಗಿ ನದಿ ಸುತ್ತಲಿನ ಪ್ರದೇಶದಲ್ಲಿ ಹಸಿರಿಗೆ ಒತ್ತು ನೀಡಬೇಕು. ನಾಲ್ಕನೆಯದಾಗಿ ಅಕ್ರಮ ಮರಳುಗಾರಿಕೆಯಿಂದ ಸೊರಗುತ್ತಿರುವ ನದಿಗಳನ್ನು ಸಂರಕ್ಷಿಸಲು ನಾವೆಲ್ಲ ಒಂದಾಗಿ ಹೋರಾಡಬೇಕು.
n® ‌ದಿಗಳ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಹೊಣೆಗಾರಿಕೆಗಳನ್ನು ನಿರ್ವಹಿಸುವು ದರ ಜತೆಯಲ್ಲಿ ಸಹಭಾಗಿತ್ವದಿಂದ ಹೋರಾಟ ನಡೆಸಬೇಕಿದೆ. ಈ ಕಾರ್ಯ ತ್ವರಿತಗತಿಯಲ್ಲಿ ನಡೆದಷ್ಟೂ ನಮ್ಮ ಭವಿಷ್ಯ ಉಜ್ವಲವಾದೀತು.

ನೀರು ಯಾವಾಗಲೂ ಬ್ಯಾಂಕಿನ ನಮ್ಮ ಖಾತೆಯಲ್ಲಿ ಕೂಡಿಟ್ಟ ಹಣದಂತೆಯೇ. ಎಷ್ಟು ನಾವು ಕೂಡಿಟ್ಟಿರುತ್ತೇವೆಯೋ ಅಷ್ಟನ್ನು ಮಾತ್ರ ತೆಗೆಯಲಾಗಲೀ, ಬಳಸಲಾಗಲೀ ಸಾಧ್ಯ. ಅದಕ್ಕಿಂತ ಹೆಚ್ಚಿನದನ್ನು ಹೇಗೆ ಪಡೆಯಬಹುದು? ಹಾಗೆಯೇ ನೀರೂ ಸಹ. ಬಳಕೆಯಲ್ಲೂ ಜಾಗ್ರತೆ ಬೇಕು, ನಿರ್ವಹಣೆಯಲ್ಲೂ ಸಹ. ನದಿ ಸಂರಕ್ಷಣೆಯೂ ಇಂದಿನ ಅಗತ್ಯ.
-ರಾಜೇಂದ್ರ ಸಿಂಗ್‌, ನದಿ ಪುನರುಜ್ಜೀವನಕಾರ

03. ನೀರು
-ವರ್ಷದಿಂದ ವರ್ಷಕ್ಕೆ ನಮ್ಮಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಬೇಸಗೆಯಲ್ಲಿ ನೀರು ಉಳಿತಾಯ ಮಾಡಬೇಕು.
-ನಮ್ಮ ಛಾವಣಿಗೆ ಬೀಳುವ ನೀರು ಓಡದಂತೆ ಅದನ್ನು ನಮ್ಮ ಹಿತ್ತಿಲಿನಲ್ಲಿ ಇಂಗಿಸುವ, ಆ ಮೂಲಕ ಭೂಮಿಯ ಒಡಲಿಗೆ ಸೇರಿಸೋಣ. ಅಷ್ಟೇ ಅಲ್ಲ, ಛಾವಣಿ ನೀರು ಸಂಗ್ರಹಿಸಿ, ಟ್ಯಾಂಕರ್‌ನಲ್ಲಿ ಇರಿಸಿಕೊಂಡು ಮಿತವಾಗಿ ಬಳಸೋಣ.
– ಜಲವನ್ನು ಸಂಪನ್ಮೂಲವೆಂಬ ಅರಿವನ್ನು ಮೂಡಿಸಿಕೊಳ್ಳೋಣ. ನೀರಿ ನಂತೆ ಹಣ ವೆಚ್ಚ ಮಾಡಬಾರದೆಂಬ ಅರಿವಿ ನಿಂತೆಯೇ ಹಣದಂತೆ ನೀರನ್ನೂ ದುಂದು ವೆಚ್ಚ ಮಾಡದಿರೋಣ.
– ಅಗತ್ಯಕ್ಕಿಂತ ಹೆಚ್ಚು ನೀರು ಬಳಸುವ ನಮ್ಮ ಅಭ್ಯಾಸಕ್ಕೆ ಕೂಡಲೇ ವಿದಾಯ ಹೇಳ್ಳೋಣ.

