Mangaluru ವಿಮಾನ ನಿಲ್ದಾಣ: ಡಿಸೆಂಬರ್‌ನಲ್ಲಿ 2.03 ಲಕ್ಷ ಪ್ರಯಾಣಿಕರು
Team Udayavani, Jan 2, 2024, 12:39 AM IST
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ನಿರ್ವಹಣೆಯಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಡಿಸೆಂಬರ್‌ನಲ್ಲಿ ದಾಖಲೆಯ 2.03 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಲಾಗಿದೆ.
ಡಿ. 31ರಂದು ಒಂದೇ ದಿನ ದಾಖಲೆಯ 7,548 ಪ್ರಯಾಣಿಕರನ್ನು ನಿರ್ವಹಿಸಿದೆ. ಇದು ಈ ಹಿಂದಿನ ನ. 25ರ ದಾಖಲೆಯನ್ನು (7,468) ಹಿಂದಿಕ್ಕಿದೆ. ಡಿ. 31ರ 7,548 ಪ್ರಯಾಣಿಕರೂ ಸೇರಿದಂತೆ ವಿಮಾನ ನಿಲ್ದಾಣ ಡಿಸೆಂಬರ್‌ನಲ್ಲಿ 12 ದಿನಗಳ ಕಾಲ 7,000ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಲಾಗಿದೆ.
ಡಿ. 9-10, 16-17, 23-25 ಮತ್ತು 30-31ರ ವಾರಾಂತ್ಯದಲ್ಲಿ ಅತೀ ಹೆಚ್ಚಿನ ಪ್ರಯಾಣಿಕರು ನಿಲ್ದಾಣಕ್ಕೆ ಬಂದಿಳಿದಿದ್ದು ಮಾತ್ರವಲ್ಲದೆ ನಿಲ್ದಾಣದಿಂದ ಇತರೆಡೆಗೆ ಪ್ರಯಾಣಿಸಿದ್ದಾರೆ. ಕ್ರಿಸ್ಮಸ್ ಹಿಂದಿನ 3 ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಕ್ರಮವಾಗಿ 7,089, 7,220 ಮತ್ತು 7,034 ಪ್ರಯಾಣಿಕರ ನಿರ್ವಹಣೆ ಮಾಡಲಾಗಿದೆ.
2020ರ ಅ. 31ರ ಕಮರ್ಷಿಯಲ್ ಆಪರೇಷನ್ ಡೇಟ್ (ಸಿಒಡಿ) ಅನಂತರ 2023ರ ನವೆಂಬರ್‌ನಲ್ಲಿ 1.78 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಿತ್ತು.
ಚಳಿಗಾಲದ ವೇಳಾಪಟ್ಟಿ ಜಾರಿ ಯಾದ ಅ. 29ರಿಂದ ಏರ್ ಟ್ರಾಫಿಕ್ ಮೂವ್‌ಮೆಂಟ್ (ಎಟಿಎಂ)ನಲ್ಲಿ ಸಾಮಾನ್ಯ ಹೆಚ್ಚಳ ಗಮನಿಸಲಾಗಿದೆ. ಡಿಸೆಂಬರ್‌ನಲ್ಲಿ 1,388 ಎಟಿಎಂಗಳು ದಾಖಲಾಗಿದ್ದು, ಇದರಲ್ಲಿ 1,096 ದೇಶೀಯ ಚಲನೆಗಳು ಸೇರಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.