Just Pass Movie; ಹುಡುಗರಿಗೆ ಗುರು ದೆಸೆ; ಪ್ರಿನ್ಸಿಪಾಲ್ ಪಾತ್ರದಲ್ಲಿ ರಂಗಾಯಣ ರಘು

Team Udayavani, Jan 2, 2024, 3:16 PM IST

Just Pass Movie; ಹುಡುಗರಿಗೆ ಗುರು ದೆಸೆ; ಪ್ರಿನ್ಸಿಪಾಲ್ ಪಾತ್ರದಲ್ಲಿ ರಂಗಾಯಣ ರಘು

ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ ಬಂದವರಿಗೆ, ಹೆಚ್ಚು ಮಾರ್ಕ್ಸ್ ತೆಗೆದುಕೊಂಡವರಿಗೆ ನೂರಾರು ಕಾಲೇಜುಗಳು ರತ್ನಗಂಬಳಿ ಹಾಸಿ ಸ್ವಾಗತಿಸುತ್ತವೆ. ಆದರೆ ಪರೀಕ್ಷೆಯಲ್ಲಿ “ಜಸ್ಟ್‌ ಪಾಸ್‌’ ಆದವರ ಕಥೆ ಮಾತ್ರ ಹೇಳತೀರದು. ಇಂಥ ಹುಡುಗರಿಗಾಗಿಯೇ ಇಲ್ಲೊಂದು ಕಾಲೇಜ್‌ ತೆರೆಯಲಾಗಿದೆ. ಈ ಕಾಲೇಜ್‌ “ಜಸ್ಟ್‌ ಪಾಸ್‌’ ಆದವರಿಗೆ ಮಾತ್ರ..!

ಹೌದು, ಇದು ಶೀಘ್ರದಲ್ಲಿಯೇ ತೆರೆಗೆ ಬರಲು ಸಿದ್ಧವಾಗುತ್ತಿರುವ “ಜಸ್ಟ್‌ ಪಾಸ್‌’ ಸಿನಿಮಾದ ಬಗ್ಗೆ ಇರುವಂಥ ಅಚ್ಚರಿಯ ಸಂಗತಿ. ಅಂದಹಾಗೆ, “ಜಸ್ಟ್‌ ಪಾಸ್‌’ ಸಿನಿಮಾದಲ್ಲಿ ಕೂದಲೆಳೆ ಅಂತರದಲ್ಲಿ ಪಾಸ್‌ ಆದವರಿಗಂತಲೇ ಕಾಲೇಜು ತೆರೆಯಲಾಗಿದೆ. ಜತೆಗೆ ಈ ಕಾಲೇಜ್‌ ಸೇರಿಕೊಂಡರೆ, ಹಾಸ್ಟೆಲ್‌ ಕೂಡ ಉಚಿತವಂತೆ!

ಇನ್ನು “ಜಸ್ಟ್‌ ಪಾಸ್‌’ ಆಗಿರುವವರ ಕಾಲೇಜಿನಲ್ಲಿ ನಟ ರಂಗಾಯಣ ರಘು ಪ್ರಿನ್ಸಿಪಾಲ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಿನ್ಸಿಪಾಲ್‌ ಪಾತ್ರ ನಿರ್ವಹಿಸುತ್ತಿರುವುದು ರಂಗಾಯಣ ರಘು, ಸಿನಿಮಾದಲ್ಲಿ ತಮ್ಮ ಜೀವಮಾನದ ಸಂಪಾದನೆಯಿಂದ ಕಾಲೇಜು ಶುರು ಮಾಡಿ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ಗುರುವಾಗಿ ಕಾಣಿಸಿಕೊಂಡಿದ್ದಾರೆ. “ಜಸ್ಟ್‌ ಪಾಸ್‌’ ಆದವರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಟ್ಯಾಲೆಂಟ್‌ ಇರುತ್ತದೆ. ಹಾಗೆಯೇ ಒಂದಷ್ಟು ತಲೆಹರಟೆ ವಿದ್ಯಾರ್ಥಿಗಳೂ ಇರುತ್ತಾರೆ. ಇವರನ್ನೆಲ್ಲ ಹೇಗೆ ನಿಭಾಯಿಸುತ್ತಾರೆ. ಅವರಿಗೂ ಒಂದೊಳ್ಳೆ ದಾರಿ ಹೇಗೆ ಕಲ್ಪಿಸುತ್ತಾರೆ ಎಂಬುದೇ “ಜಸ್ಟ್‌ ಪಾಸ್‌’ ಸಿನಿಮಾದ ಒನ್‌ ಲೈನ್‌ ಎನ್ನುತ್ತದೆ ಚಿತ್ರತಂಡ.

