ಹತ್ತಾರು ಸಿನಿಮಾ ನೂರರಷ್ಟು ನಿರೀಕ್ಷೆ.. ಈ ವರ್ಷ ಕಮಾಲ್‌ ಮಾಡಲಿರುವ ದಕ್ಷಿಣದ ಸಿನಿಮಾಗಳಿವು


Team Udayavani, Jan 1, 2024, 5:39 PM IST

ಹತ್ತಾರು ಸಿನಿಮಾ ನೂರರಷ್ಟು ನಿರೀಕ್ಷೆ.. ಈ ವರ್ಷ ಕಮಾಲ್‌ ದಕ್ಷಿಣದ ಮಾಡಬಹುದಾದ ಸಿನಿಮಾಗಳಿವು

2023 ಕಳೆದು 2024ಕ್ಕೆ ಕಾಲಿಟ್ಟಿದ್ದೇವೆ. ಸಿನಿಮಾರಂಗಕ್ಕೆ ಬಂದರೆ ಈ ವರ್ಷವೂ ಕಲರ್‌ ಫುಲ್‌ ಆಗಿ ಹೊಸ ಹೊಸ ಸಿನಿಮಾಗಳು ಥಿಯೇಟರ್‌ ಗೆ ಲಗ್ಗೆ ಇಡಲಿದೆ.  ಅದರಲ್ಲೂ ಸೌತ್‌ ಸಿನಿರಂಗದಲ್ಲಿ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾಗಳು ಈ ವರ್ಷವೇ ತೆರೆ ಕಾಣಲಿದೆ.

2023 ರಲ್ಲಿ ʼಜೈಲರ್‌ʼ, ʼಲಿಯೋʼ, ʼಸಲಾರ್‌ʼ, ʼಸಪ್ತ ಸಾಗರದಾಚೆ ಎಲ್ಲೋ(ಸೈಡ್‌ ಎ, ಬಿ), ʼಜಿಗರ್ತಂಡ ಡಬಲ್‌ಎಕ್ಸ್ʼ ಹೀಗೆ ಬಾಕ್ಸ್‌ ಆಫೀಸ್‌ ನಲ್ಲಿ ಗಳಿಕೆಯ ಜೊತೆಗೆ ಪ್ರೇಕ್ಷಕರ ಟಿಕೆಟ್‌ ಬೆಲೆಗೆ ತೃಪ್ತಿ ಕೊಟ್ಟ ಸಿನಿಮಾಗಳು ತೆರೆಕಂಡವು.

2024 ರಲ್ಲಿ ಯಾವೆಲ್ಲಾ ಬಹು ನಿರೀಕ್ಷಿತ ಸೌತ್‌ ಸಿನಿಮಾಗಳು ಈ ವರ್ಷ ತೆರೆ ಕಾಣಲಿದೆ ಎನ್ನುವುದರ ಸಂಕ್ಷಿಪ್ತ ಚಿತ್ರಣ ಇಲ್ಲಿದೆ…

ಕ್ಯಾಪ್ಟನ್‌ ಮಿಲ್ಲರ್:‌  ನಟ ಧನುಷ್‌ ಹಾಗೂ ಶಿವರಾಜ್‌ ಕುಮಾರ್ ಅಭಿನಯದ ʼಕ್ಯಾಪ್ಟನ್‌ ಮಿಲ್ಲರ್‌ʼ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್‌ ಆಗಲಿದೆ. ಈಗಾಗಲೇ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್‌ ಹೆಚ್ಚಿಸಿದ್ದು, ಅರುಣ್ ಮಾಥೇಶ್ವರನ್ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಹೇಳಿದ್ದಾರೆ. ಬಹು ನಿರೀಕ್ಷಿತ ಸಿನಿಮಾ ಜ.12 ರಂದು ರಿಲೀಸ್‌ ಆಗಲಿದೆ.

