Interview: ನಾವು ಆಪರೇಶನ್‌ ಕಮಲ ಮಾಡ್ತಿಲ್ಲ…

"ಉದಯವಾಣಿ"ಯೊಂದಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರುಗೇಶ್‌ ನಿರಾಣಿ ನೇರಾ ನೇರ ಮಾತು

Team Udayavani, Jan 3, 2024, 6:56 AM IST

murugesh nirani

“ಸರಕಾರದ ಸಚಿವರು, ಆಡಳಿತಾರೂಢ ಕಾಂಗ್ರೆಸ್‌ನ ಶಾಸಕರು ನಮ್ಮ ಸಂಪರ್ಕ ದಲ್ಲಿ ಇರುವುದು ನಿಜ” ಎಂಬ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರುಗೇಶ್‌ ನಿರಾಣಿ, ನಾವಾಗಿಯೇ ಯಾರನ್ನೂ ಸಂಪರ್ಕಿಸಿಲ್ಲ. ಅವರೇ ನಮ್ಮ ಹೈಕ ಮಾಂಡ್‌ ಕದ ತಟ್ಟಿದ್ದಾರೆ. ಸದ್ಯಕ್ಕೆ ಏನೂ ಹೇಳಲ್ಲ. ಅನುದಾನ ಸಿಗದಿದ್ದರೆ ಶಾಸಕರು ತಾನೆ ಏನು ಮಾಡುತ್ತಾರೆ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಅಷ್ಟೆ ಅಲ್ಲದೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಮ್ಮೊಂದಿಗೆ ಕೈಜೋಡಿಸಿರುವ ಜೆಡಿಎಸ್‌, ರಾಜ್ಯದಲ್ಲಿ ಸರಕಾರ ರಚನೆಯಂತಹ ಸಂದರ್ಭ ಬಂದರೆ ಜೆಡಿಎಸ್‌ ಕೂಡ ಜತೆಗಿರಲಿದೆ ಎಂಬುದನ್ನೂ ಹೇಳಿದ್ದಾರೆ.

“ಉದಯವಾಣಿ”ಯೊಂದಿಗೆ ನೇರಾ ನೇರ ಮಾತನಾಡಿರುವ ಅವರು, ಸರಕಾರ ಅದಾಗಿಯೇ ಬೀಳುವಾಗ ರಾಜಕೀಯ ಪಕ್ಷವಾಗಿ ಸುಮ್ಮನೆ ಕೂರಲಾಗುವುದಿಲ್ಲ ಎನ್ನುವ ಮೂಲಕ ಮತ್ತೂಂದು ಕುತೂಹಲ ಹುಟ್ಟು ಹಾಕಿದ್ದಾರೆ.

ಬಿಜೆಪಿ-ಜೆಡಿಎಸ್‌ ಪದೇಪದೆ ಸರಕಾರ ಬೀಳುವ ಮಾತನಾಡುತ್ತೀರಿ, ಕಾಂಗ್ರೆಸ್‌ ಶಾಸಕರು ಸಂಪರ್ಕ ದಲ್ಲಿರುವುದು ಸತ್ಯವೇ?
ಹೌದು. ನೂರಕ್ಕೆ ನೂರು ಸರಕಾರ ಅಲ್ಲಾಡಲಿದೆ. ಅವರೇ ನಮ್ಮ ಬಾಗಿಲು ತಟ್ಟುತ್ತಿದ್ದಾರೆ. ಹೈಕಮಾಂಡ್‌ನ‌ವರೆಗೂ ಹೋದವರಿದ್ದಾರೆ. ಕಾಂಗ್ರೆಸ್‌ನಲ್ಲಿ ಬಹಳಷ್ಟು ಮಂದಿ ಅಸಮಾಧಾ ನಿತರಿದ್ದಾರೆ. ಸಚಿವರು, ಸಚಿವ ಸ್ಥಾನ ಕೈತಪ್ಪಿದವರು, ಹೊಸದಾಗಿ ಗೆದ್ದ ಕೆಲ ವರಲ್ಲೂ ಅಸಮಾಧಾನಿತರಿದ್ದಾರೆ. ಏಳು ತಿಂಗಳಾದರೂ ಅನುದಾನ ಸಿಗದಿದ್ದರೆ ಶಾಸಕರು ಏನು ತಾನೆ ಮಾಡುತ್ತಾರೆ? ಹಳ್ಳಿಗಳಲ್ಲಿ ಮುಖ ಹೇಗೆ ತೋರಿ ಸುತ್ತಾರೆ? ಪಂಚರಾಜ್ಯಗಳ ಚುನಾವಣ ಫ‌ಲಿತಾಂಶದ ಅನಂತರ ಕಾಂಗ್ರೆಸ್‌ ನೆಲಕಚ್ಚಿದೆ. ಗ್ಯಾರಂಟಿಗಳ ನೆಪದಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಆಡಳಿತ ಶಾಸಕರೇ ಸರಕಾರದ ವಿರುದ್ಧ ಇದ್ದಾರೆ.

