Politics: ವಲಸಿಗರ ಸೇರ್ಪಡೆ: ಸಮಿತಿ ರಚಿಸಿದ ಬಿಜೆಪಿ
Team Udayavani, Jan 3, 2024, 12:14 AM IST
ಸಮಿತಿ ಒಪ್ಪಿಗೆ ಸಿಕ್ಕರಷ್ಟೇ ಪಕ್ಷಕ್ಕೆ ಸೇರ್ಪಡೆ ಶನಿವಾರ ನಡೆಯಲಿದೆ ಮೊದಲ ಸಭೆ
ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧತೆಯಲ್ಲಿ ತೊಡಗಿರುವ ಬಿಜೆಪಿ ಈಗ ಬೇರೆ ರಾಜಕೀಯ ಪಕ್ಷಗಳಿಂದ ವಲಸೆ ಬರುವವರ ಸೇರ್ಪಡೆ ಬಗ್ಗೆ ಎಚ್ಚರಿಕೆಯ ಹೆಜ್ಜೆಯಿಡಲು ನಿರ್ಧರಿಸಿದೆ. ಅದಕ್ಕಾಗಿ ಅಂಥವರ ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸುವ ನಿಟ್ಟಿನಲ್ಲಿ ಹೊಸ ಸಮಿತಿಯನ್ನು ರಚಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಸಮಿತಿಯ ಮೊದಲ ಸಭೆ ಜ.6ರಂದು ನಡೆಯಲಿದೆ. ಇತರ ಪಕ್ಷಗಳ ನಾಯಕರಿಗೆ ನೇರವಾಗಿ ಮಣೆ ಹಾಕುವ ಬದಲು, ಯಾರನ್ನು ಸೇರಿಸಿಕೊಳ್ಳಬಹುದು, ಯಾರನ್ನು ಸೇರಿಸಿಕೊಳ್ಳಬಾರದು ಎಂಬ ಬಗ್ಗೆ ಸಮಿತಿಯು ಪರಾಮರ್ಶೆ ನಡೆಸಲಿದೆ. ಸಮಿತಿಯ ಸದಸ್ಯರು ಸೇರ್ಪಡೆಗೊಳ್ಳಲಿರುವ ನಾಯಕರ ಬಗ್ಗೆ ಮಾಹಿತಿ ಪರಿಶೀಲಿಸಿ, ಸಹಮತ ವ್ಯಕ್ತಪಡಿಸಿದ ಬಳಿಕವೇ ವಲಸಿಗರಿಗೆ ಗ್ರೀನ್ ಸಿಗ್ನಲ್ ನೀಡಲಾಗುತ್ತದೆ.
ಪಶ್ಚಿಮ ಬಂಗಾಲದಲ್ಲಿ ಹಿಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಎಂಸಿ ನಾಯಕರಾಗಿದ್ದ ಮುಕುಲ್ ರಾಯ್, ಬಾಬುಲ್ ಸುಪ್ರಿಯೋ ಬಿಜೆಪಿಗೆ ಸೇರಿದ್ದರು. ಆದರೆ ಫಲಿತಾಂಶದ ಬಳಿಕ ಅವರು ಟಿಎಂಸಿಗೆ ಮರಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.