ʼಇಂಡಿಯನ್‌ -2ʼ: ʼವಿಕ್ರಮ್‌ʼ ಬಳಿಕ ನಟ ಕಮಲ್‌ ಹಾಸನ್‌ ಅವರ ಯಾವ ಸಿನಿಮಾ ಕೂಡ ತೆರೆ ಕಂಡಿಲ್ಲ. ಆದರೆ ಅವರ ಮುಂದಿನ ಸಿನಿಮಾಗಳ ಬಗ್ಗೆ ಚರ್ಚೆಗಳು ಜೋರಾಗಿದೆ. ಇದರಲ್ಲಿ ಶಂಕರ್‌ ನಿರ್ದೇಶನದ ಪೊಲಿಟಿಕಲ್‌ ಡ್ರಾಮಾ ʼಇಂಡಿಯನ್‌ -2ʼ  ಸಿನಿಮಾ ಹೈಪ್‌ ಹೆಚ್ಚಿಸಿದೆ. 1996 ರಲ್ಲಿ‌ ಬಂದ ʼಇಂಡಿಯನ್‌ʼ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಅದರ ಸೀಕ್ವೆಲ್‌ ಶೂಟಿಂಗ್‌ ಹಂತದಿಂದಲೇ ಸದ್ದು ಮಾಡುತ್ತಿದೆ.ವಯಸ್ಸಾದ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿಯ ಪಾತ್ರದಲ್ಲಿ ಕಮಲ್ ಹಾಸನ್‌ ಕಾಣಿಸಿಕೊಳ್ಳಲಿದ್ದಾರೆ.

ಕಮಲ್ ಹಾಸನ್, ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ಎಸ್ ಜೆ ಸೂರ್ಯ, ರಾಕುಲ್ ಪ್ರೀತ್ ಸಿಂಗ್ ಮುಂತಾದವರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ವರ್ಷ ಸಿನಿಮಾ ತೆರೆ ಕಾಣಲಿದೆ.

ʼದೇವರ ಪಾರ್ಟ್‌ -1ʼ: ʼಆರ್‌ ಆರ್‌ ಆರ್‌ʼ ಬಳಿಕ ಜೂ.ಎನ್‌ ಟಿಆರ್‌ ಅವರ ವೃತ್ತಿ ಬದುಕಿನ ಮತ್ತೊಂದು ದೊಡ್ಡ ಸಿನಿಮಾವೆಂದೇ ಹೇಳಲಾಗುತ್ತಿರುವ ʼದೇವರʼ ಸಿನಿಮಾ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾದ ಗ್ಲಿಂಪ್ಸ್‌ ಇದೇ ಜ.8 ರಂದು ರಿವೀಲ್‌ ಆಗಲಿದೆ.  ಎರಡು ಭಾಗಗಳಾಗಿ ಸಿನಿಮಾ ತೆರೆ ಕಾಣುತ್ತಿದ್ದು, ʼಜನತಾ ಗ್ಯಾರೇಜ್‌ʼ ನಂತರ ಕೊರಟಾಲ ಶಿವ ಜೂ.ಎನ್‌ ಟಿ ಆರ್‌ ಜೊತೆ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ.

ಈ ಸಿನಿಮಾದ ಮೂಲಕ ಜಾಹ್ನವಿ ಕಪೂರ್‌ ಟಾಲಿವುಡ್‌ ಎಂಟ್ರಿ ಕೊಡಲಿದ್ದಾರೆ. ಇನ್ನು ಸೈಫ್‌ ಆಲಿಖಾನ್‌ ನೆಗೆಟಿವ್‌ ರೋಲ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʼದೇವರ ಪಾರ್ಟ್‌ -1ʼ ಇದೇ ವರ್ಷ ರಿಲೀಸ್‌ ಆಗಲಿದೆ.

ಮಲೈಕೊಟ್ಟೈ ವಾಲಿಬನ್: ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ಹಾಗೂ ಸೂಪರ್‌ ಹಿಟ್‌ ನಿರ್ದೇಶಕ ಲಿಜೋ ಜೋಸ್ ಪೆಲ್ಲಿಸ್ಸೆರಿ ಕಾಂಬಿನೇಷನ್‌ ನಲ್ಲಿ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಮಾಲಿವುಡ್‌ ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿರುವ ʼ ಮಲೈಕೊಟ್ಟೈ ವಾಲಿಬನ್ʼ ಸಿನಿಮಾದಲ್ಲಿ ಮೋಹನ್‌ ಲಾಲ್‌ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದೇ ಜ.25 ರಂದು ಸಿನಿಮಾ ತೆರೆಕಾಣಲಿದೆ. ಮೋಹನ್ ಲಾಲ್, ಸೋನಾಲಿ ಕುಲಕರ್ಣಿ, ಡ್ಯಾನಿಶ್ ಸೇಟ್, ಹರೀಶ್ ಪೆರಾಡಿ ಮುಂತಾದವರು ನಟಿಸಿದ್ದಾರೆ.

