Sydney; ವಿದಾಯ ಪಂದ್ಯಕ್ಕೆ ಮುನ್ನ ಬ್ಯಾಗಿ ಗ್ರೀನ್ ಕ್ಯಾಪ್ ಕಳೆದುಕೊಂಡ ಡೇವಿಡ್ ವಾರ್ನರ್
Team Udayavani, Jan 2, 2024, 11:17 AM IST
ಸಿಡ್ನಿ: ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗುತ್ತಿದ್ದಾರೆ. ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ವಿರುದ್ಧದ ಸರಣಿಯ ಕೊನೆಯ ಪಂದ್ಯವನ್ನು ಬುಧವಾರ ಸಿಡ್ನಿಯಲ್ಲಿ ಆಡುತ್ತಿದೆ. ಈ ಪಂದ್ಯವೇ ವಾರ್ನರ್ ಅವರ ಕೊನೆಯ ಟೆಸ್ಟ್ ಪಂದ್ಯವಾಗಿರಲಿದೆ. ಈ ಪಂದ್ಯವನ್ನು ಸ್ಮರಣೀಯವಾಗಿರಿಸಲು ವಾರ್ನರ್ ಎದುರು ನೋಡುತ್ತಿದ್ದಾರೆ. ಆದರೆ ಅದಕ್ಕೂ ಮೊದಲು ವಾರ್ನರ್ ಅವರ ಕ್ಯಾಪ್ ಕಳೆದು ಹೋಗಿದೆ.
ಹೌದು, ವಾರ್ನರ್ ಅವರ ಬ್ಯಾಗಿ ಗ್ರೀನ್ಸ್ ಕ್ಯಾಪ್ ಕಾಣೆಯಾಗಿದೆ. ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ, ವಾರ್ನರ್ ಸಿಡ್ನಿಗೆ ಆಗಮಿಸಿದ ನಂತರ ತನ್ನ ಬ್ಯಾಕ್ ಪ್ಯಾಕ್ ಕಾಣೆಯಾಗಿದೆ ಎಂದು ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಯಾರೋ ಒಬ್ಬರು ತಮ್ಮ ಸಾಮಾನು ಸರಂಜಾಮುಗಳಿಂದ ತಮ್ಮ ಬ್ಯಾಕ್ ಪ್ಯಾಕನ್ನು ತೆಗೆದಿದ್ದಾರೆ. ಅದನ್ನು ತೆಗೆದವ ಒಂದು ವೇಳೆ ಪ್ರಾಮಾಣಿಕತೆಯಿಂದ ಹಿಂದೆ ತಂದು ಕೊಟ್ಟರೆ ಅವರು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ವಾರ್ನರ್ ಭರವಸೆ ನೀಡಿದರು.
ಅವರು ಹೋಟೆಲ್ ಸಿಬ್ಬಂದಿಯೊಂದಿಗೆ ಪರಿಶೀಲಿಸಿದಾಗ ಅವರು ಹೋಟೆಲ್ ಆವರಣದಲ್ಲಿ ಕಳ್ಳತನವಾಗಿಲ್ಲ ಎಂದು ತಿಳಿದುಬಂದಿದೆ ಎಂದು ಹೇಳಿದರು. ಸಿಸಿಟಿವಿಗಳನ್ನು ಅಳವಡಿಸದಿರುವ ಹಲವು ಬ್ಲೈಂಡ್ ಸ್ಪಾಟ್ ಗಳಿರುವುದರಿಂದ ವಿಮಾನ ನಿಲ್ದಾಣದಲ್ಲಿ ಕಳ್ಳತನ ನಡೆದಿದೆ ಎಂದು ವಾರ್ನರ್ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.