ಯಾವ ಸಚಿವರು, ಶಾಸಕರು ಸಂಪರ್ಕದಲ್ಲಿದ್ದಾರೆ? ನೀವೇ ಅವ ರನ್ನು ಸಂಪರ್ಕಿಸುತ್ತಿದ್ದೀರೋ? ಅವ ರೇ ನಿಮ್ಮನ್ನು ಸಂಪರ್ಕಿಸುತ್ತಿದ್ದಾರೋ?
ಕಾಂಗ್ರೆಸ್‌ನ ಅಸಮಾಧಾನಿತರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬುದು ಬಹಿರಂಗ ಸತ್ಯ. ಯಾರು, ಎಲ್ಲಿ, ಯಾವಾಗ, ಯಾರನ್ನು ಭೇಟಿ ಮಾಡಿ ದರು ಎಂಬುದನ್ನು ಹೇಳಲಾಗುವುದಿಲ್ಲ. ಅವರು ನಮ್ಮನ್ನು ಸಂಪರ್ಕಿಸುತ್ತಾರೆಯೇ ಹೊರತು, ನಾವಾಗಿಯೇ ಸಂಪರ್ಕಿ ಸುತ್ತಿಲ್ಲ. ಸದ್ಯಕ್ಕೆ ಈ ಬಗ್ಗೆ ಹೆಚ್ಚು ಏನನ್ನೂ ಹೇಳುವುದಿಲ್ಲ. ಯಾರು ಮಾತನಾ ಡಬೇಕೋ ಅವರು ಮಾತನಾಡುತ್ತಾರೆ. ಶಂಖದಿಂದ ಬಂದರೇ ತೀರ್ಥ ಅವರಿಗೆ. ಹಾಗಾಗಿ, ದೊಡ್ಡವರೇ ಮಾತ ನಾಡುತ್ತಾರೆ.