ವೆಟ್ಟಯ್ಯನ್‌: ʼಜೈಲರ್‌ʼ ಬಳಿಕ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರು ಕಾಣಿಸಿಕೊಳ್ಳುತ್ತಿರುವ ʼ ವೆಟ್ಟಯ್ಯನ್‌ʼ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸಿನಿಮಾ ಸಟ್ಟೇರಿದ ದಿನದಿಂದ ಇದರ ಮಲ್ಟಿಸಾರ್ಸ್‌ ವಿಚಾರದಿಂದ ಸದ್ದು ಮಾಡುತ್ತಿದೆ. ಇತ್ತೀಚೆಗೆ ಸಿನಿಮಾ ಟೈಟಲ್‌ ರಿವೀಲ್.‌ ಈ ಸಿನಿಮಾದಲ್ಲಿ ರಜಿನಿಕಾಂತ್‌ ನಿವೃತ್ತ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಟಿಜೆ ಜ್ಞಾನವೇಲ್‌ ಅವರ ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಫಾಹದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಸೇರಿದಂತೆ ಪ್ರಮುಖ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದೇ ವರ್ಷ ಸಿನಿಮಾ ತೆರೆ ಕಾಣಲಿದೆ ಎನ್ನಲಾಗಿದೆ.

ʼಪುಷ್ಪ -2”  ದಿ ರೂಲ್:‌  ಈ ವರ್ಷ ತೆರೆ ಕಾಣಲಿರುವ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾಗಳಲ್ಲಿ ಅಲ್ಲು ಅರ್ಜುನ್‌ ಅವರ ʼಪುಷ್ಪ-2ʼ ಸಿನಿಮಾ ಕೂಡ ಒಂದು. ಸುಕುಮಾರ್‌ ಅವರ ಈ ಸಿನಿಮಾದ ಪ್ಯಾನ್‌ ಇಂಡಿಯಾದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ರಕ್ತಚಂದನ ಸಾಗಾಟದ ಕಥೆಯಲ್ಲಿ ʼಪುಷ್ಪʼ ಆಗಿ ಅಲ್ಲು ಅರ್ಜುನ್‌ ಮತ್ತೆ ಕಾಣಿಸಿಕೊಳ್ಳುವುದನ್ನು ನೋಡುವುದಕ್ಕೆ ಸಿನಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಇದೇ ವರ್ಷ ಆಗಸ್ಟ್‌ 15 ರಂದು ಸಿನಿಮಾ ತೆರೆ ಕಾಣಲಿದೆ. ಸದ್ಯ ಚಿತ್ರೀಕರಣ ಭರದಿಂದ ಸಾಗುತ್ತಿದೆ.  ಫಾಹದ್ ಫಾಸಿಲ್, ರಶ್ಮಿಕಾ ಮಂದಣ್ಣ, ಪ್ರಕಾಶ್ ರಾಜ್, ಜಗಪತಿ ಬಾಬು, ಡಾಲಿ ಧನಂಜಯ ಸೇರಿದಂತೆ ಹಲವರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ʼದಿ ಗ್ರೇಟಿಸ್ಟ್‌ ಆಫ್‌ ಆಲ್‌ ಟೈಮ್ʼ (GOAT): ʼಲಿಯೋʼ ಹಿಟ್‌ ನಂತರ ದಳಪತಿ ವಿಜಯ್‌ ಅವರು ವೆಂಕಟ್‌ ಪ್ರಭು ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಲೇಟೆಸ್ಟ್‌ ಆಗಿ ಈ ಸಿನಿಮಾದ ಟೈಟಲ್‌ ರಿವೀಲ್‌ ಆಗಿದೆ. ʼದಿ ಗ್ರೇಟಿಸ್ಟ್‌ ಆಫ್‌ ಆಲ್‌ ಟೈಮ್ʼ ಎಂದು ಟೈಟಲ್‌ ಇಡಲಾಗಿದ್ದು, ದಳಪತಿ ವಿಜಯ್‌ ಡಬಲ್‌ ಶೇಡ್‌ ನಲ್ಲಿ( ತಂದೆ – ಮಗನ) ಕಾಣಿಸಿಕೊಂಡಿದ್ದಾರೆ.

