Viral Video: ಲಾಟರಿಯಲ್ಲಿ ಮಿಲಿಯನ್ ಡಾಲರ್ ಗೆದ್ದ ಬಳಿಕ ವೇದಿಕೆಯಲ್ಲೇ ಕುಸಿದ ಮಹಿಳೆ
Team Udayavani, Jan 2, 2024, 10:52 AM IST
ವಾಷಿಂಗ್ಟನ್: ಲಾಟರಿಯಲ್ಲಿ ಮಿಲಿಯನ್ ಡಾಲರ್ ಗೆದ್ದ ಮಹಿಳೆಯೊಬ್ಬರು ವೇದಿಕೆಯಲ್ಲೇ ಕುಸಿದು ಬಿದ್ದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.
ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಅಮೆರಿಕದ ಉತ್ತರ ಕೆರೊಲಿನಾದ ಪಮೇಲಾ ಬ್ರಾಡ್ಶಾ ಎನ್ನುವ ಮಹಿಳೆ ಹಿಂದೆಂದೂ ನ್ಯೂಯಾರ್ಕ್ ನಗರಕ್ಕೆ ಭೇಟಿ ನೀಡಿಲ್ಲ. ಸ್ಟೇಟ್ ಲಾಟರಿ ಅವರು ಡ್ರಾಯಿಂಗ್ ಒಂದನ್ನು ಆಯೋಜನೆ ಮಾಡಿದ್ದು, ಇದರ ಎರಡನೇ ಸುತ್ತಿನಲ್ಲಿ ಆಯ್ಕೆಯಾಗುವ ಮೂಲಕ ನಗರಕ್ಕೆ ವಿಐಪಿ ಪ್ರವಾಸದ ಅವಕಾಶವನ್ನು ಪಮೇಲಾ ಪಡೆದುಕೊಂಡರು.
$1 ಮಿಲಿಯನ್ ಗೆಲ್ಲುವ ಅವಕಾಶವನ್ನು ಪಡೆದ ಐವರು ಪವರ್‌ಬಾಲ್ ಆಟಗಾರರಲ್ಲಿ ಪಮೇಲಾ ಬ್ರಾಡ್ಶಾ ಒಬ್ಬರಾಗಿದ್ದರು.
ಹೊಸ ವರ್ಷದ ಮುನ್ನ ದಿನ ರಾಕಿನ್ ಈವ್ ಈವೆಂಟ್ ಎನ್ನುವ ಕಾರ್ಯಕ್ರಮದಲ್ಲಿ ಐವರನ್ನು ನಿಲ್ಲಿಸಿ ಮಿಲಿಯನ್ ಡಾಲರ್ ಗೆಲ್ಲುವವರ ಹೆಸರನ್ನು ಘೋಷಿಸಿದ್ದಾರೆ. “ಪಮೇಲಾ! ನೀವು ಮಿಲಿಯನೇರ್!” ಎಂದು ಹೇಳುತ್ತಿದ್ದಂತೆ ಖುಷಿಯಿಂದ ಪಮೇಲಾ ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದಾರೆ. ಒಂದು ಕ್ಷಣ ಇದು ಸತ್ಯವೆನನ್ನುವುದನ್ನು ನಂಬಲಾಗದೆ ಅವರು ಭಾವುಕರಾಗಿದ್ದಾರೆ.
“ನನ್ನದೇ ಆದ ಸ್ವಂತ ಮನೆ ಮಾಡಲು ನಾನು ಇಷ್ಟಪಡುತ್ತೇನೆ. ಅಲಂಕಾರಿಕ ಅಥವಾ ದೊಡ್ಡದಾದ ಯಾವುದೂ ಅಲ್ಲ, ಸ್ವಲ್ಪ ಕಾಟೇಜ್ ,ಒಂದು ಅಥವಾ ಎರಡು ಬೆಡ್‌ರೂಮ್‌ಗಳನ್ನು ಹೊಂದಿರುವ ಏನಾದರೂ..” ಎಂದು ಅವರು ಹೇಳಿರುವುದಾಗಿ ವರದಿ ತಿಳಿಸಿದೆ.
The time is finally here… 👀
Our Powerball First Millionaire of the Year is…
Pamela Bradshaw from North Carolina! #PowerballRockinEve #RockinEve pic.twitter.com/2FcQXhWr0A
— New Year’s Rockin’ Eve (@RockinEve) January 1, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.