ನಿಮ್ಮ ಶಾಸಕರನ್ನೂ ಕಾಂಗ್ರೆಸ್‌ ತನ್ನ ಸಂಪರ್ಕದಲ್ಲಿಟ್ಟುಕೊಂಡಿದೆಯಲ್ಲ? ಅವರೂ ಆಗಾಗ ಕಾಂಗ್ರೆಸ್‌ ಕದ ಬಡಿಯುತ್ತಿದ್ದಾರಲ್ಲಾ?
ಮಾಜಿ ಸಚಿವ ವಿ.ಸೋಮಣ್ಣ, ಶಾಸಕ ಅರವಿಂದ ಬೆಲ್ಲದ್‌ ಸೇರಿ ಅನೇಕರು ಸಮಾಧಾನದಿಂದ ಇದ್ದಾರೆ. ಡಿ.ವಿ. ಸದಾನಂದ ಗೌಡರೂ ಸಮಾಧಾನ ಗೊಂಡಿದ್ದಾರೆ. ಎಸ್‌.ಟಿ. ಸೋಮ ಶೇಖರ್‌, ಶಿವರಾಂ ಹೆಬ್ಟಾರ್‌ ಎಲ್ಲಿಯೂ ಕಾಂಗ್ರೆಸ್‌ಗೆ ಹೋಗುವುದಾಗಿ ಹೇಳಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಸಚಿವರನ್ನು ಭೇಟಿ ಮಾಡುವುದು ತಪ್ಪಲ್ಲ. ಇಷ್ಟು ದಿನ ಪಕ್ಷಕ್ಕೆ ರಾಜ್ಯಾಧ್ಯಕ್ಷರು ಇರಲಿಲ್ಲ. ಈಗ ವಿಜಯೇಂದ್ರ ಬಂದಿದ್ದಾರೆ. ಅಸಮಾ ಧಾನಿತರೆಲ್ಲರನ್ನೂ ಸಮಾಧಾನ ಮಾಡ ಲಾಗುತ್ತಿದೆ. ಅಗತ್ಯ ಬಿದ್ದರೆ ಕೇಂದ್ರದ ವರಿಷ್ಠರೂ ಮಧ್ಯಪ್ರವೇಶಿಸುತ್ತಿದ್ದಾರೆ. ಪರಿಸ್ಥಿತಿ ಸರಿ ಹೋಗಲಿದೆ. ಯಾರೂ ಕಾಂಗ್ರೆಸ್‌ ಸೇರಲ್ಲ.

ಜೆಡಿಎಸ್‌ ಮೈತ್ರಿ ಲೋಕಸಭೆ ಚುನಾವಣೆಗೆ ಸೀಮಿತವೋ? ಸರಕಾರ ರಚನೆಯಲ್ಲೂ ಪಾತ್ರ ವಹಿಸಲಿ ದೆಯೋ?
ಜೆಡಿಎಸ್‌ ಜತೆ ವರಿಷ್ಠರು ಏನು ಮಾತನಾಡಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ. ಸದ್ಯಕ್ಕೆ ಎರಡೂ ಪಕ್ಷದಿಂದ 80ಕ್ಕೂ ಹೆಚ್ಚು ಶಾಸಕರಿದ್ದೇವೆ. ಜೆಡಿಎಸ್‌ ಶಾಸಕರು ನಮ್ಮ ಎಲ್ಲ ಚಟುವಟಿಕೆಗ ಳಲ್ಲೂ ಸಹಕರಿಸಲಿದ್ದಾರೆ. ಈಗ ಏನೇ ಹೇಳಿದರೂ ಅಪಹಾಸ್ಯ ಎನಿಸಬಹುದು. ಹೈಕಮಾಂಡ್‌ ಮಟ್ಟದಲ್ಲಿ ಎಲ್ಲವೂ ನಡೆ ಯುತ್ತಿದೆ. ಹಾಗೊಂದು ವೇಳೆ ರಾಜ್ಯದಲ್ಲಿ ಸರಕಾರ ರಚಿಸುವ ಸಂದರ್ಭ ಎದುರಾದರೆ ಖಂಡಿತವಾಗಿಯೂ ಜೆಡಿಎಸ್‌ ಸಹಕಾರ ಇರಲಿದೆ.