ಬಹು ನಿರೀಕ್ಷಿತ ಸಿನಿಮಾ ಇದೇ ವರ್ಷ ರಿಲೀಸ್‌ ಆಗುವ ಸಾಧ್ಯತೆಯಿದೆ. ದಳಪತಿ ವಿಜಯ್, ಮೈಕ್ ಮೋಹನ್, ಪ್ರಭುದೇವ, ಪ್ರಶಾಂತ್, ಸ್ನೇಹಾ, ಲೈಲಾ ಕಾಣಿಸಿಕೊಳ್ಳಲಿದ್ದಾರೆ.

ʼಗೇಮ್‌ ಚೇಂಜರ್‌ʼ: ಜೂ.ಎನ್.ಟಿ.ಆರ್‌ ನಂತೆ ʼಆರ್‌ ಆರ್‌ ಆರ್‌ʼ ಬಳಿಕ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳದ ರಾಮ್‌ ಚರಣ್‌ ಎಸ್.‌ ಶಂಕರ್‌ ಅವರ ʼಗೇಮ್‌ ಚೇಂಜರ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಪೊಲಿಟಿಕಲ್ ಥ್ರಿಲ್ಲರ್ ರಾಮ್ ಚರಣ್ ಐಎಎಸ್ ಅಧಿಕಾರಿಯಾಗಿ ‌ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಬಗ್ಗೆ ಟಾಲಿವುಡ್‌ ನಲ್ಲಿ ದೊಡ್ಡಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಕಿಯಾರಾ ಅಡ್ವಾಣಿ, ಅಂಜಲಿ, ಎಸ್.ಜೆ. ಸೂರ್ಯ, ಜಯರಾಮ್, ಸುನಿಲ್, ಶ್ರೀಕಾಂತ್, ಸಮುದ್ರಕಣಿ  ಮುಂತಾದ ಕಲಾವಿದರು ಕಾಣಿಸಿಕೊಳ್ಳಿದ್ದಾರೆ.

ʼಕಾಂತಾರ-1ʼ(ಪ್ರೀಕ್ವೆಲ್):‌ ಇನ್ನು ಚಂದನವನ ಮಾತ್ರವಲ್ಲದೆ ಪ್ಯಾನ್‌ ಇಂಡಿಯಾದಲ್ಲಿ ಸೂಪರ್‌ ಹಿಟ್‌ ಆಗಿದ್ದ ರಿಷಬ್‌ ಶೆಟ್ಟಿ ಅವರ ʼಕಾಂತಾರʼ ಸಿನಿಮಾ ಮೊದಲ ಭಾಗ ಇದೇ ವರ್ಷ ರಿಲೀಸ್‌ ಆಗಲಿದ್ದು, ಈ ಸಿನಿಮಾದ ಬಗ್ಗೆ ಕುತೂಹಲ ಹಾಗೂ ನಿರೀಕ್ಷೆ ದುಪ್ಪಟ್ಟಾಗಿದೆ. ಇತ್ತೀಚೆಗೆ ಸಿನಿಮಾ ಮಹೂರ್ತ ನೆರವೇರಿದ್ದು, ಕಲಾವಿದರ ಹುಡುಕಾಟದಲ್ಲಿ ಸಿನಿಮಾ ತಂಡ ನಿರತವಾಗಿದೆ.

ʼಕಾಂತಾರʼ ಪ್ರೀಕ್ವೆಲ್‌ ಫಸ್ಟ್‌ ಲುಕ್‌ ಟೀಸರ್‌ ವೈರಲ್‌ ಆಗಿದೆ.

ತುಳುನಾಡಿನ ಆಚಾರ – ವಿಚಾರದ ಸುತ್ತ ಸಾಗುತ್ತ, ಪಂಜರ್ಲಿ ದೈವದ ಮೂಲದ ಕಥೆಯನ್ನು ಸಿನಿಮಾ ಹೇಳಲಿದೆ. ʼಕಾಂತಾರʼ ದಂತೆ, ಅದರ ಮೊದಲ ಭಾಗವೂ ಹಿಟ್‌ ಆಗುವ ನಿರೀಕ್ಷೆಯಲ್ಲಿ ಸಿನಿ ಪ್ರೇಕ್ಷಕರಿದ್ದಾರೆ.