ಜಮೀನಿನಲ್ಲಿ ಬೀಳುವ ಮಳೆ ಯನ್ನು ಅಲ್ಲಲ್ಲೇ ಇಂಗಿಸಿ ಕೊಳ್ಳಲು ಸೂಕ್ತವಾದ ವಿಧಾನ ಅನು ಸರಿಸಬೇಕು. ಜಲಮಟ್ಟ ತೀರಾ ಕುಸಿ ದಿರುವುದು ಈಗಿನ ಸಮಸ್ಯೆಗಳಿಗೆ ಕಾರಣ. ಈ ಜಲಮಟ್ಟ ಮೇಲೆ ತರಲು ನಾಗರಿಕರು ಅವರವರ ಸ್ಥಳ ದಲ್ಲಿ ಬಿದ್ದ ಮಳೆ ನೀರನ್ನು ಭೂಮಿಗೆ ಸೇರುವಂತೆ ಮಾಡಬೇಕು. ಇಲ್ಲ ವಾದರೆ ಈಗಿರುವುದಕ್ಕಿಂತಲೂ ದೊಡ್ಡ ಬರ ಬರಬಹುದು. ಈ ಭಾಗ ದಲ್ಲಿ ನಮಗೆ ಹೆಚ್ಚು ಮಳೆ ಇರುವುದು ಅನುಕೂಲ, ಸಹಜವಾಗಿ ನೀರಿಂಗಿ ಸುವ ಆಯ್ಕೆಗಳು ಹೆಚ್ಚಿವೆ, ಅಮಿತ ವಾಗಿ ವೆಚ್ಚ ಮಾಡದೆ ಸರಿಯಾಗಿ ಯೋಚಿಸಿ ಸೂಕ್ತ ವಿಧಾನ ಆಯ್ಕೆ ಮಾಡಿಕೊಂಡು ಕಾರ್ಯೋನ್ಮುಖ ವಾಗಬೇಕು.
-ಶ್ರೀ ಪಡ್ರೆ, ಜಲಸಂರಕ್ಷಣ ತಜ್ಞರು

