ನೀನು ಕುಟುಂಬದಿಂದ ದೂರನೇ ಇರಬೇಕು.. Bigg Boss ಮನೆಯಲ್ಲಿ ಪ್ರತಾಪ್ ಭವಿಷ್ಯ ನುಡಿದ ಗುರೂಜಿ
Team Udayavani, Jan 2, 2024, 12:05 PM IST
ಬೆಂಗಳೂರು: ಬಿಗ್ ಬಾಸ್ ಸೀಸನ್ -10 ಶುರುವಾಗಿ 80 ದಿನ ಮೇಲಾಗಿದೆ. ಫಿನಾಲೆ ವಾರದತ್ತ ಮನೆಯ ಆಟ ಸಾಗುತ್ತಿದ್ದಂತೆ ಸ್ಪರ್ಧಿಗಳ ಆಟವೂ ಕಾವು ಪಡೆದುಕೊಳ್ಳುತ್ತಿದೆ.
ಈ ವಾರ ಪ್ರತಾಪ್, ಮೈಕಲ್, ಕಾರ್ತಿಕ್ , ತುಕಾಲಿ ಸಂತೋಷ್, ವರ್ತೂರು ಸಂತೋಷ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಮನೆ ಬಿಟ್ಟು ಹೋಗುತ್ತಾರೋ ಅಥವಾ ಎಲಿನೇಷನ್ ನಲ್ಲಿ ಏನಾದರೂ ಟ್ವಿಸ್ಟ್ & ಟರ್ನ್ ಇರಲಿದೆಯೋ ಎನ್ನುವುದನ್ನು ಕಾದುನೋಡಬೇಕಿದೆ.
ಇನ್ನೊಂದೆಡೆ ಬಿಗ್ ಬಾಸ್ ಮನೆಗೆ ಶ್ರೀವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಬಂದು ಸ್ಪರ್ಧಿಗಳ ಭವಿಷ್ಯ ಹೇಳಿದ್ದಾರೆ.
“ಕಾಲಿನ ಮೇಲೆ ಹಾಕಿಸಿಕೊಳ್ಳದ ಜಾಗದಲ್ಲಿ ಟ್ಯಾಟೋವೊಂದನ್ನು ಹಾಕಿದ್ದೀರಿ. ಅಂದಿನಿಂದ ನಿಮ್ಮ ಮನಸ್ಸಿನಲ್ಲಿದ್ದ ನೆಮ್ಮದಿಯಲ್ಲ ಹೋಯಿತು” ಎಂದು ವರ್ತೂರು ಅವರ ಭವಿಷ್ಯವನ್ನು ಗುರೂಜಿ ಹೇಳಿದ್ದಾರೆ.
ಇನ್ನು ನಮೃತಾ ಅವರ ಜೀವನದಲ್ಲಿ “ಹೊಸ ಬೆಳಕು, ಹೊಸ ವ್ಯಕ್ತಿಯ ಆಗಮನವಾಗಿತೆಂದು” ಗುರೂಜಿ ಹೇಳಿದ್ದಾರೆ.
ಕಳೆದ ಮೂರು ವರ್ಷಗಳಿಂದ ಮನೆಯವರಿಂದ ದೂರವಿರುವ ಡ್ರೋನ್ ಪ್ರತಾಪ್ ಅವರ ಬಳಿ, “ ಈ ವಿಚಾರವನ್ನು ಹೇಳಲು ನನಗೆ ಸಂಕಟವಾಗುತ್ತದೆ. ನೀನು ಕುಟುಂಬದಿಂದ ದೂರವಿರಬೇಕು. ಕುಟುಂಬದ ಜೀವನ ಅಷ್ಟು ಸರಿಯಲ್ಲ. ದೂರವಿದ್ದು ದೂತನಾಗುತ್ತೀಯ, ಹತ್ತಿರ ಹೋಗಿ ಹೇಸಿಗೆ ಆಗುತ್ತೀಯ ಅನ್ನೋದು ನಿನಗೆ ಬಿಟ್ಟದು” ಎಂದು ಹೇಳಿದ್ದಾರೆ.
ಇದನ್ನು ಕೇಳಿ ಪ್ರತಾಪ್ ಭಾವುಕರಾಗುವುದು ಪ್ರೋಮೊದಲ್ಲಿ ತೋರಿಸಲಾಗಿದೆ. ಮಂಗಳವಾರ(ಜ.2 ರಂದು) ಈ ಸಂಚಿಕೆ ಪ್ರಸಾರವಾಗಲಿದೆ.
ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ ಭವಿಷ್ಯ ಕೇಳಿ ದಂಗಾದ್ರಾ ಸ್ಪರ್ಧಿಗಳು?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/W0knEi6mu9
— Colors Kannada (@ColorsKannada) January 2, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
BBK11: ಬಿಗ್ ಬಾಸ್ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್ ಚುಪ್ ಆದ ಮಂಜು.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.