Uppinangady ಮಲಗಿದಲ್ಲೇ ಕಾರ್ಮಿಕ ಸಾವು
Team Udayavani, Jan 2, 2024, 11:47 PM IST
ಉಪ್ಪಿನಂಗಡಿ: ಹೆದ್ದಾರಿ ಕಾಮಗಾರಿಗೆಂದು ಬಿಹಾರದಿಂದ ಬಂದಿದ್ದ ಕಾರ್ಮಿಕನೋರ್ವ ವಿಪರೀತ ಮದ್ಯ ಸೇವಿಸಿ ಮಲಗಿದ್ದಲ್ಲೇ ಸಾವನ್ನಪ್ಪಿದ ಘಟನೆ ಶಿರಾಡಿ ಗ್ರಾಮದ ಉದನೆಯಲ್ಲಿ ಸಂಭವಿಸಿದೆ.
ಎಂ ಡಿ ಸಾವೇದ್ ನದಾಫ್ ಅವರ ಮೂಲಕ 3 ತಿಂಗಳ ಹಿಂದೆ ಬಿಹಾರದಿಂದ ಹೆದ್ದಾರಿ ಕಾಮಗಾರಿಯ ಕಾರ್ಮಿಕನಾಗಿ ಆಗಮಿಸಿದ್ದ ಶಿಬ ಕುಮಾರ್ ಸಾಹ (36) ಕೆಲಸಕ್ಕೆ ರಜೆ ಮಾಡಿ ಮದ್ಯ ಸೇವಿಸಿ ಶೆಡ್ನಲ್ಲಿ ಮಲಗಿದ್ದಾರು. ಆತ ಅಲ್ಲೇ ಸಾವನ್ನಪ್ಪಿರುವುದಾಗಿ ಸಾವೇದ್ ನದಾಫ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.