04. ಮಣ್ಣು
-ನಮ್ಮ ಬಳಿ ಸ್ವಲ್ಪ ಜಾಗವಿದ್ದರೂ ಸಾಕು. ಏನಾದರೂ ಬೆಳೆಯೋಣ ಇಲ್ಲವೇ ಬೆಳೆ ಸೋಣ. ಹಾಗೆ ಬಿಟ್ಟರೆ ಬರೀ ಬಂಜರಾಗುವುದಷ್ಟೇ ಅಲ್ಲ. ಮಳೆ ಮಣ್ಣಿನಲ್ಲಿನ ಫ‌ಲ ವತ್ತತೆಯನ್ನು ಕದ್ದೊಯ್ಯುತ್ತದೆ. ಅದಕ್ಕೆ ಕಡಿವಾಣ ಹಾಕಲು ಮಣ್ಣಿನ ಮೇಲ್ಪದರ ನಷ್ಟ ವಾಗದಂತೆ ನೋಡಿಕೊಳ್ಳುವ. ಮಣ್ಣಿನ ಸವಕಳಿ ತಡೆಯುವುದು ಮೊದಲ ಕ್ರಮ.
– ಸಾವಯವ ಪದ್ಧತಿ ಎಂದಿಗೂ ಒಳ್ಳೆಯದೇ. ಮಣ್ಣಿನ ಶಕ್ತಿಯನ್ನೂ ಮತ್ತಷ್ಟು ಗಟ್ಟಿಗೊಳಿಸಿ, ಒಳ್ಳೆಯ ಗುಣಮಟ್ಟದ ಹಾಗೂ ಆರೋಗ್ಯಕರವಾದ ಆಹಾರ ಉತ್ಪನ್ನಗಳು ಸಿಗುವಂತೆ ಮಾಡುವುದು ಸಾವಯವ ಮಾತ್ರ. ಅದರಿಂದ ಮಣ್ಣಿಗೂ ಲಾಭ, ನಮಗೂ ಲಾಭ. ಹಾಗಾಗಿ ಅದೇ ಪದ್ಧತಿ ಅನುಸರಿಸೋಣ.
– ನೈಜ ಸಾವಯವ ಆಹಾರ ಉತ್ಪನ್ನಗಳನ್ನು ಕೇಳಿ ಪಡೆದು ಬಳಸೋಣ. ಅದಕ್ಕಾಗಿ ಆಗ್ರಹಿಸೋಣ. ಆಗ ಸರಕಾರಗಳೂ ಸಾವಯವ ಉತ್ಪನ್ನಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತದೆ. ಬೆಳೆಗಾರರೂ ರಾಸಾಯನಿಕ ಬಿಟ್ಟು ಸಾವಯವದತ್ತ ಹೊರಳು ತ್ತಾರೆ. ನಮಗೂ ಆರೋಗ್ಯ ಸಿಕ್ಕಂತೆ, ಮಣ್ಣಿನ ಆರೋಗ್ಯವೂ ಕಾಪಾಡಿದಂತೆ.
-ಮಣ್ಣಿನ ಸಂರಕ್ಷಣೆಯ ಅಗತ್ಯ ಹಾಗೂ ಆನಿವಾರ್ಯದ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸೋಣ. ಸಂಘಟಿತರಾಗಿ ಧ್ವನಿ ಎತ್ತೋಣ. ಸರಕಾರಕ್ಕೆ, ಸ್ಥಳೀಯ ಸಂಸ್ಥೆಗಳಿಗೆ ಮನದಟ್ಟು ಮಾಡೋಣ.

ಪಂಚಭೂತಗಳ ಅಸಮತೋಲನದಿಂದ ಮನುಷ್ಯರ, ಪ್ರಾಣಿ ಸಸ್ಯಗಳ ರೋಗಗಳು ಹೆಚ್ಚುತ್ತಿವೆ. ನಮ್ಮ ನಾಡಿಗೆ ಮಣ್ಣು ಹಾಗೂ ಅದರ ಆರೋಗ್ಯ ಅತಿ ಮುಖ್ಯ. ಮಣ್ಣು ಎಲ್ಲೆಡೆ ಸೊರಗುತ್ತಿದೆ. ಇಂಥ ಮಣ್ಣಿನಲ್ಲಿ ಉತ್ತಮ ಬೆಳೆ ತೆಗೆಯಲಾಗದು, ಅದಕ್ಕೆ ಮಣ್ಣಿನ ಬಲವರ್ಧನೆ ಅಗತ್ಯವಿದೆ. ಮಣ್ಣಿನಲ್ಲಿರುವ ಸಾವ ಯವ ಇಂಗಾಲದ ಪ್ರಮಾಣ ಎಂದರೆ ನೀರು ಹಾಗೂ ಗಾಳಿ ಹಿಡಿದಿರಿಸುವ ಗುಣ ಕಡಿಮೆಯಾಗಿದೆ, ಜೀವಾಣುಗಳು ಸತ್ತಿವೆ, ಸಾವಯವ ಪದ್ಧತಿ ಮೂಲಕ ಮಣ್ಣಿನ ಪುನಶ್ಚೇತನ ಮಾಡಬೇಕಿದೆ.
 -ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಕನ್ನೇರಿ ಮಠ