ಗುಂಟೂರು ಕಾರಮ್: ಪ್ರಿನ್ಸ್‌ ಮಹೇಶ್‌ ಬಾಬು ಅವರ ಬಹು ನಿರೀಕ್ಷಿತ ʼಗುಂಟೂರು ಕಾರಮ್ʼ ಸಿನಿಮಾ ರಿಲೀಸ್‌ ಡೇಟ್‌ ಈಗಾಗಲೇ ಅನೌನ್ಸ್‌ ಆಗಿದೆ. ʼಪೊಂಗಲ್‌ ಹಬ್ಬʼಕ್ಕೆ ಸಿನಿಮಾ ರಿಲೀಸ್‌ ಆಗಲಿದೆ. ಆ ಮೂಲಕ ಹಬ್ಬಕ್ಕೆ ಸಿನಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಬಾಡೂಟವನ್ನು ಉಣಿಸಲು ಸಿದ್ದವಾಗಿದೆ.

ಮೂರನೇ ಬಾರಿ ಮಹೇಶ್‌ ಬಾಬು ಜೊತೆ ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾ ಮಾಡುತ್ತಿದ್ದು, ʼಗುಂಟೂರು ಕಾರಮ್ʼ ಹಾಡುಗಳು ಈಗಾಗಲೇ ಹಿಟ್‌ ಲಿಸ್ಟ್‌ ನಲ್ಲಿ ಸೇರಿದೆ. ಮಹೇಶ್ ಬಾಬು ಜೊತೆ ಶ್ರೀಲೀಲಾ, ಮೀನಾಕ್ಷಿ ಚೌಧರಿ, ಜಗಪತಿ ಬಾಬು, ರಮ್ಯಾ ಕೃಷ್ಣನ್, ಜಯರಾಮ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ಇದೇ ಜ.12 ರಂದು ಸಿನಿಮಾ ರಿಲೀಸ್‌ ಆಗಲಿದೆ.

ಕಲ್ಕಿ 2898 ಕ್ರಿ.ಶ (Kalki 2898 AD) :  ಹಿಂದೂ ಪೌರಾಣಿಕ-ಸೈನ್ಸ್‌ ಹಾಗೂ ಭರ್ಜರಿ ವಿಎಫ್‌ ಎಕ್ಸ್‌ ನೊಂದಿಗೆ ಸುಮಾರು 600 ಕೋಟಿ ನಿರ್ಮಾಣದಲ್ಲಿ ತಯಾರಗುತ್ತಿರುವ ʼಕಲ್ಕಿ 2898 ಎಡಿʼ ಸಿನಿಮಾ ಈ ವರ್ಷ ತೆರೆ ಕಾಣಲಿರುವ ಬಹು ದೊಡ್ಡ ಸಿನಿಮಾಗಳಲ್ಲೊಂದು. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಒಂದೇ ಒಂದು ತುಣುಕಿನಿಂದ ನಿರೀಕ್ಷೆ ಹೆಚ್ಚಾಗಿಸಿದೆ.

ʼಕಲ್ಕಿʼ ಯಾಗಿ ಪ್ರಭಾಸ್‌ ಕಾಣಿಸಿಕೊಳ್ಳಲಿದ್ದು, ಎದುರಾಳಿಯಾಗಿ ಕಮಲ್‌ ಹಾಸನ್‌  ಕಾಣಿಸಿಕೊಳ್ಳಲಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಡಿಜೋರ್ಜೆ ಸ್ಟೋಜಿಲ್ಕೋವಿಕ್ ಕ್ಯಾಮೆರಾ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ.

ʼಕಂಗುವʼ:  ಸೂರ್ಯ ವೃತ್ತಿ ಬದುಕಿನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ʼಕಂಗುವʼ ಸಿನಿಮಾ ಕೂಡ ಒಂದು. ಸಿರುತೈ ಖ್ಯಾತಿಯ ಶಿವ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಇದೆಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ವರ್ಷ ಸಿನಿಮಾದ ಗ್ಲಿಂಪ್ಸ್‌ ರಿಲೀಸ್‌ ನಿಂದ ಸಿನಿಮಾದ ಬಗೆಗಿನ ನಿರೀಕ್ಷೆಯನ್ನು ಚಿತ್ರತಂಡ ಹೆಚ್ಚಿಸಿದೆ.

ಸೂರ್ಯ, ಬಾಬಿ ಡಿಯೋಲ್, ದಿಶಾ ಪಟಾನಿ, ಜಗಪತಿ ಬಾಬು ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.