ತತ್ಕಾಲ್‌ ಪೋಡಿ ಸೇವಾ ಶುಲ್ಕ ಇಳಿಕೆ- 2024ರ ಜ. 1ರ ಅನಂತರ ಸಲ್ಲಿಸುವ ಅರ್ಜಿಗಳಿಗಷ್ಟೇ ಅನ್ವಯ


Team Udayavani, Jan 2, 2024, 11:56 PM IST

VIDHANA SOUDHA 1

ಬೆಂಗಳೂರು: ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇರಿ ಮೋಜಿಣಿ ವ್ಯವಸ್ಥೆಯಡಿ ಸ್ವೀಕರಿಸುವ ಅರ್ಜಿಗಳ ಸೇವಾ ಶುಲ್ಕವನ್ನು ಇಳಿಕೆ ಮಾಡಿ ಸರಕಾರ ಆದೇಶಿಸಿದೆ.
ಈ ಹಿಂದೆ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಏಕರೂಪದ ಸೇವಾ ಶುಲ್ಕ ಪಡೆಯಲಾಗುತ್ತಿತ್ತು. ಅಲ್ಲದೆ, ಪರವಾನಿಗೆ ಭೂಮಾಪಕರಿಗೆ ಪ್ರತೀ ಅರ್ಜಿಗೆ ಪಾವತಿಸುತ್ತಿದ್ದ ಸೇವಾಶುಲ್ಕವನ್ನು 800 ರೂ.ಗಳಿಂದ 1200 ರೂ.ಗೆ ಮತ್ತು ಬಹುಮಾಲಕತ್ವದ ಪ್ರತಿ ಹೆಚ್ಚುವರಿ ಬ್ಲಾಕ್‌ನ ಸರ್ವೇಗೆ 150 ರೂ.ಗಳಿಂದ 200 ರೂ.ಗೆ ಹೆಚ್ಚಿಸಿ 2022ರ ಜ.10 ರಂದು ರಲ್ಲಿ ಆದೇಶಿಸಲಾಗಿತ್ತು. 2022ರ ಫೆಬ್ರವರಿಯಲ್ಲಿ ಗ್ರಾಮೀಣ ಪ್ರದೇಶದ ಸೇವಾ ಶುಲ್ಕವನ್ನು ತುಸು ಕಡಿಮೆ ಮಾಡಿತ್ತು.

ಪಹಣಿ ಕಾಲಂ-3ರ ವಿಸ್ತೀರ್ಣ ಹೆಚ್ಚಿಗೆ ಇದ್ದು, ಸಾರ್ವಜನಿಕರ ಹಕ್ಕಿನ ವಿಸ್ತೀರ್ಣ ಕಡಿಮೆ ಇದ್ದರೂ ಪೂರ್ಣ ಪ್ರಮಾಣದ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕ ಪಡೆಯಲಾಗುತ್ತಿತ್ತು. ಈ ಬಗ್ಗೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕೆಲವು ಶಾಸಕರು ಪ್ರಸ್ತಾಪಿಸಿದ್ದರಲ್ಲದೆ, ಇದರಿಂದ ಹೆಚ್ಚು ಹೊರೆಯಾಗುತ್ತಿರುವ ಬಗ್ಗೆ ರೈತರೂ ದೂರಿದ್ದರು.

ಪೋಡಿಮುಕ್ತ ಗ್ರಾಮ ಅಭಿಯಾನ
ಪ್ರಸ್ತುತ ಪೋಡಿಮುಕ್ತ ಅಭಿಯಾನ ಯೋಜನೆಯಡಿ ಬಹುಮಾಲಕತ್ವ ಪಹಣಿಯಲ್ಲಿರುವ ಹಕ್ಕುದಾರರಿಗೆ ಶುಲ್ಕರಹಿತವಾಗಿ ಪೋಡಿ ಮಾಡಿಕೊಡುವ ಯೋಜನೆ ಮುಂದುವರಿಯಲಿದೆ. ಅದಲ್ಲದೆ, ಅಲಿನೇಶನ್‌, ದರಖಾಸ್ತು ಪೋಡಿ ಸಂಬಂಧ ಮಂಜೂರಿ ಸಮಯದಲ್ಲೇ ಪೋಡಿ ಶುಲ್ಕ ಭರಿಸಿಕೊಳ್ಳಲಾಗುತ್ತದೆ. ಉಳಿದಂತೆ 11ಇ, ಅಲಿನೇಶನ್‌ ಪೂರ್ವ ನಕ್ಷೆ, ತತ್ಕಾಲ್‌ ಪೋಡಿ, ಹದ್ದುಬಸ್ತು ಪ್ರಕ್ರಿಯೆಗಳ ಸಂಬಂಧಿಸಿದ ಅರ್ಜಿ ಶುಲ್ಕಗಳನ್ನು ಕಡಿಮೆ ಮಾಡಲಾಗಿದೆ.

ಜ. 1ರಿಂದ ಸಲ್ಲಿಸುವ ಅರ್ಜಿಗಷ್ಟೇ ಅನ್ವಯ
ರಾಜ್ಯ ಸರಕಾರ ಪರಿಷ್ಕರಣೆ ಮಾಡಿರುವ ಅರ್ಜಿ ಶುಲ್ಕವು ಈಗಾಗಲೇ ಅಳತೆಗಾಗಿ ಸಲಿಸಿರುವ ಅರ್ಜಿಗೆ ಅನ್ವಯ ಆಗುವುದಿಲ್ಲ. ಜ. 1ರ ಅನಂತರ ಸಲ್ಲಿಸುವ ಅರ್ಜಿಗಳಿಗೆ ಭವಿಷ್ಯಾನ್ವಯ ಆಗುವಂತೆ ಆದೇಶಿಸಿದ್ದು, ಸ್ವಇಚ್ಛೆಯಿಂದ ಸ್ಕೆಚ್‌ ತಯಾರಿಸಲು ಸಲ್ಲಿಸುವ ಪ್ರತೀ ಅರ್ಜಿಗೆ ಹಿಂದಿನಂತೆ 1,000 ರೂ. ದರವೇ ಮುಂದುವರಿಯಲಿದೆ.

ಟಾಪ್ ನ್ಯೂಸ್

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

6-madikeri-1

Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ

BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ

Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?

Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?

Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್‌ ಭೇಟಿ ಸಾಧ್ಯತೆ

Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್‌ ಭೇಟಿ ಸಾಧ್ಯತೆ

DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ

DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ

ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Rashmika Mandanna gave hint of Pushpa 3

Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ

Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

Pakistan: ಇಮ್ರಾನ್‌ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.