ನನ್ನ ವಠಾರ ನಮಗೆಲ್ಲ
ನಮ್ಮ ಮನೆ, ನಮ್ಮ ಕಾಂಪೌಂಡ್‌ ನಂತೆಯೇ ಪ್ರಿಯವೆನಿಸುವುದು ನಮ್ಮ ವಠಾರ. ನಾವೆಲ್ಲ ಸೇರಿಸಿಕೊಂಡು ಆಗಾಗ್ಗೆ ಸುತ್ತಲಿನ ಕಸಕಡ್ಡಿ ವಿಲೇವಾರಿ ಮಾಡಿ ಸ್ವತ್ಛತೆ ಕಾಪಾಡುವ. ವಠಾರದಲ್ಲಿ ಎಲ್ಲರೊಂದಿಗೆ ಬೆರೆತು ಬದುಕಿದರೆ ಮೊಬೈಲ್‌ ಸ್ಮಾರ್ಟ್‌ ಫೋನ್‌ಗಳನ್ನೂ ದೂರವಿಡಬಹುದು. ಹಾಗೇ ವಠಾರದಲ್ಲಿನ ಖಾಲಿ ಜಾಗದಲ್ಲಿ ಪುಟ್ಟ ಪಾರ್ಕ್‌ ನಿರ್ಮಿಸಿ, ಮಕ್ಕಳಿಗೆ ಮೈದಾನ ಕಲ್ಪಿಸುವುದು, ಗಿಡ ನೆಟ್ಟು ಸುಂದರಗೊಳಿಸಿದರೆೆ ಎಲ್ಲರ ಮನಸ್ಸಿಗೂ ಲಾಭ, ಆರೋಗ್ಯಕ್ಕೂ ಲಾಭ. ಪ್ರಯತ್ನಿಸೋಣ.

ಮಣ್ಣಿನ ಸಂರಕ್ಷಣೆಗೆ, ಮಣ್ಣಿನ ಮಾಲಿನ್ಯ ತಡೆಯಲು ಮುಂದಾಗದಿದ್ದರೆ ಪಾರಿಸರಿಕ ಅನಾಹುತವನ್ನು ತಡೆಯಲು ಸಾಧ್ಯವೇ ಇಲ್ಲ. ಈಗಿನಿಂದಲೇ ಕಾರ್ಯೋನ್ಮುಖ ರಾದರೂ ನಾವು ಮಾಡಿರುವ ಅನಾಹುತ ಸರಿಪಡಿಸಲು ಕನಿಷ್ಠ 15-20 ವರ್ಷಗಳು ಬೇಕು. ತಡಮಾಡಿದರೆ ಈ ಅವಧಿ 50-60 ವರ್ಷ ತಗಲೀತು.
-ಜಗ್ಗಿ ವಾಸುದೇವ್‌,
ಮಣ್ಣಿನ ಸಂರಕ್ಷಣೆ ಕುರಿತ ಚಳವಳಿ ಸಂದರ್ಭ.

ಪರಿಶುದ್ಧ ಆಹಾರ ಪದ್ಧತಿ
ನಮಗೆಲ್ಲ ಆರೋಗ್ಯ ಮುಖ್ಯ. ಪೇಟೆಯಿಂದ ಬರುವ ತರಕಾರಿ, ಹಣ್ಣು ಹಂಪಲು ನೋಡುವುದಕ್ಕೆ ತಾಜಾ ಇರಬಹುದು, ದೇಹಕ್ಕೆ ಆರೋಗ್ಯಕರ ವಾಗಿದೆ ಎಂದರ್ಥವಲ್ಲ. ರಾಸಾಯನಿಕ, ಕೀಟನಾಶಕ ಬಳಸಿದ ಈ ವಸ್ತುಗಳು ದೇಹಕ್ಕೆ ನಿಧಾನ ವಿಷವಾಗಿ ಪರಿಣಮಿಸಬಲ್ಲವು. ನಮ್ಮ ಅಂಗಳದಲ್ಲಿ ನಮ್ಮದೇ ಆದ ತರಕಾರಿ, ಬಾಳೆ ಬೆಳೆಸೋಣ. ಫ್ಲಾಟ್‌ನಲ್ಲೂ ಕುಂಡ ಇರಿಸಿ ಗಿಡ, ತರಕಾರಿ ಬೆಳೆಸಲು ಸಾಧ್ಯ ಎಂಬುದು ಈಗಾಗಲೇ ಸಾವಯವ ಗುಂಪುಗಳಿಂದ ತಿಳಿದಿದ್ದೇವೆ. ಈ ವರ್ಷ ಅದನ್ನು ಕಾರ್ಯ ರೂಪಕ್ಕೆ ತರೋಣ.