“ಈ ಚಿತ್ರದಲ್ಲಿ ಕಥೆ ಒಂದು ತೂಕವಾದರೆ, ರಂಗಾಯಣ ರಘು ಅವರ ಪಾತ್ರವೇ ಒಂದು ತೂಕ. ಅವರಿಗೆ ಕಥೆ ಹೇಳಿದಾಕ್ಷಣ, ಕಾಸ್ಟೂಮ್‌ ಬಗ್ಗೆ ಅವರೇ ಹೇಗಿರಬೇಕೆಂದು ಡಿಸೈನ್‌ ಮಾಡಿಕೊಂಡರು. ಯಾಕಂದ್ರೆ ಅವರ ಪಾತ್ರ ಪ್ರಿನ್ಸಿಪಾಲ್. ಅವರದ್ದೇ ಕಾಲೇಜು, ತೂಕವಾದ ವ್ಯಕ್ತಿತ್ವ, ನ್ಯಾಷನಲ್‌ ಅವಾರ್ಡ್‌ ಕೂಡಾ ಬಂದಿರುತ್ತೆ. ಸದಾ ಸಮಾಜಮುಖೀಯಾಗಿ ಚಿಂತಿಸುವ ಪಾತ್ರ ಅವರದ್ದು. ಮೂರು ಪಂಚೆ, 3 ಶರ್ಟು, ಕೋಟು ಮತ್ತು 2 ಪೇಟ ಇಟ್ಟುಕೊಂಡಿರುವ ಸೀದಾ ಸಾದಾ ಮನುಷ್ಯ. ಇಡೀ ಸಿನಿಮಾದಲ್ಲಿ ಒಂದೇ ಚಪ್ಪಲಿ ಬಳಸಿದ್ದಾರೆ. ಅವರ ಪಾತ್ರದ ಬಗ್ಗೆ ಮತ್ತಷ್ಟು ವಿಶೇಷತೆಗಳಿವೆ. ಅವೆಲ್ಲವನ್ನೂ ಸಿನಿಮಾದಲ್ಲಿ ನೋಡಿದರೆ ಚೆನ್ನಾಗಿರುತ್ತೆ’ ಎಂಬುದು ನಿರ್ದೇಶಕ ಕೆ. ಎಂ. ರಘು ಮಾತು.

“ಜಸ್ಟ್‌ಪಾಸ್‌’ ಸಿನಿಮಾದಲ್ಲಿ ಶ್ರೀ ನಾಯಕನಾಗಿದ್ದು, ಯುವ ಪ್ರತಿಭೆ ಪ್ರಣತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಅವರೊಂದಿಗೆ ಸಾಧು ಕೋಕಿಲ, ಪ್ರಕಾಶ್‌ ತುಮ್ಮಿನಾಡು, ದೀಪಕ್‌ ರೈ, ದಾನಪ್ಪ, ಗೋವಿಂದೇ ಗೌಡ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ರಾಯ್ಸ್ ಎಂಟರ್‌ ಟೈನ್ಮೆಂಟ್‌ ಲಾಂಛನದಲ್ಲಿ ಕೆ. ವಿ. ಶಶಿಧರ್‌ ನಿರ್ಮಿಸುತ್ತಿರುವ “ಜಸ್ಟ್‌ ಪಾಸ್‌’ ಸಿನಿಮಾಕ್ಕೆ ಕೆ. ಎಂ. ರಘು ನಿರ್ದೇಶನವಿದೆ. ಸಿನಿಮಾದ ಹಾಡುಗಳಿಗೆ ಹರ್ಷವರ್ಧನ್‌ ರಾಜ್‌ ಸಂಗೀತ ಸಂಯೋಜಿಸಿದ್ದು, ಸುಜಯ್‌ ಕುಮಾರ್‌ ಛಾಯಾಗ್ರಹಣವಿದೆ.

ಟಾಪ್ ನ್ಯೂಸ್

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

PM Modi

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

naksal (2)

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

PM Modi

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.