ನಿಮ್ಮ ಪಕ್ಷದ ಮುಖಂಡರ ಮುನಿಸು ಕರಗುತ್ತಿಲ್ಲ, ಹೊಸ ತಂಡವನ್ನು ಯಾರೂ ಒಪ್ಪಿಕೊಳ್ಳುತ್ತಿಲ್ಲ. ಕೆಜೆಪಿ-2 ತಂಡ ಎನ್ನುತ್ತಾರಲ್ಲ?
ಹಾಗೇನಿಲ್ಲ. ಹೊಸ ತಂಡದಲ್ಲಿನ 35 ಪದಾಧಿಕಾರಿಗಳ ಪೈಕಿ 30 ಮಂದಿ ಮೂಲ ಬಿಜೆಪಿಯವರೇ ಇದ್ದೇವೆ. ಯಡಿ ಯೂರಪ್ಪರ ಕುಟುಂಬದೊಂದಿಗೆ ನಿಕಟ ಸಂಪರ್ಕ ಇದ್ದರೂ ನಾನು ಕೆಜೆಪಿಗೆ ಹೋಗಿರಲಿಲ್ಲ. ಹೊಸ ತಂಡದ ಬಗ್ಗೆ ಯಾರಿಗೂ ಸಮಸ್ಯೆಯಿಲ್ಲ. ಬಸನ ಗೌಡ ಪಾಟೀಲ್‌ ಯತ್ನಾಳ್‌ ಒಬ್ಬರೇ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಈಗಾಗಲೇ ವರಿಷ್ಠರ ಗಮನಕ್ಕೆ ತರಲಾಗಿದೆ. ಸಂದರ್ಭ ಬಂದಾಗ ತೀರ್ಮಾನ ಆಗಲಿದೆ. ಈಗಲೂ ನಮ್ಮದು ಶಿಸ್ತಿನ ಪಕ್ಷ. ವಿಜಯೇಂದ್ರ ಮತ್ತು ನನಗೆ ಯಡಿಯೂರಪ್ಪ ಅವರು ತಂದೆ ಸ್ಥಾನದಲ್ಲಿದ್ದಾರೆ. ಅವರು ಶೂನ್ಯದಿಂದ ಪಕ್ಷ ಕಟ್ಟಿದ್ದಾರೆ. ನನನ್ನು ಸಚಿವರನ್ನಾಗಿಸುವಲ್ಲಿ, ವಿಜಯೇಂದ್ರ ರನ್ನು ಶಾಸಕರನ್ನಾಗಿಸುವಲ್ಲಿ ಬಿಎಸ್‌ವೈ ಅವರ‌ ಪರಿಶ್ರಮ ಇದೆ. ಅಂಥವರ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು. ಅಷ್ಟಕ್ಕೂ ಪಕ್ಷಕ್ಕಾಗಲಿ, ನಮ್ಮ ಸಮುದಾಯಕ್ಕಾಗಲಿ ಅವರ ಕೊಡುಗೆ ಶೂನ್ಯ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರಿಂದ ಒಂದೇ ಒಂದು ಕ್ಷೇತ್ರದಲ್ಲೂ ಗೆಲುವಾಗಿಲ್ಲ. ನನ್ನ ಬಗ್ಗೆ ಅವರಿಗೆ ಹೊಟ್ಟೆಕಿಚ್ಚಿದೆ. ಅವರ ಸೂಟ್‌ ಟೈಟ್‌ ಮಾಡುವ ಕೆಲಸ ಆಗಲಿದೆ.

ಪಕ್ಷದ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ, ಹೇಗನ್ನಿಸುತ್ತಿದೆ? ಹೊಸ ತಂಡದ ಮುಂದಿರುವ ಸವಾಲು ಏನು?
ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಪಕ್ಷದ ಹಿರಿಯರು ಹಾಗೂ ಪರಿವಾರದ ವರಿಷ್ಠರು ನನ್ನನ್ನು ನೇಮಿಸಿದ್ದಾರೆ. ಸದ್ಯಕ್ಕೆ ಈ ತಂಡದಲ್ಲಿ ನಾನೇ ಹಿರಿಯ. ಇದು ನನಗೆ ಹೊಸತಲ್ಲ. ಈ ಹಿಂದೆ ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷನಾಗಿದ್ದೆ. ಜಿಲ್ಲಾಧ್ಯಕ್ಷ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯನಿದ್ದೆ. 25 ವರ್ಷದಿಂದ ಸಂಘಟನೆಯಲ್ಲಿದ್ದೇನೆ. ನೇರವಾಗಿ ಈ ಸ್ಥಾನಕ್ಕೆ ಬಂದಿಲ್ಲ. ಸಂಘಟನೆಯ ಅನುಭವ ಇದೆ. ಲೋಕಸಭೆ ಚುನಾವಣೆಯ ಗುರಿ ತಲುಪಬೇಕಿದೆ. ನಾವು ಹೊರಗೆ ಏನೇ ಹೇಳಿದರೂ ಬೇರೆ ಬೇರೆ ಜಿಲ್ಲೆಗಳಲ್ಲಿ ಅಸಮಾಧಾನಗಳಿವೆ. ಎರಡು-ಮೂರು ಗುಂಪುಗಳಿವೆ. ಲೋಕಸಭೆ ಚುನಾವಣೆ ಯಲ್ಲಿ 28 ಕ್ಷೇತ್ರ ಗೆಲ್ಲುವುದು ನಮ್ಮ ಗುರಿ. ಕಳೆದ ಬಾರಿ ಕಾಂಗ್ರೆಸ್‌ 1 ಸ್ಥಾನ ಗೆದ್ದಿತ್ತು. ಅದನ್ನೂ ಅವರಿಗೆ ಕೊಡಬಾರ ದೆಂದು ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಮೇಲ್ನೋಟಕ್ಕೆ ಜೆಡಿಎಸ್‌ನ ಮತಗಳು ಕಡಿಮೆ ಇರ ಬಹುದು. ಆದರೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಶೇಕಡಾವಾರು ಮತಗಳಿವೆ. ಅದನ್ನು ನಮ್ಮೊಂದಿಗೆ ಸೇರಿಸಿದರೆ ನಮಗೆ ಸಹಾಯ ಆಗಲಿದೆ.