05. ಸಾಗರ
-ಸಾಗರಕ್ಕೂ ನಮ್ಮ ಬದುಕಿಗೂ ಅವಿನಾಭಾವ ಸಂಬಂಧ. ಅದ ಕ್ಕಾಗಿಯೇ ಸಾಗರವನ್ನು ಉಳಿಸಿಕೊಂಡರೆ ನಮ್ಮ ಬದುಕನ್ನೂ ಉಳಿಸಿ ಕೊಂಡಂತೆ. ಮೊದಲು ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಬೇಕು. ಒಂದು ಅಂದಾಜಿನ ಪ್ರಕಾರ ನಮ್ಮಿಂದ ಪ್ರತಿ ವರ್ಷ ಕನಿಷ್ಠ 17.6 ಬಿಲಿಯನ್‌ ಪೌಂಡ್‌ನ‌ಷ್ಟು ಪ್ಲಾಸ್ಟಿಕ್‌ ಸಮುದ್ರವನ್ನು ಸೇರುತ್ತಿದೆ. ಅದು ಸಾಗರದ ಕೊರಳನ್ನು ಬಿಗಿಯತೊಡಗಿದೆ. ಇದನ್ನು ತಡೆಯಲು ಮೊದಲು ನಮ್ಮ ಮನೆಯಿಂದಲೇ ಪ್ಲಾಸ್ಟಿಕ್‌ ಬಳಕೆಗೆ ಕೊನೆ ಹೇಳಬೇಕು.
-ಸಾಮಾನ್ಯವಾದ ಮಾತೊಂದಿದೆ. ಜನರು ಏನನ್ನು ಪ್ರೀತಿಸು ತ್ತಾರೋ ಅವುಗಳನ್ನು ಸಂರಕ್ಷಿಸಲು ಮುಂದಾಗುತ್ತಾರೆ. ಇದು ಅಕ್ಷರಶಃ ನಿಜ. ಅದಕ್ಕಾಗಿ ನಾವು ಸಾಗರವನ್ನು ಪ್ರೀತಿಸ ಬೇಕು. ಮಕ್ಕಳಿಗೂ ಪ್ರೀತಿಸುವುದನ್ನು ಕಲಿಸಬೇಕು. ನಮ್ಮ ನದಿ, ಜಲಾ ನಯನ ವ್ಯವಸ್ಥೆ ಹಾಗೂ ಸಾಗರದ ಸಂಬಂಧಗಳನ್ನು ಅರಿಯ ಬೇಕು, ತಿಳಿಸ ಬೇಕು. ಸಾಗರದ ಆಳವನ್ನು ಅರಿ ಯಲು ಪ್ರಯತ್ನಿಸ ಬೇಕು. ಮಕ್ಕಳಲ್ಲೂ ಆಸಕ್ತಿ ಮೂಡಿಸಬೇಕು.

