Ram Mandir; ರಾಮನ ವಿಗ್ರಹಕ್ಕೆ ಮೊದಲ ಪೂಜೆ ಬ್ರಾಹ್ಮಣರಿಂದ ಆಗಬೇಕು: ಸಚಿವ ಮಂಕಾಳು ವೈದ್ಯ
Team Udayavani, Jan 2, 2024, 5:23 PM IST
ಕಾರವಾರ: ರಾಮನ ವಿಗ್ರಹಕ್ಕೆ ಮೊದಲ ಪೂಜೆ ಬ್ರಾಹ್ಮಣರಿಂದ ಆಗಬೇಕು, ಅದು ನಮ್ಮ ಸಂಪ್ರದಾಯ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಮಾಂಕಾಳು ವೈದ್ಯ ಕಾರವಾರದಲ್ಲಿ ಹೇಳಿದರು.
ಮಾಧ್ಯಮಗಳ ಜೊತೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು ಬಿಜೆಪಿ ಪ್ರತಿಯೊಂದರಲ್ಲೂ ರಾಜಕೀಯ ಮಾಡುತ್ತದೆ. ರಾಮನ ವಿಷಯದಲ್ಲೂ ಅದು ರಾಜಕೀಯ ಮಾಡುತ್ತದೆ. ನಾವು ಜನರ ಬಡತನ ಹೋಗಲಾಡಿಸಲು ರಾಜಕೀಯ ಮಾಡುತ್ತೇವೆ. ರಾಮ ಎಲ್ಲರಿಗೂ ಸೇರಿದವನು. ಬಿಜೆಪಿಯವರ ಕ್ಷುಲ್ಲಕತನವನ್ನು ರಾಮನೇ ನೋಡಿಕೊಳ್ಳುತ್ತಾನೆ ಎಂದರು.
ನಾನು ಸಹ ಆಯೋಧ್ಯೆಗೆ ಹೋಗುವೆ. ಹೇಗೂ ವಿಮಾನ ನಿಲ್ದಾಣವಾಗಿದೆ. ಟಿಕೆಟ್ ಸಿಕ್ಕರೆ ಜ.22ಕ್ಕೆ ಹೋಗುವೆ ಎಂದರು.
ನಾನು ಕಾಂಗ್ರೆಸ್ ಮನುಷ್ಯ. ರಾಮಮಂದಿರ ನಿರ್ಮಾಣಕ್ಕೆ ನಾನು ಹಣ ಕೊಟ್ಟಿದ್ದೇನೆ. ರಾಮ ಎಲ್ಲರಿಗೂ ಸೇರಿದವ. ನಮ್ಮ ಹೈಕಮಾಂಡ್ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಹೈಕಮಾಂಡ್ ಸಹ ಆಯೋಧ್ಯಗೆ ಹೋಗಬಹುದು. ನಾನು ಜ.22 ಕ್ಕೆ ಆಗದಿದ್ದರೂ ಮುಂದಿನ ದಿನಗಳಲ್ಲಿ ಹೋಗಿ ಬರುವೆ. ದೇವರ ಭಕ್ತಿ ವೈಯಕ್ತಿಕ ನೆಲೆಯದ್ದು ಎಂದರು.
ಆಯೋಧ್ಯೆ ಬಾಬರಿ ಮಸೀದಿ ಕೆಡವಿದವರನ್ನು ಬಂಧಿಸಲಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ವೈದ್ಯ, ಕೋರ್ಟ್ ಮಾರ್ಗದರ್ಶನದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅಪಾರಾಧ ಎಷ್ಟೇ ಹಳೆಯದಾಗಿರಲಿ, ಅವರನ್ನು ಹಾಗೆ ಬಿಡಲು ಸಾಧ್ಯವಾ? ಕಾನೂನು ಪ್ರಕಾರ ಪೊಲೀಸರು ಕ್ರಮ ತೆಗೆದುಕೊಂಡಿರುತ್ತಾರೆ. ಇದರಲ್ಲೂ ಬಿಜೆಪಿಗರು ರಾಜಕೀಯ ಹುಡುಕುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.