135 ಸ್ಥಾನ ಗಳಿಸಿ, 5 ಗ್ಯಾರಂಟಿ ಜಾರಿಗೊಳಿಸಿರುವ ಸುಭದ್ರ ಸರಕಾರವನ್ನು ಅಲ್ಲಾಡಿಸಲು ಸಾಧ್ಯವೇ? ಅದು ತಪ್ಪಲ್ಲವೇ?
ಪಂಚರಾಜ್ಯ ಚುನಾವಣೆಗೆ ಮುನ್ನ ಸರಕಾರ ಸುಭದ್ರ ಎಂದು ಕಾಂಗ್ರೆಸ್‌ ಅಂದುಕೊಂಡಿತ್ತು. ಪರಿಸ್ಥಿತಿ ಬದಲಾಗಿದೆ. ಗ್ಯಾರಂಟಿಗಳಿಗೆ ಅಲ್ಲಿನ ಜನ ಮತ ಹಾಕಿಲ್ಲ. ತೆಲಂಗಾಣದಲ್ಲಿ ನಮ್ಮ ನಾಯಕತ್ವ ಸಮಸ್ಯೆಯಿಂದ ಅವರಿಗೆ ಲಾಭ ಆಗಿದೆ ಅಷ್ಟೆ. ಗ್ಯಾರಂಟಿಗಳಿಂದಾಗಿ ಕಾಂಗ್ರೆಸ್‌ ಗೆದ್ದಿಲ್ಲ. ಕರ್ನಾಟಕದಲ್ಲಿ ಅವರಿಗೆ 5 ವರ್ಷ ಆಡಳಿತ ನಡೆಸಲು ಜನ ಸ್ಪಷ್ಟ ಬಹುಮತ ನೀಡಿದ್ದಾರೆ. 6 ತಿಂಗಳು ಕಳೆದಿದೆ. ಅಷ್ಟರಲ್ಲಿ ಶಾಸಕರು ಅತೃಪ್ತಿ ಹೊರಹಾಕುತ್ತಿದ್ದಾರೆ. ಕಾಂಗ್ರೆಸ್‌ 5 ವರ್ಷ ಆಡಳಿತ ನಡೆಸಿದರೆ ಮುಂದಿನ ಚುನಾವಣೆಗೆ ಅಭ್ಯರ್ಥಿ ಇಲ್ಲದಂತಹ ಸ್ಥಿತಿ ಆ ಪಕ್ಷಕ್ಕೆ ಎದುರಾಗುತ್ತದೆ. ನಾವು 150 ಸ್ಥಾನ ಖಚಿತವಾಗಿಯೂ ಗೆಲ್ಲುತ್ತೇವೆ.

 ಸಾಮಗ ಶೇಷಾದ್ರಿ

ಟಾಪ್ ನ್ಯೂಸ್

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.