ವಾಹನ ಬಳಕೆ ಕಡಿಮೆಯಾದರೆ…
ನಮ್ಮಲ್ಲಿ ಕಾರುಗಳು ಹೆಚ್ಚಿವೆ, ಪೇಟೆಗೆ ಹೋದರೆ ಟ್ರಾಫಿಕ್‌ ಜಾಂ, ಒಂದೊಂದು ಮನೆಯಲ್ಲಿ ಎರಡೆರಡು ಕಾರುಗಳೂ ಇವೆ. ಹತ್ತಿರದ ಹಾಲಿನ ಬೂತ್‌ಗೆ ಹೋಗಲೂ ಸ್ಕೂಟರ್‌, ವಾಹನ ಬಳಕೆಯನ್ನು ತ್ಯಜಿಸೋಣ. ಪೆಟ್ರೋಲ್‌ ಖರ್ಚು ಒಂದು ಭಾಗವಾದರೆ, ಅದು ಉಗುಳುವ ಹೊಗೆ ಮಾಲಿನ್ಯ ಎನ್ನುವುದು ಎರಡನೇ ಸಂಗತಿ. ಇದೆಲ್ಲವೂ ಸಣ್ಣದು ಎನಿಸಬಹುದು. ಆದರೆ ಅದೇ ಸೇರುತ್ತಾ ಹೋದರೆ ದೊಡ್ಡದಾಗುತ್ತದೆ. ನಡೆದು ಹೋಗುವ ಜಾಗಕ್ಕೆ ನಡೆದು ಹೋಗೋಣ, ಸಮಯವಿದ್ದರೆ ಸಾರ್ವಜನಿಕ ವಾಹನ ಬಳಕೆ ಮಾಡೋಣ, ಬೇಕಾದಲ್ಲಿ ಮಾತ್ರ ಕಾರು ಬಳಸೋಣ. ಹಾಗೆಯೇ ಸೈಕಲ್ಲೊಂದು ಜತೆಗಿರಲಿ, ಸಾಧಾರಣ ಕೆಲ ಕಿ.ಮೀ ಸೈಕಲ್‌ ತುಳಿಯುತ್ತಾ ನಮಗೆ ಬೇಕಾದ ಸಣ್ಣಪುಟ್ಟ ವಸ್ತುಗಳನ್ನು ತರೋಣ. ದೇಹಕ್ಕೂ ವ್ಯಾಯಾಮ, ಪರಿಸರಕ್ಕೂ ಸಂರಕ್ಷಣೆಯ ಆಯಾಮ.

ಲೇಖನ: ವೇಣು ವಿನೋದ್‌, ಹರೀಶ್‌

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood Movies: 2025ರಲ್ಲಿ ಬರಲಿರುವ ಬಹು ನಿರೀಕ್ಷಿತ ಬಾಲಿವುಡ್‌ ಸಿನಿಮಾಗಳ ಪಟ್ಟಿ

Bollywood Movies:2025ರಲ್ಲಿ ತೆರೆಕಾಣಲಿರುವ ಬಹು ನಿರೀಕ್ಷಿತ ಬಾಲಿವುಡ್‌ ಸಿನಿಮಾಗಳ ಪಟ್ಟಿ

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

New Year: ನಗರದಲ್ಲಿ ಹೊಸ ವರ್ಷದ ಮೋಜು-ಮಸ್ತಿ

New Year: ನಗರದಲ್ಲಿ ಹೊಸ ವರ್ಷದ ಮೋಜು-ಮಸ್ತಿ

2024:ನವ ವರುಷ  ಹೊಸ ಹರುಷ;ಹೊಸ ವರುಷದ ಹೂಡಿಕೆಗಳು-ಹೂಡಿಕೆಯ ಬಗ್ಗೆ ಸ್ಪಷ್ಟ ನಿರ್ಧಾರವಿರಲಿ…

2024:ನವ ವರುಷ ಹೊಸ ಹರುಷ;ಹೊಸ ವರುಷದ ಹೂಡಿಕೆಗಳು-ಹೂಡಿಕೆಯ ಬಗ್ಗೆ ಸ್ಪಷ್ಟ ನಿರ್ಧಾರವಿರಲಿ…

New Year 2024; ಹೊಸ ಭರವಸೆಗಳ ಜತೆ ಮೊದಲ ಹೆಜ್ಜೆ…

New Year 2024; ಹೊಸ ಭರವಸೆಗಳ ಜತೆ ಮೊದಲ ಹೆಜ್ಜೆ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.